ಇಂದು Purandara Dasa ಪುಣ್ಯತಿಥಿ, ಕರ್ನಾಟಕ ಸಂಗೀತ ಪಿತಾಮಹನ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು

By Suvarna News  |  First Published Feb 1, 2022, 11:13 AM IST

ಇಂದು ಕರ್ನಾಟಕ ಸಂಗೀತ ಪಿತಾಮಹರೆನಿಸಿಕೊಂಡಿರುವ ಪುರಂದರ ದಾಸರ ಪುಣ್ಯ ತಿಥಿ. ಈ ಮಹಾನುಭಾವರ ಬಗ್ಗೆ ನಿಮಗೆಷ್ಟು ಗೊತ್ತು?


ದಾಸರೆಂದರೆ ಪುರಂದರ ದಾಸ(Purandara Dasa)ರಯ್ಯಾ ಎಂಬ ನುಡಿ ಉತ್ಪೇಕ್ಷೆಯಲ್ಲ. ಪುರಂದರ ದಾಸರಿದ್ದುದೇ ಹಾಗೆ. ಕೋಟಿ ಕೋಟಿ ಆಸ್ತಿಯ ಮೇಲೆ ತುಳಸಿ ದಳವಿಟ್ಟು ಕೃಷ್ಣಾರ್ಪಣ ಎಂದು ಅದರ ಮೋಹ ಬಿಟ್ಟು ದಾಸರಾಗಿ ಊರೂರು ಅಲೆದರು. ಸಂಗೀತವನ್ನು ಹುಟ್ಟು ಹಾಕಿದರು, ಹಾಡುಗಳನ್ನು ಕಟ್ಟಿ ಅದರಲ್ಲೇ ಸಮಾಜಕ್ಕೆ ಚಾಟಿ ಬೀಸುತ್ತಾ, ಕಲಿಸಬೇಕಾದುದನ್ನು ಕಲಿಸುತ್ತಾ ಬಂದರು. ಭಕ್ತಿ ಚಳುವಳಿ(Bhakti movement)ಯನ್ನು ಹುಟ್ಟು ಹಾಕಿದವರು ಪುರಂದರ ದಾಸರು. ಇದರಿಂದ ವೇದಗಳು, ಧಾರ್ಮಿಕ ಗ್ರಂಥಗಳಲ್ಲಿರುವ ವಿಷಯಗಳು ಸುಲಭವಾಗಿ ಹಾಡುಗಳ ಮೂಲಕ ಜನಸಾಮಾನ್ಯರ ನಾಲಿಗೆಯಲ್ಲಿ ಓಡಾಡುವಂತೆ ಆಯಿತು.
6 ಶತಮಾನಗಳೇ ಕಳೆದರೂ ಪುರಂದರ ದಾಸರ ಪದ್ಯಗಳ ಇಂದಿಗೂ ಪ್ರಸ್ತುತವಾಗಿವೆ. ಇಂದಿನ ಸಮಾಜಕ್ಕೂ ಪಾಠ ಹೇಳುತ್ತಲೇ ಇವೆ. ಜೊತೆಗೆ, ಅಷ್ಟೇ ತಾಜಾತನದಿಂದ ಎಲ್ಲರ ನಾಲಿಗೆಯಲ್ಲಾಡುತ್ತವೆ. ಇಂತಿಪ್ಪ ಪುರಂದರ ದಾಸರ ಪುಣ್ಯ ತಿಥಿ ಇಂದು. ಅವರ ಕುರಿತ ಒಂದಿಷ್ಟು ಆಸಕ್ತಿಕರ ವಿಷಯಗಳನ್ನು ತಿಳಿಯೋಣ. 

ಪುರಂದರರು ತೀರ್ಥಹಳ್ಳಿಯ ವ್ಯಾಪಾರಿ
ಆತ್ಮದಲ್ಲಿ ಸಂತರಾಗಿದ್ದ ಇವರು ಭೌತಿಕವಾಗಿ ವ್ಯಾಪಾರಿಯಾಗಿ ವಜ್ರ ಮಾರಾಟ(diamond business)ದಲ್ಲಿ ತೊಡಗಿದ್ದರು. ವಿಜಯನಗರ ಅರಸರ ಕಾಲದಲ್ಲಿ ಕ್ಷೇಮಾಪುರ ಎಂದೇ ಹೆಸರಾಗಿದ್ದ ಇಂದಿನ ತೀರ್ಥಹಳ್ಳಿಯ ಆರಗದಲ್ಲಿ 1484ರಲ್ಲಿ ಪುರಂದರರು ಜನಿಸಿದರು. ಅವರ ಜನ್ಮನಾಮ ಶ್ರೀನಿವಾಸ ನಾಯಕ. ಸಣ್ಣ ವಯಸ್ಸಿನಲ್ಲೇ ಅವರಿಗೆ ಓದಿನ ಜೊತೆಗೆ ಸಂಗೀತ(music) ತರಬೇತಿ ಕೊಡಿಸಲಾಗಿತ್ತು. ತನ್ನ ಪೋಷಕರ ಮರಣದ ಬಳಿಕ ಕುಟುಂಬ ಉದ್ಯೋಗವಾದ ವಜ್ರ ವ್ಯಾಪಾರ ಹಾಗೂ ಅಡ ಬಡ್ಡಿ ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದರು. ಅವರ ಬದುಕಿನ ಆರಂಭದ ದಿನಗಳೂ, ನಂತರದ ದಿನಗಳೂ ಸಂಪೂರ್ಣ ವ್ಯತಿರಿಕ್ತ(contradictory)ವಾಗಿವೆ. 

Tap to resize

Latest Videos

undefined

ದಾಸ ಸಾಹಿತ್ಯ
ದಾಸ ಸಾಹಿತ್ಯವು ವಿಷ್ಣುವಿಗೆ ಸಂಬಂಧಿಸಿದ ಪುಸ್ತಕವಾಗಿದೆ. ಇದರಲ್ಲಿ ಸಾಂಸ್ಕೃತಿಕ ಹಾಗೂ ಧಾರ್ಮಿಕ ಸತ್ಯಗಳನ್ನು ಕನ್ನಡದಲ್ಲಿ ವಿವರಿಸಲಾಗಿದೆ. ಪುರಂದರ ದಾಸರ ಆರಾಧ್ಯ ದೈವ ಕೃಷ್ಣನ ಕುರಿತಾಗಿರುವ ಈ ಮಹಾಕಾವ್ಯ ಅದ್ಬುತವಾಗಿದೆ. 

Mantra Benefits: ಹರೇ ಕೃಷ್ಣ ಮಂತ್ರದಲ್ಲಿದೆ ಸಂತೋಷದ ಕೀಲಿಕೈ

ಕರ್ನಾಟಕ ಶಾಸ್ತ್ರೀಯ ಸಂಗೀತ
ಪುರಂದರ ದಾಸರು ರಾಗವನ್ನು ಪರಿಚಯಿಸಿದರು. ಅವರ ಎಲ್ಲ ಹಾಡುಗಳೂ ಕರ್ನಾಟಕ ಸಂಗೀತ ರಚನೆಗಳು. ಸಂಗೀತ ರಚನೆಕಾರರಷ್ಟೇ ಅಲ್ಲ, ಪುರಂದರ ದಾಸರು ಹಾಡು ಬರೆದು ಅದ್ಬುತವಾಗಿ ಹಾಡುತ್ತಿದ್ದರು(great singer) ಕೂಡಾ. ಈ ಹಾಡುಗಳಲ್ಲಿ ಅವರು ಕಂಡುಕೊಂಡ ಅನುಭವ ಪಾಠಗಳಿದ್ದವು. ವೇದಗಳಲ್ಲಿ ಹೇಳಿದ ಎಲ್ಲ ಪುಣ್ಯ ವಿಚಾರಗಳಿದ್ದವು. ಸಂಸ್ಕೃತದಲ್ಲಿದ್ದ ಆ ವೇದವನ್ನು ಎಲ್ಲರೂ ಅರ್ಥ ಮಾಡಿಕೊಳ್ಳಲು ಸುಲಭವಾಗುವಂತೆ ಕನ್ನಡದ ಹಾಡುಗಳಲ್ಲಿ ಕಟ್ಟಿ ಕೊಟ್ಟರು ದಾಸರು. ಈ ಭಕ್ತಿ ಕ್ರಾಂತಿಯು ಕಲಿಕೆಯನ್ನು ವೇಗವಾಗಿಸಿತ್ತಲ್ಲದೆ ಸರಳವಾಗಿಸಿತು ಕೂಡಾ. 

Astrology and dreams : ಬೆಳಗಿನ ಜಾವ ಬೀಳೋ ಕನಸುಗಳು ನಿಜವಾಗ್ತಾವಾ?

ಶ್ರೀಮದ್ ಭಾಗವತಮ್(Srimad Bhagavatam)
ಭಾಗವತಂ ಕೃಷ್ಣ ಹಾಗದೂ ಭಾಗವತದ ಬಗ್ಗೆ ಹೇಳುತ್ತದೆ. ಬಹಳ ಹಿಂದೆ ರಚನೆಯಾದ ಭಾಗವತವನ್ನು ಸರಳ ಮಾತುಗಳಲ್ಲಿ ಮರು ರಚಿಸಿದ್ದು ಪುರಂದರ ದಾಸರು. ಹಿಂದೂ ತತ್ವಜ್ಞಾನ(Hindu philosophy)ವನ್ನು ಸಾರುವ ಒಂದು ಪ್ರಮುಖ ರಚನೆಯಾಗಿ ಈ ಭಾಗವತ ಗುರುತಿಸಿಕೊಳ್ಳುತ್ತದೆ. 

ಹಿಂದೂಸ್ತಾನಿ ಸಂಗೀತದ ಪ್ರೇರಣೆ
ಪುರಂದರ ದಾಸರು ಹಿಂದೂಸ್ತಾನಿ ಸಂಗೀತದಿಂದ ಪ್ರೇರಣೆಗೊಂಡಿದ್ದರೂ, ದಕ್ಷಿಣ ಭಾರತದ ಸಾಂಸ್ಕೃತಿಕತೆ ಅವರಲ್ಲಿ ದೊಡ್ಡ ಮಟ್ಟದ ಪರಿಣಾಮ ಬೀರಿತ್ತು. ಹೀಗಾಗಿ, ಅವರ ಕರ್ನಾಟಿಕ್ ಸಂಗೀತ ರಚನೆಗಳಲ್ಲಿ ಹಿಂದೂಸ್ತಾನಿ ಸಂಗೀತ(industani music)ದ ನೆರಳನ್ನು ಕಾಣಬಹುದು. 

ಸಮಾಜ ಪರಿವರ್ತನೆ(social reforms)
ಪುರಂದರ ದಾಸರ ಕೆಲಸಗಳು ಆ ಕಾಲದ ಸಮಾಜದಲ್ಲಿ ಬಹಳಷ್ಟು ಉತ್ತಮ ಬದಲಾವಣೆಗಳನ್ನು ತರುವಲ್ಲಿ ಸಫಲವಾದವು. ಅಸ್ಪರ್ಶ್ಯತೆ, ಜಾತಿ ಪಿಡುಗು, ಲಿಂಗ ಸಮಾನತೆಯ ವಿಷಯದಲ್ಲಿ ದಾಸ ಸಾಹಿತ್ಯದಿಂದ ಹಲವು ಧನಾತ್ಮಕ ಬದಲಾವಣೆಗಳು ಕಾಣಿಸಿಕೊಂಡವು. 

ಹತ್ತಿರತ್ತಿರ 5 ಲಕ್ಷ ಕೀರ್ತನೆಗಳು
ಪುರಂದರ ದಾಸರಿಗೆ 5 ಲಕ್ಷ ಕೀರ್ತನೆ ಬರೆಯುವ ಆಸೆಯಿತ್ತು. ಅವರು ಬರೋಬ್ಬರಿ 4.75 ಲಕ್ಷ ಕೀರ್ತನೆ ಬರೆದಿದ್ದಾರೆ. ಇದೊಂದು ದಾಖಲೆಯೇ ಸರಿ. ಉಳಿದ 25 ಸಾವಿರ ಕೀರ್ತನೆಗಳನ್ನು ಇವರ ಮಗ ಮಧ್ವಪದಾಸರು ಬರೆದು ತಂದೆಯ ಆಶಯ ಈಡೇರಿಸಿದ್ದಾರೆ ಎನ್ನಲಾಗುತ್ತದೆ. 
 

click me!