ಕಷ್ಟ ಪಟ್ಟರೂ ಸಿರಿವಂತರಾಗುತಿಲ್ಲವೇ? ದಾರಿದ್ರ್ಯ ಯೋಗವಿರಬಹುದು!
ನಮ್ಮೆಲ್ಲಾ ಹಣೆಬರಹವೂ ಜಾತಕದಲ್ಲಿಯೇ ಬರೆದಿರುತ್ತದೆ ಎಂಬ ನಂಬಿಕೆ ಇದೆ. ಕೆಲವರು ಜೀವನದಲ್ಲಿ ತುಂಬಾ ಪ್ರಾಮಾಣಿಕವಾಗಿ ದುಡಿಯುತ್ತಾರೆ, ಹಗಲು ರಾತ್ರಿ ಕಷ್ಟ ಪಡುತ್ತಾರೆ. ಆದರೂ ಅವರಿಗೇಕೆ ಲಕ್ಷ್ಮಿ ಒಲಿಯುವುದಿಲ್ಲ?
ಮನುಷ್ಯನಿಗೆ ಹಣಬೇಕು, ಎಲ್ಲರಲ್ಲಿಯೂ ಹಣ ಸಂಪಾದಿಸುವ ಯೋಗ ಇರುವುದಿಲ್ಲ. ಕೆಲವರಿಗೆ ಹಣವು ನಿರಂತರ ಬರುತ್ತದೆ. ಒಂದು ವ್ಯಾಪಾರ ಇದ್ದರೆ ಇನ್ನೊಂದು ವ್ಯಾಪಾರ ಮಾಡುತ್ತಾರೆ. ಅವರಿಗೆ ನಿರಂತರ ಹಣ ಬರುತ್ತಾ ಇರುತ್ತದೆ.
ಧನಯೋಗ ಜಾತಕದಲ್ಲಿ ಇದ್ದರೆ ಅವರು ಖಂಡಿತಾ ಹಣ ಸಂಪಾದನೆ ಮಾಡುತ್ತಾರೆ. ಜಾತಕದಲ್ಲಿ ನವಮ ಸ್ಥಾನದಿಂದ ದ್ವಿತೀಯ ಸ್ಥಾನದವರೆಗೆ ಧನಭಾಗವೆಂದು ಜ್ಯೋತಿಷ್ಯದಲ್ಲಿ ಹೇಳಿದ್ದಾರೆ. ತೃತೀಯಾ ಸ್ಥಾನದಿಂದ ಅಷ್ಟಮ ಸ್ಥಾನದವರೆಗೆ ದಾರಿದ್ರ್ಯ ಯೋಗವೆಂದು ಹೇಳುತ್ತಾರೆ. ಇಲ್ಲಿ ಗಮನಿಸಬೇಕಾದುದು- ಧನಯೋಗದ ಶಕ್ತಿಯು ಜಾಸ್ತಿ ಇದ್ದರೆ ಅವರಿಗೆ ದಾರಿದ್ರ್ಯ ಯೋಗ ಬರುವುದಿಲ್ಲ.
2020 ಯಲ್ಲಿ ಈ ಮೊದಲ ಐದು ರಾಶಿಯವರ ಲವ್ ಭವಿಷ್ಯ ಹೇಗಿದೆ ಗೊತ್ತಾ?
ಜಾತಕದಲ್ಲಿ ದಾರಿದ್ರ್ಯ ಯೋಗದ ಶಕ್ತಿ ಜಾಸ್ತಿ ಇದ್ದರೆ ಅವರು ಯಾವ ಪ್ರಯತ್ನ ಮಾಡಿದರೂ ಸಿರಿವಂತನಾಗಲು ಸಾಧ್ಯವೇ ಇಲ್ಲ. ಧನಯೋಗವು ಪ್ರಬಲವಾಗಿದ್ದರೆ ಅವರು ಆಯುಷ್ಯ ಪೂರ್ತಿ ಸಿರಿವಂತನಾಗುತ್ತಾನೆ. ಆತನು ಬಡವನಾದರು, ಆತನು ಸಿರಿವಂತನಾಗುತ್ತಾನೆ. ಹುಟ್ಟಿದ ಮನುಷ್ಯ ಸಿರಿವಂತ ಕುಟುಂಬದಲ್ಲಿ ಜನಿಸಿದರೂ ಆತನಿಗೆ ಸಿರಿವಂತನಾಗುವುದಕ್ಕೆ ಅಸಾಧ್ಯ.
ಜಾತಕದಲ್ಲಿ ಧನಯೋಗದ ಶಕ್ತಿ ಜಾಸ್ತಿ ಇದ್ದರೆ ಆತನು ಬಡತನದಿಂದ ಮೇಲಕ್ಕೆ ಬರುತ್ತಾನೆ. ಧನಯೋಗಕ್ಕೆ ಲಗ್ನ, ಧನ ಭಾಗ್ಯ ಹಾಗೂ ಲಾಭ ಸ್ಥಾನಗಳು ಅವಶ್ಯಕವಾಗಿರುತ್ತದೆ. ಒಂದಕ್ಕಿಂತ ಜಾಸ್ತಿ ಉಚ್ಛ ಗ್ರಹಗಳಿರಬೇಕು. ಸ್ವಂತ ಮನೆಯಲ್ಲಿ ಒಂದು, ಎರಡು, ಮೂರು ಗ್ರಹಗಳಿರಬೇಕು. ಮಿತ್ರ ಕ್ಷೇತ್ರದಲ್ಲಿ ಒಂದು ಇಲ್ಲವೆ ಹೆಚ್ಚು ಗ್ರಹಗಳಿರಬೇಕು. ಲಗ್ನ, ಧನ ಭಾಗ್ಯ ಹಾಗು ಲಾಭ ಈ ಮೂರು ಸ್ಥಾನಗಳ ಅಧಿಪತಿಗಳ ಸಂಯೋಗವು ಅನ್ಯೋನ್ಯ ರಾಶಿಯಲ್ಲಿರಬೇಕು.
ಹೆಚ್ಚು ಗ್ರಹಗಳ ಯೋಗವಾದಂತೆ ಧನಯೋಗವು ತೀರ ಬಲಿಷ್ಠವಾಗುವುದು. ಧನಯೋಗಕ್ಕಿಂತ ದಾರಿದ್ರ್ಯ ಯೋಗದ ಶಕ್ತಿಯು ಕಡಿಮೆ ಇದ್ದರೆ ಜಾತಕನ ಕೈಯಲ್ಲಿ ಹಣ ಉಳಿಯುತ್ತದೆ. ದಾರಿದ್ರ್ಯ ಯೋಗವಿರದೆ ಧನಯೋಗ ಇದ್ದರೆ ಜಾತಕನು ಶ್ರೀಮಂತನಾಗುವನು. ಶುಭ ನಕ್ಷತ್ರದಲ್ಲಿ ಶುಭಗ್ರಹವು ಪಂಚಮ ಸ್ಥಾನದಲ್ಲಿದ್ದು ಲಾಭದಲ್ಲಿ ಚಂದ್ರ ಮಂಗಳ ಯೋಗ ಇದ್ದರೆ ಮನುಷ್ಯನು ಶ್ರೀಮಂತನಾಗುತ್ತಾನೆ. ಯೋಗವು ವೃಷಭ ಇಲ್ಲವೆ ಕುಂಭ ಲಗ್ನದಲ್ಲಾಗುವುದು.
ನಿಮ್ಮ ಅದೃಷ್ಟದ ಹರಳು - ಸಂಖ್ಯೆ ಯಾವುದು ?
- ಮೇಷ ಇಲ್ಲವೆ ವೃಶ್ಚಿಕ ರಾಶಿಯ ಲಗ್ನದಲ್ಲಿ ಮಂಗಳನಿದ್ದು ಆತನು ಬುಧ ಶುಕ್ರ ಶನಿ ಇವರೊಂದಿಗೆ ಕೂಡಿ ಇಲ್ಲವೆ ದೃಷ್ಟನಾಗಿದ್ದರೆ ಜಾತಕನು ಶ್ರೀಮಂತನಾಗುವನು.
- ಧನು ಇಲ್ಲವೆ ಮೀನ ರಾಶಿಯ ಲಗ್ನದಲ್ಲಿ ಗುರು ಇದ್ದು ಆತನು ಬುಧ ಮಂಗಳರಿಂದ ಯುಕ್ತ ಇಲ್ಲವೆ ದೃಷ್ಟನಿದ್ದರೆ ಮನುಷ್ಯನು ಶ್ರೀಮಂತನಾಗುವನು.
- ಕನ್ಯಾ ಇಲ್ಲವೆ ಮಿಥುನ ರಾಶಿಯ ಲಗ್ನವಿದ್ದು, ಆ ರಾಶಿಯಲ್ಲಿ ಬುಧನು ಶುಕ್ರ ಹಾಗೂ ಶನಿಯಿಂದ ಯುಕ್ತನಿದ್ದರೆ ಇಲ್ಲವೇ ದೃಷ್ಟಿ ಇದ್ದರೆ ಜಾತಕನು ಸಿರಿವಂತನಾಗುವನು.
- ವೃಷಭ ಇಲ್ಲವೆ ತುಲಾ ರಾಶಿಯ ಲಗ್ನದಲ್ಲಿ ಶುಕ್ರನು ಶನಿ ಬುಧರಿಂದ ಯುಕ್ತ ಇಲ್ಲವೆ ದೃಷ್ಟನಿದ್ದರೆ ಜಾತಕನು ಶ್ರೀಮಂತನಾಗುವನು.
- ಲಗ್ನದಿಂದಾಗಲೀ ಚಂದ್ರನಿಂದಾಗಲಿ ನವಮ ಸ್ಥಾನ ತನ್ನ ಅಧಿಪತಿಯಿಂದ ಯುಕ್ತನಾದರೂ ಅಥವಾ ತನ್ನ ಅಧಿಪತಿಯಿಂದ ದೃಷ್ಟನಾದರೂ ಇವರು ಶ್ರೀಮಂತರಾಗುತ್ತಾರೆ. ಭಾಗ್ಯಸ್ಥಾನದಲ್ಲಿ ಶುಭಗ್ರಹವಿದ್ದರೂ ಅಥವಾ ಶುಭಗ್ರಹಗಳಿಂದ ನೋಡಿದರು ಇವರು ಹೊರದೇಶಕ್ಕೆ ಹೋಗಿ ಶ್ರೀಮಂತರಾಗುವರು.
- ಲಗ್ನ ತೃತೀಯ ಮತ್ತು ಪಂಚಮ ಸ್ಥಾನಗಳಲ್ಲಿ ಯಾವ ಗ್ರಹ ಇದ್ದರೂ ಆ ಗ್ರಹ ಬಲಿಷ್ಠವಾಗಿ ಇದ್ದು ಭಾಗ್ಯಸ್ಥಾನವನ್ನು ನೋಡಿದರೆ ಇವರು ಶ್ರೀಮಂತರಾಗುತ್ತಾರೆ. ಭಾಗ್ಯಸ್ಥಾನದಲ್ಲಿ ಇದ್ದ ಗ್ರಹ ಸ್ವಕ್ಷೇತ್ರದಲ್ಲಿ ಇದ್ದು ಶುಭ ಗ್ರಹಗಳಿಂದ ನೋಡಿದರೆ ಇವರು ವಂಶದಲ್ಲಿ ಶ್ರೀಮಂತರಾಗುತ್ತಾರೆ.
- ಜನ್ಮ ಕಾಲದಲ್ಲಿ ನವಮ ಸ್ಥಾನದಲ್ಲಿ ಉಚ್ಛ ಗ್ರಹವಿದ್ದು ಶುಭ ಗ್ರಹದಿಂದ ನೋಡಲ್ಪಟ್ಟರೆ ಆ ಪುರುಷ ಶ್ರೀಮಂತನಾಗುತ್ತಾರೆ.
ಈ ಮನೆಯಲ್ಲಿ ರಾಹು ಇದ್ದರೆ ದಾಂಪತ್ಯ ಸುಖ ಕನಸಷ್ಟೇ!