ಜಗನ್ನಾಥ ರಥಯಾತ್ರೆ 2022: ಬೆರಗು ಮೂಡಿಸೋ 10 ವಿಶೇಷಗಳು..

By Suvarna NewsFirst Published Jun 30, 2022, 10:23 AM IST
Highlights

145ನೇ ಜಗನ್ನಾಥ ಯಾತ್ರೆಗೆ ಪುರಿ ಸಜ್ಜಾಗಿದೆ. ಜುಲೈ 1ರಂದು ಈ ವಿಶ್ವಪ್ರಸಿದ್ಧ ಜಗನ್ನಾಥ ಯಾತ್ರೆ ಶುರುವಾಗಲಿದ್ದು, ಈ ಕುರಿತು ನೀವು ತಿಳಿದಿರಬೇಕಾದ ವಿಷಯಗಳು ಇಲ್ಲಿವೆ.

ಆಶಾಢ ಮಾಸ ಶುಕ್ಲ ಪಕ್ಷದ ಎರಡನೇ ದಿನ ಎಂದರೆ ಒರಿಸ್ಸಾ ರಾಜ್ಯಕ್ಕೆ ಇನ್ನಿಲ್ಲದ ಸಡಗರ. ಇಲ್ಲಿನ ಜನಪ್ರಿಯ ಪುರಿ ಜಗನ್ನಾಥ(Lord Jagannath)ನ ವಿಶ್ವಪ್ರಸಿದ್ಧ ರಥಯಾತ್ರೆ ಆರಂಭವಾಗುವ ದಿನವದು. ಜಗನ್ನಾಥನು ಸಕಲ ವೈಭೋಗಗಳೊಂದಿಗೆ ತನಗಾಗಿ ವಿಶೇಷವಾಗಿ ತಯಾರಾದ ಮರದ ರಥದಲ್ಲಿ ಕುಳಿತು ತನ್ನ ಚಿಕ್ಕಮ್ಮ ಗುಂಡಿಚಾ(Gundicha) ಮನೆಗೆ ತೆರಳುತ್ತಾನೆ ಎಂಬ ನಂಬಿಕೆ ಇದೆ. ಈ ಸಂದರ್ಭದಲ್ಲಿ ಜಗನ್ನಾಥನ ಅಣ್ಣ ಬಲಭದ್ರ ಮತ್ತು ತಂಗಿ ಸುಭದ್ರಾ ಕೂಡಾ ಒಂದೊಂದು ರಥದಲ್ಲಿ ಕುಳಿತು ಯಾತ್ರೆ ತೆರಳುತ್ತಾರೆ. ಈ ಮೂರೂ ರಥಗಳನ್ನು ನೆರೆದ ಲಕ್ಷಾಂತರ ಜನ ಎಳೆಯುತ್ತಾ ಡಮರು, ನಗಾರಿ, ಶಂಖಗಳ ನಾದ ಮೊಳಗಿಸುತ್ತಾ ಸಂಭ್ರಮದ ಘೋಷ ಕೂಗುತ್ತಾರೆ. ಈ ಬಾರಿ ಜುಲೈ 1, ಶುಕ್ರವಾರ ರಥಯಾತ್ರೆ(Jagannath Rath Yatra) ಆರಂಭವಾಗುತ್ತದೆ. 

ರಥ(chariot)ದ ಬಗ್ಗೆ ಕೆಲವು ಕುತೂಹಲಕಾರಿ ಸಂಗತಿಗಳು(interesting facts) ಇಲ್ಲಿವೆ:

  • ಭಗವಾನ್ ಶ್ರೀಹರಿ ಜಗನ್ನಾಥ ಭಗವಾನ್ ವಿಷ್ಣುವಿನ ಪ್ರಮುಖ ಅವತಾರಗಳಲ್ಲಿ ಒಬ್ಬರು.
  • ಅಕ್ಷಯ ತೃತೀಯ ದಿನದಂದು ಜಗನ್ನಾಥನ ರಥದ ನಿರ್ಮಾಣ ಪ್ರಾರಂಭವಾಗುತ್ತದೆ. ಈ ರಥವು ಸಂಪೂರ್ಣವಾಗಿ ಮರ(wood)ದಿಂದ ಮಾಡಲ್ಪಟ್ಟಿದೆ ಮತ್ತು ಜಗನ್ನಾಥನ ರಥದಲ್ಲಿ ಒಂದೇ ಒಂದು ಮೊಳೆಯನ್ನು ಬಳಸುವುದಿಲ್ಲ ಎಂಬುದು ವಿಶೇಷ. 

    ಅಬ್ಬಬ್ಬಾ! ಜಗನ್ನಾಥನಿಗೆ ಪ್ರತಿದಿನ 56 ಬಗೆಯ ಭೋಗ! ಇಲ್ಲಿನ ಒಲೆಯ ಬೆಂಕಿ ಆರುವುದೇ ಇಲ್ಲ!
     
  • ರಥವನ್ನು ಮಾಡಲು ವಸಂತ ಪಂಚಮಿ(Vasant Panchmi)ಯಿಂದ ಮರದ ಸಂಗ್ರಹವು ಪ್ರಾರಂಭವಾಗುತ್ತದೆ. ಇದನ್ನು ವಿಶೇಷ ಅರಣ್ಯವಾದ ದಶಪಲ್ಲದಿಂದ ಸಂಗ್ರಹಿಸಲಾಗುತ್ತದೆ ಮತ್ತು ಶ್ರೀ ಮಂದಿರದಲ್ಲಿ ಕೆಲಸ ಮಾಡುವ ಬಡಗಿಗೆ ಮಾತ್ರ ತಯಾರಿಸುವ ಅವಕಾಶ ನೀಡಲಾಗುತ್ತದೆ.
  • ಜಗನ್ನಾಥ ರಥವು ಕೆಂಪು ಮತ್ತು ಹಳದಿ ಬಣ್ಣ(red and yellow colour)ದಲ್ಲಿ ಮಾಡಲ್ಪಡುತ್ತದೆ. ಮತ್ತು ಅದರಲ್ಲಿ ಒಟ್ಟು 16 ಚಕ್ರಗಳಿರುತ್ತವೆ. ಜಗನ್ನಾಥನ ರಥವು ಇತರ ಎರಡು ರಥಗಳಿಗೆ ಹೋಲಿಸಿದರೆ ಸ್ವಲ್ಪ ದೊಡ್ಡದಾಗಿರುತ್ತದೆ. ಅಲ್ಲದೆ, ಬಲಭದ್ರ ಮತ್ತು ಸುಭದ್ರೆಯ ರಥಗಳನ್ನು ಭಗವಾನ್ ಜಗನ್ನಾಥನ ರಥವು ಅನುಸರಿಸುತ್ತದೆ.
  • ಜಗನ್ನಾಥನ ರಥವನ್ನು ನಂದಿಘೋಷ(Nandighosh) ಎಂದು ಕರೆಯಲಾಗುತ್ತದೆ, ಬಲಭದ್ರನ ರಥದ ಹೆಸರು ತಾಳ ಧ್ವಜ ಮತ್ತು ಸುಭದ್ರೆಯ ರಥವನ್ನು ದರ್ಪದಲನ ರಥ ಎಂದು ಕರೆಯಲಾಗುತ್ತದೆ.
  • ಜ್ಯೇಷ್ಠ ಪೂರ್ಣಿಮೆ(Jyeshtha Purnima)ಯಂದು ಜಗನ್ನಾಥ, ಬಲಭದ್ರ ಮತ್ತು ಸುಭದ್ರ ದೇವರನ್ನು 108 ಹೂಜಿ ನೀರಿನಿಂದ ಸ್ನಾನ ಮಾಡಿಸಲಾಗುತ್ತದೆ. ಈ ಮಹೋತ್ಸವವನ್ನು ಸಹಸ್ರಧಾರ ಸ್ನಾನ ಎಂದು ಕರೆಯಲಾಗುತ್ತದೆ. ನೀರನ್ನು ಬಳಸುವ ಬಾವಿಯನ್ನು ವರ್ಷಕ್ಕೊಮ್ಮೆ ಮಾತ್ರ ತೆರೆಯಲಾಗುತ್ತದೆ.
  • ಈ ವರ್ಷ ಆಷಾಢ ಶುಕ್ಲ ದ್ವಿತೀಯ ತಿಥಿ ಜೂನ್ 30ರಂದು ಬೆಳಿಗ್ಗೆ 10:49 ರಿಂದ ಪ್ರಾರಂಭವಾಗಿ ಜುಲೈ 1ರಂದು ಮಧ್ಯಾಹ್ನ 01:09 ಕ್ಕೆ ಕೊನೆಗೊಳ್ಳುತ್ತದೆ. ಈ ಉದಯ ತಿಥಿ, ಜಗನ್ನಾಥ ರಥಯಾತ್ರೆ ಶುಕ್ರವಾರ ಜುಲೈ 1 ರಂದು ಆರಂಭವಾಗಲಿದೆ.
  • ಜಗನ್ನಾಥನು ತನ್ನ ಚಿಕ್ಕಮ್ಮನ ಮನೆಯಲ್ಲಿ ಏಳು ದಿನಗಳ ಕಾಲ ಇರುತ್ತಾನೆ. ಅದರ ನಂತರ ರಥಗಳು ಎಂಟನೇ ದಿನ ಆಷಾಢ ಶುಕ್ಲ ದಶಮಿಯಂದು ಹಿಂತಿರುಗುತ್ತವೆ. ಇದನ್ನು ಬಹುದಾ ಯಾತ್ರೆ ಎನ್ನುತ್ತಾರೆ.
  • ಜಗನ್ನಾಥ ದೇವಾಲಯದ ಅಡುಗೆಮನೆಯು ವಿಶ್ವದ ಅತಿ ದೊಡ್ಡ ಅಡುಗೆಮನೆ ಎಂಬ ಖ್ಯಾತಿಗೆ ಭಾಜನವಾಗಿದೆ. ಜಗನ್ನಾಥ ದೇವಾಲಯವು ಪ್ರಸಾದವನ್ನು 'ಮಹಾಪ್ರಸಾದ' ಎಂದು ಕರೆಯುವ ಏಕೈಕ ದೇವಾಲಯವಾಗಿದೆ. ಈ ಮಹಾಪ್ರಸಾದವನ್ನು ಏಳು ಮಣ್ಣಿನ ಪಾತ್ರೆಗಳಲ್ಲಿ ಅಥವಾ ಮರದ ಪಾತ್ರೆಗಳಲ್ಲಿ ತಯಾರಿಸಲಾಗುತ್ತದೆ.

    ಜಗನ್ನಾಥ ಯಾತ್ರೆಗೆ ಪುರಿ ಸಜ್ಜು, ಯಾವಾಗ, ಇತಿಹಾಸವೇನು?
     
  • ಭಗವಾನ್ ಜಗನ್ನಾಥ, ಸಹೋದರಿ ಸುಭದ್ರಾ ಮತ್ತು ಹಿರಿಯ ಸಹೋದರ ಬಲರಾಮನ ವಿಗ್ರಹಗಳಲ್ಲಿ ಯಾರಿಗೂ ಕೈ, ಕಾಲು ಮತ್ತು ಉಗುರುಗಳಿಲ್ಲ. ಈ ಹಿಂದೆ ವಿಗ್ರಹಗಳನ್ನು ವಿಶ್ವಕರ್ಮನು ಮಾಡುತ್ತಿದ್ದನು ಎನ್ನುತ್ತದೆ ಪುರಾಣ. ಹೀಗೆ ಆಥ ವಿಗ್ರಹ ತಯಾರಿಸುವಾಗ ಯಾರೂ ಕೋಣೆಗ ಪ್ರವೇಶಿಸಬಾರದು ಎಂಬ ಷರತ್ತು ಹಾಕಿದ್ದ. ಆದರೆ ಅದನ್ನು ಮುರಿದು ರಾಜ ಒಳಗೆ ಬಂದಿದ್ದರಿಂದ ಕೋಪಗೊಂಡು, ವಿಗ್ರಹಗಳ ಕೈ, ಕಾಲು, ಉಗುರು ಕೆತ್ತನೆ ಮಾಡದೆ ಹೊರಟು ಹೋದನಂತೆ.  ಅಂದಿನಿಂದಲೂ ಈ ವಿಗ್ರಹಗಳನ್ನು ಹಾಗೆಯೇ ಅಪೂರ್ಣವಾಗಿ ತಯಾರಿಸಲಾಗುತ್ತಿದೆ. 
     

Latest Videos

click me!