Sun transits in Pisces 2022: ಸೂರ್ಯ ಗೋಚಾರದಿಂದ ವೃಷಭ, ಮಿಥುನ ರಾಶಿಗೆ ಲಾಟ್ರಿ, ಉಳಿದ ರಾಶಿಗಳ ಕತೆಯೇನು?

By Suvarna News  |  First Published Mar 9, 2022, 3:11 PM IST

ಮಾರ್ಚ್ 15ರಂದು ಎಲ್ಲ ಗ್ರಹಗಳ ಅಧಿಪತಿ ಸೂರ್ಯನು ಮೀನ ರಾಶಿಗೆ ಚಲಿಸುತ್ತಿದ್ದಾನೆ. ಏಪ್ರಿಲ್ 14ರವರೆಗೆ ಅಲ್ಲಿಯೇ ಇರಲಿದ್ದಾನೆ. ಇದರಂದು ಯಾವ ರಾಶಿಗೆ ಅದೃಷ್ಟ ಒಲಿಯುವುದು, ಯಾವ ರಾಶಿಗೆ ಎಚ್ಚರಿಕೆ ಅಗತ್ಯ ತಿಳಿಯಿರಿ. 


ಸೂರ್ಯನ ಮೀನ(Pisces) ಸಂಕ್ರಮಣವು ಮಾರ್ಚ್ 15ರಂದು ಆಗಲಿದೆ. ಅಂದರೆ ಸೂರ್ಯ(Sun God)ನು ಕುಂಭದಿಂದ ಮೀನ ರಾಶಿಗೆ ಮಾ.15ರಂದು ಅರ್ಧ ರಾತ್ರಿ 12.16ಕ್ಕೆ  ಪಥ ಸಂಚಲನ ಮಾಡುತ್ತಿದ್ದಾನೆ. ಏಪ್ರಿಲ್ 14ರ ಬೆಳಗ್ಗೆ 8.43ರವರೆಗೂ ಅಲ್ಲಿಯೇ ಇರಲಿದ್ದಾನೆ. ಈ ಸೂರ್ಯ ಗೋಚಾರ(Sun transit)ದಿಂದ ಎಲ್ಲ ರಾಶಿಗಳೂ ಸಾಕಷ್ಟು ಬದಲಾವಣೆಗಳನ್ನು ಕಾಣುತ್ತವೆ. ಯಾವೆಲ್ಲ ರಾಶಿಗೆ ಸೂರ್ಯನ ಈ ಪಥ ಸಂಚಲನದ ಲಾಭವಾಗಲಿದೆ, ಯಾವಕ್ಕೆ ನಷ್ಟವಾಗಲಿದೆ, ದುಷ್ಟ ಪರಿಣಾಮಗಳನ್ನು ತಡೆಯಲು ತೆಗೆದುಕೊಳ್ಳಬೇಕಾದ ಎಚ್ಚರಿಕೆಗಳೇನು ಎಲ್ಲವನ್ನೂ ಇಲ್ಲಿ ವಿವರಿಸಲಾಗಿದೆ. 

ಮೇಷ(Aries)
ಸೂರ್ಯನು ಮೇಷದ 12ನೇ ಮನೆ ಪ್ರವೇಶಿಸುತ್ತಾನೆ. ಇದರಿಂದ ಲೈಂಗಿಕ ಬಯಕೆಗಳು(sexual happiness) ಈಡೇರುತ್ತವೆ. ಸೆಕ್ಸ್ ಲೈಫ್ ತುಂಬಾ ಚೆನ್ನಾಗಿರುತ್ತದೆ. ಕುಟುಂಬ ಜೀವನದಲ್ಲಿ ಸುಖ ಶಾಂತಿ ತುಂಬಲಿದ್ದು, ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚಲಿದೆ. ಆದರೆ, ಜೊತೆಗೆಯೇ ನಿಮ್ಮ ಕೆಲಸಗಳ ಮೇಲೆ ಸಾಕಷ್ಟು ಹಣ ಖರ್ಚು ಮಾಡಬೇಕಾಗಿರುತ್ತದೆ. ಧಾರ್ಮಿಕ ಕಾರ್ಯಗಳಲ್ಲಿ ಹೆಚ್ಚು ತೊಡಗಿಸಿಕೊಳ್ಳುವುದರಿಂದ ನೀವು ಸೂರ್ಯ ಗೋಚಾರದ ಶುಭ ಫಲ ಪಡೆಯಬಹುದು. 

Tap to resize

Latest Videos

ವೃಷಭ(Taurus)
ಸೂರ್ಯನು 11ನೇ ಮನೆ ಪ್ರವೇಶಿಸುತ್ತಾನೆ. ನಿಮ್ಮ ಆದಾಯ(income) ಇದ್ದಕ್ಕಿದ್ದಂತೆ ಹೆಚ್ಚಲಿದೆ. ಇದರೊಂದಿಗೆ ನಿಮ್ಮ ಬಹುತೇಕ ಬಯಕೆಗಳು ಈಡೇರಲಿವೆ. ಎಲ್ಲದರಲ್ಲೂ ಸಕಾರಾತ್ಮಕ ಫಲಿತಾಂಶ ಪಡೆಯುವಿರಿ. ಈ ಗೋಚಾರದ ಇನ್ನಷ್ಟು ಲಾಭ ಪಡೆಯಲು ಭಾನುವಾರ ರಾತ್ರಿ ಮಲಗುವಾಗ ತಲೆಯ ಬಳಿ ಎರಡು ಮೂಲಂಗಿ ಇಟ್ಟುಕೊಳ್ಳಿ. ಬೆಳಗ್ಗೆ ಎದ್ದು ಅದನ್ನು ದೇವಾಲಯದಲ್ಲಿ ದಾನ ಮಾಡಿ. 

ಮಿಥುನ(Gemini)
ಸೂರ್ಯ ನಿಮ್ಮ ರಾಶಿಯ 10ನೇ ಪ್ರವೇಶಿಸುವುದರಿಂದ ನಿಮ್ಮ ಆರೋಗ್ಯ(health) ಹಾಗೂ ಹಣಕಾಸಿನ ಪರಿಸ್ಥಿತಿ(financial condition) ಎರಡೂ ಬಹಳ ಚೆನ್ನಾಗಿರುತ್ತದೆ. ವಾಹನ ಯೋಗ, ಸೇವಕರ ಯೋಗವಿದೆ. ನಿಮ್ಮಲ್ಲಿ ಕೊಂಚ ಅನುಮಾನಗಳು ಹೆಚ್ಚಬಹುದು. ಈ ಸಂದರ್ಭದಲ್ಲಿ ಹೆಚ್ಚು ಲಾಭ ಪಡೆಯಲು ಮುಂದಿನ 30 ದಿನಗಳ ಕಾಲ ಕಪ್ಪು ಹಾಗೂ ನೀಲಿ ಬಣ್ಣದ ಉಡುಗೆಗಳನ್ನು ದೂರವಿರಿಸಿ. 

Thursday Remedies: ಗುರುವಾರ ಅರಿಶಿನ ಬಳಸಿ ಈ ಐದು ಕೆಲಸ ಮಾಡಿದ್ರೆ ಒಲಿಯುತ್ತೆ ಅದೃಷ್ಟ

ಕಟಕ(Cancer)
ಸೂರ್ಯನ ಮೀನ ಗೋಚಾರದಿಂದ ನಿಮಗೆ ಅದೃಷ್ಟ(luck)ದ ಸಂಪೂರ್ಣ ಬೆಂಬಲ ದೊರೆಯಲಿದೆ. ನಿಮ್ಮ ಆರೋಗ್ಯವೂ ಚೆನ್ನಾಗಿರುತ್ತದೆ. ಆದರೆ, ಸಹೋದರರ ಸಹಕಾರ ಹೆಚ್ಚು ಸಿಗದೆ ಹೋಗುತ್ತದೆ. ಈ ಅಸುಭವನ್ನು ತಡೆಯಲು ಮನೆಯಲ್ಲಿ ಒಂದು ತಿಂಗಳ ಕಾಲ ಕಂಚಿನ ಪಾತ್ರೆಗಳನ್ನು(brass utensils) ಬಳಸಿ. ಮನೆಯಲ್ಲಿ ಕಂಚಿನ ಪಾತ್ರೆ ಇಲ್ಲವಾದರೆ ಯಾವುದಾದರೂ ಒಂದು ಕಂಚಿನ ಪಾತ್ರೆ ತಂದು ಬಳಸಿ. 

ಸಿಂಹ(Leo)
ಮೀನ ಸಂಕ್ರಮಣದ ಪರಿಣಾಮ ನಿಮಗೆ ಅಷ್ಟೇನು ಉತ್ತಮವಾಗಿಲ್ಲ. ಮುಂದಿನ 30 ದಿನಗಳ ಕಾಲ ನಿಮ್ಮ ಆರೋಗ್ಯದ ಕಡೆ ಹೆಚ್ಚಿನ ಗಮನ ವಹಿಸಿ. ನಿಮ್ಮ ಕಾರ್ಯಗಳನ್ನು ಮುಗಿಸಬೇಕೆಂದರೆ ಕೋಪವನ್ನು ಹತೋಟಿಯಲ್ಲಿಟ್ಟುಕೊಳ್ಳುವ ಜೊತೆಗೆ ತಾಳ್ಮೆ ವಹಿಸಬೇಕು. ಸೂರ್ಯನ ಕೃಪಾದೃಷ್ಟಿ ಪಡೆಯಲು ನಿಮ್ಮ ಸಹೋದರರು ಇಲ್ಲವೇ ಹಿರಿಯರಿಗೆ ಅವರ ಅಗತ್ಯ ಕಾಲದಲ್ಲಿ ನೆರವು ನೀಡಿ. 

ಕನ್ಯಾ(Virgo)
ಸೂರ್ಯನು ನಿಮ್ಮ ರಾಶಿಯ ಏಳನೇ ಮನೆಯಲ್ಲಿ ಸಾಗುತ್ತಾನೆ. ಏಳನೇ ಸ್ಥಾನವು ಸಂಗಾತಿ(spouse)ಗೆ ಸೇರಿದೆ. ಆದ್ದರಿಂದ, ಸೂರ್ಯನ ಈ ಸಂಕ್ರಮಣದಿಂದಾಗಿ, ನಿಮ್ಮ ಜೀವನ ಸಂಗಾತಿಯಿಂದ ನೀವು ಸಂಪೂರ್ಣ ಬೆಂಬಲವನ್ನು ಪಡೆಯುತ್ತೀರಿ. ಇದರೊಂದಿಗೆ, ನಿಮ್ಮ ಸಂಗಾತಿಯೂ ಪ್ರಗತಿ ಹೊಂದಲಿದ್ದಾರೆ. ಸೂರ್ಯನ ಮಂಗಳಕರ ಫಲಿತಾಂಶಗಳನ್ನು ಖಚಿತಪಡಿಸಿಕೊಳ್ಳಲು, ನಿಮ್ಮ ಆಹಾರದ ಒಂದು ಭಾಗವನ್ನು ಸ್ನೇಹಿತರು, ಸಹೋದ್ಯೋಗಿಗಳು ಸೇರಿದಂತೆ ಯಾರಿಗಾದರೂ ತಿನ್ನಿಸಿ. 

Putin Kundli: ಅಣ್ವಸ್ತ್ರ ಮಹಾಯುದ್ಧ ನಡೆಯುತ್ತಾ? ಪುಟಿನ್ ಜಾತಕ ಏನನ್ನುತ್ತೆ?

ತುಲಾ(Libra)
ಸೂರ್ಯನು ನಿಮ್ಮ ಆರನೇ ಮನೆಯಲ್ಲಿ ಸಾಗುತ್ತಾನೆ ಮತ್ತು ಆರನೇ ಮನೆಯು ಸ್ನೇಹಿತ(friend)ರಿಗೆ ಸೇರಿದೆ. ಆದ್ದರಿಂದ ಮುಂದಿನ ದಿನಗಳಲ್ಲಿ ನಿಮ್ಮ ಸ್ನೇಹಿತರ ಸಂಖ್ಯೆ ಹೆಚ್ಚಾಗಬಹುದು, ಆದರೆ ನಿಮ್ಮ ಶತ್ರುಗಳ(enemies) ಬಗ್ಗೆಯೂ ನೀವು ಜಾಗರೂಕರಾಗಿರಬೇಕು. ಅಲ್ಲದೆ, ಮಕ್ಕಳ ಕಡೆಗೆ ವಿನಮ್ರ ಸ್ವಭಾವ ತೋರಿದರೆ ಪ್ರಗತಿಯನ್ನು ಖಚಿತಪಡಿಸಿಕೊಳ್ಳಬಹುದು. ಸೂರ್ಯನ ಮಂಗಳಕರ ಫಲಿತಾಂಶಗಳನ್ನು ಪಡೆಯಲು, ನಾಯಿಗೆ ಆಹಾರ ಹಾಕಿ. 

ವೃಶ್ಚಿಕ(Scorpio)
ಸೂರ್ಯನ ಈ ಸಂಕ್ರಮಣದಿಂದ, ನೀವು ಎಲ್ಲೆಡೆ ಗೌರವವನ್ನು ಪಡೆಯುತ್ತೀರಿ. ನೀವು ಶಿಕ್ಷಣದ ಲಾಭವನ್ನು ಪಡೆಯುತ್ತೀರಿ ಮತ್ತು ಮಕ್ಕಳ ಭಾಗ್ಯವಿರಲಿದೆ. ನಿಮ್ಮ ವೈವಾಹಿಕ ಸಂಬಂಧದಲ್ಲಿ ಮಧುರತೆ ಇರುತ್ತದೆ.  ಕೋತಿಗೆ ಬೆಲ್ಲ(jaggery)ವನ್ನು ತಿನ್ನಿಸುವುದರಿಂದ ಹೆಚ್ಚಿನ ಒಳಿತಾಗಲಿದೆ. 

ಧನು(Sagittarius)
ಸೂರ್ಯನ ಈ ಸಂಚಾರದಿಂದ ನೀವು ನಿರಂತರವಾಗಿ ಸ್ಥಾನ, ಭೂಮಿ, ಕಟ್ಟಡ, ವಾಹನ ಮತ್ತು ಹಣವನ್ನು ಪಡೆಯುತ್ತೀರಿ. ಇದರೊಂದಿಗೆ ನಿಮ್ಮ ಮಕ್ಕಳು ಕೂಡಾ ಆರ್ಥಿಕವಾಗಿ ಪ್ರಯೋಜನ ಪಡೆಯುತ್ತಾರೆ. ಇದಲ್ಲದೆ, ನಿಮ್ಮ ಆರೋಗ್ಯವು ಉತ್ತಮವಾಗಿರುತ್ತದೆ ಮತ್ತು ಕಾರ್ಯಗಳನ್ನು ಹೆಚ್ಚು ಬುದ್ಧಿವಂತಿಕೆಯಿಂದ ಪೂರ್ಣಗೊಳಿಸಲು ಸಾಧ್ಯವಾಗುತ್ತದೆ. ಬಡಬಗ್ಗರ ಹಸಿವು ನೀಗಿಸಿ. 

Astrology 2022: ಆರೋಗ್ಯ ಚೆನ್ನಾಗಿರ್ಬೇಕು ಅಂದ್ರೆ ಹೀಗೆ ನಿಮ್ಮ ಗ್ರಹಗಳನ್ನು ಬಲಪಡಿಸಿಕೊಳ್ಳಿ..

ಮಕರ(Capricorn)
ಸೂರ್ಯ ಗೋಚಾರದಿಂದ, ನಿಮ್ಮ ಸಹೋದರ ಸಹೋದರಿಯರ ಬೆಂಬಲವನ್ನು ಪಡೆಯಲು ನೀವು ಹೆಚ್ಚು ಶ್ರಮಿಸಬೇಕಾಗುತ್ತದೆ. ಅಂದಹಾಗೆ, ನಿಮ್ಮ ಕೆಲಸಕ್ಕಾಗಿ ನೀವು ಇತರರ ಮೇಲೆ ಅವಲಂಬಿತರಾಗುವುದಿಲ್ಲ ಮತ್ತು ನಿಮ್ಮ ಸ್ವಂತ ಶ್ರಮದ ಬಲದಿಂದ ಹಣವನ್ನು ಗಳಿಸುವಿರಿ. ಅದೃಷ್ಟ ಕೂಡ ನಿಮ್ಮ ಶ್ರಮವನ್ನು ಬೆಂಬಲಿಸುತ್ತದೆ. ದೇವಾಲಯಕ್ಕೆ ಭೇಟಿ ನೀಡಿ ಮತ್ತು ನಿಮ್ಮ ಕೈಲಾಗುವ ಸೇವಾ ಕಾರ್ಯಗಳನ್ನು ಮಾಡಿ.

ಕುಂಭ(Aquarius)
ಸೂರ್ಯನ ಈ ಸಂಕ್ರಮಣದಿಂದ ನಿಮ್ಮ ಶ್ರಮಕ್ಕೆ ತಕ್ಕಷ್ಟು ಹಣ ಸಿಗುತ್ತದೆ. ಅಲ್ಲದೆ, ನಿಮ್ಮ ಸಾಮರ್ಥ್ಯವು ನಿಮ್ಮ ಕೆಲಸವನ್ನು ಯಶಸ್ವಿಯಾಗಲು ಸಹಾಯ ಮಾಡುತ್ತದೆ. ಆದ್ದರಿಂದ, ಸೂರ್ಯ ದೇವರ ಮಂಗಳಕರ ಆಶೀರ್ವಾದ ಪಡೆಯಲು ದೇವಾಲಯಕ್ಕೆ ಬಾದಾಮಿಯನ್ನು ದಾನ ಮಾಡಿ. 

ಮೀನ(Pisces)
ಸೂರ್ಯನ ಸಂಚಾರದಿಂದ ನೀವು ಎಲ್ಲ ರೀತಿಯ ಸಂತೋಷವನ್ನು ಪಡೆಯುತ್ತೀರಿ. ನಿಮ್ಮ ಆರ್ಥಿಕ ಸ್ಥಿತಿ ಬಲವಾಗಿರುತ್ತದೆ. ನಿಮ್ಮ ಬುದ್ಧಿವಂತಿಕೆಯಿಂದ ಪರಿಸ್ಥಿತಿಯನ್ನು ಇನ್ನಷ್ಟು ಉತ್ತಮಗೊಳಿಸಲು ನಿಮಗೆ ಸಾಧ್ಯವಾಗುತ್ತದೆ. ಈ ಸಮಯದಲ್ಲಿ ನೀವು ದೈಹಿಕವಾಗಿ ಸದೃಢರಾಗಿರುತ್ತೀರಿ ಮತ್ತು ವ್ಯಾಪಾರ ಸಂಬಂಧಿತ ಪ್ರವಾಸಗಳಲ್ಲಿ ಧನಲಾಭ ಪಡೆಯುವಿರಿ. ಬೆಳಿಗ್ಗೆ ಸ್ನಾನದ ಮಾಡಿ, ಸೂರ್ಯ ದೇವರಿಗೆ ನೀರನ್ನು ಅರ್ಪಿಸಿ.

click me!