ಬ್ರೇಕಪ್ ಆದಾಗ ಒಬ್ಬೊಬ್ಬರು ಒಂದೊಂದು ರೀತಿ ವರ್ತಿಸುತ್ತಾರೆ. ಕೆಲವರು ಬೇಗ ಸುಧಾರಿಸಿಕೊಂಡರೆ ಕೆಲವರು ಬಹಳ ಸಮಯ ತೆಗೆದುಕೊಳ್ಳಬಹುದು. ಕೆಲವರು ಅದನ್ನೊಂದು ಪಾಠವನ್ನಾಗಿ ಪರಿಗಣಿಸಿದರೆ, ಕೆಲವರ ಈಗೋಕ್ಕೆ ಏಟಾಗಬಹುದು. ಇದೆಲ್ಲವೂ ನಮ್ಮ ರಾಶಿಗೆ ಸಂಬಂಧಿಸಿದ್ದಾಗಿದೆ.
ಲವ್ ಬ್ರೇಕಪ್ ಹಲವರ ಜೀವನದಲ್ಲಿ ಬಹುದೊಡ್ಡ ಬದಲಾವಣೆಗೆ ಕಾರಣವಾಗುತ್ತವೆ. ಪ್ರೀತಿಪಾತ್ರರಿಂದ ದೂರವಾಗುವುದು ಯಾರಿಗೂ ಇಷ್ಟವಾಗುವುದಿಲ್ಲ. ಸಂಬಂಧಗಳು ಚೆನ್ನಾಗಿರಬೇಕು ಎನ್ನುವುದು ಎಲ್ಲರ ಆಶಯ. ಆದರೆ, ಯಾವ್ಯಾವುದೋ ಕಾರಣಗಳಿಂದ ಪ್ರೀತಿಪಾತ್ರರು ನಮ್ಮಿಂದ ದೂರವಾಗುತ್ತಾರೆ. ಎಷ್ಟೋ ಬಾರಿ ನಾವೇ ಅದಕ್ಕೆ ಕಾರಣವಾಗಿರಬಹುದು. ಅವರದ್ದೇ ಆದ ಬೇರೆ ಕಾರಣಗಳಿರಬಹುದು, ಹೊಂದಾಣಿಕೆಯ ಸಮಸ್ಯೆ ಇರಬಹುದು. ಮೂರನೆಯವರ ಹಸ್ತಕ್ಷೇಪದಿಂದ ದೂರವಾಗಬಹುದು. ಈಗೋ, ಮೇಲರಿಮೆ, ಕೀಳರಿಮೆ ಮುಂತಾದ ವ್ಯಕ್ತಿತ್ವಕ್ಕೆ ಸಂಬಂಧಿಸಿದ ಸಮಸ್ಯೆಗಳಿಂದಲೂ ಪರಸ್ಪರ ದೂರವಾಗಬೇಕಾದ ಪರಿಸ್ಥಿತಿ ನಿರ್ಮಾಣವಾಗಬಹುದು. ಒಟ್ಟಿನಲ್ಲಿ, ಇಂತಹ ಸ್ಥಿತಿ ನಿರ್ಮಾಣವಾದಾಗ ಒಬ್ಬೊಬ್ಬರು ಒಂದೊಂದು ರೀತಿ ವರ್ತಿಸುತ್ತೇವೆ. ನಾವು ಹೇಗೆ ವರ್ತಿಸುತ್ತೇವೆ ಎನ್ನುವುದು ನಮ್ಮ ರಾಶಿಯನ್ನು ಅವಲಂಬಿಸಿದೆ.
• ಮೇಷ (Aries)
ಬ್ರೇಕಪ್ (Breakup) ಆದ ತಕ್ಷಣ ಮೇಷ ರಾಶಿಯವರು ತೀವ್ರವಾಗಿ ವರ್ತಿಸುತ್ತಾರೆ. ದುಡುಕುತನ ತೋರಿಸಬಹುದು. ಆದರೆ, ಕ್ರಮೇಣ ಹೊಸ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಭಾವನೆಗಳನ್ನು ನಿಯಂತ್ರಿಸಲು ಯತ್ನಿಸುತ್ತಾರೆ.
• ವೃಷಭ (Taurus)
ವೃಷಭ ರಾಶಿಯವರು ಸಂಬಂಧದಲ್ಲಿ ಸ್ಥಿರತೆ (Stability) ಮತ್ತು ಭದ್ರತೆ ಬಯಸುವ ಜನ. ಹೀಗಾಗಿ, ಬ್ರೇಕಪ್ ಆದಾಗ ತಲ್ಲಣಿಸಿ ಹೋಗುತ್ತಾರೆ. ಕಂಫರ್ಟ್ (Comfort) ವಲಯಕ್ಕೆ ಬರಲು ದೀರ್ಘ ಸಮಯ ತೆಗೆದುಕೊಳ್ಳುತ್ತಾರೆ. ಈ ಸಮಯದಲ್ಲಿ ಇವರು ಸ್ವ ಕಾಳಜಿ ವಹಿಸುವುದು ಸೂಕ್ತ.
ಈ ರಾಶಿಯವರು ರಾಹುವಿಗೆ ಯಾವಾಗಲೂ ಪ್ರಿಯರು, ಹಣ ಮತ್ತು ಅದೃಷ್ಟ ಹಿಂದೆನೇ ಬರುತ್ತೆ
• ಮಿಥುನ (Gemini)
ಮಿಥುನ ರಾಶಿಯ ಜನ ಸುಲಭವಾಗಿ ಅಡಾಪ್ಟ್ (Adopt) ಮಾಡಿಕೊಳ್ಳುವ ಹಾಗೂ ಸಮಾಜಮುಖಿ ಧೋರಣೆ ಹೊಂದಿರುತ್ತಾರೆ. ಆದರೆ, ಬ್ರೇಕಪ್ ಆದಾಗ ಯಾವುದೇ ನಿರ್ಧಾರ ಕೈಗೊಳ್ಳಲು ಹೆಣಗಾಡುತ್ತಾರೆ, ಗೊಂದಲದ ಮನಸ್ಥಿತಿಯಲ್ಲಿರುತ್ತಾರೆ.
• ಕರ್ಕಾಟಕ (Cancer)
ಕರ್ಕಾಟಕ ರಾಶಿಯ ಜನ ಆಳವಾದ ಭಾವನಾಜೀವಿಗಳು. ಬ್ರೇಕಪ್ ಆದಾಗ ಅದರಿಂದ ಹೊರಬರಲು ಕಷ್ಟಪಡುತ್ತಾರೆ. ಏಕಾಂಗಿಯಾಗಿರಲು ಬಯಸುತ್ತಾರೆ. ತಮ್ಮ ಭಾವನೆಗಳು (Emotions) ಮತ್ತು ಗಾಯಗೊಂಡ ಹೃದಯದ ನೋವನ್ನು ಶಮನ ಮಾಡಿಕೊಳ್ಳಲು ಸಮಯ ತೆಗೆದುಕೊಳ್ಳುತ್ತಾರೆ.
• ಸಿಂಹ (Leo)
ಸಿಂಹ ರಾಶಿಯ ಜನ ಎಲ್ಲರ ಗಮನ ಮತ್ತು ದೃಢೀಕರಣ ಬಯಸುತ್ತಾರೆ. ಬ್ರೇಕಪ್ ಆದಾಗ ಇವರ ಈಗೋ (Ego) ತೀವ್ರವಾಗಿ ಏಟು ತಿನ್ನುತ್ತದೆ. ತಮ್ಮ ಎನರ್ಜಿಯನ್ನು ಹೆಚ್ಚಿಸಿಕೊಳ್ಳಲು ತಮ್ಮನ್ನು ಹೊಗಳುವವರ ನಡುವೆ ಹೆಚ್ಚು ಸಮಯ ಕಳೆಯುತ್ತಾರೆ.
• ಕನ್ಯಾ (Virgo)
ಕನ್ಯಾ ರಾಶಿಯ ಜನ ಹೆಚ್ಚು ಪ್ರಾಯೋಗಿಕ ಮತ್ತು ವಿಮರ್ಶಾತ್ಮಕ ದೃಷ್ಟಿಕೋನ ಹೊಂದಿರುತ್ತಾರೆ. ಬ್ರೇಕಪ್ ಅನ್ನು ಇವರು ತರ್ಕಬದ್ಧ ಮನಸ್ಥಿತಿಯಿಂದ ವಿಚಾರ ಮಾಡುತ್ತಾರೆ. ಎಲ್ಲಿ ತಪ್ಪಾಯಿತು ಮತ್ತು ಇದರಿಂದ ಹೇಗೆ ಪಾಠ (Lesson) ಕಲಿಯಬೇಕು ಎಂದು ಅರಿತುಕೊಳ್ಳುತ್ತಾರೆ.
• ತುಲಾ (Libra)
ತುಲಾ ರಾಶಿಯ ಜನ ಸಾಮರಸ್ಯ ಮತ್ತು ಸಮತೋಲನ ಬಯಸುತ್ತಾರೆ. ಬ್ರೇಕಪ್ ಆದಾಗ ಇವರು ಕಳೆಗುಂದುತ್ತಾರೆ. ಶಾಂತಿ (Peace) ಮತ್ತು ಮನಸ್ಸಿನ ನೆಮ್ಮದಿ ಅರಸುತ್ತಾರೆ. ಸಂಘರ್ಷಗಳನ್ನು ಕೊನೆಗೊಳಿಸಿಕೊಂಡು ಎಕ್ಸ್ ಸಂಗಾತಿ ಜತೆಗೂ ಉತ್ತಮ ಸ್ನೇಹ ಹೊಂದುತ್ತಾರೆ.
• ವೃಶ್ಚಿಕ (Scorpio)
ಆಳವಾದ ತೀವ್ರತೆಯ ವೃಶ್ಚಿಕ ರಾಶಿಯ ಜನರಿಗೆ ಬ್ರೇಕಪ್ ಎನ್ನುವುದು ಬಲವಾದ ಹೊಡೆತ ನೀಡುತ್ತದೆ. ಭಾವನೆಗಳಲ್ಲಿ ಏರಿಳಿತ ಅನುಭವಿಸುತ್ತಾರೆ. ಕೋಪ, ನೋವು (Pain) ಬಾಧಿಸುತ್ತದೆ.
Holi 2024 : ಪ್ರತಿಯೊಂದು ಬಣ್ಣಕ್ಕೂ ಅರ್ಥವಿದೆ… ಯಾರಿಗೆ ಯಾವ ಕಲರ್ ಸೂಕ್ತ?
• ಧನು (Sagittarius)
ಧನು ರಾಶಿಯ ಜನ ಸಾಹಸಿಗಳು ಮತ್ತು ಆಶಾವಾದಿಗಳು. ಬ್ರೇಕಪ್ ಅನ್ನು ವ್ಯಕ್ತಿಗತ ಪ್ರಗತಿ ಹಾಗೂ ಅನ್ವೇಷಣೆಯ ಅವಕಾಶವನ್ನಾಗಿ ನೋಡುತ್ತಾರೆ. ಹೊಸ ಅನುಭವಗಳನ್ನು ಹೊಂದುತ್ತ ಹಳೆಯ ನೋವು ಮರೆಯುತ್ತಾರೆ.
• ಮಕರ (Capricorn)
ಮಕರ ರಾಶಿಯ ಜನ ಪ್ರಾಯೋಗಿಕ ನಿಲುವು ಹೊಂದಿದ್ದು, ಬ್ರೇಕಪ್ ಆದಾಗ ನೋವಿಗೆ ತುತ್ತಾಗುತ್ತಾರೆ. ತತ್ವಜ್ಞಾನಿಗಳಂತೆ ಮಾತನಾಡುತ್ತಾರೆ. ಕೆಲಸಕಾರ್ಯಗಳಲ್ಲಿ ಮುಳುಗಿ ಹೋಗುತ್ತಾರೆ. ತಮ್ಮ ಗುರಿಯ (Goal) ಕಡೆ ಫೋಕಸ್ ಮಾಡಿ ನೋವನ್ನು ಮರೆಯುತ್ತಾರೆ.
• ಕುಂಭ (Aquarius)
ಸ್ವತಂತ್ರ ಹಾಗೂ ಅಸಾಂಪ್ರದಾಯಿಕ ನಿಲುವಿನ ಕುಂಭ ರಾಶಿಯ ಜನ ಬ್ರೇಕಪ್ ಬಗ್ಗೆ ವಿಶಿಷ್ಟ ದೃಷ್ಟಿಕೋನ ಹೊಂದಿರುತ್ತಾರೆ. ಈ ಸಮಯದಲ್ಲಿ ಅವರು ಬೌದ್ಧಿಕವಾಗಿ ಉತ್ತೇಜನ ನೀಡುವ ಅಂಶಗಳಿಗೆ, ಫಿಲಾಸಾಫಿಕಲ್ ಚರ್ಚೆಗೆ ಆದ್ಯತೆ ನೀಡುತ್ತಾರೆ.
• ಮೀನ (Pisces)
ಮೀನ ರಾಶಿಯ ಜನ ಎಲ್ಲರನ್ನೂ ಪ್ರೀತಿ-ಪ್ರೇಮದಿಂದ ಕಾಣುತ್ತಾರೆ, ಸಹಾನುಭೂತಿ ಹೊಂದಿರುತ್ತಾರೆ. ಬ್ರೇಕಪ್ ಎನ್ನುವುದು ಎಲ್ಲವನ್ನೂ ಕಳೆದುಕೊಂಡ ಭಾವನೆಯಲ್ಲಿ ನಲುಗುವುಂತೆ ಮಾಡುತ್ತದೆ. ಕ್ರಿಯಾಶೀಲ ಮತ್ತು ಆಧ್ಯಾತ್ಮಿಕ (Spiritual) ಚಟುವಟಿಕೆಗಳ ಮೂಲಕ ಕ್ರಮೇಣ ಮನಸ್ಸನ್ನು ನಿಯಂತ್ರಣಕ್ಕೆ ತಂದುಕೊಳ್ಳಲು ಯತ್ನಿಸುತ್ತಾರೆ.