ಇಸ್ಕಾನ್ ಪ್ರತಿಷ್ಠಾನವೂ ಶ್ರೀಕೃಷ್ಣನ ಜನ್ಮಸ್ಥಾನವೆಂದೇ ಹೇಳಲಾಗುವ ಉತ್ತರಪ್ರದೇಶದ ಮಥುರಾದಲ್ಲಿರುವ ಬೃಂದಾವನಲ್ಲಿ 70 ಅಂತಸ್ತುಗಳ ಬೃಹತ್ ಗಗನಚುಂಬಿ ದೇಗುಲವನ್ನು ನಿರ್ಮಾಣ ಮಾಡಲು ಮುಂದಾಗಿದೆ.
ನವದೆಹಲಿ: ಇಸ್ಕಾನ್ ಪ್ರತಿಷ್ಠಾನವೂ ಶ್ರೀಕೃಷ್ಣನ ಜನ್ಮಸ್ಥಾನವೆಂದೇ ಹೇಳಲಾಗುವ ಉತ್ತರಪ್ರದೇಶದ ಮಥುರಾದಲ್ಲಿರುವ ಬೃಂದಾವನಲ್ಲಿ 70 ಅಂತಸ್ತುಗಳ ಬೃಹತ್ ಗಗನಚುಂಬಿ ದೇಗುಲವನ್ನು ನಿರ್ಮಾಣ ಮಾಡಲು ಮುಂದಾಗಿದೆ. ಇದು ಭಾರತದ ಸಂಸ್ಕೃತಿಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಚುರಪಡಿಸುತ್ತಾ ಈ ಪ್ರದೇಶಕ್ಕೆ ದೊಡ್ಡ ಮಟ್ಟದ ಅಂತಾರಾಷ್ಟ್ರೀಯ ಪ್ರವಾಸೋದ್ಯಮವನ್ನು ಕರೆತರಲಿದೆ ಎಂದು ಇಸ್ಕಾನ್ ಸಂಸ್ಥೆಯ ಉನ್ನತ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಇಸ್ಕಾನ್ ಬೆಂಗಳೂರಿನ ಹಿರಿಯ ಉಪಾಧ್ಯಕ್ಷ ಹಾಗೂ ಜಾಗತಿಕ ಹರೇ ಕೃಷ್ಣ ಚಳುವಳಿಯ ಉಪಾಧ್ಯಕ್ಷ ಹಾಗೂ ಸಹ ಮಾರ್ಗದರ್ಶಕ ಚಂಚಲಾಪತಿ ದಾಸ್ ಅವರು ಈ ಬೃಂದಾವನದಲ್ಲಿ ನಿರ್ಮಾಣವಾಗುತ್ತಿರುವ ಗಗನಚುಂಬಿ ಕೃಷ್ಣ ಮಂದಿರದ ಮಹತ್ವದ ಬಗ್ಗೆ ಮಾತನಾಡಿದ್ದಾರೆ. ಉತ್ತರ ಪ್ರದೇಶದಲ್ಲಿ ನಿರ್ಮಾಣವಾಗುತ್ತಿರುವ ಈ ದೇಗುಲ ಕೇವಲ ಭಾರತದ ಸಂಸ್ಕೃತಿಯ ಮಹತ್ವವನ್ನು ಸಾರುವುದು ಮಾತ್ರವಲ್ಲದೇ ಭಾರತದ ಸಂಸ್ಕೃತಿಗೆ ಜಾಗತಿಕ ಸ್ಥಾನಮಾನ ನೀಡಲಿದೆ. ಜೊತೆಗೆ ಭಾರತದಲ್ಲಿ ಪ್ರವಾಸೋದ್ಯಮವನ್ನು ಹೆಚ್ಚಿಸಲಿದೆ. ಈ ಮೂಲಕ ಸ್ಥಳೀಯ ಆರ್ಥಿಕತೆಗೆ ಶಕ್ತಿ ತುಂಬಲಿದೆ.
ಭೋಜಶಾಲಾ ಮಸೀದಿ ಮೂಲತಃ ಸರಸ್ವತಿ ದೇಗುಲ: ಖ್ಯಾತ ಇತಿಹಾಸ ತಜ್ಞ ಮೊಹಮ್ಮದ್
ಸುದ್ದಿಸಂಸ್ಥೆ ಪಿಟಿಐಗೆ ನೀಡಿದ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ಈ ಆಧ್ಮಾತ್ಮಿಕ ಶಕ್ತಿ ಕೇಂದ್ರವನ್ನು ಸ್ಥಾಪಿಸುವುದರ ಮಹತ್ವವನ್ನು ಒತ್ತಿ ಹೇಳಿದ ಅವರು ದೇವಾಲಯಗಳನ್ನು ಶಾಶ್ವತವಾಗಿ ಹಾಳಾದ ಸ್ಥಿತಿಯಲ್ಲಿ ಬಿಡಬಾರದು ಎಂದು ಹೇಳಿದರು. ಭಾರತದ ಆಧ್ಯಾತ್ಮಕ್ಕೆ ವಿದೇಶಿಯರನ್ನು ಆಕರ್ಷಿಸುವ ಮತ್ತು ಭಾರತದ ಶ್ರೀಮಂತ ಆಧ್ಯಾತ್ಮಿಕ ಪರಂಪರೆಯನ್ನು ಅನುಭವಿಸಲು ಅನುವು ಮಾಡಿಕೊಡುವ ವಿಶ್ವದರ್ಜೆಯ ಆಧ್ಯಾತ್ಮಿಕ ಮತ್ತು ಧಾರ್ಮಿಕ ಮೂಲಸೌಕರ್ಯಗಳ ಅಗತ್ಯವನ್ನು ದೇಶದಲ್ಲಿ ಸ್ಥಾಪಿಸುವ ಬಗ್ಗೆ ಮಹತ್ವವನ್ನು ಅವರು ಹೇಳಿದರು.
ಹೀಗಾಗಿ 80 ಮಿಲಿಯನ್ ಅಮೆರಿಕನ್ ಡಾಲರ್ ವೆಚ್ಚದಲ್ಲಿ ಮುಂಬರುವ ದಿನಗಳಲ್ಲಿ ಮಥುರಾದಲ್ಲಿ ಬೃಂದಾವನ ಹೆರಿಟೇಜ್ ಟವರ್ ತಲೆ ಎತ್ತಿ ನಿಲ್ಲಲ್ಲಿದೆ. 70 ಅಂತಸ್ತುಗಳ ಜೊತೆ ಇದು 210 ಮೀಟರ್ ಎತ್ತರವನ್ನು ಹೊಂದಿರಲಿದ್ದು ಸ್ಮಾರಕದಂತೆ ಗೋಚರಿಸಲಿದೆ.
ನಾವು ಕೃಷ್ಣನ ವಂಶಸ್ಥರು ಪಾಂಡವರ ಪಕ್ಷದವರು ಎಂದ ಅಖಿಲೇಶ್ ಯಾದವ್: ಯೋಗಿ ಆದಿತ್ಯನಾಥ್ ಉತ್ತರಕ್ಕೆ ಶಾಕ್
ಸಂಸ್ಕೃತಿ, ಅಭಿವೃದ್ಧಿ ಮತ್ತು ಪ್ರವಾಸೋದ್ಯಮದ ನಡುವಿನ ಆಳವಾದ ಸಂಪರ್ಕವನ್ನು ವಿಶ್ಲೇಷಿಸಿದ ಅವರು, ಇಲ್ಲಿ ಸ್ಥಾಪಿಸಲಾಗುತ್ತಿರುವ ವೃಂದಾವನ ಪಾರಂಪರಿಕ ಟವರ್‌ನ ಮೂಲಕ ಮೂಲ ಸೌಕರ್ಯಗಳನ್ನು ಹೆಚ್ಚಿಸುವ ಮೂಲಕ ದೇಶದಲ್ಲಿ ಸಾಂಸ್ಕೃತಿಕ ವಿನಿಮಯ ಮತ್ತು ತಾತ್ವಿಕ ಚರ್ಚೆಗಳನ್ನು ಸುಗಮಗೊಳಿಸಲಿದೆ ಅಷ್ಟೇ ಅಲ್ಲದೇ, ಪ್ರಪಂಚದೆಲ್ಲೆಡೆಯ ಚಿಂತಕರು ಮತ್ತು ನಾಯಕರನ್ನು ಇದು ಆಕರ್ಷಿಸಲಿದೆ ಎಂದು ಇದರ ಜೊತೆಗೆ ಸ್ಥಳೀಯ ಸಮುದಾಯಕ್ಕೆ ಸಮಾನ ಪ್ರಯೋಜನಗಳನ್ನು ಖಚಿತಪಡಿಸಲಿದೆ ಎಂದು ದಾಸ್ ಹೇಳಿದ್ದಾರೆ.