ಜಾತಕದಲ್ಲಿ ಸಂತಾನ ಯೋಗ, ದೋಷವಿದ್ದರೆ ಇಲ್ಲಿದೆ ಪರಿಹಾರ...

By Suvarna News  |  First Published Jan 24, 2020, 2:56 PM IST

ಕೆಲವು ದಂಪತಿಗಳು ಆರೋಗ್ಯವಾಗಿರುತ್ತಾರೆ. ಆದರೆ, ಮಕ್ಕಳು ಮಾತ್ರ ಆಗೋದಿಲ್ಲ. ಎಲ್ಲ ಪೂಜೆ, ಪುನಸ್ಕಾರ, ಅಗತ್ಯ ಚಿಕಿತ್ಸೆಯೂ ಫಲಿಸೋದೇ ಇಲ್ಲ. ಅಶ್ವತ್ಥ ಮರವನ್ನು ಸುತ್ತಿದರೂ ಫಲ ನೀಡುವುದಿಲ್ಲ. ಅಂಥವರಿಗೆ ಜಾತಕದಲ್ಲಿ ಸಂತಾನ ದೋಷ ಇರಬಹುದು. ಅದಕ್ಕೆ ಪರಿಹಾರವೇನು?
 


ಕುಂಡಲಿಯಲ್ಲಿ ಪಂಚಮ ಸ್ಥಾನವನ್ನು ನೋಡಿ, ಕೂಲಂಕುಷವಾಗಿ ಪರಿಶೀಲಿಸಿ, ಸಂತಾನ ಯೋಗವನ್ನು ಹೇಳಬಹುದು. ಪಂಚಮ ಸ್ಥಾನದ ಅಧಿಪತಿಯನ್ನು ಶುಭಗ್ರಹಗಳು ನೋಡಬೇಕು. ಲಗ್ನಾಧಿಪತಿ ಮತ್ತು ಪಂಚಮಾಧಿಪತಿಯು ಒಂದೇ ರಾಶಿಯಲ್ಲಿ ಕೂಡಿಕೊಂಡಿರಬೇಕು. ಇವರು ಪರಸ್ಪರ ಒಳ್ಳೆ ದೃಷ್ಟಿಯಿಂದ ನೋಡಬೇಕು. ಲಗ್ನಾಧಿಪತಿ ಮತ್ತು ಪಂಚಮಾಧಿಪತಿಗಳು ಪರಿವರ್ತನೆಯಾಗಿದ್ದಲ್ಲಿ ಇವರಿಗೆ ಸಂತತಿಯೋಗ ಇರುತ್ತದೆ. ಗುರುವು ಲಗ್ನ ಮತ್ತು ಪಂಚಮಕ್ಕೆ ಗುರುಬಲ ಇದ್ದರೆ, ಸಂತತಿ ಯೋಗ ಇರುತ್ತದೆ.

- ಪಂಚಮ ಗ್ರಹವು ಪಾಪಕರ್ತರಿ ಯೋಗವಿದ್ದರೆ, ಪಂಚಮಾಧಿಪತಿ ಅಬಲನಾಗಿ ದುಸ್ಥಾನದಲ್ಲಿದ್ದರೆ, ಲಗ್ನ, ಚಂದ್ರ, ಗುರುವಿನಿಂದ ಪಂಚಮ ಭಾವದಲ್ಲಿ ಪಾಪಗ್ರಹಗಳು ಇದ್ದರೆ, ಇಂತಹವರಿಗೆ ಸಂತಾನ ಆಗುವುದಿಲ್ಲ.

Tap to resize

Latest Videos

undefined

ಮಕರ ರಾಶಿ ಪ್ರವೇಶಿಸುತ್ತಿದ್ದಾನೆ ಶನಿ, ಯಾವ ರಾಶಿಗೇನು ಫಲ?

ವೃಶ್ಚಿಕ, ವೃಷಭ, ಕನ್ಯಾ ಮತ್ತು ಸಿಂಹ ರಾಶಿಗಳು ಅಲ್ಪಸಂತಾನ ರಾಶಿಗಳು. ಈ ರಾಶಿಗಳು ಜಾತಕನಿಗೆ ಪಂಚಮ ಭಾವವಾದರೆ, ಇಂತಹ ಜಾತಕರಿಗೆ ಅಲ್ಪಸಂತಾನ ಯೋಗ ಇರುತ್ತದೆ.

- ಪಂಚಮ ಭಾವದಲ್ಲಿ ಆ ಭಾವದ ಅಧಿಪತಿ ಪಾಪಗ್ರಹವಿದ್ದರೂ, ಅಂತಹವರಿಗೆ ಸಂತಾನ ಯೋಗ ಉಂಟು. ಪಂಚಮದ ಅಧಿಪತಿಯು ಪಾಪಗ್ರಹವಾಗಿ, ಅದರೊಂದಿಗೆ ಇನ್ನೊಂದು ಪಾಪಗ್ರಹ ಇದ್ದರೆ, ಅಂತಹವರಿಗೆ ಬಹು ಸಂತಾನ ಫಲ ಉಂಟು.

- ಪಂಚಮದಲ್ಲಿ ಅದರ ಅಧಿಪತಿ ಸ್ವಂತ ಮನೆಯಲ್ಲಿ ಅಥವಾ ಉಚ್ಛನಾಗಿದ್ದರೆ, ಇಂಥವರಿಗೆ ಸಂತಾನ ನಷ್ಟವಾಗುತ್ತದೆ.

- ರವಿಯು ವೃಶ್ಚಿಕ, ವೃಷಭ, ಕನ್ಯಾ ಮತ್ತು ಸಿಂಹರಾಶಿಯಲ್ಲಿರುವಾಗ ಇದು ಪಂಚಮ ಭಾವವಾಗಿ, ಅಷ್ಟಮದಲ್ಲಿ ಶನಿ, ಲಗ್ನದಲ್ಲಿ ಕುಜನಿದ್ದರೆ, ಇವರಿಗೆ ಬಹಳ ತಡವಾಗಿ ಸಂತಾನವಾಗುತ್ತದೆ.

ಯಾವ ಜನ್ಮರಾಶಿಯವರಿಗೆ ಎಷ್ಟು ಲೈಂಗಿಕಾಸಕ್ತಿ ಇರುತ್ತೆ?

- ರವಿಯು ಕರ್ಕಾಟಕ ರಾಶಿಯಲ್ಲಿ ಅಥವಾ ಬೇರೆ ಗ್ರಹಗಳೊಂದಿಗಿದ್ದು, ಇದು ಪಂಚಮ ಭಾವವಾದರೆ, ಇವರಿಗೆ ಎರಡನೆಯ ಹೆಂಡತಿಯಿಂದ ಮಕ್ಕಳಾಗುತ್ತದೆ. ಕುಜ, ಶುಕ್ರ, ಬೇರೆ ಗ್ರಹಗಳೊಂದಿಗೆ ಕರ್ಕಾಟಕ ರಾಶಿಯಲ್ಲಿ ಇದ್ದು, ಅದು ಪಂಚಮ ಭಾವವಾದರೆ ಇಂತಹವರಿಗೆ ಎರಡನೇ ಹೆಂಡತಿಯಿಂದ ಮಕ್ಕಳಾಗುತ್ತದೆ.

- ಚಂದ್ರ, ಬುಧರು ಕರ್ಕಾಟಕ ರಾಶಿಯಲ್ಲಿದ್ದು, ಅದು ಪಂಚಮ ಭಾವವಾದರೆ, ಇವರಿಗೆ ಅಲ್ಪ ಸಂತಾನ ಯೋಗವಾಗುತ್ತದೆ. ಗುರು ಕರ್ಕಾಟಕ ರಾಶಿಯಲ್ಲಿದ್ದು, ಅದು ಪಂಚಮ ಭಾವವಾದರೆ, ಆಗ ಹೆಚ್ಚು ಸ್ತಿçà ಸಂತಾನವಾಗುತ್ತದೆ.

- ನಾಲ್ಕನೇ ಮನೆಯಲ್ಲಿ ಪಾಪಗ್ರಹ ಇದ್ದು, ದಶಮದಲ್ಲಿ ಚಂದ್ರ ಸಪ್ತಮದಲ್ಲಿ ಶುಕ್ರ ಇರುವವರಿಗೆ ಮಕ್ಕಳಾಗುವುದಿಲ್ಲ.

- ಲಗ್ನದಲ್ಲಿ ಪಂಚಮ, ಅಷ್ಟಮ, ವ್ಯಯದಲ್ಲಿ ಪಾಪಗ್ರಹವಿದ್ದರೆ, ಇವರಿಗೆ ಮಕ್ಕಳ ಯೋಗ ಇರುವುದಿಲ್ಲ. ಪಾಪಗ್ರಹಗಳು ನಾಲ್ಕನೇ ಮನೆಯಲ್ಲಿ ಗುರು, ಪಂಚಮದಲ್ಲಿ ಶುಕ್ರ, ಬುಧರು ಸಪ್ತಮದಲ್ಲಿದ್ದರೆ, ಇವರಿಗೆ ಮಕ್ಕಳಾಗುವುದಿಲ್ಲ. ಲಗ್ನ ಪಾಪಗ್ರಹ, ಚಂದ್ರನು ಪಂಚಮದಲ್ಲಿ, ಅಷ್ಟಮ ದ್ವಾದಶದಲ್ಲಿ ಪಾಪಗ್ರಹಗಳಿದ್ದರೆ ಅಂತಹವರಿಗೆ ಮಕ್ಕಳಾಗುವುದಿಲ್ಲ.

- ಲಗ್ನದಲ್ಲಿ ಪಾಪಗ್ರಹ ಇದ್ದರೆ, ಪಂಚಮಾಧಿಪತಿಯು ತೃತೀಯದಲ್ಲಿ ಮತ್ತು ಚತುರ್ಥದಲ್ಲಿ ಚಂದ್ರನೊಂದಿಗಿದ್ದರೆ, ಲಗ್ನಾಧಿಪತಿಯು ಪಂಚಮದಲ್ಲಿದ್ದರೆ, ಇಂತಹವರಿಗೆ ಮಕ್ಕಳಾಗುವುದಿಲ್ಲ.

ಕಷ್ಟ ಪಟ್ಟರೂ ಸಿರಿವಂತರಾಗುತಿಲ್ಲವೇ? ದಾರಿದ್ರ್ಯ ಯೋಗವಿರಬಹುದು!

- ಪಂಚಮಾಧಿಪತಿಯು ಬಲಿಷ್ಠನಾಗಿದ್ದರೆ, ಅವರಿಗೆ ಒಳ್ಳೆ ಪುತ್ರರು ಜನಿಸುತ್ತಾರೆ. ರವಿ, ಗುರು ಮತ್ತು ಚಂದ್ರ ವಿಷಮ ರಾಶಿಯಲ್ಲಿ ಪುರುಷ ನವಾಂಶ ಬಲಿಷ್ಠನಾಗಿದ್ದರೆ, ಇವರಿಗೆ ಗಂಡು ಸಂತಾನವಾಗುತ್ತದೆ. ಗುರು ಮತ್ತು ರವಿಯು ಲಗ್ನದಿಂದ ವಿಷಮ ಭಾಗದಲ್ಲಿ ಇದ್ದರೆ ಗಂಡು ಮಗುವಿನ ಜನನವಾಗುತ್ತದೆ.

- ಲಗ್ನದಿಂದ ವಿಷಮ ಭಾವದಲ್ಲಿ ಚಂದ್ರ, ಶುಕ್ರ ಮತ್ತು ಕುಜನಿದ್ದರೆ, ಹೆಣ್ಣು ಸಂತಾನವಾಗುತ್ತದೆ. ಪಂಚಮಾಧಿಪತಿಯು ಪುರುಷ ರಾಶಿ, ಪುರುಷ ನವಾಂಶದಲ್ಲಿದ್ದರೆ, ಪುರುಷ ಗ್ರಹದೊಂದಿಗೆ ಮತ್ತು ಪುರುಷ ಗ್ರಹಗಳ ದೃಷ್ಟಿ ಇದ್ದರೆ, ಎಲ್ಲಾ ಸಂತಾನವೂ ಗಂಡು ಸಂತಾನವಾಗುತ್ತದೆ. ಪಂಚಮಾಧಿಪತಿಯು ಪುರುಷ ನವಾಂಶದಲ್ಲಿದ್ದರೆ, ಪುರುಷ ಗ್ರಹಗಳೊಂದಿಗೆ ಮತ್ತು ಪುರುಷ ಗ್ರಹಗಳ ದೃಷ್ಟಿ ಇದ್ದರೆ, ಎಲ್ಲಾ ಸಂತಾನವೂ ಗಂಡು ಸಂತಾನವಾಗುತ್ತದೆ. ಪಂಚಮಾಧಿಪತಿಯು ಸ್ತ್ರೀ ರಾಶಿ ಮತ್ತು ಸ್ತ್ರೀ ನವಾಂಶದಲ್ಲಿದ್ದು, ಸ್ತ್ರೀ ಗ್ರಹಗಳೊಂದಿಗಿದ್ದರೆ ಅಥವಾ ಪುರುಷ ಗ್ರಹದ ದೃಷ್ಟಿಯಲ್ಲಿದ್ದರೆ, ಇವರಿಗೆ ಹೆಣ್ಣು ಸಂತಾನವಾಗುತ್ತದೆ.

ಸಂತಾನಕ್ಕೆ ದೋಷ ಪರಿಹಾರ

ಸಂತಾನ ದೋಷ ಇರುವ ತಿಥಿಗೆ ಅನುಗುಣವಾಗಿ, ದೋಷ ಪರಿಹಾರ ಮಾಡಬೇಕು.

- ಸಂತಾನ ದೋಷ ಇರುವವರ ತಿಥಿಯು, ಷಷ್ಠಿಯಾದರೆ ಶ್ರೀ ಸುಬ್ರಹ್ಮಣ್ಯ ದೇವರ ಆರಾಧಿಸಬೇಕು.

- ಚತುರ್ಥ ತಿಥಿಯಾದರೆ, ನಾಗದೇವತೆಯ ಆರಾಧನೆ ಮಾಡಬೇಕು.

- ನವಮಿಯಾದರೆ, ರಾಮಾಯಣ-ಪುರಾಣ ಶ್ರವಣ ಮಾಡಬೇಕು.

- ಅಷ್ಟಮೀ ತಿಥಿಯಾದರೆ ಶ್ರವಣೋಪವಾಸ ಮಾಡಬೇಕು.

- ಚತುರ್ದಶಿಯಾದರೆ, ರುದ್ರಪೂಜೆ ಮಾಡಬೇಕು.

- ದ್ವಾದಶಿಯಾದರೆ ಅನ್ನದಾನ ಅಥವಾ ಬ್ರಾಹ್ಮಣ ಸಂತರ್ಪಣೆ ಮಾಡಬೇಕು.

- ಅಮಾವಾಸ್ಯೆ ಅಥವಾ ಹುಣ್ಣಿಮೆಯಾದರೆ, ಪಿತೃಕಾರ್ಯವನ್ನು ಅತ್ಯಂತ ಶ್ರದ್ಧಾಭಕ್ತಿಗಳಿಂದ ಮಾಡಬೇಕು.

ಸಂತಾನ ದೋಷ ಇರುವವರು ಸಂಬಂಧಿಸಿದ ಗ್ರಹಗಳ ವೃಕ್ಷಪೂಜೆ ಅಥವಾ ಸೂಕ್ತ ಪರಿಹಾರವನ್ನು ಜ್ಯೋತಿಷ್ಯ ಪಂಡಿತರ ಸಲಹೆ, ಮಾರ್ಗದರ್ಶನ ಮತ್ತು ಸೂಚನೆಗಳ ರೀತ್ಯ ಮಾಡಿದರೆ, ಒಳ್ಳೆಯದಾಗುತ್ತದೆ. ಸಂತಾನ ಫಲವೂ ಸಿದ್ಧಿಸುತ್ತದೆ.

click me!