Rituals: ಸಂಭೋಗಿಸಿ, ಸ್ನಾನ ಮಾಡದೇ ಪೂಜಿಸಿದರೆ ತಟ್ಟುತ್ತೆ ಶಾಪ!

By Suvarna NewsFirst Published Nov 25, 2021, 2:38 PM IST
Highlights

ಭಕ್ತಿಯಿಂದ ದೇವರಿಗೆ ಪೂಜೆ ಸಲ್ಲಿಸುವುದು ದೇವರ ಕೃಪೆ ಸಿಗಲಿ ಮತ್ತು ಇಷ್ಟಾರ್ಥಗಳು ಪೂರೈಸಲಿ ಎಂದಾಗಿದೆ. ಹಾಗೆಯೇ ಪೂಜೆ ಮಾಡುವಾಗ ಕೆಲವು ನಿಯಮಗಳನ್ನು ಅನುಸರಿಸುವುದು ಅನಿವಾರ್ಯವಾಗಿದೆ. ದೇವರ ಪೂಜೆ ಮಾಡುವಾಗ ಕೆಲವು ತಪ್ಪುಗಳನ್ನು ಮಾಡಿದರೆ ಅವು ಪಾಪಕ್ಕೆ ಸಮವಾಗುತ್ತವೆ. ಅಂತಹ ಪೂಜೆಯನ್ನು ದೇವರು ಸ್ವೀಕರಿಸುವುದಿಲ್ಲ. ವರಾಹ ಪುರಾಣದಲ್ಲಿ ತಿಳಿಸಿದ ಪೂಜೆಯ ಕೆಲವು ನಿಯಮಗಳನ್ನು ತಿಳಿಸಲಾಗಿದೆ. ಅವುಗಳ ಬಗ್ಗೆ ತಿಳಿಯೋಣ...
 

ಪ್ರತಿನಿತ್ಯ ದೇವರಿಗೆ (God) ಭಕ್ತಿಯಿಂದ ಮಾಡುವ ಪೂಜೆಗೆ ಕೆಲವು ನಿಯಮಗಳಿವೆ. ಆ ನಿಯಮಗಳನ್ನು(Rules) ತಿಳಿದು ಸರಿಯಾದ ರೀತಿಯಲ್ಲಿ ಸಲ್ಲಿಸಿದ ಪೂಜೆಯನ್ನು ಮಾತ್ರ ದೇವರು ಸ್ವೀಕರಿಸುತ್ತಾನೆ (Accept). ಸರಳ (Simple) ರೀತಿಯಲ್ಲಿಯೇ ಪೂಜೆ ಮಾಡಿದರೂ ಅನುಸರಿಸಲೇಬೇಕಾದ (Follo) ಕೆಲವು ನಿಯಮಗಳನ್ನು ಎಲ್ಲರೂ ತಿಳಿದಿರಬೇಕು. ದೇವರು ಆಡಂಬರದ ಪೂಜೆಯನ್ನು ಇಷ್ಟಪಡುವುದಕ್ಕಿಂತ ಹೆಚ್ಚು ಭಕ್ತಿಯಿಂದ  (Devotion) ತಪ್ಪಿಲ್ಲದೆ ಮಾಡಿದ ಪೂಜೆಗೆ ಒಲಿಯುತ್ತಾನೆ. ವರಾಹ ಪುರಾಣದಲ್ಲಿ (Varaha Purana) ಪೂಜೆಯ ಸಮಯದಲ್ಲಿ ಮಾಡುವ ಕೆಲವು ಕೆಲಸಗಳು ಪಾಪಕ್ಕೆ (Sin) ಸಮವೆಂದು ಹೇಳಲಾಗಿದೆ. ಅಷ್ಟೇ ಅಲ್ಲದೆ ವರಾಹ ಪುರಾಣದಲ್ಲಿ ಪೂಜೆಯ ಸಮಯದಲ್ಲಿ ಅನುಸರಿಸಬೇಕಾದ ಕೆಲವು ನಿಯಮಗಳನ್ನು (Rules) ಸಹ ತಿಳಿಸಿ ಕೊಡಲಾಗಿದೆ. ಹಾಗಾದರೆ ಆ ಅವುಗಳು ಯಾವುವು ಎಂಬುದನ್ನು ತಿಳಿಯೋಣ ...

ವಿಷ್ಣುವಿನ (Lord Vishnu) ದಶಾವತಾರಗಳಲ್ಲಿ ವರಾಹ ಅವತಾರವು ಮೂರನೆಯ ಅವತಾರವಾಗಿದೆ. ಶ್ರೀ ಮಹಾವಿಷ್ಣುವು ಹಿರಣ್ಯಾಕ್ಷನನ್ನು ಸಂಹರಿಸಲು ಎತ್ತಿದ  ಅವತಾರ ಇದಾಗಿದೆ. ಈ ವರಾಹ ಪುರಾಣದಲ್ಲಿ ಪೂಜೆಯ ಕೆಲವು ನಿಯಮಗಳನ್ನು ತಿಳಿಸಲಾಗಿದೆ.

ಇದನ್ನು ಓದಿ: ಈ 4 ರಾಶಿಚಕ್ರದವರು ಹಣ ಉಳಿಸುವಲ್ಲಿ ನಿಸ್ಸೀಮರು..!

ಪೂಜೆಯ ಸಮಯದಲ್ಲಿ ನೀಲಿ (Blue) ಮತ್ತು ಕಪ್ಪು (Blue) ಬಣ್ಣದ (color) ವಸ್ತ್ರವನ್ನು (Cloth) ಧರಿಸಿ ಪೂಜೆ ಸಲ್ಲಿಸುವುದು ನಿಷಿದ್ಧವಾಗಿದೆ. ಈ ರೀತಿ ಪೂಜೆ ಮಾಡಿದರೂ ಅದನ್ನು ಪಾಪವೆಂದು
(Sin) ಪರಿಗಣಿಸಲಾಗುತ್ತದೆ. ಅಪರಾಧ (Crime) ಅಥವಾ ತಪ್ಪುಗಳನ್ನು ಮಾಡಿ ಎಷ್ಟೇ ಭಕ್ತಿಯಿಂದ ಪೂಜೆ ಸಲ್ಲಿಸಿದರೂ ಅಂತಹ ಪೂಜೆ ಸ್ವೀಕಾರವಾಗುವುದಿಲ್ಲ. ಹಾಗಾಗಿ ಪಾಪಪ್ರಜ್ಞೆಯಿಂದ ದೂರವಾಗಿ ಭಕ್ತಿಯಿಂದ ಮಾಡುವುದು ಉತ್ತಮ.

ಇದನ್ನು ಓದಿ: S ಅಕ್ಷರದಿಂದ ಸ್ಟಾರ್ಟ್ ಆಗೋ ಹುಡ್ಗೀರು ಹೇಗೆ ಗೊತ್ತಾ..?

ಯಾರಾದರೂ ತೀರಿಕೊಂಡ ಸಂದರ್ಭದಲ್ಲಿ ಶವವನ್ನು (Corpse) ಸ್ಪರ್ಶಿಸಿ ಸ್ನಾನ (Bath) ಮಾಡದೆಯೇ ಸಲ್ಲಿಸಿದ ಪೂಜೆ ಸ್ವೀಕಾರವಾಗುವುದಿಲ್ಲ. ಅದು ಪಾಪವಾಗುತ್ತದೆ. ಹಾಗಾಗಿ ಇಂಥ ಪರಿಸ್ಥಿತಿಯಲ್ಲಿ ದೇಹವನ್ನು (Body) ಶುಚಿಯಾಗಿಟ್ಟುಕೊಳ್ಳಬೇಕು (Clean). 

ಸಂಭೋಗ (Intercourse) ಮಾಡಿದ ನಂತರ ಸ್ನಾನ ಮಾಡದೆ ಸಲ್ಲಿಸಿದ ಪೂಜೆ ಸಫಲವಾಗುವುದಿಲ್ಲ. ಪಾಪ ತಟ್ಟುತ್ತದೆ ಎಂದು ಹೇಳಲಾಗುತ್ತದೆ. 

ಪೂಜೆ ಸಲ್ಲಿಸುವಾಗ ಪ್ರಶಾಂತವಾಗಿರಬೇಕು. ಸಿಟ್ಟಿನಿಂದ (Angry) ಸಲ್ಲಿಸಿದ ಪೂಜೆ ಸಹ ಸ್ವೀಕಾರಕ್ಕೆ ಅರ್ಹವಾಗುವುದಿಲ್ಲ. 

ಕತ್ತಲಿನಲ್ಲಿ (Dark) ದೇವರ ಮೂರ್ತಿಯನ್ನು ಅಥವಾ ಭಾವಚಿತ್ರವನ್ನು ಸ್ಪರ್ಶಿಸಿದರೆ (Touch) ಅಥವಾ ಅದಕ್ಕೆ ಪೂಜೆ ಸಲ್ಲಿಸಿದರೆ ಅದು ಅಪರಾಧವೆಂದು ಹೇಳಲಾಗುತ್ತದೆ. ಅಂತಹ ಪೂಜೆಯನ್ನು ಸಹ ದೇವರು ಸ್ವೀಕರಿಸುವುದಿಲ್ಲ. 

- ಶಂಖ ನಾದವಿಲ್ಲದೆ (Conch), ಗಂಟೆಯನ್ನು ತೂಗದೆಯೇ ಸಲ್ಲಿಸುವ ಪೂಜೆ ಸಫಲವಾಗುವುದಿಲ್ಲ. 
- ಪೂಜಾ ಸಮಯದಲ್ಲಿ ಅರ್ಥವಿಲ್ಲದ ಮಾತುಗಳನ್ನು, ವಾದಗಳನ್ನು ಮಾಡುತ್ತಾ ಸಲ್ಲಿಸಿದ ಪೂಜೆಯೂ ಸ್ವೀಕಾರವಾಗುವುದಿಲ್ಲ.  
- ಆಹಾರವನ್ನು ಸೇವಿಸಿ (Food) ಬಾಯಿ ತೊಳೆಯದೆಯೇ ಸಲ್ಲಿಸಿದ ಪೂಜೆ ದೇವರಿಗೆ ಸ್ವೀಕಾರವಾಗುವುದಿಲ್ಲ.
- ದೀಪವನ್ನು (Lighting) ಸ್ಪರ್ಶಿಸಿ ಕೈ ತೊಳೆಯದೆಯೇ ಸಲ್ಲಿಸಿದ ಪೂಜೆ ದೇವರಿಗೆ ಸಲ್ಲುವುದಿಲ್ಲ. ಇದು ಸಹ ಪಾಪಕ್ಕೆ ಸಮವಾಗಿದೆ. 

ಇದನ್ನು ಓದಿ: ಮದುವೆ ಲೇಟ್ ಆಗುತ್ತಿದ್ಯಾ? ಇಲ್ಲಿದೆ ಪರಿಹಾರ!

ಪೂಜಿಸುವ ಸಮಯದಲ್ಲಿ ವರಾಹಪುರಾಣದಲ್ಲಿ ತಿಳಿಸಿದ ಈ ನಿಯಮಗಳನ್ನು ಅನುಸರಿಸಿದರೆ, ಸಲ್ಲಿಸಿದ ಪೂಜೆ ಸಫಲವಾಗುತ್ತದೆ ಮತ್ತು ಫಲ ದೊರಕುತ್ತದೆ. 

click me!