ಸಾಕಷ್ಟು ನಿದ್ರೆ ಮಾಡುವುದು ಆರೋಗ್ಯಕ್ಕೆ ಮುಖ್ಯವಾಗಿದೆ. ಏಕೆಂದರೆ ನಿದ್ದೆಯು ನಮ್ಮ ಆಯಾಸವನ್ನು ನಿವಾರಿಸುತ್ತದೆ ಮತ್ತು ದೇಹವು ಉಲ್ಲಾಸದಿಂದ ಇರುವಂತೆ ಮಾಡುತ್ತದೆ. ಯಾವ ಸಮಯಕ್ಕೆ ಮಲಗಬೇಕು ಎಂಬುದು ಕೂಡ ಮುಖ್ಯವಾಗುತ್ತದೆ. ಈ ಕುರಿತು ಇಲ್ಲಿದೆ ಡಿಟೇಲ್ಸ್.
ಸಾಕಷ್ಟು ನಿದ್ರೆ ಮಾಡುವುದು ಆರೋಗ್ಯ (health)ಕ್ಕೆ ಮುಖ್ಯವಾಗಿದೆ. ಏಕೆಂದರೆ ನಿದ್ದೆಯು ನಮ್ಮ ಆಯಾಸವನ್ನು ನಿವಾರಿಸುತ್ತದೆ ಮತ್ತು ದೇಹವು ಉಲ್ಲಾಸದಿಂದ ಇರುವಂತೆ ಮಾಡುತ್ತದೆ. ನೀವು ಸಾಕಷ್ಟು ನಿದ್ದೆ (sleep)ಮಾಡದಿದ್ದರೆ, ಅದು ನಿಮ್ಮ ಕೆಲಸದ ಮೇಲೆ ಪರಿಣಾಮ ಬೀರುತ್ತದೆ. ಓರ್ವ ವ್ಯಕ್ತಿಗೆ ಆರೋಗ್ಯವಾಗಿರಲು ನಿದ್ದೆ ಎಷ್ಟು ಮುಖ್ಯ ಎನ್ನುವುದು ಗೊತ್ತೆ ಇದೆ. ದಿನಕ್ಕೆ 7 ರಿಂದ 8 ಗಂಟೆಗಳಿಗಿಂತ ಕಡಿಮೆ ನಿದ್ರಿಸುವುದು ನಿಮ್ಮ ಹೃದಯವನ್ನು ಅಪಾಯಕ್ಕೆ ದೂಡುತ್ತದೆ. ಇನ್ನು ಬಾಹ್ಯ ಅಪಧಮನಿ ಕಾಯಿಲೆಯ ಅಪಾಯವನ್ನು ಕಡಿಮೆ ಮಾಡಲು ರಾತ್ರಿಯ ಏಳರಿಂದ ಎಂಟು ಗಂಟೆಗ ನಿದ್ರೆ ಅಗತ್ಯ. ಆದರೆ ಮಲಗುವುದಕ್ಕೂ ನಿಯಮಗಳಿವೆ ಎಂದು ನಿಮಗೆ ತಿಳಿದಿದೆಯೇ? ಎಷ್ಟು ಗಂಟೆ ನಿದ್ದೆ ಮಾಡಬೇಕು? ಯಾವ ಸಮಯಕ್ಕೆ ಮಲಗಬೇಕು ಎಂಬುದು ಕೂಡ ಮುಖ್ಯವಾಗುತ್ತದೆ.
ನಿದ್ದೆಯ ಕುರಿತು ಸಮಯ ಪಾಲನೆ (punctuality) ತುಂಬಾ ಮುಖ್ಯ. ಇದನ್ನು ನಿರ್ಲಕ್ಷಿಸುವುದು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಇದರೊಂದಿಗೆ ಧರ್ಮ ಶಾಸ್ತ್ರ (deontology)ದ ದೃಷ್ಟಿಯಿಂದ ಅಶುಭವೆಂದು ಪರಿಗಣಿಸಲಾಗಿದೆ. ನಮ್ಮ ಧಾರ್ಮಿಕ ಗ್ರಂಥಗಳಲ್ಲಿ ಸಂಜೆ (evening) ಮಲಗುವುದನ್ನು ನಿಷಿದ್ಧವೆಂದು ಪರಿಗಣಿಸಲಾಗಿದೆ. ಧರ್ಮಗ್ರಂಥಗಳಲ್ಲಿ ನಿಷೇಧಿತ ಸಮಯದಲ್ಲಿ ಮಲಗುವವರ ಮೇಲೆ ದೇವತೆಗಳು ಕೋಪಗೊಳ್ಳುತ್ತಾರೆ ಎಂದು ಹೇಳಲಾಗಿದೆ.
ಸಂಜೆ ಮಲಗುವುದರಿಂದ ಆಗುವ ದುಷ್ಪರಿಣಾಮಗಳು
ಸಾಯಂಕಾಲದಲ್ಲಿ ದೇವರು (god)ಗಳು ಭೂಮಿಗೆ ಬರುತ್ತಾರೆ ಎಂಬ ನಂಬಿಕೆ ಇದೆ. ಆದ್ದರಿಂದ ಈ ಸಮಯದಲ್ಲಿ ಮಲಗುವ ಜನರಿಗೆ ದುರಾದೃಷ್ಟ (bad luck)ಕಾಡಲಿದೆ. ಒಬ್ಬ ವ್ಯಕ್ತಿಯು ಅನಾರೋಗ್ಯದಿಂದ ಬಳಲುತ್ತಿದ್ದರೆ ಹಾಗೂ ವಯಸ್ಸಾದವರು ಅಥವಾ ಗರ್ಭಿಣಿ (pregnant)ಯರು ತಮ್ಮ ಅನುಕೂಲಕ್ಕೆ ಅನುಗುಣವಾಗಿ ದಿನದ ಯಾವುದೇ ಸಮಯದಲ್ಲಿ ಮಲಗಬಹುದು. ಅಂತಹ ಜನರು ಯಾವುದೇ ಸಮಯದಲ್ಲಿ ಮಲಗುವ ಬಗ್ಗೆ ತಪ್ಪಿತಸ್ಥರೆಂದು ಭಾವಿಸುವುದಿಲ್ಲ. ಆದರೆ ಒಬ್ಬ ವ್ಯಕ್ತಿಯು ಯಾವುದೇ ಕಾರಣವಿಲ್ಲದೆ ತಪ್ಪಾದ ಸಮಯದಲ್ಲಿ ಮಲಗಿದರೆ ಅದನ್ನು ಮಂಗಳಕರವೆಂದು ಪರಿಗಣಿಸಲಾಗುವುದಿಲ್ಲ.
ದೇಹದ ಮೇಲೆ ಕೆಟ್ಟ ಪರಿಣಾಮ ಬೀರಲಿದೆ
ವೈಜ್ಞಾನಿಕ (Scientific) ವಾಗಿ ಹೇಳುವುದಾದರೆ ಸಂಜೆಯ ಸಮಯದಲ್ಲಿ ಮಲಗುವುದು ನಮ್ಮ ರಾತ್ರಿಯ ನಿದ್ರೆ ಮತ್ತು ಜೀರ್ಣಕ್ರಿಯೆಯ ದಿನಚರಿಯನ್ನು ಅಡ್ಡಿಪಡಿಸುತ್ತದೆ. ಸಂಜೆ ಮಲಗಿದರೆ ರಾತ್ರಿ ಸರಿಯಾಗಿ ನಿದ್ದೆ ಬರುವುದಿಲ್ಲ. ನಾವು ರಾತ್ರಿಯಿಡೀ ನಿದ್ದೆ ಬರದೆ ಒದ್ದಾಡುತ್ತೇವೆ. ಇದು ನಮ್ಮ ಆರೋಗ್ಯ (health)ದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ನಿಮ್ಮ ದೇಹವೂ ಸರಿಯಾಗಿ ಕೆಲಸ ಮಾಡುವುದಿಲ್ಲ.
ಮಲಗಲು ಸರಿಯಾದ ಸಮಯ & ಮಾರ್ಗ ಯಾವುದು?
ನಿದ್ರೆಯ ಸಮತೋಲನವು ತೊಂದರೆಗೊಳಗಾದರೆ ದೇಹ (body)ವು ಹಾನಿಗೊಳಗಾಗಬಹುದು. ನಿದ್ರೆಯ ಕೊರತೆಯು ಸಾಮಾನ್ಯವಾಗಿ ಜನರು ಗಮನವನ್ನು ಕಳೆದುಕೊಳ್ಳಲು ಕಾರಣವಾಗುತ್ತದೆ. ಇದು ಅವರ ಕಾರ್ಯಕ್ಷಮತೆಯ ಮೇಲೆ ಪರಿಣಾಮ ಬೀರುತ್ತದೆ. ವೈದ್ಯಕೀಯ ತಜ್ಞರ (Medical experts) ಪ್ರಕಾರ ಮಧ್ಯಾಹ್ನ 45 ನಿಮಿಷ ಚಿಕ್ಕನಿದ್ರೆ ಮಾಡಿದರೆ ದೇಹಕ್ಕೆ ಒಳ್ಳೆಯದು. ಮುಂಜಾನೆ ಬೇಗ ಎದ್ದು ಕೆಲಸಕ್ಕೆ ಹೋಗುವವರಿಗೂ ಇದು ಅಗತ್ಯ. ಇದರಿಂದ ದೇಹದಲ್ಲಿ ಶಕ್ತಿ ಉಳಿಯುತ್ತದೆ. ಹೆಚ್ಚು ನಿದ್ರೆಯು ಚಡಪಡಿಕೆ, ತಲೆನೋವು (headache), ಆಲಸ್ಯವನ್ನು ಉಂಟುಮಾಡುತ್ತದೆ, ಇದು ನಿಮ್ಮ ಕೆಲಸದ ಸಾಮರ್ಥ್ಯದ ಮೇಲೆ ಪರಿಣಾಮ ಬೀರುತ್ತದೆ.