ಜುಲೈ ಆಷಾಢ ಮಾಸವಾಗಿದ್ದು, ಈ ಸಂದರ್ಭದಲ್ಲಿ ಯಾವುದೇ ಮದುವೆ, ಮುಂಜಿಯಂಥ ಶುಭ ಕಾರ್ಯಗಳು ನಡೆಯುವುದಿಲ್ಲ. ಆದರೂ ಧಾರ್ಮಿಕ ದೃಷ್ಟಿಕೋನದಿಂದ ಈ ತಿಂಗಳನ್ನು ಅತ್ಯಂತ ಪವಿತ್ರವೆಂದು ಪರಿಗಣಿಸಲಾಗುತ್ತದೆ. ಈ ತಿಂಗಳ ಹಬ್ಬ, ಹರಿದಿನ, ವ್ರತ ಉಪವಾಸಗಳ ಪಟ್ಟಿ ಇಲ್ಲಿದೆ.
ಜುಲೈ(July) ಪ್ರಾರಂಭವಾಗಲಿದೆ. ಧಾರ್ಮಿಕ ದೃಷ್ಟಿಕೋನದಿಂದ ಈ ತಿಂಗಳನ್ನು ಅತ್ಯಂತ ಪವಿತ್ರವೆಂದು ಪರಿಗಣಿಸಲಾಗಿದೆ. ಈ ತಿಂಗಳಲ್ಲಿ ಅನೇಕ ದೊಡ್ಡ ಹಬ್ಬಗಳು ನಡೆಯುತ್ತವೆ. ಹಿಂದೂ ಕ್ಯಾಲೆಂಡರ್ ಪ್ರಕಾರ, ಜುಲೈ ತಿಂಗಳು ಆಷಾಢ-ಸಾವನ್ ಆಗಿದೆ. ಧಾರ್ಮಿಕ ದೃಷ್ಟಿಕೋನದಿಂದ ಈ ಮಾಸವು ಶಿವನನ್ನು ಮೆಚ್ಚಿಸಲು ತುಂಬಾ ಒಳ್ಳೆಯದು. ಈ ಮಾಸದಲ್ಲಿ ಶಿವನನ್ನು ಪೂಜಿಸುವುದರಿಂದ ಆತನ ಕೃಪೆ ಸದಾ ಉಳಿಯುತ್ತದೆ.
ಈ ತಿಂಗಳ ಹಬ್ಬಹರಿದಿನಗಳ ಸರಣಿ ವಿಶ್ವವಿಖ್ಯಾತ ಪುರಿ ಜಗನ್ನಾಥ ರಥಯಾತ್ರೆಯೊಂದಿಗೆ ಪ್ರಾರಂಭವಾಗುತ್ತದೆ. ಈ ಮಾಸದಲ್ಲಿ ಚಾತುರ್ಮಾಸವೂ ಆರಂಭವಾಗಲಿದ್ದು, ನಾಲ್ಕು ತಿಂಗಳ ಕಾಲ ವಿಷ್ಣುವು ನಿದ್ರಿಸುತ್ತಾನೆ. ಗುರು ಪೂರ್ಣಿಮೆಯ ಹಬ್ಬವೂ ಇದೇ ತಿಂಗಳಲ್ಲಿ. ಜುಲೈ ತಿಂಗಳಲ್ಲಿ ಬರುವ ಮುಖ್ಯ ವ್ರತ, ಉಪವಾಸಗಳು ಮತ್ತು ಹಬ್ಬಗಳ ಪಟ್ಟಿಯನ್ನು ನೋಡೋಣ.
ಜುಲೈ 1, ಪುರಿ ಜಗನ್ನಾಥ ರಥ ಯಾತ್ರೆ(Puri Jagannath Rath Yatra):
ವಿಶ್ವವಿಖ್ಯಾತ ಪುರಿ ಜಗನ್ನಾಥನ ರಥಯಾತ್ರೆಯು ಜುಲೈನ ಮೊದಲ ದಿನ ಅಂದರೆ ಜುಲೈ 1 ಶುಕ್ರವಾರದಂದು ಪ್ರಾರಂಭವಾಗುತ್ತದೆ. ಪುರಿ ರಥ ಯಾತ್ರೆಯಲ್ಲಿ, ಭಗವಾನ್ ಜಗನ್ನಾಥನು ಸಹೋದರ ಬಲರಾಮ ಮತ್ತು ಸಹೋದರಿ ಸುಭದ್ರಾ ಅವರೊಂದಿಗೆ ಶೋಭಾ ಯಾತ್ರೆ ಹೊರಡುತ್ತಾನೆ.
ಜುಲೈ 3, ವರದ ಚತುರ್ಥಿ(Varada Chaturthi):
ವರದ ಚತುರ್ಥಿ ಉಪವಾಸವನ್ನು 3ನೇ ಜುಲೈ 2022ರಂದು ಆಚರಿಸಲಾಗುತ್ತದೆ. ವರದ ಚತುರ್ಥಿಯು ಗಣೇಶನಿಗೆ ಸಮರ್ಪಿತವಾದ ಹಬ್ಬವಾಗಿದೆ.
ಜಗನ್ನಾಥ ರಥಯಾತ್ರೆ 2022: ಬೆರಗು ಮೂಡಿಸೋ 10 ವಿಶೇಷಗಳು..
ಜುಲೈ 10, ದೇವಶಯನಿ ಏಕಾದಶಿ ಮತ್ತು ಬಕ್ರೀದ್(Devshayani Ekadashi and Bakrid):
ಜುಲೈ 10ರಂದು ದೇವಶಯನಿ ಏಕಾದಶಿ. ದೇವಶಯನಿ ಏಕಾದಶಿಯಂದು ಭಗವಾನ್ ವಿಷ್ಣುವು ಕ್ಷೀರಸಾಗರದಲ್ಲಿ ತಾಯಿ ಲಕ್ಷ್ಮಿಯೊಂದಿಗೆ ನಾಲ್ಕು ತಿಂಗಳ ಕಾಲ ಮಲಗುತ್ತಾನೆ. ಆಷಾಢ ಮಾಸದಲ್ಲಿ ಬರುವುದರಿಂದ ಈ ಏಕಾದಶಿಯನ್ನು ಆಷಾಢ ಏಕಾದಶಿ ಎಂದೂ ಕರೆಯುತ್ತಾರೆ. ಇದಲ್ಲದೆ, ಇದನ್ನು ಹರಿಶಯನಿ ಏಕಾದಶಿ ಮತ್ತು ಪದ್ಮನಾಭ ಏಕಾದಶಿ ಎಂದೂ ಕರೆಯುತ್ತಾರೆ.
ಜುಲೈ 11, ಪ್ರದೋಷ ವ್ರತ ಮತ್ತು ಜಯ ಪಾರ್ವತಿ ವ್ರತ(Pradosh Vrat and Jaya Parvati Vrat):
ಜುಲೈ 11ರಂದು ಪ್ರದೋಷ ವ್ರತದ ಜೊತೆಗೆ ಜಯ ಪಾರ್ವತಿ ವ್ರತವೂ ಆರಂಭವಾಗಲಿದೆ. ಜಯ ಪಾರ್ವತಿ ವ್ರತವು ಸತತ ಐದು ದಿನಗಳವರೆಗೆ ಇರುತ್ತದೆ. ಇದರಲ್ಲಿ ಪಾರ್ವತಿ ದೇವಿಯನ್ನು ಜಯ ಅವತಾರದ ರೂಪದಲ್ಲಿ ಪೂಜಿಸಲಾಗುತ್ತದೆ. ಈ ವ್ರತದಲ್ಲಿ ವಿವಾಹಿತ ಮಹಿಳೆಯರು ತಮ್ಮ ಗಂಡನ ದೀರ್ಘಾಯುಷ್ಯ ಮತ್ತು ಉತ್ತಮ ಆರೋಗ್ಯಕ್ಕಾಗಿ ಪಾರ್ವತಿಯನ್ನು ಪೂಜಿಸುತ್ತಾರೆ ಮತ್ತು ಆಶೀರ್ವಾದವನ್ನು ಪಡೆಯುತ್ತಾರೆ.
14 ಜುಲೈ, ಕಣ್ವರ್ ಯಾತ್ರೆ(Kanwar Yatra):
ಜುಲೈ ತಿಂಗಳ ಆರಂಭದಿಂದಲೇ ಕಣ್ವಾರಿಯರು ಎಲ್ಲಾ ಪವಿತ್ರ ನದಿಗಳಿಂದ ಜಲವನ್ನು ತೆಗೆದುಕೊಂಡು 14ನೇ ತಾರೀಖಿನಂದಪ ಪ್ರಸಿದ್ಧ ಶಿವ ದೇವಾಲಯಗಳನ್ನು ತಲುಪುವ ಮೂಲಕ ಶಿವನ ಜಲಾಭಿಷೇಕವನ್ನು ಮಾಡುತ್ತಾರೆ.
ಜುಲೈ 24, ಕಾಮಿಕಾ ಏಕಾದಶಿ(Kamika Ekadashi):
ಆಷಾಢ ಮಾಸದ ಏಕಾದಶಿಯನ್ನು ಕಾಮಿಕಾ ಏಕಾದಶಿ ಎಂದು ಕರೆಯಲಾಗುತ್ತದೆ. ಹಿಂದೂ ಧರ್ಮದಲ್ಲಿ ಏಕಾದಶಿ ಉಪವಾಸಕ್ಕೆ ವಿಶೇಷ ಮಹತ್ವವಿದೆ. ಏಕಾದಶಿ ವ್ರತದ ಸಮಯದಲ್ಲಿ, ದಿನವಿಡೀ ಉಪವಾಸವಿದ್ದು ಭಗವಾನ್ ವಿಷ್ಣುವನ್ನು ಪೂಜಿಸಲಾಗುತ್ತದೆ.
Zodiac signs: ಇವರು Break-up ಸನ್ನಿವೇಶವನ್ನು ನಾಜೂಕಾಗಿ ನಿರ್ವಹಿಸುತ್ತಾರೆ!
ಜುಲೈ 28, ಹರಿಯಾಲಿ ಅಮಾವಾಸ್ಯೆ(Hariyali Amavasya):
ಈ ವರ್ಷ ಜುಲೈ 28 ಹರಿಯಾಲಿ ಅಮವಾಸ್ಯೆ. ಶ್ರಾವಣ ಮಾಸದಲ್ಲಿ ಬರುವ ಅಮವಾಸ್ಯೆಯನ್ನು ಹರಿಯಾಲಿ ಅಮವಾಸ್ಯೆ 2022 ಎಂದು ಕರೆಯಲಾಗುತ್ತದೆ.
ಜುಲೈ 31, ಹರಿಯಾಲಿ ತೀಜ್(Hariyali Teej):
ವಿವಾಹಿತ ಮಹಿಳೆಯರು ಆಚರಿಸುವ ಉಪವಾಸವನ್ನು ಜುಲೈ 31 ರಂದು ಆಚರಿಸಲಾಗುತ್ತದೆ. ಇದರಲ್ಲಿ ವಿವಾಹಿತ ಮಹಿಳೆಯರು ತಮ್ಮ ಗಂಡನ ದೀರ್ಘಾಯುಷ್ಯಕ್ಕಾಗಿ ಉಪವಾಸ ಮಾಡುತ್ತಾರೆ. ಈ ಹಬ್ಬವನ್ನು ಶಿವ ಮತ್ತು ತಾಯಿ ಪಾರ್ವತಿ (ಹರಿಯಾಲಿ ತೀಜ್ 2022) ಮತ್ತೆ ಒಂದಾಗುವ ಸಂತೋಷದಲ್ಲಿ ಆಚರಿಸಲಾಗುತ್ತದೆ.