Indian Mythology: ಬ್ರಹ್ಮನಿಗೆ 5 ತಲೆಯಿತ್ತು, ಹಾಗಾದರೆ ಆ ಇನ್ನೊಂದು ತಲೆ ಎಲ್ಲಿ ಹೋಯ್ತು?

Published : Mar 28, 2025, 08:00 PM ISTUpdated : Mar 28, 2025, 08:26 PM IST
Indian Mythology: ಬ್ರಹ್ಮನಿಗೆ 5 ತಲೆಯಿತ್ತು, ಹಾಗಾದರೆ ಆ ಇನ್ನೊಂದು ತಲೆ ಎಲ್ಲಿ ಹೋಯ್ತು?

ಸಾರಾಂಶ

ಬ್ರಹ್ಮನಿಗೆ ಮೊದಲು ಐದು ತಲೆಗಳಿದ್ದವು, ಆದರೆ ಶಿವನಿಂದ ಒಂದು ತಲೆ ಕತ್ತರಿಸಲ್ಪಟ್ಟಿತು. ಈ ಘಟನೆಗೆ ಸಂಬಂಧಿಸಿದ ಎರಡು ಕಥೆಗಳನ್ನು ಇಲ್ಲಿ ನೀಡಲಾಗಿದೆ, ಅವು ಬ್ರಹ್ಮನಿಗೆ ತಲೆ ಕಳೆದುಕೊಳ್ಳಲು ಕಾರಣವಾದ ಸನ್ನಿವೇಶಗಳನ್ನು ವಿವರಿಸುತ್ತವೆ.

ಬ್ರಹ್ಮನನ್ನು ಚತುರ್ಮುಖನೆಂದೇ ಕರೆಯುವುದು ರೂಢಿ. ಅಂದರೆ ನಾಲ್ಕು ತಲೆಯವನೆಂದು. ಬ್ರಹ್ಮದೇವರ ಚಿತ್ರದಲ್ಲಿ ನಮಗೆ ಕಾಣುವುದು ಆತನ ಮೂರು ತಲೆ ಮಾತ್ರ. ಇನ್ನೊಂದು ಹಿಂಬದಿ ಇರುತ್ತೆ- ಅಂದರೆ ಒಟ್ಟು ನಾಲ್ಕು ತಲೆ. ಆದರೆ ನಿಮಗೊಂದು ವಿಷಯ ಗೊತ್ತೇ- ಮೊದಲು ಬ್ರಹ್ಮನಿಗೆ ಐದು ತಲೆಯಿತ್ತು. ಹಾಗಾದರೆ ಆ ಇನ್ನೊಂದು ತಲೆ ಎಲ್ಲಿ ಹೋಯಿತು? ಬ್ರಹ್ಮನಿಗೆ ಒಂದು ತಲೆ ನಷ್ಟವಾದ ಕುರಿತು ಎರಡು ಬಗೆಯ ಕತೆಗಳಿವೆ. ಎರಡನ್ನೂ ನೋಡೋಣ. 

ಬ್ರಹ್ಮನ ಸತ್ಯಲೋಕದಲ್ಲಿ ವಿಶೇಷ ಕಾರ್ಯಕ್ರಮವೊಂದನ್ನು ಆಯೋಜಿಸಲಾಗುತ್ತದೆ. ಇದಕ್ಕೆ ಕಾಮದೇವ ಮನ್ಮಥ ಮತ್ತು ಲಯಕರ್ತ ಪರಮೇಶ್ವರನನ್ನು ಹೊರತುಪಡಿಸಿ ಉಳಿದವರೆಲ್ಲರಿಗೂ ಆಹ್ವಾನ ಹೋಗುತ್ತದೆ. ಇವರಿಬ್ಬರನ್ನೂ ಬ್ರಹ್ಮ ಉದ್ದೇಶಪೂರ್ವಕ ಕಡೆಗಣಿಸಿರುತ್ತಾನೆ. ವಿಷಯ ತಿಳಿನ ಮನ್ಮಥ ಮತ್ತು ಪರಮೇಶ್ವರ ಸಿಟ್ಟಿನಿಂದ ಸತ್ಯಲೋಕದತ್ತ ತೆರಳುತ್ತಾರೆ. ಮೊದಲು ಮನ್ಮಥ ಬರುತ್ತಾನೆ. ಆ ಸಮಯದಲ್ಲಿ ಬ್ರಹ್ಮ ಮತ್ತು ಆತನ ಮಾನಸಪುತ್ರಿ ಸರಸ್ವತಿ ಸಂಭಾಷಣೆಯಲ್ಲಿ ತೊಡಗಿರುತ್ತಾರೆ.ಇವರನ್ನು ನೋಡಿದ ಮನ್ಮಥ, ಬ್ರಹ್ಮನ ಮೇಲಿನ ಕೋಪದಿಂದ ಅವರಿಬ್ಬರ ಮೇಲೂ ಕುಸುಮಶರಗಳನ್ನು ಪ್ರಯೋಗಿಸುತ್ತಾನೆ. ಕಾಮನ ಬಾಣಗಳೂ ಬ್ರಹ್ಮನನ್ನು ಜರ್ಝರಿತನಾಗಿಸುತ್ತವೆ. ಹೀಗಾಗಿ ಇಬ್ಬರೂ ಪರಸ್ಪರ ಅನುರಕ್ತರಾಗುತ್ತಾರೆ. ಇಬ್ಬರೂ ಮದುವೆ ಮಾಡಿಕೊಳ್ಳುತ್ತಾರೆ. 

ಆಗ ಅಲ್ಲಿಗೆ ಬಂದ ಪರಮೇಶ್ವರ ಇದನ್ನು ಕಂಡು ಕೆಂಡಾಮಂಡಲ ಆಗುತ್ತಾನೆ. "ಸರಸ್ವತಿ ನಿನ್ನ ಮಗಳು. ಆಕೆಯನ್ನು ನೀನು ಹೇಗೆ ವಿವಾಹವಾಗುತ್ತಿ?" ಎಂದು ಪ್ರಶ್ನಿಸುತ್ತಾನೆ. "ನನಗೆ ಬುದ್ಧಿ ಹೇಳಲು ನಿನ್ನಲ್ಲೇನು ಹೆಚ್ಚಿದೆ?" ಎಂದು ಬ್ರಹ್ಮ ಸವಾಲೆಸೆಯುತ್ತಾನೆ. ಇದರಿಂದ ಸಿಟ್ಟಿಗೆದ್ದ ಶಿವ, ಬ್ರಹ್ಮನ ಒಂದು ತಲೆಯನ್ನು ಕಿತ್ತು ತೆಗೆಯುತ್ತಾನೆ. ಇದುವೇ ಬ್ರಹ್ಮಕಪಾಲ. ಬ್ರಹ್ಮಕಪಾಲ ಶಿವನ ಬೆರಳನ್ನು ಕಚ್ಚಿ ಹಿಡಿದುಕೊಂಡು ರಕ್ತ ಹೀರಲಾರಂಭಿಸುತ್ತದೆ. ಅದರಿಂದ ಬಿಡಿಸಿಕೊಳ್ಳಲಾಗದೆ ಊರೂರು ಸುತ್ತಿದ ಶಿವ ಕೊನೆಗೆ ವಿಷ್ಣುವಿನ ಬಳಿ ಬರುತ್ತಾನೆ. 

ವಿಷ್ಣು "ಶಿವನ ಮೈಯಲ್ಲಿರುವ ರಕ್ತ ಇಂಗಿದೆ. ಬಾ ನನ್ನ ರಕ್ತ ಹೀರು" ಎಂದು ಬ್ರಹ್ಮಕಪಾಲವನ್ನು ಆಹ್ವಾನಿಸುತ್ತಾನೆ. ಬ್ರಹ್ಮಕಪಾಲ ಶಿವನನ್ನು ಬಿಟ್ಟು ವಿಷ್ಣುವಿನತ್ತ ನುಗ್ಗುತ್ತದೆ. ಶಿವ ತಪ್ಪಿಸಿಕೊಳ್ಳುತ್ತಾನೆ. ವಿಷ್ಣು ಬ್ರಹ್ಮಕಪಾಲವನ್ನು ಅತ್ತಿಂದಿತ್ತ ಅಲೆದಾಡಿಸಿ ಕೊನೆಗೆ "ದ್ವಾಪರಯುಗದಲ್ಲಿ ಮಹಾಯುದ್ಧ ನಡೆಯಲಿದೆ. ಆಗ ನಿನಗೆ ರಕ್ತತರ್ಪಣ ನೀಡುತ್ತೇನೆ. ಅಲ್ಲಿಯವರೆಗೆ ತಾಳ್ಮೆಯಿಂದಿರು" ಎಂದು ಮನವಿ ಮಾಡುತ್ತಾನೆ. ಬ್ರಹ್ಮಕಪಾಲ ಒಪ್ಪುತ್ತದೆ. ಮಹಾಭಾರತ ಯುದ್ಧದಲ್ಲಿ ಈ ಬ್ರಹ್ಮಕಪಾಲಕ್ಕೆ ಕೃಷ್ಣನಾಗಿ ಅವತರಿಸಿದ್ದ ವಿಷ್ಣು ರಕ್ತತರ್ಪಣ ನೀಡುತ್ತಾನೆ.

ದೇವರ ಮೇಲೆ, ತಾಯಿ ಮೇಲೆ ಪ್ರಮಾಣ ಮಾಡಿ ಸುಳ್ಳು ಹೇಳ್ತೀರಾ? ಹಾಗಿದ್ರೆ ಇದು ಗೊತ್ತಿರಲಿ!

ಇನ್ನೊಂದು ಕತೆ ಹೀಗಿದೆ- ಐದು ತಲೆ ಇರುವ ಬ್ರಹ್ಮ ತ್ರಿಮೂರ್ತಿಗಳಲ್ಲಿ ತಾನೇ ಸರ್ವಶ್ರೇಷ್ಠನೆಂದು ಭಾವಿಸಿ ವೇದಗಳನ್ನು ನಿಂದಿಸಿ ಮಾತನಾಡಿದಾಗ ಶಿವ ಮೈದೋರಿ, ಬ್ರಹ್ಮನಿಂದ ತಿರಸ್ಕೃತನಾಗುತ್ತಾನೆ. ಆತ ಭೈರವನನ್ನು ಸೃಜಿಸಿ, ಆತನ ಮೂಲಕ ಬ್ರಹ್ಮನ ಐದನೆಯ ತಲೆಯನ್ನು ಕತ್ತರಿಸಿದ. ಆಗ ಭೈರವನಿಗೆ ಬ್ರಹ್ಮಹತ್ಯೆ ಪ್ರಾಪ್ತವಾಯಿತು. ಬ್ರಹ್ಮಕಪಾಲ ಭೈರವನ ಕೈಗೆ ಅಂಟಿಕೊಂಡಿತು. ಭೈರವ ಕಾಪಾಲಿಕನಾಗಿ ತಿರುಗುತ್ತಾ ವಿಷ್ಣುವನ್ನು ಸಂದರ್ಶಿಸಿದ. ಭೈರವ ಕಾಶೀ ಕ್ಷೇತ್ರಕ್ಕೆ ಬಂದಾಗ ಬ್ರಹ್ಮಶಿರ ಪಾತಾಳಕ್ಕೆ ಕುಸಿಯಿತು. ಬ್ರಹ್ಮನಿಗೆ ಮಾನವಲೋಕದಲ್ಲಿ ದೇವಾಲಯ, ಪೂಜೆ, ರಥೋತ್ಸವಾದಿಗಳು ಇಲ್ಲದಿರುವಂತೆ ಶಿವನೇ ಶಾಪ ಕೊಟ್ಟ. ಹೀಗೆ ಬ್ರಹ್ಮನಿಗೆ ನಾಲ್ಕು ತಲೆ ಉಳಿಯಿತು. ಪೂಜೆ ಸಲ್ಲದಾಯಿತು. 

ಚಾಣಕ್ಯನ ಪ್ರಕಾರ ಗಂಡಸರು ಹೆಂಡತಿಯ ಈ 5 ವಿಷಯಗಳನ್ನು ಯಾರಿಗೂ ಹೇಳಬಾರದಂತೆ
 

PREV
Read more Articles on
click me!

Recommended Stories

ಈ 4 ರಾಶಿಯವರಲ್ಲಿ ಒಳ್ಳೆಯದಕ್ಕಿಂತ ಕೆಟ್ಟ ಗುಣಗಳೇ ಹೆಚ್ಚು, ದ್ವೇಷ ಸಾಧಿಸೋದ್ರಲ್ಲಿ ನಿಸ್ಸೀಮರು
ಹೊಸ ವರ್ಷದಲ್ಲಿ 3 ರಾಜಯೋಗ, 3 ರಾಶಿಗೆ ಬಹಳಷ್ಟು ಹಣ