ಆಪ್ತರಿಗೆ ಕರೆ ಮಾಡಿ, ನೀನು ಇವತ್ತು ನನ್ನ ಕನಸಿನಲ್ಲಿ ಬಂದಿದ್ದೆ ಗೊತ್ತಾ ಎನ್ನುತ್ತೇವೆ. ನಾವು ನೆನಪು ಮಾಡಿಕೊಳ್ಳದೆಯೇ ಅವರು ನಮ್ಮ ಡ್ರೀಮ್ ನಲ್ಲಿ ಬಂದು ಹೋಗಿರ್ತಾರೆ. ಆಪ್ತರು, ಸಂಬಂಧಿಕರು ಸ್ವಪ್ನದಲ್ಲಿ ಕಂಡ್ರೆ ಖುಷಿಪಡಿ. ಕೆಲವೊಂದಿಷ್ಟು ಮಂಗಳ ಕಾರ್ಯವಾಗುವ ಸೂಚನೆ ಅದು.
ಆಳವಾದ ನಿದ್ರೆ (Sleep) ಯಲ್ಲಿ ಬಹುತೇಕ ಎಲ್ಲರಿಗೂ ಕನಸು (Dream) ಬೀಳುತ್ತದೆ. ಈ ಕನಸಿಗೂ ನಮ್ಮ ಮುಂದಿನ ಜೀವನ (Life) ಕ್ಕೂ ಆಳವಾದ ಸಂಬಂಧವಿದೆ. ಭವಿಷ್ಯದ ಬಗ್ಗೆ ನಮಗೆ ಕೆಲ ಸಂದೇಶಗಳು ಕನಸಿನ ಮೂಲಕ ಸಿಗುತ್ತದೆ ಎಂದು ಸ್ವಪ್ನ ಶಾಸ್ತ್ರಗಳಲ್ಲಿ ಹೇಳಲಾಗಿದೆ. ಕನಸಿನಲ್ಲಿ ನಾನಾ ವಿಧಗಳಿವೆ. ಕನಸಿನಲ್ಲಿ ನಾವು ಊಹಿಸದ ಕೆಲವ ವಿಷ್ಯಗಳನ್ನು ನೋಡಿರ್ತೇವೆ. ಕೆಲವೊಮ್ಮೆ ಭಯಾನಕ ಕನಸು ಬಿದ್ರೆ ಮತ್ತೆ ಕೆಲವು ಬಾರಿ ಸಂತೋಷ (happiness) ದ ಕನಸು ಬೀಳುತ್ತದೆ. ಕನಸಿನಲ್ಲಿ ಪ್ರಾಣಿಯಿಂದ ಹಿಡಿದು ಆತ್ಮೀಯರವರೆಗೆ ಎಲ್ಲರೂ ಕಾಣಿಸಿಕೊಳ್ಳುವುದಿಲ್ಲ. ನಾವು ಅವರನ್ನು ನೆನಪು ಮಾಡಿಕೊಂಡಿರೋದೇ ಇಲ್ಲ. ಅಂಥವರು ನಮ್ಮ ಕನಸಿನಲ್ಲಿ ಬರುವುದಿದೆ. ಕನಸಿನಲ್ಲಿ ಬರುವ ಪ್ರತಿಯೊಂದು ವಸ್ತು ಹಾಗೂ ವ್ಯಕ್ತಿಗೆ ಬೇರೆ ಬೇರೆ ಅರ್ಥವಿದೆ. ಕನಸಿನಲ್ಲಿ ಆಪ್ತರು ಸಾವನ್ನಪ್ಪಿದಂತೆ, ಇಲ್ಲವೆ ರೋಗಕ್ಕೆ ತುತ್ತಾದಂತೆ ಕಂಡಾಗ ಭಯವಾಗುತ್ತದೆ. ಮುಂದೇನೂ ಕಾದಿದ್ಯೋ ಎಂದುಕೊಳ್ತೇವೆ.ಇಂದು ನಾವು ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರವನ್ನು ಹೇಳುತ್ತೇವೆ.
ಕನಸಿನಲ್ಲಿ ತಾಯಿ (Mother ) ಕಂಡ್ರೆ, ನಮ್ಮ ಕನಸಿನಲ್ಲಿ ನಮ್ಮ ತಂದೆ (Father) ಕಂಡ್ರೆ ಸ್ವಪ್ನ ಶಾಸ್ತ್ರದಲ್ಲಿ ಏನು ಅರ್ಥ ಎಂಬುದನ್ನು ಇಂದು ಹೇಳ್ತೇವೆ.
ಕನಸಿನಲ್ಲಿ ತಾಯಿ ಕಾಣಿಸಿಕೊಂಡ್ರೆ ಏನು ಸೂಚನೆ : ತಾಯಿ ನಿಮ್ಮ ಸ್ವಪ್ನದಲ್ಲಿ ಬಂದ್ರೆ ಅಥವಾ ಕನಸಿನಲ್ಲಿ ನೀವು ತಾಯಿಯನ್ನು ತಬ್ಬಿಕೊಂಡಂತೆ ಕಂಡ್ರೆ ನಿಮಗೆ ಶೀಘ್ರವೇ ಅದೃಷ್ಟ ಬರಲಿದೆ ಎಂಬುದರ ಸೂಚನೆಯಾಗಿದೆ. ಶೀಘ್ರದಲ್ಲೇ ನೀವು ನಿಮ್ಮ ಕೆಲಸದಲ್ಲಿ ಯಶಸ್ಸ (Success) ನ್ನು ಪಡೆಯುತ್ತೀರಿ ಎಂದರ್ಥ. ನಿಮ್ಮ ಅಪೂರ್ಣ ಕಾರ್ಯಗಳು ಶೀಘ್ರದಲ್ಲೇ ಪೂರ್ಣಗೊಳ್ಳುತ್ತವೆ ಮತ್ತು ನಿಮಗೆ ಒಳ್ಳೆಯ ಸುದ್ದಿ ಸಿಗುತ್ತದೆ ಎಂಬ ಸೂಚನೆಯಾಗಿದೆ.
Bhagavat Purana: ಲೈಂಗಿಕ ಸುಖ ಮಹಿಳೆಗೇ ಹೆಚ್ಚು, ಮುಟ್ಟಿಗೆ ಬದಲು ಇಂದ್ರ ನೀಡಿದ ವರವಿದು!
ಕನಸಿನಲ್ಲಿ ಅಜ್ಜ – ಅಜ್ಜಿ : ಅಜ್ಜ-ಅಜ್ಜಿ ನಿಮ್ಮ ಸ್ವಪ್ನದಲ್ಲಿ ಬಂದ್ರೆ ಖುಷಿಯಾಗಿ. ಯಾಕೆಂದ್ರೆ ಸ್ವಪ್ನ ಶಾಸ್ತ್ರದ ಪ್ರಕಾರ ಇದು ಮಂಗಳಕರ. ಏಕೆಂದರೆ ನಿಮ್ಮ ಕನಸಿನಲ್ಲಿ ವಯಸ್ಸಾದವರು ಕಾಣಿಸಿಕೊಂಡ್ರೆ ನಿಮ್ಮ ಪ್ರಗತಿ ಶುರುವಾಗಲಿದೆ ಎಂದರ್ಥ. ಶೀಘ್ರದಲ್ಲೇ ನೀವು ಕೆಲಸದ ಸ್ಥಳದಲ್ಲಿ ಗೌರವವನ್ನು ಪಡೆಯುತ್ತೀರಿ.
ಕನಸಿನಲ್ಲಿ ಸ್ನೇಹಿತರು : ಕನಸಿನಲ್ಲಿ ಅನೇಕ ಬಾರಿ ನಾವು ಸ್ನೇಹಿತರನ್ನು ಕಾಣ್ತೇವೆ. ಸ್ನೇಹಿತರ ಜೊತೆ ಸಂಭಾಷಣೆ ನಡೆಸಿದಂತೆ ಅಥವಾ ಸ್ನೇಹಿತರ ಜೊತೆ ಪ್ರವಾಸಕ್ಕೆ ಹೋದಂತೆ ಕನಸು ಕಂಡರೆ ಅದು ನಿಮಗೆ ಪ್ರಯೋಜನಕಾರಿ ಎಂದು ಸಾಬೀತುಪಡಿಸುತ್ತದೆ. ಸಪ್ನ ಶಾಸ್ತ್ರದ ಪ್ರಕಾರ, ಕನಸಿನಲ್ಲಿ ಸ್ನೇಹಿತರು ಕಂಡರೆ ಶೀಘ್ರದಲ್ಲೇ ನೀವು ಪ್ರಯೋಜನಗಳನ್ನು ಪಡೆಯುತ್ತೀರಿ ಎಂಬ ಸೂಚನೆಯಾಗಿದೆ.
ಸ್ವಪ್ನದಲ್ಲಿ ಪತಿ : ಒಬ್ಬ ಮಹಿಳೆ ತನ್ನ ಗಂಡನನ್ನು ಕನಸಿನಲ್ಲಿ ನೋಡಿದರೆ, ಅವಳು ಸಂತೋಷವನ್ನು ಪಡೆಯಲಿದ್ದಾಳೆ ಎಂದರ್ಥ. ಶೀಘ್ರದಲ್ಲೇ ಅವಳ ಆಸೆ ಈಡೇರಲಿದೆ ಎಂಬ ಸೂಚನೆಯಾಗಿದೆ.
ಕನಸಿನಲ್ಲಿ ಸಂಬಂಧಿಕರು : ನಿಮ್ಮ ಕನಸಿನಲ್ಲಿ ನಿಕಟ ಸಂಬಂಧಿ ನಿಮ್ಮ ಮನೆಗೆ ಬರುವಂತೆ ಕಂಡ್ರೆ ನೀವು ಹೊಸ ಉತ್ತಮ ಅವಕಾಶಗಳನ್ನು ಪಡೆಯಲಿದ್ದೀರಿ ಎಂದರ್ಥ. ನೀವು ಕೆಲಸದ ಸ್ಥಳದಲ್ಲಿ ಲಾಭ ಪಡೆಯಲಿದ್ದೀರಿ ಅಥವಾ ನೀವು ಬಡ್ತಿ ಪಡೆಯಲಿದ್ದೀರಿ ಎಂಬುದರ ಸೂಚನೆಯಾಗಿದೆ.
Chanakya Niti : ಎಂಥ ಜಾಗದಲ್ಲಿ ವಾಸಿಸಿದರೆ ಒಲಿಯುತ್ತೆ ಅದೃಷ್ಟ?
ಸ್ವಪ್ನದಲ್ಲಿ ಶಿಕ್ಷಕರು : ಸ್ವಪ್ನ ಶಾಸ್ತ್ರದ ಪ್ರಕಾರ. ನೀವು ಕನಸಿನಲ್ಲಿ ಗುರುವನ್ನು ನೋಡಿದರೆ ಅದು ತುಂಬಾ ಒಳ್ಳೆಯದು ಎಂದು ಪರಿಗಣಿಸಲಾಗುತ್ತದೆ. ಮುಂದಿನ ದಿನಗಳಲ್ಲಿ ನೀವು ಖಂಡಿತವಾಗಿಯೂ ಯಶಸ್ಸನ್ನು ಪಡೆಯುತ್ತೀರಿ ಎಂದು ಇದು ಸೂಚಿಸುತ್ತದೆ. ಜೊತೆಗೆ ಜೀವನದಲ್ಲಿನ ಅಡೆತಡೆಗಳು ದೂರವಾಗುತ್ತವೆ ಎಂಬ ಅರ್ಥವಾಗಿದೆ.
ಕನಸಿನಲ್ಲಿ ಸಹೋದರ : ನಿಮ್ಮ ಸಹೋದರರು ಕನಸಿನಲ್ಲಿ ಕಾಣಿಸಿಕೊಂಡ್ರೆ ಇದು ಕೂಡ ಶುಭಕರವಾಗಿರುತ್ತದೆ. ನಿಮಗೆ ಶೀಘ್ರದಲ್ಲೇ ಸ್ನೇಹಿತರು ಪ್ರಾಪ್ತಿಯಾಗಲಿದ್ದಾರೆ ಎಂಬುದರ ಸೂಚನೆಯಾಗಿದೆ.