Indian Mythology: ಎಲ್ಲರನ್ನೂ ಕಾಡುವ ಶನಿಯ ಬಗ್ಗೆ ಎಲ್ಲರಿಗೂ ಗೊತ್ತಿಲ್ಲದ ಸಂಗತಿಗಳು..

By Suvarna News  |  First Published Jan 4, 2022, 6:12 PM IST

ಎಲ್ಲ ಹಿಂದೂ ದೇವರಿಗೂ ತಮ್ಮದೇ ಆದ ವಿಶಿಷ್ಠ ಶಕ್ತಿ ಹಾಗೂ ಧರ್ಮಗಳಿವೆ. ಅಂತೆಯೇ ಶನಿಗೂ ಕೂಡಾ. ಶನಿ ಎಂದರೆ ಶಿಸ್ತು, ನ್ಯಾಯಪರತೆ, ಕೋಪ. ಅವನ ಕುರಿತ ಆಸಕ್ತಿಕರ ವಿಷಯಗಳ ಸಂಗ್ರಹ ಇಲ್ಲಿದೆ.


ಶನಿ ತನ್ನ ಕೋಪ, ನ್ಯಾಯನಿಷ್ಠೆಗೆ ಹೆಸರಾದವನು. ಆತನ ಮೇಲೆ ಹಿಂದೂಗಳಿಗೆ ಭಯ, ಭಕ್ತಿ ಎರಡೂ ಹೆಚ್ಚು. ಶನಿಗ್ರಹದೊಂದಿಗೆ ಗುರುತಿಸಿಕೊಳ್ಳುವ ಶನಿಯ ಬಗ್ಗೆ ಬಹಳಷ್ಟು ಆಸಕ್ತಿಕರ ವಿಷಯಗಳು ಹೆಚ್ಚಿನವರಿಗೆ ತಿಳಿದಿಲ್ಲ. 

ಸೂರ್ಯಪುತ್ರ
ಶನಿಯು ಸೂರ್ಯ ಹಾಗೂ ಅತನ ಪತ್ನಿ ಛಾಯಾದೇವಿಯ ಪುತ್ರ. ಛಾಯಾದೇವಿಯು ಸೂರ್ಯನ ಮೊದಲನೇ ಪತ್ನಿ ಸಂಜ್ನಾಳ ನೆರಳು. ಸೂರ್ಯನ ಬಿಸಿ ತಾಳಲಾರದೆ ತಾನು ಪತಿ ಹಾಗೂ ಕುಟುಂಬವನ್ನು ತೊರೆದು ತಪಸ್ಸಿಗೆ ಹೋಗುವಾಗ ತನ್ನ ಸ್ಥಾನ ಅಲಂಕರಿಸಲೆಂದು ಸಂಜ್ನಾ(Sanjna)ಳೇ ಛಾಯಾಳನ್ನು ಸೃಷ್ಟಿ ಮಾಡಿದಳು. 

Latest Videos

undefined

ಯಮ(Yama Raj)ನ ಸೋದರ
ಸಂಜ್ನಾ ಸೂರ್ಯದೇವನನ್ನು ಬಿಟ್ಟು ಹೋದ ಮೇಲೆ ಛಾಯಾಳೇ ತನ್ನ ಪತ್ನಿ ಸಂಜ್ನಾ ಎಂದು ನಂಬಿದ ಸೂರ್ಯನಿಗೆ ಅವಳಲ್ಲಿ ಮೂವರು ಮಕ್ಕಳಾಗುತ್ತಾರೆ. ಶನಿದೇವ, ನದಿ ತಪತಿ ಹಾಗೂ ಸವರ್ಣಿ ಮನು. ಅದಕ್ಕೂ ಮುಂಚೆ ಸೂರ್ಯ(Lord Surya)ನಿಗೆ ಸಂಜ್ನಾಳಿಂದ ಯಮರಾಜ, ಮನು ಹಾಗೂ ಯಮುನಾ ದೇವಿ ಜನಿಸಿದ್ದರು.  

ಅನಾಥ
ಕಪ್ಪು ಬಣ್ಣದಲ್ಲಿ ಹುಟ್ಟಿದ ತನ್ನ ಮಗನನ್ನು ನೋಡಿದ ಸೂರ್ಯನು ಇವನು ತನಗೆ ಹುಟ್ಟಿದವನಾಗಿರಲು ಸಾಧ್ಯವೇ ಇಲ್ಲವೆಂದು ಹೇಳಿ ಛಾಯಾ ಹಾಗೂ ಶನಿಯನ್ನು ಮನೆಯಿಂದ ಹೊರ ಹಾಕುತ್ತಾನೆ. ಇವರಿಬ್ಬರೂ ನಂತರದಲ್ಲಿ ಬಹಳಷ್ಟು ಅವಮಾನ, ನೋವು, ದುಃಖ ಅನುಭವಿಸಬೇಕಾಗುತ್ತದೆ. 

ಹಲವು ಹೆಸರುಗಳು(Several Names)
ಶನಿಯನ್ನು ಪುರಾಣಗಳಲ್ಲಿ ಹಲವಾರು ಹೆಸರುಗಳಲ್ಲಿ ಉಲ್ಲೇಖಿಸಲಾಗಿದೆ. ಕೆಲವರು ಆತನನ್ನು ಸೌರಿ, ರವಿನಂದನ, ಅಸಿತ ಎಂದರೆ ಮತ್ತೆ ಕೆಲವರು ಕಪಿಲಾಕ್ಷ, ಸೂರ್ಯಪುತ್ರ, ಮಂದ, ಛಾಯಾಸುತ, ಕೊಂಕಣಸ್ಥ, ಶನೇಶ್ಚರ್, ರೌದ್ರಾಂತಕ್, ಪಿಂಗಲೋ, ಕೃಷ್ಣೋ, ಬಭ್ರು, ಕೃಷ್ಣಮಂದ್ ಹೆಸರಿನಿಂದ ಸಂಭೋದಿಸಿದ್ದಾರೆ. 

ಶಿವಭಕ್ತ
ಶನಿಯು ಮಹಾದೇವನ ಅಪ್ಪಟ ಭಕ್ತ. ಶನಿಗೆ ಶಿವನೇ ಗುರು. ಆಸಕ್ತಿಕಾರಿ ವಿಷಯವೆಂದರೆ ಒಮ್ಮೆ ಶಿವ(Lord Shiva)ನೇ ಶನಿಯ ಬಗ್ಗೆ ಭಯ ಪಟ್ಟಿದ್ದ! ಶನಿ ತನ್ನ ಕೆಟ್ಟ ಕಣ್ಣನ್ನು ತನ್ನ ಮೇಲೆ ತೆರೆದರೆ ಎಂಬ ಭಯದಲ್ಲಿ ಶಿವ, ಅನಿಗೆ ಕಾಣಬಾರದೆಂದು ಕೈಲಾಸದಿಂದ ಕಾಣೆಯಾದ ಕತೆಯೊಂದು ಪುರಾಣದಲ್ಲಿದೆ. 

Moles and Meaning: ಮಚ್ಚೆ ಇಲ್ಲಿದ್ರೆ ನಿಮ್ಮಷ್ಟು ಲಕ್ಕಿ ಮತ್ಯಾರಿಲ್ಲ..

ನವಗ್ರಹ(navagraha)ಗಳಲ್ಲಿ ಪ್ರಮುಖ
ನವಗ್ರಹಗಳಲ್ಲೊಬ್ಬನಾಗಿ ಶನಿಯು ಭೂಮಿ ಮೇಲಿನ ಜೀವಿಗಳ ಮೇಲೆ ಬಹಳ ಪ್ರಭಾವ ಬೀರುತ್ತಾನೆ. ಶನಿಯು ಬಹಳ ನಿಧಾನಗತಿಯ ಗ್ರಹ. ಆತ ಕೆಟ್ಟವನಲ್ಲ. ಆದರೆ, ವ್ಯಕ್ತಿಯ ಕರ್ಮಗಳಿಗನುಸಾರ ಅವರನ್ನು ಶಿಕ್ಷಿಸುತ್ತಾನೆ. ಒಳ್ಳೆಯ ಕರ್ಮಗಳನ್ನೇ ಮಾಡುವವರಿಗೆ ಆಶೀರ್ವಾದವನ್ನೂ ಅನುಗ್ರಹಿಸುತ್ತಾನೆ. ಕೆಟ್ಟದ್ದನ್ನು ತೆಗೆಯುವ ಸಾಮರ್ಥ್ಯ ಅವನಿಗಿದೆ. 

ಪತ್ನಿಯಿಂದಲೇ ಶಾಪಗ್ರಸ್ಥ
ಶನಿ ಎಂದರೆ ನಾವೆಲ್ಲರೂ ಹೆದರುವುದಕ್ಕೆ ಕಾರಣವಾಗಿದ್ದು ಆತನ ಪತ್ನಿ. ಶನಿಯ ಪತ್ನಿಯೇ ಅವನಿಗೆ ನೀನು ಯಾರ ಮೇಲೆ ಕಣ್ಣು ಹಾಯಿಸಿದರೂ ಅವರು ನಾಶವಾಗಿ ಹೋಗಲಿ ಎಂದು ಪತಿಗೆ ಶಾಪವಿತ್ತಿದ್ದಳು. ಇದಕ್ಕಾಗಿ ಆಕೆ ನಂತರದ ದಿನಗಳಲ್ಲಿ ಪಶ್ಚಾತ್ತಾಪ ಪಟ್ಟರೂ ಕೂಡಾ ಶಾಪ(curse) ವಾಪಸ್ ಪಡೆದುಕೊಳ್ಳುವ ಶಕ್ತಿ ಅವಳಿಗಿರಲಿಲ್ಲ. 

Vaastu Tips: ನಿದ್ದೆನೇ ಬರ್ತಿಲ್ಲ ಅಂದ್ರೆ ಹೀಗ್ ಮಾಡಿ ನೋಡಿ..

ಕಪ್ಪು(black)
ಶನಿಯು ಕಪ್ಪು ಬಣ್ಣದವನು. ಕಪ್ಪು ಬಣ್ಣದ ಬಟ್ಟೆಯನ್ನೇ ಧರಿಸುವವನು. ಕಾಗೆ(crow)ಯೇ ಅವನ ವಾಹನ. ಇದಲ್ಲದೆ 8 ಕಪ್ಪು ಕುದುರೆಗಳು ಎಳೆಯುವ ರಥವೂ ಅವನದೇ. ಬಹಳಷ್ಟು ಆಯುಧಗಳನ್ನು ಅನು ತನ್ನೊಂದಿಗೆ ಕೊಂಡೊಯ್ಯುತ್ತಾನೆ. ಅವುಗಳಲ್ಲಿ ಎರಡು ಬಾಣಗಳು, ಒಂದು ಕತ್ತಿ, ಕೊಡಲಿ ಮುಂತಾದವು ಸೇರಿವೆ. 

ಅಂಗವಿಕಲ(Lame)
ಒಮ್ಮೆ ಶನಿಯು ಬಹಳ ಹಸಿದಿರುತ್ತಾನೆ. ತಾಯಿಯ ಬಳಿ ಹೋಗಿ ತಿನ್ನಲು ಏನಾದರೂ ಕೊಡುವಂತೆ ಕೇಳುತ್ತಾಳೆ. ಆದರೆ, ಛಾಯಾದೇವಿಯು ದೇವರಿಗೆ ನೈವೇದ್ಯವಾದ ಮೇಲೆ ಕೊಡುತ್ತೇನೆ ಎನ್ನುತ್ತಾಳೆ. ಇದರಿಂದ ಕೋಪಗೊಂಡ ಶನಿಯೂ ತಕ್ಷಣ ಊಟ ಕೊಡುವಂತೆ ಕೇಳಿ ತಾಯಿಗೆ ಒದೆಯುತ್ತಾನೆ. ನಂತರದಲ್ಲಿ ಒದ್ದ ಕಾಲು ನಿಷ್ಕ್ರಿಯವಾಗುತ್ತದೆ. 

click me!