Energy Centers: ನಾವೇಕೆ ಪ್ರತಿ ದಿನ ದೇವಸ್ಥಾನಕ್ಕೆ ಭೇಟಿ ನೀಡಬೇಕು?

By Suvarna News  |  First Published Jan 26, 2022, 3:51 PM IST

ನಾವೇಕೆ ಪ್ರತಿ ದಿನ ದೇವಾಲಯಕ್ಕೆ ಹೋಗಬೇಕು? ಅದರಿಂದ ಲಾಭಗಳೇನು ನೋಡೋಣ.


ದೇವಸ್ಥಾನಗಳಿಗೆ ಸಾಮಾನ್ಯವಾಗಿ ಹೆಚ್ಚಿನ ಜನ ದೇವರಲ್ಲಿ ನಮಸ್ಕರಿಸಿ ಪ್ರಾರ್ಥಿಸಲು ಹೋಗುತ್ತಾರೆ. ಕೆಲವರು ತೀರಾ ಶ್ರದ್ಧೆ, ಭಕ್ತಿಯಿಂದ ಹೋದರೆ, ಮತ್ತೆ ಕೆಲವರು ಹೋಗದಿದ್ದರೆ ಏನು ತೊಂದರೆಯಾಗುವುದೋ ಎಂಬ ಭಯದಿಂದ ಹೋಗುತ್ತಾರೆ. ಇನ್ನೊಂದಿಷ್ಟು ಜನ ದೇವಸ್ಥಾನದ ಕಡೆ ತಿರುಗಿಯೂ ನೋಡದೆ ತಮ್ಮ ಪಾಡಿಗೆ ತಾವಿರುತ್ತಾರೆ. 

ಆದರೆ ನಾವು ದೇವಸ್ಥಾನಗಳಿಗೆ ಪದೇ ಪದೇ ಹೋಗಬೇಕು. ಅದರಿಂದ ಆರೋಗ್ಯಕ್ಕೆ ದೈಹಿಕವಾಗಿ ಹಾಗೂ ಮಾನಸಿಕವಾಗಿ ಹಲವಾರು ಪ್ರಯೋಜನಗಳಿವೆ. ಅವೇನೆಂದು ನೋಡೋಣ.

Tap to resize

Latest Videos

undefined

ಧನಾತ್ಮಕ ಶಕ್ತಿ(Positive energy)
ದೇವಸ್ಥಾನದೊಳಗೆ ಸಕಾರಾತ್ಮಕ ಶಕ್ತಿ ಸದಾ ಪ್ರವಹಿಸುತ್ತಲೇ ಇರುತ್ತದೆ. ಇದೇನು ಅತಿಶಯೋಕ್ತಿಯಲ್ಲ. ದೇವಸ್ಥಾನದ ಮಧ್ಯಭಾಗದಲ್ಲಿ ಗರ್ಭಗುಡಿ ಇರುತ್ತದೆ. ಸಾಮಾನ್ಯವಾಗಿ ಈ ಗರ್ಭಗುಡಿಯ ಮೇಲ್ಚಾವಣಿ ತಾಮ್ರದ ಹೊದಿಕೆಯಿಂದ ಕೂಡಿರುತ್ತದೆ. ಈ ತಾಮ್ರದ ಹೊದಿಕೆಗಳಲ್ಲಿ ಸಕಾರಾತ್ಮಕ ಶಕ್ತಿ ಪ್ರವಹಿಸುತ್ತಲೇ ಇರುತ್ತದೆ. ನಾವು ಗರ್ಭಗುಡಿಗೆ ಪ್ರದಕ್ಷಿಣೆ ಹಾಕುವಾಗ ಈ ಶಕ್ತಿ ನಮ್ಮೊಳಗೂ ಪ್ರವಹಿಸುತ್ತದೆ. ಗರ್ಭಗುಡಿಗೆ ಒಂದೇ ಕಡೆ ದ್ವಾರ ತೆರೆದಿರುತ್ತದೆ. ಮತ್ತೆಲ್ಲ ಭಾಗ ಮುಚ್ಚಿರುತ್ತದೆ. ಇದರಿಂದ ದೇವರ ವಿಗ್ರಹದ ಎದುರು ನಿಂತು ಕೈ ಮುಗಿದು, ಕಣ್ಣನ್ನು ಮುಚ್ಚಿ ಪ್ರಾರ್ಥಿಸುವಾಗ ಆ ಒಳಗಿನ ಸಕಾರಾತ್ಮಕ ಶಕ್ತಿ ಎದುರಿರುವ ನಮ್ಮಲ್ಲಿ ತುಂಬುತ್ತದೆ. ಹಾಗಾಗಿಯೇ ದೇವರೆದುರು ಜಾಸ್ತಿ ಹೊತ್ತು ಇದ್ದಷ್ಟೂ ಮನಸ್ಸಿಗೆ ಸಂತಸ, ನಿರಾಳತೆ ಸಿಗುವುದು. 

ಕೇವಲ ತಾಮ್ರದ ಹೊದಿಕೆಗಳಲ್ಲ, ದೇಗುಲಗಳಲ್ಲಿ ಬೆಳಗುವ ದೀಪದಿಂದ ಬೆಳಕಿನ ಶಕ್ತಿ(light energy), ಗಂಟೆಯ ನಾದ, ಮಂತ್ರಘೋಷಗಳ ನಿನಾದದಿಂದ ಶಬ್ದದ ಶಕ್ತಿ(sound energy), ಹೂಗಳು, ಕರ್ಪೂರ, ಊದುಬತ್ತಿಯ ಪರಿಮಳದಿಂದ ಹೊರಡುವ ರಾಸಾಯನಿಕ ಶಕ್ತಿ ಇವೆಲ್ಲವೂ ನಮ್ಮ ಮೆದುಳಿನ ನರ ಕೋಶಗಳನ್ನು ಶಾಂತಗೊಳಿಸಿ ಸಂತುಷ್ಠವಾಗಿಸುತ್ತವೆ. ಮನಸ್ಸಿನ ದುಗುಡಗಳನ್ನೆಲ್ಲ ಕಳೆದು ಏಕಾಗ್ರತೆ ಸಾಧಿಸಲು ನೆರವಾಗುತ್ತವೆ. 

ತನ್ನ ಹಾಗೂ ಮಗುವಿನ ಆರೋಗ್ಯಕ್ಕಾಗಿ ಗರ್ಭಿಣಿ ಮಹಿಳೆಗೆ Vastu Tips

ತೀರ್ಥದ ಲಾಭ
ತೀರ್ಥವನ್ನು ತುಳಸಿ, ಏಲಕ್ಕಿ, ಲವಂಗ, ಗಂಧ, ಚಂದನ ಮುಂತಾದವನ್ನು ನೀರಿಗೆ ಹಾಕಿ ತಯಾರಿಸುತ್ತಾರೆ. ಇವೆಲ್ಲವೂ ಆರೋಗ್ಯ(health)ಕ್ಕೆ ಒಳ್ಳೆಯವೇ. ತಾಜಾ ಪರಿಮಳದಿಂದಾಗಿ ಮನಸ್ಸನ್ನು ತಾಜಾಗೊಳಿಸುವ ಶಕ್ತಿ ತೀರ್ಥಕ್ಕಿದೆ. ಔಷಧೀಯ ಗುಣಗಳಿಂದ ತುಂಬಿದ ಈ ತೀರ್ಥ ಸೇವನೆ ಆಹ್ಲಾದಕರವೆನಿಸುತ್ತದೆ. 

Diamond Astrology: ಕೊಳ್ಳುವ ಮೊದಲು ನಿಮಗೆ ವಜ್ರ ಆಗಿ ಬರುತ್ತದೆಯೇ ಇಲ್ಲವೇ ತಿಳಿಯಿರಿ..

ಏನು ಬೇಕೆಂಬ ಸ್ಪಷ್ಟ ಯೋಚನೆ
ದೇವರು ಎಲ್ಲ ಕಡೆಯೂ ಇರುವವನಾದರೂ ನಾವೆಲ್ಲ ಆತ ದೇವಸ್ಥಾನದಲ್ಲೇ ಇರುತ್ತಾನೆ ಎಂದು ನಂಬುತ್ತೇವೆ. ಹೀಗಾಗಿ, ಭಕ್ತರಿಗೆ ಬೇಜಾರು ಮಾಡಿಸದೆ ಆತನನ್ನು ನಾವು ಎಲ್ಲಿ ಹುಡುಕುತ್ತೇವೆಯೋ ಅಲ್ಲಿರಲು ಬಯಸುತ್ತಾನೆ ಸರ್ವಶಕ್ತ. ದೇವಸ್ಥಾನಕ್ಕೆ ತೆರಳಿ ದೇವರಲ್ಲಿ ಸಂಪೂರ್ಣ ಮನ ನೆಟ್ಟು ಪ್ರಾರ್ಥಿಸುವಾಗ, ನಮ್ಮ ಆಸೆ, ಗುರಿ(goal)ಗಳ ಪರಿಚಯ ನಮಗೆ ಆಗುತ್ತದೆ. ನಮಗೆ ನಿಜವಾಗಿಯೂ ಬದುಕಿನಲ್ಲಿ ಬೇಕಾಗಿದ್ದೇನು ಎಂಬುದು ಇದರಿಂದ ತಿಳಿಯುತ್ತದೆ. ಸಾಮಾನ್ಯವಾಗಿ ಎಲ್ಲರೂ ಆರೋಗ್ಯ, ಆಯಸ್ಸು, ನೆಮ್ಮದಿ, ಸುಖ, ಸಂತೋಷ ಹಾಗೂ ಸಮೃದ್ಧಿಯನ್ನು ಬೇಡುತ್ತಾರೆ. ಬದುಕಿನಲ್ಲಿ ನಿಜವಾಗಿ ಬೇಕಾದವು ಇವೇ. ಮನಸ್ಸಿಗೆ ನಮಗೇನು ಬೇಕು ಎಂಬುದು ಸ್ಪಷ್ಟವಿದ್ದಾಗ ಅದು ಅದನ್ನು ಪಡೆಯಲು ಏನು ಮಾಡಬೇಕೋ ಅದರತ್ತ ಚಿತ್ತ ಹರಿಸುತ್ತದೆ. ಆಗ ನಾವು ಬಯಸಿದ್ದು ನಮಗೆ ಸಿಗಲಾರಂಭಿಸುತ್ತದೆ. ಪ್ರತಿ ದಿನ ದೇವರಲ್ಲಿ ಪ್ರಾರ್ಥಿಸು(pray)ವುದರಿಂದ ನಮ್ಮ ಗುರಿಗಳ ಕಡೆ ಮನಸ್ಸು ಚೆನ್ನಾಗಿ ನೆಡುತ್ತದೆ. 

ಭರವಸೆ ನೀಡುವ ಸ್ಥಳ
ಬದುಕಿನಲ್ಲಿ ನೋವು(pain), ಸೋಲು(failures) , ಹತಾಶೆ ಹೆಚ್ಚಿದ್ದಾಗ ದೇವರಲ್ಲಿ ನಂಬಿಕೆ ಇಟ್ಟು ದೇವಸ್ಥಾನಕ್ಕೆ ತೆರಳಿ ಪ್ರಾರ್ಥಿಸುವುದರಿಂದ ಮನಸ್ಸಿಗೆ ಶಾಂತಿ(peace) ಸಿಗುತ್ತದೆ. ಈ ನಂಬಿಕೆ ಇಲ್ಲದಿದ್ದರೆ ನೋವು, ಸೋಲುಗಳು ನಮ್ಮನ್ನು ಖಿನ್ನತೆಗೆ ದೂಡುವ ಜೊತೆಗೆ ಆತ್ಮಹತ್ಯೆಯ ಯೋಚನೆಗಳನ್ನೂ ತರುತ್ತವೆ. ಆದರೆ, ದೇವಸ್ಥಾನಕ್ಕೆ ತೆರಳುವುದರಿಂದ ಮಾನಸಿಕ ಬಲ ದೊರೆಯುತ್ತದೆ. ಇದು ನಮ್ಮನ್ನು ಮರಳಿ ಯತ್ನ ಮಾಡಲು ಪ್ರೇರೇಪಿಸುತ್ತದೆ. ಬದುಕಿಗೆ ಭರವಸೆ ತುಂಬುತ್ತದೆ. ಇಲ್ಲಿ ನಾವು ಹಾಕುವ ಕಾಣಿಕೆಯಿಂದ ಹಸಿದು ಬಂದವರ ಹೊಟ್ಟೆ ತುಂಬುತ್ತದೆ. ದೇವಾಲಯದ ಹೊರಗಿರುವ ಭಿಕ್ಷುಕರಿಗೆ ದಾನ ಮಾಡುವುದರಿಂದ ನಮ್ಮ ಪುಣ್ಯ ಹೆಚ್ಚುತ್ತದೆ. ಇವೆಲ್ಲವೂ ಮನಸ್ಸಿಗೆ ಸಕಾರಾತ್ಮಕ ಶಕ್ತಿ ತುಂಬುತ್ತವೆ. 
 

click me!