ಸಾಮರ್ಥ್ಯ ಇದ್ದರೂ ಯಶಸ್ಸು ಪಡೆಯುವುದು ಕಷ್ಟ - ಸಚಿವ ಆರ್.ಅಶೋಕ್

By Kannadaprabha NewsFirst Published Oct 1, 2022, 2:10 PM IST
Highlights

 ಊಹೆಗೂ ನಿಲುಕದಂತೆ ಕೇವಲ ಒಂದು ದಶಕದಲ್ಲಿ ವೈದ್ಯಕೀಯ ಕ್ಷೇತ್ರ, ಶಿಕ್ಷಣ ಕ್ಷೇತ್ರ, ಪೌಷ್ಟಿಕಾಂಶ ವಿಚಾರ ಆಗಿರಬಹುದು. ಆಯಾ ಕ್ಷೇತ್ರದಲ್ಲಿ ಮಾಡಿರುವ ಸಾಧನೆಯ ಫಲಿತಾಂಶವನ್ನು ನಂಬುವುದಕ್ಕೆ ಸಾಧ್ಯವಿಲ್ಲದಷ್ಟುಯಶಸ್ಸನ್ನು ಸದ್ಗುರು ಶ್ರೀ ಮಧುಸೂದನ ಸಾಯಿ ಅವರು ಸಾಧಿಸಿದ್ದಾರೆಂದರೆ ಅದೊಂದು ಪವಾಡವೇ ಸರಿ ಎಂದು ಕಂದಾಯ ಸಚಿವ ಆರ್‌.ಅಶೋಕ್‌ ತಿಳಿಸಿದರು.

ಚಿಕ್ಕಬಳ್ಳಾಪುರ (ಅ.1) : ಊಹೆಗೂ ನಿಲುಕದಂತೆ ಕೇವಲ ಒಂದು ದಶಕದಲ್ಲಿ ವೈದ್ಯಕೀಯ ಕ್ಷೇತ್ರ, ಶಿಕ್ಷಣ ಕ್ಷೇತ್ರ, ಪೌಷ್ಟಿಕಾಂಶ ವಿಚಾರ ಆಗಿರಬಹುದು. ಆಯಾ ಕ್ಷೇತ್ರದಲ್ಲಿ ಮಾಡಿರುವ ಸಾಧನೆಯ ಫಲಿತಾಂಶವನ್ನು ನಂಬುವುದಕ್ಕೆ ಸಾಧ್ಯವಿಲ್ಲದಷ್ಟುಯಶಸ್ಸನ್ನು ಸದ್ಗುರು ಶ್ರೀ ಮಧುಸೂದನ ಸಾಯಿ ಅವರು ಸಾಧಿಸಿದ್ದಾರೆಂದರೆ ಅದೊಂದು ಪವಾಡವೇ ಸರಿ ಎಂದು ಕಂದಾಯ ಸಚಿವ ಆರ್‌.ಅಶೋಕ್‌ ತಿಳಿಸಿದರು.

ಸತ್ಯ ಸಾಯಿಬಾಬಾರ ಅವತಾರ ಪುರುಷ ಎಂದೇಳಿ ಕೋಟಿ ಕೋಟಿ ಪಂಗನಾಮ ಹಾಕಿದ ನಕಲಿ ಬಾಬ!

ತಾಲೂಕಿನ ಸತ್ಯಸಾಯಿ ಶ್ರೀ ಸತ್ಯಸಾಯಿ ಪ್ರೇಮಾಮೃತಂ ಸಭಾಭವನದಲ್ಲಿ ಶುಕ್ರವಾರ ಸಂಜೆ ನಡೆದ ಸಾಂಸ್ಕೃತಿಕ ಸಂಧ್ಯಾ ಸತ್ಸಂಗದಲ್ಲಿ ಭಾಗವಹಿಸಿ ಮಾತನಾಡಿ, ಸರ್ಕಾರದ ಮಟ್ಟದಲ್ಲಿ ಮಂತ್ರಿಗಳಾಗಿ ಎಲ್ಲವನ್ನು ಮಾಡುವ ಸಾಮರ್ಥ್ಯವಿದ್ದರೂ ನಿರೀಕ್ಷಿತ ಮಟ್ಟದ ಯಶಸ್ಸನ್ನು ಕಂಡ ಪುರಾವೆಗಳು ವಿರಳ. ಆದರೆ ಇದೆಲ್ಲವನ್ನು ಮೀರಿ ಸದ್ಗುರು ಶ್ರೀ ಮಧುಸೂಧನ್‌ ಸಾಯಿ ಮಡಿದ್ದಾರೆಂದರು.

ಸಮಾಜದ ಏಳಿಗೆಗಾಗಿ ಕಾಯಕ

ವ್ಯಕ್ತಿಗಳು ತಮ್ಮ ಅನುಕೂಲಕ್ಕೆ ತಕ್ಕಂತೆ ಯೋಜನೆಗಳನ್ನು ತಯಾರಿಸಿದರೆ ಸದ್ಗುರು ಶ್ರೀ ಮಧುಸೂದನ ಸಾಯಿ ಅವರು ಸಮಗ್ರ ಸಮಾಜದ ಏಳಿಗೆಯನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಯೋಚಿಸಿ ಅದನ್ನು ಕಾರ್ಯಗತ ಮಾಡಿದ್ದಾರೆ. ಇದು ನಿಜಕ್ಕೂ ಶ್ಲಾಘನೀಯ ವಿಚಾರ. ಇಂಥ ಅದ್ಭುತ ಕಾರ್ಯಕ್ಕೆ ಸರಕಾರ ಎಲ್ಲಾ ರೀತಿಯ ಸಹಕಾರವನ್ನು ನೀಡಲು ಹಿಂದೆ ಮುಂದೆ ನೋಡುವುದಿಲ್ಲ. ನಮ್ಮ ಗುರಿ ಮತ್ತು ಯೋಜನೆಗಳು ಸದಾ ಯಶಸ್ಸಿನ ಕಡೆಗೆ ಇರಬೇಕು. ಯಶಸ್ಸಿನ ಕೀಲಿಗೈ ಸದಾ ನಮ್ಮಲ್ಲಿಯೇ ಇರುತ್ತದೆ. ನಮ್ಮ ಏಳಿಗೆಗೆ ನಾವೇ ಶಿಲ್ಪಿಗಳು. ಹಾಗಾಗಿ ಸದಾ ಪ್ರಯತ್ನಶೀಲರಾಗಿ ಯಶಸ್ಸಿನ ಕಡೆಗೆ ಸಾಗಬೇಕು. ಒಂದಾಗಿ ದುಡಿದರೆ ಯಶಸ್ಸು ಸದಾ ಕಟ್ಟಿಟ್ಟಬುತ್ತಿ ಎಂದರು.

ಸದ್ಗುರು ಶ್ರೀ ಮಧುಸೂದನ ಸಾಯಿ ಅವರು ಆಶೀರ್ವಚನ ನೀಡಿ, ಎಲ್ಲರೂ ಸುಖವಾಗಿರಬೇಕು ಎನ್ನುವುದು ನಮ್ಮ ಸಂಸ್ಕೃತಿಯ ಪ್ರಾರ್ಥನೆ. ಕೇವಲ ಪ್ರಾರ್ಥನೆಯಿಂದ ಏನನ್ನೂ ಮಾಡಲು ಸಾಧ್ಯವಿಲ್ಲ. ಅದಕ್ಕೆ ಮೇಧಾ, ಇಚ್ಚಾ ಮತ್ತು ಕ್ರಿಯಾಶಕ್ತಿ ಇರಬೇಕು. ಸೇವಾ ವಿಚಾರಕ್ಕೆ ಬಂದಾಗ ಜನರ ನಾಡಿ ಮಿಡಿತವನ್ನು ಅರಿತು ಸಮಾಜಕ್ಕೆ ಸ್ಪಂದಿಸಬೇಕೆಂದರು. ಶ್ರೀ ಸತ್ಯಸಾಯಿ ಮಾನವ ಅಭ್ಯುದಯ ವಿಶ್ವವಿದ್ಯಾನಿಲಯದ ಕುಲಾಧಿಪತಿಗಳಾದ ಬಿ ಎನ್‌ ನರಸಿಂಹಮೂರ್ತಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.

Fact Check: ಸಾಯಿಬಾಬಾರಂತೆ ಕಾಣುವ ಪರ್ವತ ಎಂದು ವೈರಲಾಗಿರುವ ಈ ಚಿತ್ರ ಡಿಜಿಟಲ್ ಆರ್ಟ್

ಹೆಚ್ಚು ಜನಪ್ರಿಯರಾದಾಗ ಅಷ್ಟೇ ವೈರಿಗಳು ಹುಟ್ಟಿಕೊಳ್ಳುತ್ತಾರೆ. ಕೈಯಲ್ಲಿ ಹಣವು ಓಡಾಡಿದಾಗ ಸಮಸ್ಯೆಗಳ ಆಗರವು ಸೃಷ್ಟಿಯಾಗುತ್ತದೆ. ಹಣದ ಗೊಡವೆ ಇಲ್ಲದಿದ್ದಾಗ ಯಾವುದೇ ಸಮಸ್ಯೆಗಳು ಕಾಣಿಸಿಕೊಳ್ಳುವುದಿಲ್ಲ. ಹಣಕ್ಕೆ ಪ್ರಾಮುಖ್ಯತೆ ನೀಡಿದೆ ಸೇವೆಗೆ ಮಹತ್ವವನ್ನು ಕೊಟ್ಟಾಗ ಮಹಾನ್‌ ಕಾರ್ಯವನ್ನು ಸಾಧಿಸಲು ಸಾಧ್ಯವಾಗುತ್ತದೆ.

ಆರ್‌.ಅಶೋಕ್‌, ಕಂದಾಯ ಸಚಿವ.

click me!