ರಾಹು, ಕೇತು, ಶನಿಯ ಕ್ರೂರ ದೃಷ್ಟಿಯನ್ನು ತಣಿಸಲು ಹೀಗ್ಮಾಡಿ..

By Suvarna News  |  First Published Mar 22, 2022, 9:15 AM IST

ಗ್ರಹಗಳು ಹೇಗೆ ಶುಭಕಾರಕವೋ ಹಾಗೆಯೇ ಅಶುಭಕಾರಕವೂ ಹೌದು. ಒಂಭತ್ತು ಗ್ರಹಗಳಲ್ಲಿ ಶುಭ ಗ್ರಹ, ಕ್ರೂರ ಗ್ರಹ ಮತ್ತು ಪಾಪಿ ಗ್ರಹಗಳೆಂದು ವಿಂಗಡಿಸಲಾಗಿದೆ. ಇವುಗಳ ಕೆಟ್ಟ ಪ್ರಭಾವದಿಂದ ಪಾರಾಗುವ ಉಪಾಯ ಹೀಗಿದೆ.


ಜ್ಯೋತಿಷ್ಯ ಶಾಸ್ತ್ರದಲ್ಲಿ (Astrology) ಗ್ರಹ ಲೆಕ್ಕಾಚಾರಗಳ ಬಗ್ಗೆ ತಿಳಿದುಕೊಳ್ಳಬಹುದು. ಅಲ್ಲದೆ, ಗ್ರಹಗಳು ಮತ್ತು ಅದರಿಂದಾಗುವ ಪ್ರಭಾವಗಳು, ಶುಭ ಫಲಗಳು, ಅಶುಭ ಫಲಗಳು, ಸ್ವಭಾವಗಳು ಹೀಗೆ ಹಲವು ವಿಷಯಗಳ ಬಗ್ಗೆ ಜ್ಯೋತಿಷ್ಯದಲ್ಲಿ ಉಲ್ಲೇಖಿಸಲಾಗಿದೆ. ಇರುವ ಒಂಭತ್ತು ಗ್ರಹಗಳಲ್ಲಿ ಶುಭ ಗ್ರಹ, ಕ್ರೂರ ಗ್ರಹ ಮತ್ತು ಪಾಪಿ ಗ್ರಹಗಳನ್ನು ವಿಂಗಡಿಸಲಾಗಿದೆ. ಇವುಗಳ ಕೆಟ್ಟ ಪ್ರಭಾವದಿಂದ ಪಾರಾಗುವ ಉಪಾಯವನ್ನು ಹೇಳಲಾಗಿದೆ. 

ಗುರು ಗ್ರಹ ಮತ್ತು ಶುಕ್ರ ಗ್ರಹಗಳು ಬಲ ನೀಡುವ ಮತ್ತು ಶುಭಕಾರಕ ಗ್ರಹಗಳೆಂದು ಕರೆದರೆ ಚಂದ್ರನನ್ನು ಪೂರ್ಣರೂಪದಲ್ಲಿ ಶುಭಗ್ರಹವೆಂದು ಪರಿಗಣಿಸಲಾಗಿದೆ. ಆದರೆ, ಸೂರ್ಯ (Sun) ಮತ್ತು ಮಂಗಳ (Mars) ಗ್ರಹವು ಕ್ರೂರ ಗ್ರಹ ಎಂದು ವಿಂಗಡಿಸಲಾಗಿದ್ದು, ಶನಿ ಮತ್ತು ರಾಹು-ಕೇತು (Saturn and Rahu-Ketu) ಪಾಪಿ ಗ್ರಹಗಳಗಳಾಗಿವೆ. ಹೀಗಾಗಿ ಈ ಗ್ರಹಗಳ ಶುಭ-ಅಶುಭ ಫಲಗಳ ಬಗ್ಗೆ ಅರಿಯೋಣ... ಮೊದಲಿಗೆ ಪಾಪಿ ಗ್ರಹಗಳನ್ನು ನೋಡೋಣ...

ಶನಿ (Saturn)
ಪಾಪಿಗ್ರಹಗಳ ಪಟ್ಟಿಯಲ್ಲಿ ಶನಿಗ್ರಹ ಮೊದಲನೆಯದು. ನ್ಯಾಯದೇವನಾಗಿರುವ ಶನಿಯು, ಶಿಸ್ತು (Discipline), ಸತ್ಯ ನಡೆ ಎಲ್ಲಿ ಕಾಣುವುದಿಲ್ಲವೋ ಅಲ್ಲಿಗೆ ಶನಿಯ ಆಗಮನವಾಗುತ್ತದೆ. ಜಾತಕದಲ್ಲಿ ಶನಿ ಗ್ರಹದ ಸ್ಥಾನ ನೀಚವಾಗಿದ್ದರೆ ಆರ್ಥಿಕ ನಷ್ಟ (Financial loss), ಕಣ್ಣಿನ ಸಮಸ್ಯೆ (Eye problem), ತಂದೆಯೊಂದಿಗೆ (Father) ಮನಸ್ತಾಪ ಸೇರಿದಂತೆ ಮತ್ತಿತರ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಇದಕ್ಕೆ ಪರಿಹಾರವಾಗಿ ಶನಿಗ್ರಹದ ತೊಂದರೆಯಿಂದ ಪಾರಾಗಲು ಸಾಸಿವೆ ಎಣ್ಣೆ, ಕಪ್ಪು ಎಳ್ಳು ಮತ್ತು ಕಪ್ಪು ವಸ್ತ್ರವನ್ನು ದಾನ ಮಾಡಬೇಕು.

ಇದನ್ನು ಓದಿ: ಸಾಲ ಪಡೆಯುವಾಗ, ಕೊಡುವಾಗ ಈ ನಿಯಮ ಪಾಲಿಸ್ಲೇಬೇಕು!

ರಾಹು-ಕೇತು (Rahu-Ketu)
ರಾಹು-ಕೇತುವು ಪಾಪಿಗ್ರಹಗಳ ಪಟ್ಟಿಯಲ್ಲಿ ಬರುತ್ತವೆ. ಜಾತಕದಲ್ಲಿ ಕಾಳಸರ್ಪ ದೋಷಕ್ಕೆ (Kalasarpa Dosha) ಈ ಗ್ರಹಗಳೇ ಕಾರಣವಾಗಿವೆ. ರಾಹು ಗ್ರಹವು ಅಶುಭವಾಗಿದ್ದರೆ ಶರೀರಕ್ಕೆ ಸಂಬಂಧಪಟ್ಟಂತೆ ಸಮಸ್ಯೆಗಳಿಂದ ಬಳಲಬೇಕಾಗುತ್ತದೆ. ಕೇತು ಗ್ರಹವು ಅಶುಭವಾಗಿದ್ದರೆ ವಿಶ್ವಾಸಘಾತಕ ಸ್ಥಿತಿಯನ್ನು ಅನುಭವಿಸಬೇಕಾಗುತ್ತದೆ. ಇದಕ್ಕೆ ಪರಿಹಾರವಾಗಿ ರಾಹು ಮತ್ತು ಕೇತು ಗ್ರಹಗಳ ಶಾಂತಿ ಆಗಬೇಕಿದೆ. ಇದಕ್ಕಾಗಿ ತೆಂಗಿನಕಾಯಿ, ಉದ್ದಿನ ಬೇಳೆ (Coconut, Urad dal) ಮತ್ತು ಬಟ್ಟೆಯನ್ನು ದಾನವಾಗಿ ನೀಡಬೇಕು. 

ಪಾಪಿಗ್ರಹವು ಸ್ವಾಮಿಸ್ಥಾನದಲ್ಲಿದ್ದರೆ ಶುಭಫಲವನ್ನು ನೀಡುತ್ತದೆ. ಇದು ಕೆಲವು ವಿಶೇಷ ಸಮಯಗಳಲ್ಲಿ ಶುಭಫಲವನ್ನು ನೀಡುತ್ತದೆ. ಆರು, ಎಂಟು ಅಥವಾ ಹನ್ನೆರಡನೇ ಮನೆಯ ಅಧಿಪತಿ ದೇವರಾಗಿದ್ದು, ಪುನಃ ಅದೇ ಮನೆಗೆ ಬಂದು ಸ್ಥಿತನಾಗಿರುವುದಲ್ಲದೆ, ಆ ಗ್ರಹವನ್ನು ಬೇರೆ ಪಾಪಿಗ್ರಹವು ನೋಡುತ್ತಿದ್ದ ಎಂದಾದರೆ ಇದು ಶುಭದಾಯಕವಾಗಿದೆ. ಇಂಥ ಸ್ಥಿತಿಯಲ್ಲಿದ್ದರೆ ಬಹಳ ಶುಭವಾಗಿರಲಿದೆ. ಅಂದರೆ, ರಾಜಯೋಗ ಉಂಟಾಗುತ್ತದೆ. 
ಇನ್ನು ಕ್ರೂರ ಗ್ರಹಗಳ ಬಗ್ಗೆ ನೋಡುವುದಾದರೆ ಸೂರ್ಯ ಮತ್ತು ಚಂದ್ರ ಗ್ರಹಗಳಿಂದಾಗುವ ತೊಂದರೆಗಳು ಮತ್ತು ಅದಕ್ಕೆ ಪರಿಹಾರವನ್ನು ತಿಳಿದುಕೊಳ್ಳುವುದು ಉತ್ತಮ.

ಸೂರ್ಯ
ಸೂರ್ಯದೇವನನ್ನು ಎಲ್ಲ ಗ್ರಹಗಳ ರಾಜನೆಂದು (King) ಕರೆಯುತ್ತಾರೆ. ಆತ್ಮ, ಪಿತಾ ಮತ್ತು ಉಚ್ಛ ಅಧಿಕಾರಿ ಇವುಗಳಿಗೆ ಕಾರಕನಾಗಿದ್ದಾನೆ. ಆದರೆ ಜಾತಕದಲ್ಲಿ ಸೂರ್ಯ ಉಚ್ಛನಾಗಿರದಿದ್ದರೆ ಶಾರೀರಿಕ ಮತ್ತು ಮಾನಸಿಕ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಸೂರ್ಯನ ಅಶುಭ ಪ್ರಭಾವದಿಂದ ಕಣ್ಣಿನ ರೋಗ (Eye disease), ಸುಳ್ಳು ಆರೋಪಗಳು ಮತ್ತು ಹೃದಯಕ್ಕೆ (Heart) ಸಂಬಂಧಿಸಿ ಸಮಸ್ಯೆಗಳು ಉಲ್ಬಣವಾಗುವ ಸಾಧ್ಯತೆ ಇರುತ್ತದೆ. ಇದಕ್ಕೆ ಪರಿಹಾರವಾಗಿ ಭಾನುವಾರದಂದು ಸೂರ್ಯನಿಗೆ ಅರ್ಘ್ಯ (ಜಲ)ವನ್ನು (Water) ಅರ್ಪಿಸಬೇಕು. ನಿರ್ಗತಿಕರಿಗೆ ದಾನವನ್ನು ನೀಡಬೇಕು. 

ಇದನ್ನು ಓದಿ: ಮಕ್ಕಳ ಓದಿನ ಪ್ರಗತಿಗೆ Vastu Tips

ಮಂಗಳ
ಮಂಗಳ(ಕುಜ)ಗ್ರಹವು ಕ್ರೋಧ ಮತ್ತು ಶಕ್ತಿಯ ಕಾರಕನಾಗಿದ್ದಾನೆ. ಜೊತೆಗೆ ಭೂಮಿ (Earth), ಸೇನೆ (Army), ಪೋಲಿಸ್ (Police), ಆಟ, ರತ್ನ, ಕೆಂಪು ಬಣ್ಣಗಳಿಗೂ ಕಾರಕನಾಗಿದ್ದಾನೆ. ಕುಜ ದೋಷಕ್ಕೆ ಕಾರಣ ಗ್ರಹವು ಮಂಗಳನೇ ಆಗಿದ್ದಾನೆ. ಈ ಗ್ರಹದ ಅಶುಭ ಫಲಗಳೆಂದರೆ ಸಾಲಬಾಧೆ, ಹೃದಯ ಸಮಸ್ಯೆ, ಭೂಮಿ ಮತ್ತು ಆಸ್ತಿ ಸಂಬಂಧಿತ ವಿವಾದಗಳು ಉತ್ಪನ್ನವಾಗುತ್ತವೆ. ಇದಕ್ಕೆ ಪರಿಹಾರವಾಗಿ ಕೆಂಪು ವಸ್ತ್ರ ದಾನ ಮಾಡಬೇಕು.

click me!