Moles and Meaning: ಮಚ್ಚೆ ಇಲ್ಲಿದ್ರೆ ನಿಮ್ಮಷ್ಟು ಲಕ್ಕಿ ಮತ್ಯಾರಿಲ್ಲ..

By Suvarna NewsFirst Published Jan 4, 2022, 5:03 PM IST
Highlights

ಯಾರಾದರೂ ಗೆದ್ದಾಗ, ಹಣ ಮಾಡಿದಾಗ, ಚೆಂದದ ಹುಡುಗಿಯನ್ನು ಮದುವೆಯಾದಾಗ ಎಲ್ಲಕ್ಕೂ ಮಚ್ಚೆ ಇರ್ಬೇಕು ಅಂತೀವಿ. ಆದ್ರೆ ಎಲ್ಲಿ ಮಚ್ಚೆ ಇರ್ಬೇಕು ಅನ್ನೋದ್ರ ಬಗ್ಗೆ ಮಾತಾಡಲ್ಲ. ಎಲ್ಲಿ ಮಚ್ಚೆ ಇದ್ರೆ ಏನರ್ಥ ಗೊತ್ತಾ?

ಮಚ್ಚೆಯು ಹಣೆಬರಹ ಸೂಚಕ ಎಂಬ ನಂಬಿಕೆ ಇದೆ. ಅದಕ್ಕೇ ಯಾರಾದರೂ ಚೆಂದದ ಹುಡುಗಿಯನ್ನು ಮದುವೆಯಾದಾಗ, ಮಚ್ಚೆ ಇತ್ತು ಅನ್ಸತ್ತೆ ಮಗಾ ಅಂತೀವಿ. ಮತ್ಯಾರೋ ಮನೆ ಕಟ್ಟಿಸಿದಾಗ ಅಥವಾ ಮನೆಯನ್ನೇ ಉಡುಗೊರೆಯಾಗಿ ಪಡೆದಾಗ ಎಲ್ಲಕ್ಕೂ ಮಚ್ಚೆ ಇರ್ಬೇಕು ಕಣ್ರೀ ಅಂತೀವಿ. ಮತ್ಯಾರೋ ಆಡಿದ ಮಾತು ನಿಜವಾದಾಗ ನಾಲಿಗೆಯಲ್ಲಿ ಮಚ್ಚೆ ಇತ್ತು ಅನ್ಸತ್ತೆ ಅನ್ನೋದನ್ನ ಕೇಳಿದ್ದೀವಿ. ಯಾವುದೋ ಹುಡುಗಿಯ ಜಾತಕ ನೋಡುವ ಶಾಸ್ತ್ರಿಗಳು ಹುಡುಗಿ ಅದೃಷ್ಟ ಮಚ್ಚೆ ಇಟ್ಕೊಂಡೇ ಹುಟ್ಟಿದಾಳೆ- ಎಲ್ಲ ಒಳ್ಳೇದಾಗುತ್ತೆ ಎನ್ನೋ ಮಾತೂ ಕೇಳಿದ್ದೀವಿ. ಮೈ ತುಂಬಾ ಮಚ್ಚೆ ಇರುವವರಿಗೆ ಮೈ ತುಂಬಾ ಬಂಗಾರ ಹೇರಿಕೊಂಡು ಹೋಗುವ ಕಾಲ ಬರುತ್ತೆಂಬ ನಂಬಿಕೆ ಇದೆ. ತುಂಬಾ ತಿರುಗಾಡುವವರಿಗೆ ಕಾಲಲ್ಲಿ ಮಚ್ಚೆ ಇರ್ಬೇಕು ಅಂತೀವಿ.

ಅಂದರೆ ಮಚ್ಚೆ ನಮ್ಮ ಭವಿಷ್ಯ ಹೇಳುತ್ತೆ ಅನ್ನೋ ವಿಷಯ ನಮ್ಮ ಆಡುಮಾತಲ್ಲೇ ಬೆರೆತು ಹೋಗಿದೆ. ಹೀಗೆ ದೇಹದ ಆಕಾರ, ವಿನ್ಯಾಸ, ಅದರ ಮೇಲಿನ ಮಚ್ಚೆ(mole), ಕಲೆ ಇತ್ಯಾದಿಗಳ ಆಧಾರದ ಮೇಲೆ ವ್ಯಕ್ತಿಯ ಭವಿಷ್ಯ ಹೇಳುವುದೇ ಸಾಮುದ್ರಿಕಾ ಶಾಸ್ತ್ರ. ಅದು ಮಚ್ಚೆಗಳ ಬಗ್ಗೆ ವಿಶೇಷ ಅಸ್ಥೆ ವಹಿಸುತ್ತದೆ. ಮಚ್ಚೆಗಳು ಎಲ್ಲರಿಗೂ ಇರುತ್ತವೆ. ಆದರೆ, ಎಲ್ಲಿ ಇದ್ದರೆ ಒಳ್ಳೆಯದು, ಎಲ್ಲಿದ್ದರೆ ಕೆಟ್ಟದು, ಯಾವ ಭಾಗದಲ್ಲಿದ್ದರೆ ನಮ್ಮ ಯಾವ ಸ್ವಭಾವವನ್ನು ಸೂಚಿಸುತ್ತದೆ ಎಂಬುದನ್ನು ಸಾಮುದ್ರಿಕಾ ಶಾಸ್ತ್ರ(oceanography) ಹೇಳುತ್ತದೆ. 

ಮೂಗಿನ ಮೇಲೆ
ಪುರುಷರಿಗೆ ಮೂಗಿ(nose)ನ ಮೇಲೆ ಮಚ್ಚೆ ಇದ್ದರೆ ಅದು ಆತ ಶಿಸ್ತಿನ ಮನುಷ್ಯ ಹಾಗೂ ಕೋಪ(angry) ಜಾಸ್ತಿ ಎಂಬುದನ್ನು ಸೂಚಿಸುತ್ತದೆ. ಅದೇ ಜಾಗದಲ್ಲಿ ಹೆಣ್ಣುಮಕ್ಕಳಿಗೆ ಮಚ್ಚೆ ಇದ್ದರೆ ಆಕೆ ಸಮೃದ್ಧಿಯನ್ನು ಕಾಣಲಿದ್ದಾಳೆ ಎಂಬುದರ ಸೂಚಕ. 

ಎದೆಯಲ್ಲಿ
ಮಹಿಳೆಗೆ ಎದೆಯ ಎಡ ಭಾಗದಲ್ಲೂ, ಪುರುಷರಿಗೆ ಎದೆಯ ಬಲ ಭಾಗದಲ್ಲೂ ಮಚ್ಚೆ ಇದ್ದರೆ ಅವರು ತಾವು ಬಯಸಿದ ವಿವಾಹ(marriage)ವಾಗುತ್ತಾರೆ ಹಾಗೂ ವಿದೇಶ ಪ್ರಯಾಣ ಯೋಗ ಹೊಂದಿದ್ದಾರೆ. ಎದೆಯಲ್ಲಿ ಕೆಂಪು ಮಚ್ಚೆಯ ಮೇಲೆ ಕಪ್ಪು ಮಚ್ಚೆ ಇದ್ದರೆ ಅದು ರಾಜ ಯೋಗದ ಸೂಚಕ. 

Wind Chimeನಿಂದ ದಾಂಪತ್ಯ ಸುಖ ಹೆಚ್ಚಿಸುವುದು ಹೇಗೆ?

ಹೊಕ್ಕುಳ ಮೇಲೆ
ಹೊಕ್ಕುಳ(navel) ಮೇಲ್ಭಾಗದಲ್ಲಿ ಮಚ್ಚೆ ಇದ್ದರೆ ಆ ವ್ಯಕ್ತಿಗೆ ಆಹಾರ ಎಂದರೆ ಎಲ್ಲಿಲ್ಲದ ಇಷ್ಟ ಎಂದರ್ಥ. ಅದೇ ನಾಭಿಯೊಳಗೇ ಮಚ್ಚೆಯಿದ್ದರೆ ಅವರು ಆಸ್ತಿವಂತರಾಗಲಿದ್ದಾರೆ ಎಂದು ನಂಬಬಹುದು. 

Feng Shui Tips: ಮನೆಯಲ್ಲಿ ಸಂತೋಷ, ನೆಮ್ಮದಿ ಇಲ್ಲವೇ? ಹಾಗಿದ್ರೆ ಈಗ್ಲೇ ಮಾಡಿ ಈ ಕೆಲಸ

ಕಿವಿಗಳ ಮೇಲೆ
ಕಿವಿ(ear)ಯ ಮೇಲೆ ಮಚ್ಚೆ ಇದ್ದರೆ ಆಯಸ್ಸು ಕಡಿಮೆ ಎನ್ನಲಾಗುತ್ತದೆ. 

ಭುಜ(shoulder)ದ ಮೇಲೆ
ಭುಜದ ಮೇಲೆ ಮಚ್ಚೆಯಿದ್ದರೆ ಆ ವ್ಯಕ್ತಿ ಬಹಳ ಮೂಡಿ ಎಂಬುದನ್ನು ಅದು ಸೂಚಿಸುತ್ತದೆ. ಅಂಗೈ(palm) ಮೇಲೆ ಮಚ್ಚೆಯಿದ್ದರೆ ಅವರು ಕುತಂತ್ರಿ ಸ್ವಭಾವದವರು ಎಂದು ಅರ್ಥೈಸಲಾಗುತ್ತದೆ. ಅದೇ ಬೆರಳುಗಳಲ್ಲಿದ್ದರೆ ದುರದೃಷ್ಟದ ಸಂಕೇತ. ಮೇಗೈ ಮೇಲೆ ಮಚ್ಚೆಯಿದ್ದರೆ ಹಣಬಲ ಚೆನ್ನಾಗಿರಲಿದೆ. ಹೆಬ್ಬೆರಳಿನ ಮೇಲಿದ್ದರೆ ಕೌಶಲ್ಯಯುತ ಹಾಗೂ ನ್ಯಾಯವಂತ.

ಮುಖದ ಮೇಲೆ
ಮುಖದ ಮೇಲೆ ಮಚ್ಚೆ ಇದ್ದಾಗ ಹಲವರು ಅದು ಸೌಂದರ್ಯಕ್ಕೆ ಅಡ್ಡಿ ಎಂದುಕೊಂಡು ತೆಗೆಸಿ ಬಿಡುವುದುಂಟು. ಆದರೆ ಮುಖದ ಮೇಲಿನ ಮಚ್ಚೆ ಅದೃಷ್ಟ ಹಾಗೂ ಆತ್ಮವಿಶ್ವಾಸ(confidence)ದ ಸೂಚಕ. ಹುಬ್ಬುಗಳ(eyebrow) ಮೇಲೆ ಮಚ್ಚೆಯಿದ್ದರೆ ಅದು ಸಂತೋಷ ಜೀವನದ ಸೂಚಕ. ಅದೇ ಕಣ್ಣಿನ ರೆಪ್ಪೆಗಳ ಮೇಲಿದ್ದರೆ ಒಳ್ಳೆಯ ಯೋಚನೆಗಳ ಸೂಚಕ. ಹಣೆಯ ಮೇಲೆ ಮಚ್ಚೆ ಇದ್ದರೆ ಅಂಥವರು ಶ್ರೀಮಂತರಾಗುವ ಯೋಗ ಹೊಂದಿದ್ದಾರೆಂದರ್ಥ. ಕೆನ್ನೆ(cheek)ಯ ಮೇಲೆ ಮಚ್ಚೆಯಿದ್ದರೆ ಅದು ಆಕರ್ಷಕ ವ್ಯಕ್ತಿತ್ವದ ಸೂಚಕ. ತುಟಿಗಳ ಮೇಲೆ ಮಚ್ಚೆ ಇದ್ದರೆ ಅವರು ಹೆಚ್ಚು ಪ್ರೀತಿಸುವ ಸ್ವಭಾವ ಹೊಂದಿದ್ದಾರೆ ಎಂದು ಅರ್ಥ ಮಾಡಿಕೊಳ್ಳಬಹುದು. ಗಲ್ಲದಲ್ಲಿದ್ದರೆ ಆಸ್ತಿ ಹೆಚ್ಚುತ್ತದೆ. 

ತೊಡೆ(thigh)ಯ ಮೇಲೆ
ತೊಡೆಯ ಮೇಲೆ ಮಚ್ಚೆ ಇರುವುದು ಸಂತೋಷ ಹಾಗೂ ಲೈಂಗಿಕ ಜೀವನ ಸುಖದ ಸೂಚಕ. ಮಹಿಳೆಗೆ ತನ್ನ ಬಲ ತೊಡೆಯ ಮೇಲೆ ಮಚ್ಚೆಯಿದ್ದರೆ ಆಕೆಯನ್ನು ಪತಿ ಸಿಕ್ಕಾಪಟ್ಟೆ ಪ್ರೀತಿಸುತ್ತಾನೆಂದರ್ಥ. 

ಕಾಲುಗಳು
ಅಂಗಾಲಲ್ಲಿ ಮಚ್ಚೆ ಇದ್ದರೆ ಆ ವ್ಯಕ್ತಿ ತಿರುಗಾಟ ಇಷ್ಟಪಡುವವನು. 
 

click me!