ನಿಮ್ಮ ಜನ್ಮರಾಶಿ ನೀರಿನ ಸ್ವಭಾವದ್ದಾಗಿದ್ದು, ನಿಮ್ಮ ಸಂಗಾತಿಯದ್ದು ಬೆಂಕಿಯ ಸ್ವಭಾವದ್ದಾಗಿದ್ದರೆ ಇಬ್ಬರೂ ಹೊಂದಿ ಬಾಳುವುದು ಹೇಗೆ ಸಾಧ್ಯ ಅಲ್ಲವೇ? ಗೆಳೆಯರಲ್ಲೂ ನಿಮಗೆ ನಿತ್ಯ ಜಗಳ ಆಗುತ್ತಿದೆ ಎಂದರೆ ನಿಮ್ಮದು ವಿರುದ್ಧ ರಾಶಿಗಳೇ ಎಂದು ಪರೀಕ್ಷಿಸಿ.
ಹನ್ನೆರಡು ರಾಶಿಚಕ್ರ ಚಿಹ್ನೆಗಳಲ್ಲಿ ಪ್ರತಿಯೊಂದು ಕೂಡಾ_ ನಾಲ್ಕು ವರ್ಗಗಳಲ್ಲಿ ಒಂದಕ್ಕೆ ಸೇರಿದೆ- ಬೆಂಕಿ, ನೀರು, ಗಾಳಿ ಮತ್ತು ಭೂಮಿ. ಇವುಗಳಿಗೆ ಪ್ರತ್ಯೇಕ ಗುಣಗಳೂ ಇವೆ. ನಿಮ್ಮದು ವಿರುದ್ಧ ಗುಣಸ್ವಭಾವದ ವರ್ಗ ಆಗಿದ್ದರೆ ನಿಮ್ಮ ದಾಂಪತ್ಯ ಅಥವಾ ಗೆಳೆತನ ಗೆಲ್ಲುವುದು ಕಠಿಣ. ನಕ್ಷತ್ರಗಳು ಅಥವಾ ರಾಶಿಚಕ್ರದ ಚಿಹ್ನೆಗಳು ನಮ್ಮ ವ್ಯಕ್ತಿತ್ವದ ವಿಶೇಷತೆಗಳನ್ನು ಬಹಳ ಸುಲಭವಾಗಿ ಸೂಚಿಸುತ್ತವೆ. ರಾಶಿಚಕ್ರ ಚಿಹ್ನೆಗಳನ್ನು ಮುಖ್ಯವಾಗಿ ನಾಲ್ಕು ವರ್ಗಗಳಾಗಿ ವಿಂಗಡಿಸಲಾಗಿದೆ: ಬೆಂಕಿ, ನೀರು, ಭೂಮಿ ಮತ್ತು ಗಾಳಿ. ಈ ನಾಲ್ಕು ವರ್ಗಗಳು ೧೨ ರಾಶಿಗಳಲ್ಲಿ ತಲಾ 3 ಚಿಹ್ನೆಗಳನ್ನು ಹೊಂದಿವೆ. ಇವುಗಳಲ್ಲಿ ಬೆಂಕಿ ರಾಶಿಗಳು ಹಾಗೂ ಜಲ ರಾಶಿಗಳು ಪರಸ್ಪರ ವಿರುದ್ಧ. ಇಂಥವರ ಜೊತೆ ಬದುಕಲು ವಿಶೇಷ ಸಂಯಮ, ಹೊಂದಾಣಿಕೆ ಬೇಕು. ಇದು ನಿಮಗೆ ಗೊತ್ತಿರಲಿ.
ಅಗ್ನಿ- ಮೇಷ, ಸಿಂಹ, ಧನು
ಈ ಮೂರು ರಾಶಿಚಕ್ರಗಳು ಅಗ್ನಿ ಅಂಶದೊಂದಿಗೆ ಸಂಬಂಧ ಹೊಂದಿದೆ. ಬೆಂಕಿಯಂತೆಯೇ, ಮೇಷ ರಾಶಿಯು ಅದ್ಭುತವಾದ ಚೈತನ್ಯವನ್ನು ಹೊಂದಿದೆ ಮತ್ತು ಸಾಕಷ್ಟು ಪ್ರಬಲವಾಗಿದೆ. ಯಾರೇ ಆಗಲಿ ಅವರ ಸಂಪರ್ಕಕ್ಕೆ ಬಂದರೆ, ಅವರ ಪ್ರಭಾವದಿಂದ ಪಾರಾಗುವಂತಿಲ್ಲ. ಅವರು ಸ್ವಾಭಾವಿಕವಾಗಿ ಹೆಚ್ಚು ಆತ್ಮವಿಶ್ವಾಸ ಉಳ್ಳವರು. ಮತ್ತು ಅವರು ಸಂತೋಷವಾಗಿರುವಾಗ ತಮ್ಮ ಭಾವನೆಗಳನ್ನು ಸ್ಪಷ್ಟವಾಗಿ ತೋರಿಸುತ್ತಾರೆ. ಆದರೆ ಇಲ್ಲದಿದ್ದಾಗ, ತುಂಬಾ ಮೊಂಡುತನದಿಂದ ಮತ್ತು ನೇರವಾಗಿ, ನೋಯಿಸುವ ರೀತಿಯಲ್ಲಿ ಮಾತಾಡಬಹುದು.
ಸಿಂಹ ರಾಶಿಯವರು ಗರ್ಜಿಸುವ ವ್ಯಕ್ತಿತ್ವದವರು. ಯಾರಿಂದಲೂ ಇವರ ಮೇಲೆ ಪ್ರಾಬಲ್ಯ ಸಾಧಿಸಲು ಸಾಧ್ಯವಿಲ್ಲ. ಇವರು ಉತ್ತಮ ಶಕ್ತಿಯ ಮಟ್ಟವನ್ನು ಹೊಂದಿದ್ದಾರೆ. ಉತ್ಸಾಹದಿಂದ ಸೃಜನಶೀಲರು ಮತ್ತು ಬಲವಾದ ಚಿಂತನಶಕ್ತಿ ಉಳ್ಳವರು. ಈ ಶಕ್ತಿಯ ಪ್ರವಾಹವನ್ನು ಸಮತೋಲನಗೊಳಿಸಲು, ಇವರು ನೀರಿನ ರಾಶಿಚಿಹ್ನೆ ಉಳ್ಳವರನ್ನು ಸುತ್ತಮುತ್ತ ಹೊಂದಿರಬೇಕು.
ಧನು ರಾಶಿಯವರು ಕೆಲವೊಮ್ಮೆ ಉರಿಉರಿ ಬೆಂಕಿಯಂತಿರುತ್ತಾರೆ. ಇವರ ಬಳಿ ಹೋಗುವುದು ಕಷ್ಟ. ಆದರೆ ಕೆಲವು ಸಂದರ್ಭಗಳಲ್ಲಿ ಶಾಂತವಾಗಿರಬಹುದು. ಅವರು ಪ್ರತಿ ಯೋಜನೆ ಮತ್ತು ಸನ್ನಿವೇಶವನ್ನು ಬಹಳ ಉತ್ಸಾಹದಿಂದ ತೆಗೆದುಕೊಳ್ಳುತ್ತಾರೆ ಮತ್ತು ಉತ್ತಮ ನಿರ್ಧಾರ ತೆಗೆದುಕೊಳ್ಳುವ ಶಕ್ತಿಯನ್ನು ಹೊಂದಿರುತ್ತಾರೆ. ಅದು ಅವರ ಕೆಲಸ ಮತ್ತು ಸಂಬಂಧಗಳನ್ನು ಪರಿಣಾಮಕಾರಿಯಾಗಿ ನಿಭಾಯಿಸುವ ಸಾಮರ್ಥ್ಯ ನೀಡುತ್ತದೆ.
ಮುಕೇಶ್ ಅಂಬಾನಿಯ ʼಅಂಟಿಲಿಯಾʼ ಅರಮನೆಯ ಮೊದಲು ಆ ಜಾಗದಲ್ಲಿ ಏನಿತ್ತು? ವಾಸ್ತು ದೋಷ ಇದೆಯಾ?
ನೀರು- ಕಟಕ, ವೃಶ್ಚಿಕ, ಮೀನ
ಕಟಕ ರಾಶಿಯವರು ಆತ್ಮದ ಅಂಶ ಮತ್ತು ಹೃದಯದಿಂದ ಶುದ್ಧರಾಗಿದ್ದಾರೆ ಮತ್ತು ತಮ್ಮ ಪ್ರೀತಿಪಾತ್ರರಿಗೆ ತುಂಬಾ ಸಾಂತ್ವನ ನೀಡುತ್ತಾರೆ. ಇವರು ಯಾವಾಗಲೂ ಹೃದಯದಲ್ಲಿ ಉತ್ತಮ ಉದ್ದೇಶಗಳನ್ನು ಹೊಂದಿರುತ್ತಾರೆ. ಇವರ ಸ್ಪರ್ಶ ಭಾವನಾತ್ಮಕವಾಗಿರುತ್ತದೆ. ನೀರಿನಂತೆಯೇ, ಅವರು ತಮ್ಮ ತಂಪನ್ನು ಬಹಳ ಸುಲಭವಾಗಿ ನಿಮಗೆ ದಾಟಿಸುತ್ತಾರೆ.
ವೃಶ್ಚಿಕ ರಾಶಿಯವರು ಪ್ರತಿಯೊಂದು ವಿಷಯದ ಬಗ್ಗೆ ತುಂಬಾ ನಿಗೂಢತೆ ಕಾಪಾಡಿಕೊಳ್ಳುತ್ತಾರೆ ಮತ್ತು ಕುತೂಹಲದಿಂದ ಕೂಡಿರುತ್ತಾರೆ. ಇವರು ತಮ್ಮ ಜೀವನದ ಅಂಶಗಳನ್ನು ಅರ್ಥಮಾಡಿಕೊಳ್ಳಲು ಆಕಾಶ ಗ್ರಹಗಳ ಸ್ಥಾನಗಳನ್ನು ನಂಬುತ್ತಾರೆ. ಆಧ್ಯಾತ್ಮದ ಬಗ್ಗೆ ಅವರಿಗೆ ಹೆಚ್ಚು ತಿಳಿದಿರುತ್ತದೆ. ಇವರು ನೀರಿನ ಚಿಹ್ನೆಗಳ ವಿಶ್ವಾಸಾರ್ಹ ಅಂಶವನ್ನು ಚೆನ್ನಾಗಿ ಸೂಚಿಸುತ್ತಾರೆ.
ಮೀನ ರಾಶಿಯವರು ನೀರಿನಲ್ಲಿ ಅತಿ ವೇಗವಾಗಿ ಚಲಿಸುವ ಮೀನಿನಂತೆ ಎಲ್ಲಿ ಬೇಕಾದರೂ ಹೊಂದಿಕೊಳ್ಳುತ್ತಾರೆ. ಇವರ ವಲಯದಲ್ಲಿದ್ದರೆ ಇವರು ಅತಿ ವೇಗದ ಚಲನೆ ಮತ್ತು ಜ್ಞಾನ ಹೊಂದಿರುತ್ತಾರೆ. ಇವರು ಮಾಡುವ ಪ್ರತಿಯೊಂದು ಕೆಲಸಕ್ಕೂ ಸಂಬಂಧಿಸಿದ ಜ್ಞಾನವನ್ನು ಪಡೆಯಲು ಇಷ್ಟಪಡುತ್ತಾರೆ. ಇವರು ನಿಗೂಢವಾಗಿರುತ್ತಾರೆ. ಆದರೆ ಇವರು ಎಂದಿಗೂ ಅಸಮಂಜಸವಾಗಿರುವುದಿಲ್ಲ.
ಪದೇ ಪದೇ ನಿಮ್ಮನ್ನು ಕಾಗೆ ಅಟ್ಟಾಡಿಸಿ ಕುಕ್ಕುತ್ತಿದ್ದರೆ ಅದು ದೊಡ್ಡ ಸೂಚನೆ; ಎಚ್ಚೆತ್ತುಕೊಳ್ಳಿ