Marriage Mantra: ವಿವಾಹ ತಡವಾಗ್ತಿದೆಯಾ? ಶೀಘ್ರ ವಿವಾಹವಾಗಲು ಈ ಮಂತ್ರ ಹೇಳಿಕೊಳ್ಳಿ..

By Suvarna News  |  First Published Apr 8, 2023, 9:05 AM IST

ಅಕಾಲಿಕ ವಿವಾಹಕ್ಕೆ ಅನೇಕ ಪರಿಹಾರಗಳನ್ನು ಜ್ಯೋತಿಷ್ಯದಲ್ಲಿ ಉಲ್ಲೇಖಿಸಲಾಗಿದೆ. ಈ ಕ್ರಮಗಳಿಂದ ಜಾತಕದ ದೋಷಗಳನ್ನು ಬಹಳ ಮಟ್ಟಿಗೆ ಕಡಿಮೆ ಮಾಡಬಹುದು. ಕೆಲವು ಮಂತ್ರಗಳನ್ನು ಪಠಿಸುವ ಮೂಲಕ ಶೀಘ್ರ ವಿವಾಹ ಜೀವನಕ್ಕೆ ಕಾಲಿಡಲು ಸಾಧ್ಯವಾಗುತ್ತದೆ. 


ಅನೇಕ ಬಾರಿ ಕೆಲ ಜನರ ಜಾತಕದಲ್ಲಿ ಅಂತಹ ಕೆಲವು ಯೋಗಗಳಿದ್ದು(ದೋಷ) ಅವರ ವಿವಾಹ ವಿಷಯದಲ್ಲಿ ಅನೇಕ ಅಡೆತಡೆಗಳು ಉಂಟಾಗುತ್ತವೆ. ಸಾಕಷ್ಟು ಪ್ರಯತ್ನ ಮಾಡಿದರೂ ಮದುವೆ ಬೇಗ ನಿಶ್ಚಯವಾಗುವುದಿಲ್ಲ ಅಥವಾ ಫಿಕ್ಸ್ ಆದ ನಂತರ ಸಂಬಂಧ ಮುರಿದು ಬೀಳುತ್ತಿರುತ್ತದೆ. ಜಾತಕದಲ್ಲಿ ಕುಜ ದೋಷ, ಗುರು ಮತ್ತು ಶುಕ್ರನ ಕೆಟ್ಟ ಸ್ಥಾನ, ಸಪ್ತಮ ಅಧಿಪತಿಯ ದೌರ್ಬಲ್ಯ ಅಥವಾ ನವಾಂಶದ ಕುಂಡಲಿಯಲ್ಲಿನ ದೋಷವು ಮದುವೆಯಲ್ಲಿ ಅಡಚಣೆಯಂತಹ ಸಮಸ್ಯೆಗಳನ್ನು ಉಂಟು ಮಾಡುತ್ತದೆ. ಇದು ಮನೆ ಮಂದಿಯ ನೆಮ್ಮದಿಯನ್ನೇ ಹಾಳು ಮಾಡುವಷ್ಟರ ಮಟ್ಟಿಗೆ ವೈವಾಹಿಕ ವಿಷಯದಗಲ್ಲಿ ತಡೆಯಾಗುತ್ತಿರುತ್ತದೆ. ಹಾಗಂಥ ತಲೆ ಮೇಲೆ ಕೈ ಹೊತ್ತು ಕೂರಬೇಕಿಲ್ಲ. ಶೀಘ್ರ ವಿವಾಹವಾಗಲು ಕೂಡಾ ಜ್ಯೋತಿಷ್ಯದಲ್ಲಿ ಕೆಲ ಕ್ರಮಗಳನ್ನು ಹೇಳಲಾಗಿದೆ. ಅವುಗಳಲ್ಲೊಂದು ಈ ಮ್ಯಾಜಿಕ್ ಮಂತ್ರಗಳು. 

ಮಂತ್ರಗಳಿಗೆ ಜ್ಯೋತಿಷ್ಯದಲ್ಲಿ ವಿಶೇಷ ಸ್ಥಾನಮಾನವಿದೆ. ಹಲವು ಬಾರಿ ಮಂತ್ರಗಳು ತಮ್ಮ ಮಾಂತ್ರಿಕ ಶಕ್ತಿಯನ್ನು ಸಾಬೀತು ಪಡಿಸಿವೆ. ಈ ಕ್ರಮಗಳಿಂದ ಜಾತಕದ ವಿವಾಹ ದೋಷಗಳನ್ನು ಬಹಳ ಮಟ್ಟಿಗೆ ಕಡಿಮೆ ಮಾಡಬಹುದು. ಆರಂಭಿಕ ಮದುವೆಗೆ ಅನೇಕ ಜ್ಯೋತಿಷ್ಯ ಪರಿಹಾರಗಳು ಇದ್ದರೂ, ಈ ಮಂತ್ರಗಳಿಗೆ ವಿಶೇಷ ಪ್ರಾಮುಖ್ಯತೆ ಇದೆ. ತಮ್ಮ ಜಾತಕದಲ್ಲಿ ಅಂಥ ದೋಷಗಳನ್ನು ಹೊಂದಿರುವವರು ಅಥವಾ ಅವರ ವಿವಾಹವು ಸುಲಭವಾಗಿ ಸ್ಥಿರವಾಗದಿರುವವರು ಈ ಮಂತ್ರಗಳನ್ನು ಪಠಿಸಬೇಕು. ಈ ಮಂತ್ರಗಳ ಬಗ್ಗೆ ತಿಳಿಯೋಣ.

Tap to resize

Latest Videos

ಪುರುಷರಿಗೆ ಆರಂಭಿಕ ಮದುವೆಗೆ ಮಂತ್ರ

ಪತ್ನೀಂ ಮನೋರಮಾ ದೇಹೀ ಮನೋವೃತಾನುಸಾರಿಣಿಮ್
ತಾರಿಣೀ ದುರ್ಗಸಂಸರ್ಸಾಗರಸ್ಯ ಕುಲೋದ್ಭವಮ್ ।

ಮದುವೆ ವಿಳಂಬವಾಗುವ ಪುರುಷರು ಈ ಮಂತ್ರವನ್ನು ಪಠಿಸಬೇಕು. ಈ ಮಂತ್ರವು ದುರ್ಗಾ ಸಪ್ತಶತಿಯದ್ದು ಪುರುಷರು ಪ್ರತಿದಿನ ಸ್ನಾನದ ನಂತರ 11 ಬಾರಿ ಈ ಮಂತ್ರವನ್ನು ಜಪಿಸಬೇಕು. ಇದು ಅವರ ಆರಂಭಿಕ ವಿವಾಹದ ಬಯಕೆಯನ್ನು ಪೂರೈಸುತ್ತದೆ.

ಯಾವುದೇ ಅಡೆತಡೆ ಇಲ್ಲದೇ ಮದುವೆ ಆಗಬೇಕು ಅಂದ್ರೆ ಶುಕ್ರವಾರ ಹೀಗ್ ಮಾಡಿ!

ಓಂ ಗಣಪತಾಯೈ ನಮಃ

ಪ್ರತಿ ಬುಧವಾರದಂದು ಹಿತ್ತಾಳೆಯಿಂದ ಮಾಡಿದ ಗಣೇಶನ ಮೂರ್ತಿಗೆ ಪಂಚಾಮೃತ ಸ್ನಾನ ಮಾಡಿಸಿ ಪಂಚೋಪಚಾರ ವಿಧಾನದಿಂದ ಪೂಜಿಸಬೇಕು. ಇದರ ನಂತರ ಈ ಮಂತ್ರವನ್ನು 21 ಬಾರಿ ಜಪಿಸಿ. ಮಂತ್ರವನ್ನು ಪಠಿಸಿದ ನಂತರ, ಈ ಪಂಚಾಮೃತವನ್ನು ಅಶ್ವತ್ಥ ಮರಕ್ಕೆ ಅರ್ಪಿಸಿ. ಈ ಕಾರಣದಿಂದಾಗಿ, ಶೀಘ್ರದಲ್ಲೇ ಮದುವೆಯಾಗುವ ಅವಕಾಶಗಳು ಸೃಷ್ಟಿಯಾಗುತ್ತವೆ.

ಓಂ ಸೃಷ್ಟಿಕರ್ತ ಮಮ ವಿವಾಹ ಕುರು ಕುರು ಸ್ವಾಹಾ

ಈ ಮಂತ್ರವನ್ನು ಪ್ರತಿ ಮಂಗಳವಾರ ಪಠಿಸಬೇಕು. ಮನೆಯಲ್ಲಿ ಲಕ್ಷ್ಮಿ-ನಾರಾಯಣನ ವಿಗ್ರಹವನ್ನು ಸ್ಥಾಪಿಸಿ. ಪಂಚೋಪಚಾರ ವಿಧಾನದಿಂದ ಪೂಜೆ ಮಾಡಿದ ನಂತರ ಈ ಮಂತ್ರವನ್ನು 21 ಬಾರಿ ಜಪಿಸಿ.

ಹುಡುಗಿಯರಿಗೆ ಆರಂಭಿಕ ಮದುವೆಗೆ ಮಂತ್ರ

ಓಂ ಶ್ರೀ ವರ ಪ್ರದಾಯ ಶ್ರೀ ನಮಃ

ಪ್ರತಿ ಸೋಮವಾರದಂದು ಈ ಮಂತ್ರವನ್ನು ಜಪಿಸಬೇಕು. ಸೋಮವಾರ, ಶಿವ ದೇವಾಲಯದಲ್ಲಿ ಐದು ತೆಂಗಿನಕಾಯಿಗಳನ್ನು ಅರ್ಪಿಸಿದ ನಂತರ, ಜಪಮಾಲೆಯನ್ನು 5 ಬಾರಿ ತಿರುಗಿಸಿದ ನಂತರ ಈ ಮಂತ್ರವನ್ನು ಜಪಿಸಿ. ಈ ಮಂತ್ರ ವಿಶೇಷವಾಗಿ ಹುಡುಗಿಯರಿಗೆ.

Surya Grahan 2023: ಈ ಏಳು ರಾಶಿಗಳಿಗೆ ಸೂರ್ಯ ಗ್ರಹಣದ ಕರಿನೆರಳು

ಕ್ಲೀಂ ಕೃಷ್ಣ ಗೋವಿಂದಾಯ ಗೋಪಿಜನವಲ್ಲಭಯ ಸ್ವಾಹಾ

 ಈ ಮಂತ್ರವನ್ನು 108 ಬಾರಿ ಜಪಿಸುವುದರಿಂದ ಅವಿವಾಹಿತ ಹೆಣ್ಣುಮಕ್ಕಳ ವಿವಾಹವು ಶೀಘ್ರವಾಗಿ ಪೂರ್ಣಗೊಳ್ಳುತ್ತದೆ. ಈ ಮಂತ್ರವನ್ನು ಪಠಿಸುವ ಮೂಲಕ ಶ್ರೀಕೃಷ್ಣನ ಅನುಗ್ರಹವನ್ನು ಪಡೆಯುತ್ತಾರೆ.

ಓಂ ಗ್ರಾಂ ಗ್ರೀಂ ಗ್ರಾಂ ಸಃ ಗುರುವೇ ನಮಃ

ಈ ಮಂತ್ರವನ್ನು ಪ್ರತಿ ಗುರುವಾರದಂದು ಜಪಿಸಬೇಕು. ಈ ಮಂತ್ರವನ್ನು ಉಚ್ಚರಿಸುವಾಗ, ಮಾಲೆಯನ್ನು ಐದು ಬಾರಿ ತಿರುಗಿಸಬೇಕು. ಇದರಿಂದ ಅವಿವಾಹಿತರ ಮದುವೆ ಬೇಗ ನಡೆಯುತ್ತದೆ.

click me!