ಜೂನ್ 30ರಿಂದ ಆಷಾಢ ಗುಪ್ತ ನವರಾತ್ರಿ; ಆಚರಣೆ ಹೇಗೆ? ಏಕಿದು ಗುಪ್ತ್ ಗುಪ್ತ್?

By Suvarna News  |  First Published Jun 30, 2022, 12:19 PM IST

ಇಂದಿನಿಂದ 9 ದಿನಗಳ ಕಾಲ ಆಷಾಢ ಗುಪ್ತ ನವರಾತ್ರಿ ಆಚರಣೆ ನಡೆಯಿಲಿದೆ. ಗುಪ್ತ ನವರಾತ್ರಿ ರಹಸ್ಯ ಆಚರಣೆಗಳಿಗೆ ಹೆಚ್ಚು ಮಹತ್ವದ್ದಾಗಿದೆ. ಇದರಲ್ಲಿ ಅಡೆತಡೆಗಳನ್ನು ನಾಶಪಡಿಸುವ ವರವನ್ನು ಪಡೆಯಬಹುದು. ಉತ್ತರ ಭಾರತದಲ್ಲಂತೂ ಇದರ ಆಚರಣೆ ಜೋರು. ಹೇಗೆ ಇದರ ಆಚರಣೆ? ಸಾಮಾನ್ಯ ನವರಾತ್ರಿಗೂ ಗುಪ್ತ ನವರಾತ್ರಿಗೂ ಏನು ವ್ಯತ್ಯಾಸ? 


ಹಿಂದೂ ಕ್ಯಾಲೆಂಡರ್(Hindu Calendar) ಪ್ರಕಾರ, ನವರಾತ್ರಿಯನ್ನು ವರ್ಷದಲ್ಲಿ ನಾಲ್ಕು ಬಾರಿ ಆಚರಿಸಲಾಗುತ್ತದೆ. ಅದರಲ್ಲಿ ಎರಡು ಬಾರಿ ಗುಪ್ತ ನವರಾತ್ರಿ(Gupt Navaratri) ಮತ್ತು ಎರಡು ಬಾರಿ ಸಾಮಾನ್ಯ ನವರಾತ್ರಿಯನ್ನು ಆಚರಿಸಲಾಗುತ್ತದೆ. ಚೈತ್ರ ಮತ್ತು ಅಶ್ವಿನಿ ನವರಾತ್ರಿ ಹೆಚ್ಚು ಪ್ರಸಿದ್ಧವಾಗಿದೆ. ಗೃಹಸ್ಥರು ಈ ಎರಡು ನವರಾತ್ರಿಗಳನ್ನು ವಿಜೃಂಭಣೆಯಿಂದ ಸಂಪ್ರದಾಯಬದ್ಧವಾಗಿ ಆಚರಿಸುತ್ತಾರೆ. ಆದರೆ, ಮಾಘ ಮತ್ತು ಆಷಾಢದಲ್ಲಿ ಬರುವ ಗುಪ್ತ ನವರಾತ್ರಿಯ ಬಗ್ಗೆ ಕೆಲವೇ ಜನರಿಗೆ ತಿಳಿದಿದೆ. ಗುಪ್ತ ನವರಾತ್ರಿಯು ರಹಸ್ಯ ಆಚರಣೆಗಳಿಗೆ ಹೆಚ್ಚು ಮುಖ್ಯವೆಂದು ಪರಿಗಣಿಸಲಾಗಿದೆ. ಇಲ್ಲಿ ದುರ್ಗೆಯನ್ನು ರಹಸ್ಯವಾಗಿ ಪೂಜಿಸಲಾಗುತ್ತದೆ. ಇದರಲ್ಲಿ ಅಡೆತಡೆಗಳನ್ನು ನಾಶಪಡಿಸುವ ವರವನ್ನು ಪಡೆಯಬಹುದು. 

ಮುಹೂರ್ತ
ಈ ಬಾರಿ ಆಷಾಢ ಮಾಸದ ಗುಪ್ತ ನವರಾತ್ರಿಯ ದಿನಾಂಕವು ಜೂನ್ 30ರಿಂದ ಜುಲೈ 08 ರವರೆಗೆ ಇರುತ್ತದೆ. ಇದು ಆಷಾಢದ ಶುಕ್ಲ ಪಕ್ಷದ ಪ್ರತಿಪದದಿಂದ ಪ್ರಾರಂಭವಾಗುತ್ತದೆ. ಗುಪ್ತ ನವರಾತ್ರಿಗೆ ಕಲಶವನ್ನು ಸ್ಥಾಪಿಸುವ ಶುಭ ಮುಹೂರ್ತವು ಜೂನ್ 30ರ ಗುರುವಾರ ಬೆಳಿಗ್ಗೆ 5:26 ರಿಂದ 6:45 ರವರೆಗೆ ಇರುತ್ತದೆ. ಈ ಗುಪ್ತ ನವರಾತ್ರಿಯ ಸಂದರ್ಭದಲ್ಲಿ 10 ಮಹಾವಿದ್ಯೆಗಳನ್ನು ಪೂಜಿಸಲಾಗುತ್ತದೆ.

Tap to resize

Latest Videos

ತಾಂತ್ರಿಕರಿಗೆ ವಿಶೇಷ ನವರಾತ್ರಿ
ಮಹಾಕಾಳಿ ಮತ್ತು ಶಿವನನ್ನು ಅಂದರೆ ಶಾಕ್ತ ಮತ್ತು ಶೈವವನ್ನು ಪೂಜಿಸುವವರಿಗೆ ಈ ಸಮಯವನ್ನು ವಿಶೇಷವೆಂದು ಪರಿಗಣಿಸಲಾಗುತ್ತದೆ. ತಂತ್ರ ಅನ್ವೇಷಕರು ಈ ಸಮಯದಲ್ಲಿ ವಿಶೇಷ ಸಾಧನಗಳನ್ನು ಮಾಡುತ್ತಾರೆ. ಈ ಸಂದರ್ಭವು ತಂತ್ರ ಸಾಧನೆ, ಮಂತ್ರಗಳ ಕೈವಶ ಮಾಡಿಕೊಳ್ಳಲು ಸೂಕ್ತವಾಗಿದೆ ಎಂಬ ನಂಬಿಕೆ ಇದೆ. ಈ ಬಾರಿ ಆಷಾಢ ಮಾಸದ ಗುಪ್ತ ನವರಾತ್ರಿಯಲ್ಲಿ ಹಲವು ವಿಶೇಷ ಯೋಗಗಳು ರೂಪುಗೊಳ್ಳುತ್ತಿವೆ. ಇದರಿಂದಾಗಿ ಈ ನವರಾತ್ರಿಯ ಮಹತ್ವ ಇನ್ನಷ್ಟು ಹೆಚ್ಚಿದೆ. 

ಜುಲೈ ತಿಂಗಳ ಹಬ್ಬ ಹರಿದಿನ, ವ್ರತ ಕತೆಗಳ ಪಟ್ಟಿ ಇಲ್ಲಿದೆ..

ಯೋಗಗಳು(Yoga)
ಆಷಾಢದ ಗುಪ್ತ ನವರಾತ್ರಿಯ ಮೊದಲ ದಿನವೇ ಗುರು ಪುಷ್ಯ ಯೋಗ, ಸರ್ವಾರ್ಥ ಸಿದ್ಧಿ ಯೋಗ, ಅಮೃತ ಸಿದ್ಧಿ ಯೋಗ, ಅದಲ ಯೋಗ, ವಿದಲ ಯೋಗ ಮತ್ತು ಧ್ರುವ ಯೋಗಗಳು ರೂಪುಗೊಳ್ಳುತ್ತಿವೆ. ಈ ಮಂಗಳಕರವಾದ ಯೋಗದಲ್ಲಿ ಮಾಡಿದ ಘಟಸ್ಥಾಪನೆಯು ಜೀವನದಲ್ಲಿ ಅಪಾರ ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತದೆ. ಇಂದು ಭಕ್ತರು ಘಟಸ್ಥಾಪನೆ ಮಾಡುತ್ತಾರೆ ಮತ್ತು 9 ದಿನಗಳ ಕಾಲ ಮಾ ದುರ್ಗೆಯ 9 ರೂಪಗಳನ್ನು ಪೂಜಿಸುತ್ತಾರೆ. 

ಸಾಮಾನ್ಯ ಮತ್ತು ಗುಪ್ತ ನವರಾತ್ರಿಯ ನಡುವಿನ ವ್ಯತ್ಯಾಸವೇನು?
ಸಾಮಾನ್ಯ ಮತ್ತು ಗುಪ್ತ ನವರಾತ್ರಿಯ ನಡುವಿನ ವ್ಯತ್ಯಾಸವೇನು ಎಂದು ಯೋಚಿಸುತ್ತಿದ್ದೀರಾ? ಸಾಮಾನ್ಯ ನವರಾತ್ರಿಯಲ್ಲಿ, ಸಾತ್ವಿಕ ಮತ್ತು ತಾಂತ್ರಿಕ ಪೂಜೆಗಳನ್ನು ನಡೆಸಲಾಗುತ್ತದೆ. ಗುಪ್ತ ನವರಾತ್ರಿಯಲ್ಲಿ ಮುಖ್ಯವಾಗಿ ತಾಂತ್ರಿಕ ಪೂಜೆಯನ್ನೇ ಮಾಡಲಾಗುತ್ತದೆ. ಗುಪ್ತ ನವರಾತ್ರಿಯಲ್ಲಿ, ನಿಮ್ಮ ಸಾಧನವನ್ನು ಗೌಪ್ಯವಾಗಿ ಇರಿಸಲಾಗುತ್ತದೆ. ಗುಪ್ತ ನವರಾತ್ರಿಯಲ್ಲಿ ಪೂಜೆ ಹೆಚ್ಚು ಗೌಪ್ಯವಾಗಿರುತ್ತವೆ, ಹೆಚ್ಚು ಯಶಸ್ಸು ಇರುತ್ತದೆ.

ಜಗನ್ನಾಥ ರಥಯಾತ್ರೆ 2022: ಬೆರಗು ಮೂಡಿಸೋ 10 ವಿಶೇಷಗಳು..

ಗುಪ್ತ ನವರಾತ್ರಿಯ ಪ್ರಮುಖ ನಿಯಮಗಳು(rules)

  • ಗುಪ್ತ ನವರಾತ್ರಿಯಲ್ಲಿ ಎರಡೂ ಸಮಯಗಳಲ್ಲಿ ಮಾ ಅಂಬೆಯನ್ನು ಪೂಜಿಸಿ. ಘಟಸ್ಥಾಪನೆ ಮಾಡಿದ್ದರೆ ಸಂಜೆ ಆರತಿ ಮಾಡಬೇಕು.
  • ನವರಾತ್ರಿಯ 9 ದಿನಗಳಲ್ಲಿ ತಾಮಸಿಕ ಆಹಾರವನ್ನು ಸೇವಿಸಬೇಡಿ. ಮಾಂಸಾಹಾರ-ಮದ್ಯ, ಬೆಳ್ಳುಳ್ಳಿ-ಈರುಳ್ಳಿ ಇತ್ಯಾದಿಗಳನ್ನು ಸೇವಿಸಬೇಡಿ.
  • ಯಾರಿಗೂ ಕೆಟ್ಟದ್ದನ್ನು ಮಾಡಕೂಡದು. ಯಾವುದೇ ಅನೈತಿಕ ಕೃತ್ಯಗಳನ್ನೂ ಮಾಡಬಾರದು.
  • ಬ್ರಹ್ಮಚರ್ಯವನ್ನು ಅನುಸರಿಸಬೇಕು.
  • ಈ ಸಮಯದಲ್ಲಿ, ಯಾರೊಂದಿಗೂ ಕೋಪಗೊಳ್ಳಬಾರದು ಅಥವಾ ಜಗಳವಾಡಬಾರದು. 

    ದಿನ ಭವಿಷ್ಯ, ವಾರ ಭವಿಷ್ಯ, ಸಂಖ್ಯಾ ಶಾಸ್ತ್ರ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿ ದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.
click me!