ತೃತೀಯ ಲಿಂಗಿಗಳ ಪ್ರಪಂಚ ಬಹಳ ನಿಗೂಢವಾಗಿದೆ. ಅವರಿಗೆ ಸಂಬಂಧಿಸಿದ ಸಂಪ್ರದಾಯಗಳ ಬಗ್ಗೆ ಕೆಲವೇ ಜನರಿಗೆ ತಿಳಿದಿದೆ. ಇವರ ವಿವಾಹ ಸಮಾರಂಭ ಬರೋಬ್ಬರಿ 18 ದಿನಗಳ ಕಾಲ ನಡೆಯುತ್ತದೆ. ಇವರು ಯಾರೊಂದಿಗೆ ವಿವಾಹವಾಗುತ್ತಾರೆ ಗೊತ್ತಾ?
ಮಂಗಳಮುಖಿಯರಿಗೆ ಅವರದೇ ಆದ ವಿಭಿನ್ನ ಲೋಕವಿದೆ. ಅವರು ಅನೇಕ ನಂಬಿಕೆಗಳು ಮತ್ತು ಸಂಪ್ರದಾಯಗಳನ್ನು ಹೊಂದಿದ್ದಾರೆ, ಅದರ ಬಗ್ಗೆ ಹಲವರಿಗೆ ಬಹಳ ಕಡಿಮೆ ತಿಳಿದಿದೆ. ಈ ಸಂಪ್ರದಾಯಗಳು ಎಷ್ಟು ಆಸಕ್ತಿದಾಯಕವೋ ಅಷ್ಟೇ ನಿಗೂಢವಾಗಿವೆ. ಮಂಗಳಮುಖಿಯರೂ ಮದುವೆಯಾಗುತ್ತಾರೆ ಎಂಬುದು ಕೆಲವೇ ಜನರಿಗೆ ತಿಳಿದಿದೆ. ಅವರ ಮದುವೆ ಸಮಾರಂಭ ಅದ್ಧೂರಿಯಾಗಿ ನಡೆಯುತ್ತದೆ. ಇಂದು ನಾವು ನಿಮಗೆ ಮಂಗಳಮುಖಿಯರ ವಿವಾಹಕ್ಕೆ ಸಂಬಂಧಿಸಿದ ಕೆಲವು ವಿಶೇಷ ವಿಷಯಗಳನ್ನು ಹೇಳುತ್ತಿದ್ದೇವೆ, ಅವುಗಳು ಈ ಕೆಳಗಿನಂತಿವೆ.
ಮಂಗಳಮುಖಿಯರು ಹೇಗೆ ಮದುವೆಯಾಗುತ್ತಾರೆ?
ಪ್ರತಿ ವರ್ಷ ತಮಿಳು ಹೊಸ ವರ್ಷದ ಮೊದಲ ಹುಣ್ಣಿಮೆಯಂದು, ತಮಿಳುನಾಡಿನ ವಿಲ್ಲುಪುರಂ ಜಿಲ್ಲೆಯ ಕುತಾಂಡವರ್ ಗ್ರಾಮದಲ್ಲಿ ಮಂಗಳಮುಖಿ ವಿವಾಹ ಸಮಾರಂಭವನ್ನು ನಡೆಸಲಾಗುತ್ತದೆ, ಇದು 18 ದಿನಗಳವರೆಗೆ ನಡೆಯುತ್ತದೆ. ಈ ಸಂದರ್ಭದಲ್ಲಿ ನೃತ್ಯ, ಗಾಯನದಂತಹ ಕಾರ್ಯಕ್ರಮಗಳು ನಡೆಯುತ್ತವೆ. ಈ ಸಮಾರಂಭದಲ್ಲಿ ಭಾಗವಹಿಸಲು ದೇಶದ ಎಲ್ಲೆಡೆಯಿಂದ ಸಾವಿರಾರು ಮಂಗಳಮುಖಿಯರು ಇಲ್ಲಿ ಸೇರುತ್ತಾರೆ. ಮದುವೆ ಸಮಾರಂಭದ 17ನೇ ದಿನದಂದು, ಮಂದಗಳಮುಖಿಯರು ವಧುವಿನಂತೆ ವೇಷ ಧರಿಸುತ್ತಾರೆ ಮತ್ತು ನಂತರ ಅರಾವಣನ ದೇವಸ್ಥಾನಕ್ಕೆ ಹೋಗುತ್ತಾರೆ. ಇಲ್ಲಿ ಅರ್ಚಕರು ಮಂಗಳಮುಖಿಯರ ಕೊರಳಿಗೆ ಅರಾವಣ ದೇವ್ ಹೆಸರಿನಲ್ಲಿ ಮಂಗಳಸೂತ್ರವನ್ನು ಕಟ್ಟುತ್ತಾರೆ. ಈ ರೀತಿಯಾಗಿ ಮಂಗಳಮುಖಿಯರು ಭಗವಾನ್ ಅರಾವಣನನ್ನು ಮದುವೆಯಾಗುತ್ತಾರೆ.
ದೇವಾಲಯಗಳಲ್ಲಿ ಫೋನ್ ನಿಷೇಧ ಮಾಡಲೇಬೇಕು, ಏಕೆ ಗೊತ್ತಾ?
ಈ ಮದುವೆ ಕೇವಲ ಒಂದು ರಾತ್ರಿ ಮಾತ್ರ
ಮದುವೆಯ ನಂತರ, ಮಂಗಳಮುಖಿಯರು ನೃತ್ಯ ಮತ್ತು ಹಾಡುವ ಮೂಲಕ ತಮ್ಮ ಸಂತೋಷವನ್ನು ವ್ಯಕ್ತಪಡಿಸುತ್ತಾರೆ, ಆದರೆ ಈ ಸಂತೋಷವು ಮರುದಿನವೇ ಶೋಕವಾಗಿ ಬದಲಾಗುತ್ತದೆ. ಸಂಪ್ರದಾಯದ ಪ್ರಕಾರ, ಮಂಗಳಮುಖಿಯರು ಒಂದು ರಾತ್ರಿ ಮಾತ್ರ ಮದುವೆಯಾಗುತ್ತಾರೆ. 18ನೇ ದಿನದಂದು, ಅರಾವಣ ದೇವನ ವಿಗ್ರಹವನ್ನು ಸಿಂಹಾಸನದ ಮೇಲೆ ಇರಿಸುವ ಮೂಲಕ ಇಡೀ ಗ್ರಾಮದಲ್ಲಿ ಮೆರವಣಿಗೆಯನ್ನು ತೆಗೆದುಕೊಳ್ಳಲಾಗುತ್ತದೆ. ಇದರ ನಂತರ ಪಂಡಿತರು ಸಾಂಕೇತಿಕವಾಗಿ ಅರಾವಣ ದೇವನ ತಲೆಯನ್ನು ಕತ್ತರಿಸುತ್ತಾರೆ ಮತ್ತು ಎಲ್ಲಾ ಮಂಗಳಮುಖಿಯರು ವಿಧವೆಯರಾಗುತ್ತಾರೆ. ಮಂಗಳಮುಖಿಯರು ತಮ್ಮ ಬಳೆಗಳನ್ನು ಮುರಿದು ವಿಧವೆಯ ಉಡುಪನ್ನು ಧರಿಸುತ್ತಾರೆ, ಅಂದರೆ ಬಿಳಿ ಸೀರೆಯನ್ನು ಧರಿಸುತ್ತಾರೆ. 19ನೇ ದಿನದಂದು, ಮಂಗಳಮುಖಿಯರು ತಮ್ಮ ಮಂಗಳಸೂತ್ರವನ್ನು ಅರಾವಣ ದೇವ್‌ಗೆ ಅರ್ಪಿಸುತ್ತಾರೆ ಮತ್ತು ಹೊಸ ಮಂಗಳಸೂತ್ರವನ್ನು ಧರಿಸುತ್ತಾರೆ.
Shani dev ವಿಗ್ರಹ ಮನೆಗಳಲ್ಲಿಡುವುದಿಲ್ಲ ಏಕೆ?
ಅರಾವಣ ದೇವ್ ಯಾರು?
ಮಂಗಳಮುಖಿಯರ ದೇವತೆಯಾದ ಅರಾವಣನ ಇತಿಹಾಸವು ಮಹಾಭಾರತಕ್ಕೆ ಸಂಬಂಧಿಸಿದೆ. ಅರಾವಣನು ಅರ್ಜುನ ಮತ್ತು ನಾಗಕನ್ಯಾ ಉಲುಪಿಯ ಮಗ. ಮಹಾಭಾರತ ಯುದ್ಧ ಪ್ರಾರಂಭವಾಗುವ ಮೊದಲು ಪಾಂಡವರು ಮಾ ಕಾಳಿಯನ್ನು ಪೂಜಿಸುತ್ತಾರೆ. ಈ ಪೂಜೆಯಲ್ಲಿ ರಾಜಕುಮಾರನನ್ನು ಬಲಿ ಕೊಡಬೇಕು. ಆಗ ಅರಾವಣನು ಸ್ವತಃ ಮುಂದೆ ಬಂದು ತ್ಯಾಗಕ್ಕೆ ಒಪ್ಪುತ್ತಾನೆ. ಆದರೆ ಸಮಸ್ಯೆ ಇಲ್ಲಿಗೆ ಮುಗಿಯುವುದಿಲ್ಲ, ತ್ಯಾಗಕ್ಕೆ ಸಿದ್ಧನಾದ ರಾಜಕುಮಾರನೂ ಮದುವೆಯಾಗಬೇಕು. ಈ ಪರಿಸ್ಥಿತಿಯಲ್ಲಿ, ಭಗವಾನ್ ಕೃಷ್ಣನು ಮೋಹಿನಿಯ ರೂಪದಲ್ಲಿ ಅರಾವಣನನ್ನು ಮದುವೆಯಾಗುತ್ತಾನೆ. ಮರುದಿನ, ಅರಾವಣನು ತನ್ನ ತಲೆಯನ್ನು ಕತ್ತರಿಸಿ ದೇವಿಗೆ ಅರ್ಪಿಸುತ್ತಾನೆ, ಇದು ಸಂಭವಿಸಿದ ತಕ್ಷಣ, ಮೋಹಿನಿ ರೂಪದಲ್ಲಿರುವ ಕೃಷ್ಣನು ವಿಧವೆಯಂತೆ ಅಳಲು ಪ್ರಾರಂಭಿಸುತ್ತಾನೆ. ಶ್ರೀ ಕೃಷ್ಣನು ಪುರುಷನಾಗಿದ್ದನು, ಅರಾವಣನನ್ನು ಸ್ತ್ರೀಯಾಗುವ ಮೂಲಕ ವಿವಾಹವಾದನು ಎಂದು ಕಿನ್ನರರು ನಂಬುತ್ತಾರೆ. ಮಂಗಳಮುಖಿಯರೂ ಅರ್ಧ ಹೆಣ್ಣು ಮತ್ತು ಅರ್ಧ ಪುರುಷ, ಆದ್ದರಿಂದ ಅವರು ಅರಾವಣನನ್ನು ತಮ್ಮ ಪತಿ ಎಂದು ಪರಿಗಣಿಸುತ್ತಾರೆ ಮತ್ತು ಅವನನ್ನು ಮದುವೆಯಾಗುತ್ತಾರೆ.
ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.