ಹೆಚ್ಚು divorceಗೊಳಗಾಗೋರು ಇದೇ ನಕ್ಷತ್ರದಲ್ಲಿ ಹುಟ್ಟಿದವರು!

By Suvarna NewsFirst Published Apr 20, 2022, 10:25 AM IST
Highlights

ರಾಶಿ, ನಕ್ಷತ್ರಕ್ಕೆ ಅನುಗುಣವಾಗಿ ಮನುಷ್ಯನ ಗುಣ, ಸ್ವಭಾವಗಳು ಬದಲಾಗುತ್ತವೆ ಎಂಬುವುದು ಎಲ್ಲರಿಗೂ ಗೊತ್ತು. ಏಳನೆಯ ನಕ್ಷತ್ರವಾದ ಪುನರ್ವಸು ನಕ್ಷತ್ರದಲ್ಲಿ ಜನಿಸಿದವರ ಕುಟುಂಬ, ವ್ಯಕ್ತಿತ್ವ, ಉದ್ಯೋಗ, ಆರೋಗ್ಯ...ಎಲ್ಲವೂ ಹೇಗಿರುತ್ತೆ? ಮುಂದೆ ಓದಿ.

27 ನಕ್ಷತ್ರಪುಂಜಗಳ ಸರಣಿಯಲ್ಲಿ ಏಳನೆಯದು ಪುನರ್ವಸು ನಕ್ಷತ್ರ. ಅದಿತಿಯನ್ನು ಅಧಿದೇವತೆಯನ್ನಾಗಿ ಹೊಂದಿರುವ ಈ ನಕ್ಷತ್ರ ಸಂಪತ್ತು (Prosperity), ಗೌರವ (Respect) ಮತ್ತು ಪ್ರತಿಷ್ಠೆ (Prestige) ಸಾಧಿಸುವವರದ್ದಾಗಿರುತ್ತದೆ. ಈ ನಕ್ಷತ್ರದ ಅಧಿಪತಿ ಗುರುವಾದ್ದರಿಂದ ಈ ನಕ್ಷತ್ರದವರನ್ನು ಮಂಗಳಕರವೆಂದೇ ಪರಿಗಣಿಸಲಾಗುತ್ತದೆ. ಒಟ್ಟಿನಲ್ಲಿ ಇಂಥ ಶ್ರೇಷ್ಠ ನಕ್ಷತ್ರದಲ್ಲಿ ಜನಿಸಿದವರ ಶಾರೀರಿಕ (Physic), ಬೌದ್ಧಿಕ (Intellectual) ಹಾಗೂ ದೈಹಿಕ ಬಲಗಳೇನು (Physical Strength)? ವ್ಯಕ್ತಿತ್ವ ಹೇಗಿರುತ್ತೆ? 

ಫಿಸಿಕ್ ಮತ್ತು ಪರ್ಸನಾಲಟಿ (Physic and Personality)
ಅದ್ಭುತ ಗುಣ ಹೊಂದಿರುತ್ತಾರೆ. ನೀಳ ಕಾಲಿನೊಂದಿಗೆ ಮುಖದ ಭಾಗದಲ್ಲೆಲ್ಲೋ ಒಂದು ವಿಶೇಷ ಮಾರ್ಕ್ ಹೊಂದಿರೋದು ಕಾಮನ್. ಕೆಂಪು ಬಣ್ಣದ ಈ ನಕ್ಷತ್ರದಲ್ಲಿ ಜನಿಸಿದವರ ಕಣ್ಣೂ ಕೆಂಪಗಿರುತ್ತದೆ. ಕೂದಲು ರೇಶ್ಮೆಯಂತಿರೋದು ಕಡಿಮೆ. ಸುಕ್ಕು ಸುಕ್ಕಾಗಿರುತ್ತದೆ. ಮೃದುಭಾಷಿಗಳು (Soft Spoken). ಎಲ್ಲರೊಂದಿಗೂ ಸ್ನೇಹ (Freindly) ಸಂಪಾದಿಸುತ್ತಾರೆ. ಒಟ್ಟಿನಲ್ಲಿ ಸದ್ಗುಣ ಸಂಪನ್ನ ಅಂತಾರಲ್ಲ ಹಾಗಿರುತ್ತೆ ಇವರ ಸ್ವಭಾವ. ಸದಾ ಸಂತೋಷಿಗಳು. ಆದರೆ, ಕೆಟ್ಟವರ ಸಹವಾಸದಿಂದ ಜೀವನವೇ ಹಾಳು ಮಾಡಿ ಕೊಳ್ಳುವ ಸಾಧ್ಯತೆಯೂ ಇರುತ್ತದೆ. ಇದರಿಂದ ತಮ್ಮ ಶಕ್ತಿಯನ್ನೇ ಕಳೆದುಕೊಂಡು ಬಿಡುತ್ತಾರೆ.

ಆಸ್ತಿಕರು. ಮತಾಂಧರಾಗಿರುವ ಎಷ್ಟೋ ಮಂದಿ ಇದೇ ನಕ್ಷತ್ರದಲ್ಲಿ ಹುಟ್ಟಿರುತ್ತಾರೆ. ಇಂಥದ್ದೇ ಅಭಿಪ್ರಾಯವಿರುತ್ತೆ ಇವರಿಗೆ ಎಂದು ಹೇಳುವುದು ಕಷ್ಟ. ಆದರೆ, ಪ್ರಾಚೀನ ಸಿದ್ಧಾಂತಗಳು, ಆಚರಣೆಗಳಲ್ಲಿ ಅಪಾರ ಗೌರವ ಇರುತ್ತದೆ.

ಸಾಮಾನ್ಯವಾಗಿ ಬ್ಯುಸಿನೆಸ್ (Business) ಮಾಡುವುದರಲ್ಲಿ ಈ ನಕ್ಷತ್ರದಲ್ಲಿ ಹುಟ್ಟಿದವರು ಎತ್ತಿದ ಕೈ. ವ್ಯಾಪರಸ್ಥರ ನಕ್ಷತ್ರವಿದು. ಹಾಗಾಗಿ ಸುಲಲಿತವಾಗಿ ವ್ಯಾಪಾರ ಮಾಡುತ್ತಾರೆ. ಬ್ಯುಸಿನಸೆನಲ್ಲಿ ರಿಸ್ಕ್ ತೆಗೆದುಕೊಳ್ಳುವುದು ಕಡಿಮೆ. ಮುಟ್ಟಿದ್ದೆಲ್ಲ ಚಿನ್ನವಾಗೋದೇ ಹೆಚ್ಚು. ಸೆಕ್ಯುರಿಟಿ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಾರೆ. ಮಾನಸಿಕ ಭದ್ರತೆಗೂ (Secured) ಒತ್ತು ಕೊಡುತ್ತಾರೆ. ಧಾರ್ಮಿಕರಾಗಿರುವುದರಿಂದ ಜೀವನದಲ್ಲಿ ಸನ್ಮಾರ್ಗದಲ್ಲಿ ನಡೆಯುತ್ತಾರೆ. ಆದರೆ, ಕೆಲವು ಗ್ರಹಗಳ ಪ್ರಭಾವದಿಂದ ಸೋಮಾರಿಗಳಾಗೋ ಸಾಧ್ಯತೆಗಳೂ ಇರುತ್ತದೆ. ಕೆಲವರಿಗೆ ಧೈರ್ಯ ಕಡಿಮೆ.

ಇದು ವೈಶಾಖ ಮಾಸ, ಪುಣ್ಯ ಪ್ರಾಪ್ತಿಗೆ ಮಾಡಿ ಈ ಕೆಲಸ!

ಅಕಸ್ಮಾತ್, ಈ ನಕ್ಷತ್ರಿಗರು ತಾವು ಹಿಡಿದ ಕಾರ್ಯದಲ್ಲಿ ಯಶಸ್ವಿಯಾಗದಿದ್ದರೆ ಅಪ್‌ಸೆಟ್ ಆಗುತ್ತಾರೆ. ಸೂಕ್ಷ್ಮ ಗುಣಗಳುಳ್ಳ ಇವರು ಭಾವನಾಜೀವಿಗಳು, ಉದಾರಿಗಳೂ ಹೌದು. ಗುರಿ ತಲುಪೋ ತನಕ ವಿಶ್ರಮಿಸೋದಿಲ್ಲ.  

ಫ್ಯಾಮಿಲಿ ಲೈಫ್ (Family Life)
ಎಲ್ಲ ಸರಿ, ಪುನರ್ವಸು ನಕ್ಷತ್ರದಲ್ಲ ಹುಟ್ಟಿದವರ ಸಂಸಾರ ಹೇಳುವಷ್ಟು ರಸಮಯವಾಗಿರೋಲ್ಲ. ಎರಡನೇ ಮದುವೆ, ವಿಚ್ಛೇದನ ಮಾಡಿಕೊಳ್ಳುವವರಲ್ಲಿ ಅನೇಕರು ಈ ನಕ್ಷತ್ರದಲ್ಲಿಯೇ ಹುಟ್ಟಿರುತ್ತಾರೆ. ಅದೆಷ್ಟೋ ಸುಂದರ, ಒಳ್ಳೆ ಗುಣಗಳುಳ್ಳ ಸಂಗಾತಿಗಳೂ ದಕ್ಕಿದರೂ ಇವರಿಗೆ ಏನೋ ಅಸಮಾಧಾನ. ಕೌಟುಂಬಿಕ ಜೀವನ ಹೇಳುವಷ್ಟು ಚೆನ್ನಾಗಿಲ್ಲದ ಕಾರಣ ಸ್ವಲ್ಪ ಮಾನಸಿಕ ನೆಮ್ಮದಿಯಿಂದಲೂ ದೂರವಾಗಿರುತ್ತಾರೆ. ಬ್ಯುಸಿನೆಸ್‌ನಲ್ಲಿ ಸಿದ್ಧಹಸ್ತರಾಗಿರೋದ್ರಿಂದ ದುಡ್ಡಿಗೇನೂ ಬರ ಇರೋಲ್ಲ. ಆದರೆ, ನೆಮ್ಮದಿಯಿಂದ ದೂರವಿರುತ್ತಾರೆ. 

ಹೆಲ್ತ್ ಲೈಫ್ (Health Life) ಹೇಗಿರುತ್ತೆ? 
ಏಳನೇ ನಕ್ಷತ್ರ ಪುಂಜದ ಆಡಳಿತ ಗ್ರಹ ಗುರು. ಗಂಟಲು, ಕಿವಿ, ಭುಜದ ಮೂಳೆಗಳು ಇದರ ಮೊದಲ, ಎರಡನೇ ಮತ್ತು ಮೂರನೇ ಭಾಗದ ಬಲಭಾಗದಲ್ಲಿ ಬರುತ್ತವೆ. ಈ ನಕ್ಷತ್ರದ ನಾಲ್ಕನೇ ಹಂತದಲ್ಲಿ ಶ್ವಾಸಕೋಶ, ಎದೆ, ಹೊಟ್ಟೆ, ಮೇದೋಜ್ಜೀರಕ ಗ್ರಂಥಿ, ಯಕೃತ್ತು ಮತ್ತು ಎದೆಗೂಡಿನ ಭಾಗಗಳಿವೆ. ಅಷ್ಟೇ ಅಲ್ಲ ಬೆರಳು ಮತ್ತು ಮೂಗಿನ ಹೊಳ್ಳೆಗಳನ್ನೂ ಈ ನಕ್ಷತ್ರದ ಭಾಗವೆಂದು ಪರಿಗಣಿಸಲಾಗುತ್ತದೆ. ಅಕಸ್ಮಾತ್ ಗ್ರಹಾಚಾರ ಸರಿ ಇಲ್ಲವೆಂದರೆ ಈ ಭಾಗದಲ್ಲಿ ಈ ನಕ್ಷತ್ರದಲ್ಲಿ ಹುಟ್ಟಿದವರು ಆರೋಗ್ಯ ಸಮಸ್ಯೆ ಎದುರಿಸುತ್ತಾರೆ. ದೇಹದ ಬೇರೆ ಭಾಗದಲ್ಲಿ ಯಾವುದೇ ಗಂಭೀರ ಸಮಸ್ಯೆಗಳು ಕಾಣಿಸಿಕೊಳ್ಳುವುದಿಲ್ಲ. ಸಣ್ಣ ಪುಟ್ಟ ರೋಗಗಳೇ ಇವರನ್ನು ಹೈರಾಣಾಗಿಸೋದು ಹೆಚ್ಚು. ಕ್ಷಯ, ಕಾಮಾಲೆ, ನ್ಯುಮೋನಿಯಾ, ಹೊಟ್ಟೆ ಮತ್ತು ಕಿವಿಗೆ ಸಂಬಂಧಿಸಿದ ಕಾಯಿಲೆಗಳು ಇವರನ್ನು ಕಾಡುವ ಸಾಧ್ಯತೆ ಹೆಚ್ಚು.

ಸಿಹಿ ಮಾತಿಂದಲೇ ನಿಮ್ಮ Secrets ಬಾಯಿ ಬಿಡಿಸೋ ಚಾಣಾಕ್ಯರು ಈ ರಾಶಿಯವರು!

ಶಿಕ್ಷಣ ಮತ್ತು ಉದ್ಯೋಗ
ಶೈಕ್ಷಣಿಕ ಕ್ಷೇತ್ರದಲ್ಲಿ ಯಶಸ್ಸು ಸಾಧಿಸುವ ಇವರು ನಟ, ವೈದ್ಯರಾಗಿಯೂ ಕಾರ್ಯ ನಿರ್ವಹಿಸುತ್ತಾರೆ. ಕಲಾ ಕ್ಷೇತ್ರದಲ್ಲಿಯೂ ನಿಪುಣರು. ಸಂಗೀತ, ನೃತ್ಯದಲ್ಲಿ ಪ್ರಾವೀಣ್ಯತೆ ಇರುತ್ತದೆ. ಒಳ್ಳೆ ಬರಹಗಾರರೂ ಆಗಿರುತ್ತಾರೆ. ವ್ಯಾಪಾರ, ವಾಣಿಜ್ಯ, ಜ್ಯೋತಿಷ್ಯ, ಸಾಹಿತ್ಯ ಕ್ಷೇತ್ರಗಳಲ್ಲಿ ತಮ್ಮದೇ ಛಾಪು ಮೂಡಿಸುತ್ತಾರೆ. ಟೂರಿಸಮ್ (Tourism), ಹೋಟೆಲ್ ಉದ್ಯಮಗಳು ಇವರ ಕೈ ಹಿಡಿಯುತ್ತದೆ. ಒಟ್ಟಿನಲ್ಲಿ ಈ ನಕ್ಷತ್ರದಲ್ಲಿ ಹುಟ್ಟಿದವರು ಯಶಸ್ಸು ಕಾಣೋದು ಗ್ಯಾರಂಟಿ. ಆದರೆ, ಬೇರೆ ಪಾಪ ಗ್ರಹಗಳ ವಕ್ರ ದೃಷ್ಟಿ ಬಿದ್ದರೆ ಮಾತ್ರ ಸಿಕ್ಕಾಪಟ್ಟೆ ಅನುಭವಿಸುತ್ತಾರೆ.

click me!