Astrology Tips : ಮನೆಯಲ್ಲಿ ನಕಾರಾತ್ಮಕ ಶಕ್ತಿ ಇದ್ರೆ ಕಾಣಿಸುತ್ತೆ ಈ ಚಿಹ್ನೆ

By Suvarna NewsFirst Published Sep 25, 2022, 12:18 PM IST
Highlights

ಮನೆಯಲ್ಲಿ ಯಾವಾಗ್ಲೂ ಸುಖ, ಸಂತೋಷ ಇರ್ಬೇಕೆಂದು ಎಲ್ಲರೂ ಬಯಸ್ತಾರೆ. ಆದ್ರೆ ಕೆಲವೊಮ್ಮೆ ಎಷ್ಟು ಕಷ್ಟಪಟ್ಟರೂ ಖುಷಿ ಸಿಗೋದಿಲ್ಲ. ಇದಕ್ಕೆ ಅನೇಕ ಕಾರಣವಿದೆ. ಅದ್ರಲ್ಲಿ ನಕಾರಾತ್ಮಕ ಶಕ್ತಿ ಕೂಡ ಒಂದು.
 

ಪ್ರಪಂಚವು ಸಕಾರಾತ್ಮಕ ಮತ್ತು ನಕಾರಾತ್ಮಕ ಶಕ್ತಿಗಳಿಂದ ತುಂಬಿದೆ. ಮನೆಯಲ್ಲೂ ನಕಾರಾತ್ಮಕ ಶಕ್ತಿ ಹಾಗೂ ಸಕಾರಾತ್ಮಕ ಶಕ್ತಿ ಎರಡೂ ಇರುತ್ತದೆ. ಮನೆಯಲ್ಲಿ ಯಾವುದೇ ದುರ್ಘಟನೆ ನಡೆದ್ರೆ ಜನರು ಮನೆಯಲ್ಲಿ ನಕಾರಾತ್ಮಕ ಶಕ್ತಿ ನೆಲೆಸಿರಬಹುದು ಎನ್ನುತ್ತಾರೆ. ದಿಡೀರ್ ಸಮಸ್ಯೆಗೆ ಒಳಗಾಗುವುದು ಅಥವಾ ಅನಾರೋಗ್ಯಕ್ಕೆ ಒಳಗಾಗುವುದು ಮನೆಯಲ್ಲಿ ನಕಾರಾತ್ಮಕ ಶಕ್ತಿಯಿಂದಲೂ ಆಗಿರಬಹುದು. ಮನೆಯಲ್ಲಿ ನಕಾರಾತ್ಮಕ ಶಕ್ತಿಯಿದ್ದರೆ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಮನೆಯಲ್ಲಿ ನಕಾರಾತ್ಮಕ ಶಕ್ತಿ ನೆಲೆಸಿದೆ ಎಂಬುದನ್ನು ಪತ್ತೆ ಹಚ್ಚೋದು ಅನೇಕರಿಗೆ ಕಷ್ಟ. ಮನೆಯಲ್ಲಿ ನಕಾರಾತ್ಮಕ ಶಕ್ತಿ ಇದೆಯೇ ಅಥವಾ ಇಲ್ಲವೇ ಎಂಬುದನ್ನು ಕಂಡುಹಿಡಿಯಲು ಕೆಲವು ಸುಲಭ ವಿಧಾನಗಳಿವೆ. ನಕಾರಾತ್ಮಕ ಶಕ್ತಿಯ ಬಗ್ಗೆ ಹೇಗೆ ತಿಳಿಯೋದು ಎಂಬುದನ್ನು ನಾವಿಂದು ಹೇಳ್ತೇವೆ.

ಮನೆಯಲ್ಲಿ ನಕಾರಾತ್ಮಕ ಶಕ್ತಿ (Negative Energy) ಇರೋದಕ್ಕೆ ಕೆಲ ಚಿಹ್ನೆ : 
ಗೃಹೋಪಯೋಗಿ ವಸ್ತುಗಳು, ಎಲೆಕ್ಟ್ರಾನಿಕ್ ವಸ್ತುಗಳು ಪದೇ ಪದೇ ಹಾಳಾಗುತ್ತಿರುತ್ತವೆ. 

ಕುಟುಂಬದಲ್ಲಿ ಸದಾ ಅನಾರೋಗ್ಯ (Illness) ಕಾಡುತ್ತದೆ. ಎಷ್ಟೇ ಚಿಕಿತ್ಸೆ ನೀಡಿದ್ರೂ ಅನಾರೋಗ್ಯ ಕಡಿಮೆಯಾಗುವುದಿಲ್ಲ. 

ವಿನಾಕಾರಣ ಯಾವುದೋ ಒಂದು ವಿಷಯದ ಬಗ್ಗೆ ಅಸಮಾಧಾನ ಮತ್ತು ಖಿನ್ನತೆ (Depression) ಕಾಡುತ್ತಿರುತ್ತದೆ. 

ಒಳ್ಳೆಯ ಕೆಲಸ ಹಾಗೂ ಯಶಸ್ಸು ಎಂದೂ ಕೈಗೆ ಸಿಗುವುದಿಲ್ಲ. ಕೈಗೆ ಬಂದ ತುತ್ತು ಬಾಯಿಗೆ ಬರುವುದಿಲ್ಲ ಎನ್ನುವಂತೆ ಕೈತಪ್ಪಿ ಹೋಗುತ್ತದೆ.

ಮನೆ (Home) ಯಲ್ಲಿರುವ ಸದಸ್ಯರು ಸದಾ ಆಲಸ್ಯದಲ್ಲಿ ಇರುತ್ತಾರೆ. ಯಾವುದೇ ಕೆಲಸಕ್ಕೂ ಆಸಕ್ತಿ ಇರುವುದಿಲ್ಲ. 

ಮನಸ್ಸಿನಲ್ಲಿ ಪದೇ ಪದೇ ನಕಾರಾತ್ಮಕ ಆಲೋಚನೆ ಬರ್ತಿರುತ್ತದೆ. ಆತ್ಮಹತ್ಯೆ ಮಾಡಿಕೊಳ್ಳುವ ಯೋಚನೆ ಸುಳಿಯುತ್ತಿರುತ್ತದೆ.   

ಇವೇ ಹೆಚ್ಚು Romantic Zodiac Signs, ನಿಮ್ಮ ಸಂಗಾತಿಯ ರಾಶಿ ಯಾವುದು?

ಮನೆಯಲ್ಲಿರುವ ನಕಾರಾತ್ಮಕ ಶಕ್ತಿಯನ್ನು ಹೀಗೆ ಪತ್ತೆ ಮಾಡಿ :
ನೀರಿ (Water) ನ ಜೊತೆ ಗುಲಾಬಿ (Rose) ದಳ :
ಒಂದು ಗ್ಲಾಸ್ ತೆಗೆದುಕೊಳ್ಳಿ. ಅದಕ್ಕೆ ನೀರನ್ನು ಹಾಕಿ. ಹಾಗೆಯೇ ಗಂಗಾಜಲವನ್ನು ಹಾಕಿ. ನಂತ್ರ ಅದಕ್ಕೆ ಸ್ವಲ್ಪ ಗುಲಾಬಿ ದಳವನ್ನು ಹಾಕಿ. ಈ ಗ್ಲಾಸನ್ನು ಮನೆಯ ಒಂದು ಮೂಲೆಯಲ್ಲಿ ಇಡಿ. ಸುಮಾರು 24 ಗಂಟೆಗಳ ಕಾಲ ಗ್ಲಾಸನ್ನು ಹಾಗೆಯೇ ಇಡಿ. ನಂತ್ರ ಅದರ ಬಣ್ಣ ಪರೀಕ್ಷೆ ಮಾಡಿ. ಗ್ಲಾಸಿನಲ್ಲಿರುವ ನೀರಿನ ಬಣ್ಣ ಸಂಪೂರ್ಣ ಬದಲಾಗಿದ್ದರೆ ನಿಮ್ಮ ಮನೆಯಲ್ಲಿ ನಕಾರಾತ್ಮಕ ಶಕ್ತಿ ನೆಲೆಸಿದೆ ಎಂದರ್ಥ. ಅದೇ ಬಣ್ಣ ಬದಲಾಗಿಲ್ಲವೆಂದ್ರೆ ನಿಮ್ಮ ಮನೆಯಲ್ಲಿ ಯಾವುದೇ ನಕಾರಾತ್ಮಕ ಶಕ್ತಿಯಿಲ್ಲ ಎಂದರ್ಥ. ನಿಮ್ಮನ್ನು ಕಾಡುತ್ತಿರುವ ಸಮಸ್ಯೆಗೆ ಬೇರೆ ಕಾರಣವಿದೆ ಎಂದು ನೀವು ಅರ್ಥೈಸಿಕೊಳ್ಳಬಹುದು.

ಅಕ್ಟೋಬರ್ 24 ರಂದು ಸೂರ್ಯಗ್ರಹಣ: ಈ ರಾಶಿಯವರು ಹುಷಾರಾಗಿರಿ!

ನಕಾರಾತ್ಮಕ ಶಕ್ತಿ ಓಡಿಸಲು ಹೀಗೆ ಮಾಡಿ :
ಒಂದ್ವೇಳೆ ಮನೆಯಲ್ಲಿ ನಕಾರಾತ್ಮಕ ಶಕ್ತಿ ಇದೆ ಅಂದ್ರೆ ಭಯ (Fear) ಬೇಡ. ಮನೆಯಲ್ಲಿ ಸಕಾರಾತ್ಮಕ ಶಕ್ತಿ ಪ್ರವೇಶಕ್ಕೆ ಕೆಲ ಉಪಾಯ ಮಾಡಿ. ನಕಾರಾತ್ಮಕ ಶಕ್ತಿ ಮನೆಯಲ್ಲಿಲ್ಲವೆಂದ್ರೂ ಈ ಉಪಾಯವನ್ನು ಮಾಡಬಹುದು.

ಮನೆಯನ್ನು ಸ್ವಚ್ಛಗೊಳಿಸುವ ವೇಳೆ ಉಪ್ಪನ್ನು ಬಳಸಿ. ನೀರಿಗೆ ಉಪ್ಪನ್ನು ಹಾಕಿ ಮನೆಯ ಮೂಲೆ ಮೂಲೆಯನ್ನು ಒರೆಸಬಹುದು. ನಿಂಬೆ ರಸಕ್ಕೆ ನೀರನ್ನು ಬೆರೆಸಿ ಈ ನೀರಿನಿಂದ ಮನೆಯ ಬೀಗ ಹಾಗೂ ಕಿಟಕಿಯನ್ನು ಒರೆಸಿ. ಇದ್ರಿಂದ ಯಾವುದೇ ನಕಾರಾತ್ಮಕ ಶಕ್ತಿ ಮನೆ ಪ್ರವೇಶ ಮಾಡುವುದಿಲ್ಲ.  
ಮನೆಯವರಿಗೆ ದೃಷ್ಟಿ ಬಿದ್ದಿದೆ ಎಂದಾದ್ರೆ ಮೂರು ಮೆಣಸಿನ ಕಾಯಿ ಹಾಗೂ ಸಾಸಿವೆ ಕಾಳು ಮತ್ತು ಉಪ್ಪನ್ನು ಕೈನಲ್ಲಿ ತೆಗೆದುಕೊಂಡು, ದೃಷ್ಟಿ ಬಿದ್ದವರ ಮೇಲೆ ಮೂರು ಬಾರಿ ಪ್ರದಕ್ಷಿಣೆ ಮಾಡಿ ನಂತ್ರ ಅದನ್ನು ಬೆಂಕಿಗೆ ಹಾಕಿ.  

ಅಡುಗೆ ಮನೆಯಲ್ಲಿರುವ ಒಂದು ಕಿಲೋಗ್ರಾಂ ಉಪ್ಪನ್ನು ಬಟ್ಟೆಯಲ್ಲಿ ಕಟ್ಟಿ ಅದನ್ನು ಯಾರ ದೃಷ್ಟಿಯೂ ಬೀಳದ ಸ್ಥಳದಲ್ಲಿ ಇಡಿ. 
 

click me!