ತುಳಸಿ ಗಿಡ ಹೂ ಬಿಡೋದನ್ನು ನಾವು ನೋಡಿದ್ದೇವೆ. ಆದ್ರೆ ಈ ಹೂವು ಯಾವ ಅರ್ಥ ನೀಡುತ್ತದೆ, ಹೂ ಹಿಂದಿನ ಕಾರಣ ಏನು ಎಂಬುದು ನಿಮಗೆ ಗೊತ್ತಾ?
ಹಿಂದೂ ಧರ್ಮ (Hinduism) ದಲ್ಲಿ ತುಳಸಿ ಬರೀ ಗಿಡವಲ್ಲ. ಅದೊಂದು ದೇವತೆ, ಅದೊಂದು ಔಷಧಿ, ಅದೊಂದು ಶಕ್ತಿ. ಹಾಗಾಗಿಯೇ ಬಹುತೇಕ ಎಲ್ಲರ ಮನೆ ಮುಂದೆ ತುಳಸಿ ಗಿಡವನ್ನು ಕಾಣ್ಬಹುದು. ತುಳಸಿ ಗಿಡ ಆರೋಗ್ಯವನ್ನು ವೃದ್ಧಿಸುತ್ತದೆ. ಶುದ್ಧ ಗಾಳಿಯನ್ನು ನಮಗೆ ನೀಡುತ್ತೆ. ಈ ತುಳಸಿ (Tulsi)ಗೆ ತಾಯಿ ಲಕ್ಷ್ಮಿ ಸ್ಥಾನವನ್ನು ನೀಡಲಾಗಿದೆ. ಪ್ರತಿ ದಿನ ಅದ್ರ ಪೂಜೆ ಮಾಡಿ, ಆಶೀರ್ವಾದ ಪಡೆಯಲಾಗುತ್ತದೆ. ಮನೆಯ ಮುಂದೆ ತುಳಸಿ ಗಿಡವಿದ್ರೆ ಮನೆಯಲ್ಲಿ ಸಂಪತ್ತು – ಸಮೃದ್ಧಿ ನೆಲೆಸಿರುತ್ತದೆ ಎಂಬ ನಂಬಿಕೆ ನಮ್ಮಲ್ಲಿದೆ. ಸಮೃದ್ಧವಾಗಿ ಬೆಳೆದಿದ್ದ ತುಳಸಿ ಗಿಡ ಇದ್ದಕ್ಕಿದ್ದ ಹಾಗೆ ಸಾಯೋದಿದೆ. ಕೆಲ ತುಳಸಿ ಗಿಡದ ಬಣ್ಣ ಬದಲಾಗುತ್ತದೆ. ಮತ್ತೆ ಕೆಲವೊಮ್ಮೆ ತುಳಸಿ ಗಿಡದ ಎಲೆಗಳು ಉದುರುತ್ವೆ. ನಾವು ಅದನ್ನು ಸಹಜ ಅಂತ ಭಾವಿಸ್ತೇವೆ. ಆದ್ರೆ ತುಳಸಿ ಗಿಡದಲ್ಲಿ ಆಗುವ ಒಂದೊಂದು ಬದಲಾವಣೆಯೂ ಭವಿಷ್ಯದ ಬಗ್ಗೆ ಸೂಚನೆಯನ್ನು ನೀಡುತ್ತದೆ. ಉದಾಹರಣೆಗೆ ಹೇಳೋದಾದ್ರೆ ತುಳಸಿ ಎಲೆಗಳು ಹಠಾತ್ತನೆ ಉದುರುವುದು ಸಮಸ್ಯೆ ನಿವಾರಣೆಯನ್ನು ಸೂಚಿಸುತ್ತದೆ, ಅದೇ ತುಳಸಿ ಗಿಡದ ಬಣ್ಣದಲ್ಲಿ ಬದಲಾವಣೆಯಾದ್ರೆ ಅದು ಒಳ್ಳೆ ಸುದ್ದಿಯ ಸೂಚನೆಯಾಗಿದೆ. ತುಳಸಿ ಗಿಡದಲ್ಲಿ ಹೂ ಬೆಳೆದ್ರೆ ಅದು ಏನು ಸೂಚನೆ ನೀಡುತ್ತದೆ ಎಂಬುದರ ವಿವರ ಇಲ್ಲಿದೆ.
ತುಳಸಿ ಗಿಡದಲ್ಲಿ ಹೂ : ತುಳಸಿ ಗಿಡದಲ್ಲಿ ಹೂ ಬಿಡೋದನ್ನು ನೀವು ನೋಡಿರಬಹುದು. ನಿಮ್ಮ ಮನೆಯ ಅಂಗಳದಲ್ಲಿರುವ ತುಳಸಿ ಗಿಡದಲ್ಲೂ ಹೂ ಅರಳಿದ್ದರೆ ಅದ್ರ ಅರ್ಥ ಏನು ಎಂಬುದನ್ನು ತಿಳಿಯಿರಿ. ತುಳಸಿ ಬುಧ ಗ್ರಹಕ್ಕೆ ಸಂಬಂಧಿಸಿದೆ ಎಂದು ಜ್ಯೋತಿಷ್ಯ ತಜ್ಞರು ನಂಬುತ್ತಾರೆ. ತುಳಸಿ ಗಿಡದಲ್ಲಿ ಹೂ ಅರಳಲು ಬುಧ ಗ್ರಹ ಕಾರಣ ಎನ್ನಲಾಗಿದೆ.
• ತುಳಸಿ ಗಿಡದಲ್ಲಿ ಹೂ ಅರಳುವುದು ಶುಭ ಸಂಕೇತವೆಂದು ಪರಿಗಣಿಸಲಾಗುತ್ತದೆ. ಇದು ಮನೆಯಲ್ಲಿ ಸಂತೋಷ, ಸಮೃದ್ಧಿ ಮತ್ತು ಶಾಂತಿ ನೆಲೆಸಲು ಕಾರಣವಾಗುತ್ತದೆ.
• ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ತುಳಸಿ ಗಿಡದಲ್ಲಿ ಹೂ ಅರಳಿದರೆ ಭಗವಂತ ವಿಷ್ಣವಿನ ಆಶೀರ್ವಾದ ನಿಮಗೆ ಸಿಗುತ್ತದೆ ಎಂದರ್ಥ. ಇದು ಕುಟುಂಬದಲ್ಲಿ ಸಮೃದ್ಧಿ ಮತ್ತು ಸಾಮರಸ್ಯವನ್ನು ಸೂಚಿಸುತ್ತದೆ.
• ತುಳಸಿ ಗಿಡದಲ್ಲಿ ಹೂ ಬಿಡುವುದು ರೋಗಗಳಿಂದ ಮುಕ್ತಿಯನ್ನು ಸೂಚಿಸುತ್ತದೆ. ದೈಹಿಕ ಆರೋಗ್ಯ ಸುಧಾರಿಸುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಅರ್ಥೈಸಲಾಗಿದೆ. ಮನೆಯಲ್ಲಿ ಯಾರಾದರೂ ಅನಾರೋಗ್ಯದಿಂದ ಬಳಲುತ್ತಿದ್ದರೆ ಅಥವಾ ಆಗಾಗ್ಗೆ ಅನಾರೋಗ್ಯಕ್ಕೆ ಒಳಗಾಗುತ್ತಿದ್ದರೆ, ಅವರ ಆರೋಗ್ಯದಲ್ಲಿ ಸುಧಾರಣೆಯಾಗುತ್ತದೆ ಎಂಬುದು ತುಳಸಿ ಗಿಡ ಹೂ ಬಿಟ್ಟಾಗ ತಿಳಿಯಬಹುದು.
ಚಾಣಕ್ಯನ ಪ್ರಕಾರ ಗಂಡಸರು ಹೆಂಡತಿಯ ಈ 5 ವಿಷಯಗಳನ್ನು ಯಾರಿಗೂ ಹೇಳಬಾರದಂತೆ
• ತುಳಸಿ ಹೂವು ಬಿಟ್ಟರೆ ನಿಮ್ಮ ಕಷ್ಟದ ಸಮಯ ಶೀಘ್ರದಲ್ಲೇ ಕೊನೆಗೊಳ್ಳಲಿವೆ ಎಂದರ್ಥ. ಇದು ನಿಮ್ಮ ಜೀವನದಲ್ಲಿನ ತೊಂದರೆಗಳು, ವ್ಯಾಪಾರ ಸಮಸ್ಯೆಗಳು ಕೊನೆಯಾಗುವುದನ್ನು ಸೂಚಿಸುತ್ತದೆ.
• ಜ್ಯೋತಿಷ್ಯದ ಪ್ರಕಾರ, ತುಳಸಿ ಹೂವು ಬ್ರಹ್ಮನ ಆಶೀರ್ವಾದದ ಸೂಚಕ. ತುಳಸಿ ಹೂವು ಅರಳಿದಾಗ, ನಿಮಗೆ ಒಳ್ಳೆಯದಾಗಲಿದೆ, ಯಶಸ್ಸಿನ ಆರಂಭ ಎಂದು ನೀವು ನಂಬಬಹುದು. ಶೀಘ್ರವೇ ಒಳ್ಳೆಯ ಸುದ್ದಿ ನಿಮಗೆ ಸಿಗಲಿದೆ ಎಂದರ್ಥ.
ದೇವರ ಮೇಲೆ, ತಾಯಿ ಮೇಲೆ ಪ್ರಮಾಣ ಮಾಡಿ ಸುಳ್ಳು ಹೇಳ್ತೀರಾ? ಹಾಗಿದ್ರೆ ಇದು ಗೊತ್ತಿರಲಿ!
ತುಳಸಿ ಗಿಡ ಒಣಗಿದ್ರೆ ಎಚ್ಚರ : ತುಳಸಿ ಗಿಡದಲ್ಲಿ ಹೂ ಕಾಣಿಸಿದ್ರೆ ಶುಭ, ಅದೇ ತುಳಸಿ ಗಿಡ ಒಣಗಲು ಶುರುವಾದ್ರೆ ಅದು ಅಶುಭ. ಯಾವುದೇ ಕಾರಣಕ್ಕೂ ಅದನ್ನು ನಿರ್ಲಕ್ಷಿಸಬೇಡಿ. ತುಳಸಿ ಗಿಡ ಒಣಗುವುದು ನಿಮ್ಮ ಮನೆಯಿಂದ ಸಂಪತ್ತು ಹೊರಹೋಗುವುದರ ಸಂಕೇತ. ಇದು ಪಿತೃ ದೋಷವನ್ನೂ ಸೂಚಿಸುತ್ತದೆ. ಪದೇ ಪದೇ ತುಳಸಿ ಗಿಡ ಒಣಗುತ್ತಿದ್ದರೆ ಪೂರ್ವಜರ ಋಣ ನಿಮ್ಮ ಮೇಲಿದೆ ಎಂದರ್ಥ. ದಾನದ ಮೂಲಕ ಋಣ ತೀರಿಸುವುದು ಮುಖ್ಯ.