ಬೆಂಗಳೂರು: ಐತಿಹಾಸಿಕ ಕರಗ ಶಕ್ತೋತ್ಸವಕ್ಕೆ ಕ್ಷಣಗಣನೆ, ದೇವರ ದರ್ಶನಕ್ಕೆ ಜನಸಾಗರ..!

By Girish GoudarFirst Published Apr 6, 2023, 10:18 PM IST
Highlights

ಮಲ್ಲಿಗೆಯಿಂದ ಅಲಂಕೃತಗೊಂಡ ಕರಗ ನೋಡಲು ಭಕ್ತರ ಆಗಮಿಸುತ್ತಿದ್ದಾರೆ. ಕರಗ ವೀಕ್ಷಣೆಗೆ ತಿಗಳರಪೇಟೆ, ಮಾಲೂರು, ಹೊಸಕೋಟೆ, ನೆಲಮಂಗಲ, ತುಮಕೂರು, ದೊಡ್ಡಬಳ್ಳಾಪುರ, ಚಿಕ್ಕಬಳ್ಳಾಪುರ, ಕೋಲಾರ, ತಮಿಳುನಾಡಿನ ಹೊಸೂರು, ಕೃಷ್ಣಗಿರಿ, ಧರ್ಮಪುರಿ, ಸೇಲಂ, ಸುಳಗಿರಿ, ಚಪ್ಪಡಿ, ಡೆಂಕಣಿಕೋಟೆ, ಗುಮ್ಮಳಾಪುರ, ಈರೋಡ್, ಸೇಲಂ ಮುಂತಾದ ಕಡೆಗಳಿಂದ ಭಕ್ತರು ಬಂದಿದ್ದಾರೆ. 

ಬೆಂಗಳೂರು(ಏ.06):  ಬೆಂಗಳೂರಿನ ಐತಿಹಾಸಿಕ ಕರಗ ಶಕ್ತೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದೆ. 12.30ಕ್ಕೆ ಕರಗೋತ್ಸವಕ್ಕೆ ಚಾಲನೆ ಸಿಗಲಿದೆ. ಕರಗೋತ್ಸವದಲ್ಲಿ ರಾಜ್ಯಸಭಾ ಸದಸ್ಯ ವಿರೇಂದ್ರ ಹೆಗೆಡೆ ಅವರು ಭಾಗಿಯಾಗಲಿದ್ದಾರೆ. 12.30 ಕ್ಕೆ ಧರ್ಮರಾಯಸ್ವಾಮಿ ದೇವಾಲಯಕ್ಕೆ ವಿರೇಂದ್ರ ಹೆಗೆಡೆ ಆಗಮಿಸಲಿದ್ದಾರೆ. ಐತಿಹಾಸಿಕ ಕರಗ ಶಕ್ತೋತ್ಸವ ಇರುವ ಹಿನ್ನಲೆಯಲ್ಲಿ ಧರ್ಮರಾಯಸ್ವಾಮಿ ದೇವಸ್ಥಾನಕ್ಕೆ ಭಕ್ತರ ದಂಡೇ ಹರಿದು ಬರುತ್ತಿದೆ. ದ್ರೌಪದಮ್ಮನ ದರ್ಶನಕ್ಕೆ ಜನಸಾಗರವೇ ಆಗಮಿಸುತ್ತಿದೆ.  

ಧರ್ಮರಾಯಸ್ವಾಮಿ ದೇಗುಲಕ್ಕೆ ಶಾಸಕ ಉದಯ ಗರುಡಾಚಾರ್ ಅವರು ಪತ್ನಿ ಜೊತೆ ಆಗಮಿಸಿ ದೇವರ ದರ್ಶನವನ್ನ ಪಡೆದಿದ್ದಾರೆ. ಇದೇ ವೇಳೆ ಮಾತನಾಡಿದ ಶಾಸಕ ಉದಯ ಗರುಡಾಚಾರ್, ದೇವರ ಬಳಿ ನಾಡಿನ ಸಮಸ್ತ ಜನರಿಗೂ ಒಳ್ಳೆಯದಾಗಲಿ ಅಂತಾ ಕೇಳಿಕೊಂಡಿದ್ದೇನೆ. ಈ ಬಾರಿಯೂ ದರ್ಗಾಕ್ಕೆ ಕರಗ ಭೇಟಿ ನೀಡಲಿದೆ.  ಈಗಾಗಲೇ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಎಂದಿನಂತೆ ಎಲ್ಲ ಪೂಜಾ ಕೈಕಾರ್ಯಗಳು ನಡೆಯುತ್ತಿವೆ ಅಂತ ಮಾಹಿತಿ ನೀಡಿದ್ದಾರೆ. 

Latest Videos

Bengaluru: ವಿಜೃಂಭಣೆಯ ಐತಿಹಾಸಿಕ ಧರ್ಮರಾಯ ಹಸಿ ಕರಗ ಮಹೋತ್ಸವಕ್ಕೆ ಸಕಲ ಸಿದ್ಧತೆ

ಮಸ್ತಾನ್ ಸಾಬ್ ದರ್ಗಾದ ಧರ್ಮ ಗುರುಗಳು ದೇಗುಲಕ್ಕೆ ಭೇಟಿ

ಕರಗಕ್ಕೆ ಆಹ್ವಾನ ನೀಡಲು ದರ್ಗಾದ ಧರ್ಮ ಗುರುಗಳು ಆಗಮಿಸಿದ್ದಾರೆ. ಸಹಬಾಳ್ವೆಯಿಂದ ಕರಗ ನಡೆಸಲಾಗ್ತಿದೆ . ನಮಗೆ ತುಂಬಾ ಸಂತೋಷವಾಗುತ್ತಿದೆ. ದರ್ಗಾಗೆ ಕರಗ ಬರಲು ಸಕಲ ಸಿದ್ಧತೆಯನ್ನ ಮಾಡಲಾಗಿದೆ . ಎಲ್ಲರೂ ಸಾಮರಸ್ಯದಿಂದ ಕರಗ ಆಚರಣೆ ಮಾಡಲಿದ್ದೇವೆ. ಈಗಾಗಲೇ ಕರಗದ ಜೊತೆ ಬಂದವರಿಗೆ ಸ್ವೀಟ್ ಹಂಚಲು ಎಲ್ಲ ಸಿದ್ದತೆಗಳನ್ನ ಮಾಡಿಕೊಂಡಿದ್ದೇವೆ ಅಂತ ತಿಳಿಸಿದ್ದಾರೆ. 

ಧರ್ಮರಾಯಸ್ವಾಮಿ ದೇವಸ್ಥಾನಕ್ಕೆ ಎಂಎಲ್ಸಿ ನೆ.ಲ.ನರೇಂದ್ರ ಬಾಬು ಅವರು ಆಗಮಿಸಿದ್ದಾರೆ. ಈ ವೇಳೆ ಮಾತನಾಡಿದ ಅವರು, ನಾನು ಚಿಕ್ಕವಯಸ್ಸಿನಿಂದ ಕರಗ ನೋಡಲು ಆಗಮಿಸುತ್ತಿದ್ದೇನೆ. ನಾವು ಕೊಳ್ಳೇಗಾಲದಲ್ಲಿ ಇದ್ದಾಗ ನಮ್ಮ ಅಜ್ಜಿಯ ಜೊತೆ ಕರಗ ನೋಡಲು ಬರ್ತಿದ್ದೆ, ಬೆಂಗಳೂರಿಗೆ ಬಂದ ಮೇಲೆ ತಪ್ಪದೆ ಪ್ರತಿ ವರ್ಷ ಬರುತ್ತೇನೆ ಅಮತ ತಿಳಿಸಿದ್ದಾರೆ. 

ಮಲ್ಲಿಗೆಯಿಂದ ಅಲಂಕೃತಗೊಂಡ ಕರಗ ನೋಡಲು ಭಕ್ತರ ಆಗಮಿಸುತ್ತಿದ್ದಾರೆ. ಕರಗ ವೀಕ್ಷಣೆಗೆ ತಿಗಳರಪೇಟೆ, ಮಾಲೂರು, ಹೊಸಕೋಟೆ, ನೆಲಮಂಗಲ, ತುಮಕೂರು, ದೊಡ್ಡಬಳ್ಳಾಪುರ, ಚಿಕ್ಕಬಳ್ಳಾಪುರ, ಕೋಲಾರ, ತಮಿಳುನಾಡಿನ ಹೊಸೂರು, ಕೃಷ್ಣಗಿರಿ, ಧರ್ಮಪುರಿ, ಸೇಲಂ, ಸುಳಗಿರಿ, ಚಪ್ಪಡಿ, ಡೆಂಕಣಿಕೋಟೆ, ಗುಮ್ಮಳಾಪುರ, ಈರೋಡ್, ಸೇಲಂ ಮುಂತಾದ ಕಡೆಗಳಿಂದ ಭಕ್ತರು ಬಂದಿದ್ದಾರೆ. 

click me!