ನಾಗರ ಪಂಚಮಿ ಹಬ್ಬದ ಬಗ್ಗೆ ಭಗವಾನ್ ಶ್ರೀಕೃಷ್ಣ ಹೇಳಿದ್ದೇನು..?

By Suvarna News  |  First Published Jul 25, 2020, 9:27 AM IST

 ನಾಗರ ಪಂಚಮಿ ಹಬ್ಬ ಎಂದರೆ ಕೇವಲ ಹುತ್ತಕ್ಕೆ ಇಲ್ಲವೇ ನಾಗರ ಹಾವುಗಳಿಗೆ ಹಾಲೆರೆಯುವುದಲ್ಲ. ಇದರ ಆಚರಣೆ ಹಿಂದೆ ಅನೇಕ ಕಾರಣಗಳಿವೆ ಎಂದು ಪುರಾಣ ಹೇಳುತ್ತದೆ. ಈ ದಿನ ಪೂಜೆ ಮಾಡುವುದರಿಂದ ಆರ್ಥಿಕವಾಗಿ ಲಾಭ ಆಗುವುದಲ್ಲದೆ, ನಾಗದೋಷಗಳನ್ನೂ ನಿವಾರಣೆ ಮಾಡಿಕೊಳ್ಳಬಹುದಾಗಿದೆ. ಅಂದಹಾಗೆ, ನಾಗರಪಂಚಮಿ ಬಗ್ಗೆ ಭಗವಾನ್ ಶ್ರೀಕೃಷ್ಣ ಸಹ ಮಾತನಾಡಿ ಆಶೀರ್ವದಿಸಿದ್ದ ಎಂಬ ವಿಷಯ ನಿಮಗೆ ಗೊತ್ತೇ..? ಏನದು ನೋಡೋಣ ಬನ್ನಿ…


ಆಷಾಢ ಮಾಸದ ಕೊನೆಯ ದಿನವಾದ ಆಷಾಢ ಅಮಾವಾಸ್ಯೆಯನ್ನು ಭೀಮನ ಅಮಾವಾಸ್ಯೆ ಎಂದು ಆಚರಿಸಲಾಗುತ್ತದೆ. ಅಲ್ಲಿಂದ ಶ್ರಾವಣ ಮಾಸ ಆರಂಭವಾಗುತ್ತದೆ. ಧಾರ್ಮಿಕ ವಿಧಿಗಳನ್ನು ನೆರವೇರಿಸಲು ಶ್ರಾವಣದ ಎಲ್ಲ ದಿನಗಳೂ ಶ್ರೇಷ್ಠವಾಗಿದೆ. ಹಾಗೆಯೇ ಶ್ರಾವಣ ಸೋಮವಾರ, ಶನಿವಾರದ ಪೂಜೆಗಳನ್ನು ಮತ್ತು ಮಂಗಳ ಗೌರಿ ವ್ರತ, ಸಂಪತ್ ಶುಕ್ರವಾರ, ವರ ಮಹಾಲಕ್ಷ್ಮೀ ವ್ರತ, ನಾಗರ ಪಂಚಮಿ, ಉಪಾಕರ್ಮ, ಹೊಸ್ತಿಲ ಸಂಕ್ರಾಂತಿ ಹೀಗೆ ವಿವಿಧ ಹಬ್ಬಗಳ ಆಚರಣೆಯನ್ನು ಮಾಡಲಾಗುತ್ತದೆ.

ಶ್ರಾವಣ ಮಾಸದ ವಿಶೇಷ ಹಬ್ಬಗಳಲ್ಲೊಂದು ನಾಗರ ಪಂಚಮಿ. ಈ ಹಬ್ಬವನ್ನು ಶುಕ್ಲ ಪಕ್ಷ ಪಂಚಮಿಯಂದು ಆಚರಿಸಲಾಗುತ್ತದೆ. ಈ ದಿನ ನಾಗ ದೇವರ ಹನ್ನೆರಡು ಸ್ವರೂಪಗಳನ್ನು ಪೂಜಿಸಲಾಗುತ್ತದೆ. ನಾಗ ದೇವರ ಪೂಜೆ ಮಾಡುವುದರಿಂದ, ರುದ್ರಾಭಿಷೇಕ ಮಾಡುವುದರಿಂದ ಈಶ್ವರನು ಪ್ರಸನ್ನನಾಗುತ್ತಾನೆ ಮತ್ತು ಬೇಡಿದ್ದನ್ನು ನೀಡುತ್ತಾನೆಂಬ ನಂಬಿಕೆ ಇದೆ. ಈ ಬಗ್ಗೆ ಸ್ವತಃ ಭಗವಾನ್ ಶ್ರೀಕೃಷ್ಣ ಸಹ ಮಾತನಾಡಿದ್ದಾನೆ. ಆತನ ಆಶೀರ್ವಾದ ಇರುವ ಈ ಹಬ್ಬವನ್ನು ಆಚರಿಸಿದೆ ಪುಣ್ಯ ಲಭಿಸುತ್ತದೆ. 

ಇದನ್ನು ಓದಿ: ಪರಶಿವನ ಕೃಪೆ ಪಡೆವ ಶ್ರಾವಣ ಮಾಸ ಮಹತ್ವ, ಆಚರಣೆ!

ಪುರಾಣ ಗ್ರಂಥಗಳ ಪ್ರಕಾರ ನಾಗರ ಪಂಚಮಿಯಂದು ಸರ್ಪಗಳನ್ನು ಪೂಜಿಸುವುದರಿಂದ ನಾಗರಾಜನು ಪ್ರಸನ್ನನಾಗುತ್ತಾನೆಂಬ ಉಲ್ಲೇಖವಿದೆ. ಅಷ್ಟೇ ಅಲ್ಲದೆ ಜಾತಕದಲ್ಲಿ ಕಾಳಸರ್ಪ ದೋಷವಿರುವವರು ಈ ಪಂಚಮಿಯ ಶುಭದಿನದಂದು ಶಿವ ಮತ್ತು ನಾಗದೇವರಿಗೆ ಪೂಜೆ ಮಾಡಿದರೆ ಒಳ್ಳೆಯದಾಗುತ್ತದೆ. 



ಶ್ರೀಕೃಷ್ಣ ಹೇಳಿದ್ದೇನು..?
ನಾಗರಪಂಚಮಿಯಂದು ಭಗವಾನ್ ಶ್ರೀಕೃಷ್ಣ ಸಹ ಒಂದು ವರದಾನವನ್ನು ಕೊಟ್ಟಿದ್ದಾನೆ. ಈ ದಿನದಂದು ಹಾವಿಗೆ ಹಾಲೆರೆಯುವವರಿಗೆ ಜೀವನದಲ್ಲಿ ಯಾವುದೇ ರೀತಿಯ ಸಂಕಷ್ಟಗಳು ಎದುರಾಗದಿರಲಿ ಎಂದು ಆಶೀರ್ವಾದ ರೂಪದ ವರವನ್ನು ನೀಡಿದ್ದಾಗಿ ಪುರಾಣ ಹೇಳುತ್ತದೆ. 

ಇದಕ್ಕೆ ಕಾರಣವೂ ಇದೆ. ಒಮ್ಮೆ ಕಾಲಿಯಾ ಎಂಬ ನಾಗವು ಯಮುನಾ ನದಿಗೆ ವಿಷವನ್ನು ಕಕ್ಕುತ್ತದೆ. ಆ ನದಿ ನೀರನ್ನು ಸೇವಿಸಿದ ಅಲ್ಲಿಯ ಜನರು ಮೂರ್ಛೆ ತಪ್ಪಿ ಬೀಳುತ್ತಾನೆ. ಆ ಸಂದರ್ಭದಲ್ಲಿ ಶ್ರೀಕೃಷ್ಣನು ನದಿಯೊಳಗೆ ಅಡಗಿ ಕುಳಿತಿದ್ದ ನಾಗ ಕಾಲಿಯಾನನ್ನು ಮೇಲಕ್ಕೆ ಕರೆತಂದು ಯುದ್ಧ ಮಾಡುತ್ತಾನೆ. ಹೀಗೆ ನಡೆದ ಯುದ್ಧದಲ್ಲಿ ಕಾಲಿಯಾ ಸೋಲೊಪ್ಪಿಕೊಂಡು ನದಿಯ ವಿಷವನ್ನು ವಾಪಸ್ ಪಡೆಯುತ್ತಾನೆ. ಆಗ ಭಗವಾನ್ ಶ್ರೀಕೃಷ್ಣ ಪ್ರಸನ್ನಗೊಂಡು, “ಶ್ರಾವಣ ಮಾಸದ ಶುಕ್ಲ ಪಕ್ಷದ ಪಂಚಮಿ ತಿಥಿಯಂದು ನಾಗಪಂಚಮಿ ಹಬ್ಬ ಆಚರಿಸಲ್ಪಡುತ್ತದೆ. ಆ ದಿನ ಸರ್ಪಗಳಿಗೆ ಪೂಜೆ, ಪುನಸ್ಕಾರಗಳು ನೆರವೇರುತ್ತವೆ’’ ಎಂದು ವರವನ್ನು ನೀಡುತ್ತಾನೆ.

ಇದನ್ನು ಓದಿ: ಶಾಸ್ತ್ರ ಉಲ್ಲೇಖಿಸಿದ ಸ್ನಾನದ ವಿಧಗಳು ಮತ್ತು ವಿಧಾನ !
   
ಧಾರ್ಮಿಕ ಆಚರಣೆ ಹೇಗಿದೆ..?
ಮನೆಯ ಎದುರು ಹಾಲು ಇಡುವುದರಿಂದ ಅದನ್ನು ನಾಗದೇವತೆ ಬಂದು ಕುಡಿದು ಪ್ರಸನ್ನ ವಾಗುತ್ತದೆ ಎಂಬ ನಂಬಿಕೆ ಕೂಡ ಇದೆ. ಸರ್ಪಗಳಲ್ಲಿ ಭೌತಿಕ ಬಲ ಇರುವುದರಿಂದ ಈ ದಿನ ದೇವಿ ಸರಸ್ವತಿ ಪೂಜೆಯನ್ನೂ ಮಾಡುವ ಪರಂಪರೆ ಕೆಲವು ಕಡೆ ಇದೆ. ಸುಖ-ಸಮೃದ್ಧಿ ವೃದ್ಧಿಸಲು ಈ ದಿನ ವ್ರತವನ್ನೂ ಕೈಗೊಳ್ಳುತ್ತಾರೆ. 

ಆರ್ಥಿಕ ಲಾಭಕ್ಕೆ ವಿಶೇಷ ಪೂಜೆ
ಆರ್ಥಿಕವಾಗಿ ಮುಂದೆ ಬರಬೇಕು. ದುಡಿದಿದ್ದು ಕೈಸೇರಬೇಕು, ಹೆಚ್ಚು ಹೆಚ್ಚು ಹಣ ಗಳಿಸಬೇಕು ಎಂಬುವವರು ಸಹ ಈ ದಿನ ಶ್ರದ್ಧೆಯಿಂದ ಪೂಜೆಯನ್ನು ಮಾಡುತ್ತಾರೆ. ಇದಕ್ಕಾಗಿ ಇರುವ ಮಂತ್ರಗಳನ್ನು ಪಠಿಸಿ ಪೂಜೆ ಮಾಡಿದರೆ ಆರ್ಥಿಕ ಪ್ರಗತಿಯಾಗಿ ಲಾಭವಾಗುತ್ತದೆ ಎಂದು ಪುರಾಣದಲ್ಲಿ ಉಲ್ಲೇಖಿಸಲಾಗಿದೆ. ಕಾರಣ, ಗುಪ್ತ ನಿಧಿಯನ್ನು, ಲಕ್ಷ್ಮೀಯನ್ನು ಕಾಯುವುದೇ ನಾಗಗಳು ಅಲ್ಲವೇ..?

ಇದನ್ನು ಓದಿ: ಶನಿದೇವರ ಫೋಟೋವನ್ನು ಮನೆ ದೇವರ ಕೋಣೆಯಲ್ಲಿ ಏಕೆ ಇಡಬಾರದು? 

ಹಾವಿನಲ್ಲೇಕೆ ವಿಷ ಇದೆ ಎಂದು ಗೊತ್ತೇ?
ಹಾವಿನಲ್ಲಿ ವಿಷ ಏಕೆ ಇದೆ ಎಂಬುದಕ್ಕೆ ಪುರಾಣ ಕಥೆಗಳು ಸಾಕಷ್ಟು ವಿವರಣೆಯನ್ನು ಕೊಡುತ್ತದೆ. ಸಮುದ್ರ ಮಥನದ ವೇಳೆ ಅಂತಿಮವಾಗಿ ಉದ್ಭವವಾದ ಹಾಲಾಹಲವನ್ನು ಪರಶಿವನು ಸೇವಿಸಿದ್ದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಹೀಗೆ ವಿಷ ಸೇವನೆ ಮಾಡುವಾಗ ಅದರಲ್ಲಿ ಒಂದು ಹನಿ ಹಾವಿನ ಮೇಲೆ ಬೀಳುತ್ತದೆ. ಆಗ ಸರ್ಪ ಜಾತಿಗಳೆಲ್ಲ ವಿಷ ಸರಿಸೃಪಗಳಾದವು ಎಂದು ಹೇಳಲಾಗುತ್ತದೆ. ಹಾಗಾಗಿ ಸರ್ಪದಿಂದ ಪಾರಾಗಲು ಈ ದಿನ ನಾಗದೇವರ ಪೂಜೆಯನ್ನು ಕೈಗೊಳ್ಳಲಾಗುತ್ತದೆ. 

Tap to resize

Latest Videos

click me!