ವಜ್ರ ಎಲ್ಲರಿಗೂ ಆಗಿ ಬರೋಲ್ಲ. ಕೆಲ ರಾಶಿಯವರಿಗೆ ವಜ್ರ ಒಳ್ಳೆಯದು ಮಾಡಿದರೆ ಮತ್ತೆ ಕೆಲವರಿಗೆ ಅದು ಕೆಟ್ಟದ್ದು ಮಾಡುತ್ತದೆ.
ಯಾರೋ ನಮಗಿಷ್ಟದವರು ಪುಟ್ಟದೊಂದು ಚೆಂದದ ಬಾಕ್ಸ್‌ನಲ್ಲಿ ವಜ್ರವನ್ನು ಉಡುಗೊರೆಯಾಗಿ ನೀಡಿದರೆ ಹೇಗನಿಸುತ್ತೆ? ಒಂದೇ ಕ್ಷಣಕ್ಕೆ ಹಳೆಯದೆಲ್ಲ ಮರೆತು ಹೋಗಿ ಮುಖದಲ್ಲಿ ನಗು ಮೂಡುತ್ತದೆ ಅಲ್ಲವೇ?
ಆದರೆ, ಅದನ್ನು ಒಪ್ಪಿಕೊಂಡು ಕೈ ನೀಡುವ ಮೊದಲು ಅಥವಾ ನೀವೇ ಇಷ್ಟವೆಂದು ವಜ್ರವನ್ನು ಕೊಳ್ಳುವ ಮೊದಲು ಅದು ನಿಮಗೆ ಆಗುತ್ತದೆಯೇ ಇಲ್ಲವೇ ಎಂಬ ಬಗ್ಗೆ ತಿಳಿಯಬೇಕಲ್ಲವೇ?
ವಜ್ರ(Diamond) ಎಲ್ಲರಿಗೂ ಆಗಿ ಬರುವುದಿಲ್ಲ. ಜ್ಯೋತಿಷ್ಯದ ವಿಷಯಕ್ಕೆ ಬಂದರೆ, ಜಾತಕದಲ್ಲಿ ಎಲ್ಲೆಲ್ಲಿ ಗ್ರಹಗಳಿವೆ, ರಾಶಿ, ನಕ್ಷತ್ರ ಎಲ್ಲದರ ಆಧಾರದ ಮೇಲೆ ವಜ್ರವನ್ನು ಯಾರು ಧರಿಸಬಹುದು, ಯಾರು ಧರಿಸಬಾರದು ಎಂಬುದನ್ನು ತಿಳಿಸಲಾಗುತ್ತದೆ. ವಜ್ರವು ಶುಕ್ರ(Venus) ಗ್ರಹದ ಪ್ರತಿನಿಧಿ. ಎರಡೂ ಹೊಳೆಯುವವೇ.
ನಿಮ್ಮ ಜಾತಕದಲ್ಲಿ ಶುಕ್ರನು ಯಾವುದೇ ಮನೆಯಲ್ಲಿದ್ದರೂ ಹೆಚ್ಚಿನ ಬಾರಿ ಅದರಿಂದ ಲಾಭಗಳನ್ನು ತರುತ್ತದೆ. ಜಾತಕದಲ್ಲಿ ಶುಕ್ರ ದೆಸೆ ಇಲ್ಲದಾಗ ವಜ್ರ ಧರಿಸುವುದರಿಂದ ಅದನ್ನು ತುಂಬಿಕೊಳ್ಳಬಹುದು.
ಯಾವ ರಾಶಿಗಳು ವಜ್ರ ಧರಿಸಬೇಕು?
ಶುಕ್ರನು ಜೀವನದಲ್ಲಿ ಪ್ರೀತಿ, ಸಂಬಂಧಗಳಿಗೆ ಕಾರಣನಾಗುತ್ತಾನೆ. ನಮ್ಮೆಲ್ಲ ಲಕ್ಷುರಿ, ಫ್ಯಾಶನ್, ಸೃಜನಶೀಲತೆ(creativity), ರೊಮ್ಯಾನ್ಸ್, ಸೌಂದರ್ಯ, ಆಕರ್ಷಣೆಯ ಕಾರಕನಾಗಿದ್ದಾನೆ. ಅಂದರೆ, ಶುಕ್ರನ ಸಾಥ್ ಇದ್ದರೆ ನೀವು ಜೀವನದಲ್ಲಿ ಸುಖಿಗಳೇ. ಹಾಗಿದ್ದರೆ, ವಜ್ರವನ್ನು ಯಾವ ರಾಶಿಯವರು ಧರಿಸಿದರೆ ಶುಕ್ರನ ಅನುಗ್ರಹ ಸಿಗುತ್ತದೆ ನೋಡೋಣ.
ಮೀನ(Pisces) ಹಾಗೂ ವೃಶ್ಚಿಕ(Scorpio) ರಾಶಿಯವರು ಯಾವುದೇ ಕಾರಣಕ್ಕೂ ವಜ್ರ ಧರಿಸಬಾರದು.
ಮೇಷ(Aries)
ಮೇಷವು ಮಂಗಳನಿಂದ ಆಳಲ್ಪಡುತ್ತದೆ. ಇವರಿಗೆ ವಜ್ರವನ್ನು ಧರಿಸುವುದರಿಂದ ಸಾಕಷ್ಟು ಸಕಾರಾತ್ಮಕ ಎನರ್ಜಿ ದೊರೆಯುತ್ತದೆ.
ವೃಷಭ(Taurus)
ವೃಷಭವನ್ನು ಆಳುವುದು ಶುಕ್ರ ಗ್ರಹ. ಹಾಗಾಗಿ, ಶುಕ್ರ ಮತ್ತು ವಜ್ರ ಸದಾ ಸುಖವಾಗಿ ಜೊತೆಯಾಗಿ ಇರಬಲ್ಲವು. ವೃಷಭ ರಾಶಿಯವರು ವಜ್ರ ಧರಿಸಿದರೆ ಅವರಿಗೆ ದೊರಕೋ ಲಾಭಗಳು ಹಲವಾರು. ಕಲೆ, ಆತಿಥ್ಯ ಅಥವಾ ಸೌಂದರ್ಯ ವಿಚಾರವಾಗಿ ವೃಷಭ ರಾಶಿಯವರಿಗೆ ವಜ್ರವು ಸಾಕಷ್ಟು ಲಾಭಗಳನ್ನು ತಂದುಕೊಡುತ್ತದೆ.
ಮಿಥುನ(Gemini)
ಮಿಥುನ ರಾಶಿಯ ರತ್ನ ಮುತ್ತು. ಮುತ್ತು ಮಿಥುನ ರಾಶಿಯವರಿಗೆ ಬುಧ(mercury)ದ ಎನರ್ಜಿಯನ್ನು ಪಡೆಯಲು ಸಹಾಯ ಮಾಡುತ್ತದೆ. ಇದರಿಂದ ಅವರ ಮನಸ್ಸು, ಆತ್ಮ, ದೇಹ ಎಲ್ಲದರ ಬೆಳವಣಿಗೆ ಚೆನ್ನಾಗಾಗುತ್ತದೆ. ಆದರೆ, ಈ ರಾಶಿಯವರೂ ವಜ್ರ ಧರಿಸಬೇಕೆಂದರೆ ಅದನ್ನು ಪಚ್ಚೆಯೊಂದಿಗೆ ಸೇರಿಸಿ ಧರಿಸುವುದು ಉತ್ತಮ.
ಕಟಕ(Cancer)
ನಿಮ್ಮ ಜಾತಕದ 4, 11ನೇ ಮನೆಯಲ್ಲಿ ಶುಕ್ರನು ಕುಶಲನಾಗಿದ್ದರೆ, ಆಗ ವಜ್ರ ಧರಿಸುವುದು ಉಚಿತವಲ್ಲ. ನೀವು ಮಾಣಿಕ್ಯ ಧರಿಸುವುದು ಉತ್ತಮ.
Marriage Horoscope: ನಿಮ್ಮದು ಲವ್ ಮ್ಯಾರೇಜಾ, ಆರೇಂಜ್ಡ್ ಮ್ಯಾರೇಜಾ? ಜಾತಕ ಏನ್ ಹೇಳತ್ತೆ?
ಸಿಂಹ(Leo)
ಜಾತಕದ 3 ಹಾಗೂ 10ನೇ ಮನೆಯಲ್ಲಿ ಶುಕ್ರನಿದ್ದರೆ, ಆಗ ವಜ್ರ ಧರಿಸುವುದು ಈ ರಾಶಿಗೆ ಉಚಿತವಲ್ಲ.
ಕನ್ಯಾ(Virgo)
ಕನ್ಯಾ ರಾಶಿಗೆ ವಜ್ರ ತುಂಬಾ ಚೆನ್ನಾಗಿ ಆಗಿ ಬರುತ್ತದೆ. ಅದರಲ್ಲೂ ಇವರ ಜಾತಕದ 2 ಹಾಗೂ 9ನೇ ಮನೆಯಲ್ಲಿ ಶುಕ್ರನಿದ್ದರೆ ವಜ್ರ ಧರಿಸುವುದರ ಅತ್ಯುತ್ತಮ ಲಾಭಗಳನ್ನು ಇವರು ಪಡೆಯಬಹುದು.
ತುಲಾ(Libra)
ಜೀವನದಲ್ಲಿ ಉನ್ನತಿಗಾಗಿ ತಲಾ ರಾಶಿಗೆ ವಜ್ರ ಬೇಕೇ ಬೇಕು. ಇದನ್ನು ಧರಿಸಿದಾಗ ಈ ರಾಶಿಯವರಿಗಿರುವ ರಾಹು, ಕೇತು ಹಾಗೂ ಶನಿಯ ಕೆಟ್ಟ ಪರಿಣಾಮಗಳು ನಾಶವಾಗುತ್ತವೆ.
ವೃಶ್ಚಿಕ(Scorpio)
ಈ ರಾಶಿಯ 7 ಮತ್ತು 12ನೇ ಮನೆಯಲ್ಲಿ ಶುಕ್ರನಿದ್ದರೆ ವಜ್ರ ಧರಿಸುವುದು ಉಚಿತವಲ್ಲ.
Zodiac Signs And Traits: ಈ ನಾಲ್ಕು ರಾಶಿಯ ಹೆಣ್ಮಕ್ಕಳ ಕೈಲಿರುತ್ತೆ ಗಂಡನ ಜುಟ್ಟು!
ಧನು(Sagittarius)
ಧನು ರಾಶಿಯವರ ಜಾತಕದ 6 ಹಾಗೂ 10ನೇ ಮನೆಯಲ್ಲಿ ಶುಕ್ರನಿರದ ಹೊರತು ವಜ್ರ ಧರಿಸಲೇಬೇಡಿ.
ಮಕರ(Capricorn)
ಮಕರ ರಾಶಿಯ 5, 9ನೇ ಮನೆಯಲ್ಲಿ ಶುಕ್ರನಿದ್ದರೆ, ಅವರು ವಜ್ರ ಧರಿಸುವುದರಿಂದ ಹಲವಾರು ಲಾಭ ಪಡೆಯಬಹುದು. ಅದರಲ್ಲೂ ವೃತ್ತಿಪರರು ಹಾಗೂ ಉದ್ದಿಮೆದಾರರಿಗೆ ಸಾಕಷ್ಟು ಲಾಭವನ್ನು ತಂದುಕೊಡಲಿದೆ ವಜ್ರ.
ಕುಂಭ(Aquarius)
ಕುಂಭ ರಾಶಿಯವರು ವಜ್ರ ಧರಿಸುವುದರಿಂದ ರಾಹು, ಕೇತುವಿನ ಎಲ್ಲ ದುಷ್ಪರಿಣಾಮಗಳಿಂದ ಮುಕ್ತರಾಗಬಹುದು. ಅದೂ ಅಲ್ಲದೆ ಶುಕ್ರನ ಕೆಟ್ಟ ಪರಿಣಾಮಗಳನ್ನು ಕೂಡಾ ಇದು ತಡೆಯುತ್ತದೆ.
ಮೀನ(Pisces)
ಮೀನ ರಾಶಿಯ ಜಾತಕದಲ್ಲಿ 3 ಹಾಗೂ 8ನೇ ಮನೆಯಲ್ಲಿ ಶುಕ್ರನಿದ್ದಾಗ ಮಾತ್ರ ಇವರು ವಜ್ರ ಧರಿಸಬಹುದು. ಒಟ್ಟಾರೆಯಾಗಿ ಮೀನ ರಾಶಿಗೆ ವಜ್ರದಿಂದ ಅಂಥ ಉಪಯೋಗವೇನೂ ಇಲ್ಲ.