ಗುರುವಾರವು ಮಹಾವಿಷ್ಣುವಿನ ದಿನ. ವಿಷ್ಣುವಿಗೆ ಹಳದಿ ಬಣ್ಣವಿಷ್ಟ. ಇಂದು ಅರಿಶಿನ ಬಳಸಿ ಮಾಡುವ ಈ ಐದು ಕೆಲಸಗಳಿಂದ ನಿಮ್ಮ ಹಣೆಬರಹವನ್ನೇ ಬದಲಿಸಿಕೊಳ್ಳಬಹುದು.
ಹಿಂದೂ ಧರ್ಮದಲ್ಲಿ ಪ್ರತಿ ದಿನವೂ ಒಂದೊಂದು ದೇವರಿಗೆ ವಿಶೇಷವಾಗಿದೆ. ಅಂತೆಯೇ ಗುರುವಾರ ವಿಷ್ಣುವಿಗೆ ವಿಶೇಷವಾದ ದಿನ. ಗುರು ಗ್ರಹಕ್ಕೆ ಸಂಬಂಧಿಸಿದ ದಿನ. ಇಂದು ವಿಷ್ಣು(Lord Vishnu)ವಿಗೆ ಇಷ್ಟವಾದ ನೈವೇದ್ಯಗಳನ್ನು ಮಾಡಿ ಪೂಜಿಸಲಾಗುತ್ತದೆ. ವಿಷ್ಣುವಿಗೆ ಹಳದಿ(yellow) ಬಣ್ಣದ ಮೇಲೆ ಪ್ರೀತಿ. ಅದರಲ್ಲೂ ಅರಿಶಿನ ಆತನ ಪ್ರಿಯ ವಸ್ತುಗಳಲ್ಲೊಂದು. ಗುರುವಾರ ಅರಿಶಿನವನ್ನು ವಿಷ್ಣುವಿಗೆ ಹಚ್ಚಿ, ಉಪವಾಸ ಆಚರಿಸುವುದರಿಂದ ಭಕ್ತರ ಸಂಕಟಗಳು ವಿಮೋಚನವಾಗುತ್ತವೆ. ಇದೇ ಅಲ್ಲದೆ ಗುರುವಾರ ಅರಿಶಿನ ಬಳಸಿ ಮಾಡುವ ಈ ಕಾರ್ಯಗಳಿಂದ ನೀವು ವಿಷ್ಣುವಿನ ಆಶೀರ್ವಾದ ಫಲ ಪಡೆಯಬಹುದು.
ನೀವು ಗುರುವಾರ ಏನೇನು ಮಾಡಬೇಕೆಂದು ಇಲ್ಲಿ ತಿಳಿಸಲಾಗಿದೆ.
ಕೆಲಸದ ಯಶಸ್ಸಿಗಾಗಿ
ಗುರುವಾರ ಯಾವುದೋ ಕೆಲಸ ನಿಮಿತ್ತ ನೀವು ಹೊರಗೆ ಹೊರಟಿದ್ದರೆ, ಅದು ಯಶಸ್ವಿಯಾಗಲು ಸ್ನಾನವಾದ ಕೂಡಲೇ ಗಣಪತಿಯ ಪೂಜೆ ಮಾಡಿ. ಬಳಿಕ ಅರಿಶಿನವನ್ನು ಗಣಪತಿಗೆ ಏರಿಸಿ, ನಂತರ ನೀವೂ ಕೂಡಾ ಅರಿಶಿನ ತಿಲಕವನ್ನು ಹಣೆಗಿಟ್ಟುಕೊಂಡು ಹೊರಡಿ. ಹೋದ ಕೆಲಸ ಆಗಿಯೇ ತೀರುತ್ತದೆ. ಇದಲ್ಲದೆ, ಅರಿಶಿನ ದಾರವನ್ನು ವಿಷ್ಣುವಿನ ಎದುರಿಟ್ಟು ಗುರುವಾರ ಪೂಜಿಸಿ, ಅದನ್ನು ಕೈಗೋ ಕತ್ತಿಗೋ ಕಟ್ಟಿಕೊಳ್ಳುವುದರಿಂದಲೂ ಕಾರ್ಯ ಸಿದ್ಧಿಯಾಗುತ್ತದೆ.
ವಾಸ್ತು ದೋಷ(Vastu defect) ನಿವಾರಣೆಗೆ
ಮನೆಯಲ್ಲಿ ವಾಸ್ತು ದೋಷವಿದ್ದರೆ, ಅದರಿಂದ ಆರೋಗ್ಯದ ಮೇಲೆ ಪರಿಣಾಮವಾಗುತ್ತಿರಬಹುದು. ಕೆಲಸ ಕಾರ್ಯಗಳಲ್ಲಿ ಅಡಚಣೆ ಹೆಚ್ಚಿರಬಹುದು. ಇಲ್ಲವೇ ಮನೆ ಸದಸ್ಯರ ನಡುವೆ ಒಗ್ಗಟ್ಟಿಲ್ಲದೆ ನೆಮ್ಮದಿಯೇ ಕಳೆದು ಹೋಗಬಹುದು. ಗುರುವಾರದ ದಿನ ಮನೆಯ ಮೂಲೆ ಮೂಲೆಗಳಿಗೆ ಅರಿಶಿನ ಹಾಕುವುದರಿಂದ ವಾಸ್ತು ದೋಷ ನಿವಾರಣೆ ಮಾಡಿಕೊಳ್ಳಬಹುದು. ಇಲ್ಲದಿದ್ದರೆ ಅರಿಶಿನದ ನೀರನ್ನು ಮನೆಯ ಎಲ್ಲ ಭಾಗಗಳಲ್ಲಿ ಸಿಂಪಡಿಸಬಹುದು. ಇದು ನಕಾರಾತ್ಮಕ ಶಕ್ತಿಗಳು ಮನೆಯಿಂದ ತೊಲಗುವಂತೆ ಮಾಡುತ್ತದೆ. ಜೊತೆಗೆ, ಮನೆಯೊಳಗೆ ನಕಾರಾತ್ಮಕತೆ ಬರದಂತೆ ತಡೆಯುತ್ತದೆ.
Putin Kundli: ಅಣ್ವಸ್ತ್ರ ಮಹಾಯುದ್ಧ ನಡೆಯುತ್ತಾ? ಪುಟಿನ್ ಜಾತಕ ಏನನ್ನುತ್ತೆ?
ಕೆಟ್ಟ ಕನಸು(bad dreams) ಬೀಳುತ್ತಿದ್ದರೆ
ಒಂದೆರಡು ಬಾರಿಯಲ್ಲ, ಪದೇ ಪದೆ ಬರೀ ಕೆಟ್ಟ ಕನಸುಗಳೇ ಬಿದ್ದು, ಮನಸ್ಸನ್ನು ಕಸಿವಿಸಿಗೊಳಿಸುತ್ತಿದ್ದರೆ, ರಾತ್ರಿಯ ಹೊತ್ತು ನಿದ್ದೆ ಮಾಡಲೇ ಭಯ ಉಂಟಾಗಿದ್ದರೆ, ಆಗ ಅರಿಶಿನ ಬೇರನ್ನು ಕಟ್ಟಿದ ಹಳದಿ ಇಲ್ಲವೇ ಕೇಸರಿ ಬಣ್ಣದ ದಾರವನ್ನು ಕೈಗೆ ಕಟ್ಟಿಕೊಳ್ಳಿ. ಕೈಗೆ ಕಟ್ಟುವುದು ಔದ್ಯೋಗಿಕ ಕಾರಣದಿಂದ ಸರಿ ಎನಿಸದಿದ್ದರೆ, ಮಲಗುವಾಗ ತಲೆಯ ಬಳಿ ಇದನ್ನು ಇಟ್ಟುಕೊಂಡು ಮಲಗಿ. ನಿಮ್ಮ ಕನಸುಗಳಲ್ಲಾಗುವ ಬದಲಾವಣೆಗಳನ್ನು ನೀವೇ ಸ್ವತಃ ನೋಡಿ.
ಹಣಕಾಸಿನ ಅಡಚಣೆ(financial constraints) ಹೆಚ್ಚಿದ್ದರೆ
ಹಣಕಾಸಿನ ಅಡಚಣೆ ಹೆಚ್ಚಿದ್ದು, ಯಾವೊಂದು ಕೆಲಸವೂ ಮುಂದೆ ಹೋಗದಿದ್ದರೆ, ಕೈಗೊಂಡ ಎಲ್ಲ ಯೋಜನೆಗಳಿಗೂ ದುಡ್ಡಿನ ಸಮಸ್ಯೆ ಎದುರಾಗುತ್ತಿದ್ದರೆ, ಗುರುವಾರ ವಿಷ್ಣು ಸಹಸ್ರನಾಮ ಜಪಿಸುತ್ತಾ, ಅರಿಶಿನದಲ್ಲಿ ಕಲಸಿದ ಅಕ್ಷತೆಯನ್ನು ದೇವರಿಗೆ ಹಾಕಿ. ಇದರಿಂದ ವಿಷ್ಣುವಿನ ಅನುಗ್ರಹ ದೊರೆಯುತ್ತದೆ. ಹಣಕಾಸಿನ ಸಮಸ್ಯೆಗಳು ತಹಬಂದಿಗೆ ಬರುತ್ತವೆ. ಗುರುವಾರ ಸ್ನಾನ ಮಾಡುವಾಗ ಸ್ನಾನದ ನೀರಿಗೆ ಸ್ವಲ್ಪ ಅರಿಶಿನ ಹಾಕಿಕೊಳ್ಳಿ.
Astrology 2022: ಆರೋಗ್ಯ ಚೆನ್ನಾಗಿರ್ಬೇಕು ಅಂದ್ರೆ ಹೀಗೆ ನಿಮ್ಮ ಗ್ರಹಗಳನ್ನು ಬಲಪಡಿಸಿಕೊಳ್ಳಿ..
ಹಣದ ಕೊರತೆ
ಯಾವುದಕ್ಕೂ ಹಣಕಾಸು ಸಾಲದೆ ಬಡತನ ಹೆಚ್ಚಿದ್ದರೆ, ಎಷ್ಟೇ ಪರಿಶ್ರಮ ಹಾಕಿದರೂ ಹಣಕಾಸು ಒಗ್ಗೂಡದಿದ್ದರೆ ಹೀಗೆ ಮಾಡಿ. 5 ಅರಿಶಿನ ಬೇರುಗಳನ್ನು ಬಟ್ಟೆಯೊಂದರಲ್ಲಿ ಗುರುವಾರದ ದಿನ ಕಟ್ಟಿ ಅದನ್ನು ನಿಮ್ಮ ಲಾಕರ್, ಕಬೋರ್ಡ್ ಸೇರಿದಂತೆ ಎಲ್ಲೆಲ್ಲ ನೀವು ಹಣವನ್ನಿಡುತ್ತೀರೋ ಅಲ್ಲಿ ಇರಿಸಿ. ಇದರಿಂದ ಬಡತನ ತಗ್ಗುತ್ತದೆ.
ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳ ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.