ನಿಮ್ಮ ರಾಶಿಚಕ್ರದ ಚಿಹ್ನೆಯ ಪ್ರಕಾರ ನೀವು ಡೇಟಿಂಗ್ ಸಮಯದಲ್ಲಿ ಹೇಗೆ ಪ್ರೀತಿಯನ್ನು ಪ್ರದರ್ಶಿಸಲು ಇಷ್ಟಪಡುತ್ತೀರಿ ಎಂಬುದರ ಕುರಿತು ಏನು ಹೇಳುತ್ತದೆ ಎಂಬುದನ್ನು ನೋಡಿ:
ಪ್ರತಿಯೊಬ್ಬ ವ್ಯಕ್ತಿಯೂ ಪ್ರೀತಿಯನ್ನು ವಿಭಿನ್ನವಾಗಿ ವ್ಯಕ್ತಪಡಿಸುತ್ತಾರೆ ಎಂಬುದು ಸಾರ್ವತ್ರಿಕವಾಗಿ ತಿಳಿದಿರುವ ಸತ್ಯ. ಇದು ಅವರವರ ರಾಶಿಚಕ್ರ ಚಿಹ್ನೆಗೆ ಅನುಗುಣವಾಗಿಯೂ ಇರುತ್ತದೆ.ಕೆಲವರು ಗುಣಮಟ್ಟದ ಸಮಯವನ್ನು ನಂಬಿದರೆ, ಇತರರು ಪ್ರಣಯದ ಕ್ರಿಡೆಗಳಲ್ಲಿ ಆನಂದಿಸುತ್ತಾರೆ. ನೀವು ಈ ವಿವಿಧ ರೀತಿಯಲ್ಲಿ ಯಾವ ರೀತಿಗೆ ವಾಲುತ್ತೀರಿ ಎಂದು ನೀವು ಆಶ್ಚರ್ಯ ಪಡುತ್ತಿದ್ದೀರಾ? ನಿಮ್ಮ ರಾಶಿಚಕ್ರದ ಚಿಹ್ನೆಯ ಪ್ರಕಾರ ನೀವು ಡೇಟಿಂಗ್ ಸಮಯದಲ್ಲಿ ಹೇಗೆ ಪ್ರೀತಿಯನ್ನು ಪ್ರದರ್ಶಿಸಲು ಇಷ್ಟಪಡುತ್ತೀರಿ ಎಂಬುದರ ಕುರಿತು ಏನು ಹೇಳುತ್ತದೆ ಎಂಬುದನ್ನು ನೋಡಿ:
ಮೇಷ (Aries) ರಾಶಿ
ಇವರು ಪ್ರೀತಿಯನ್ನು ಮುಚ್ಚಿಟ್ಟು ಮಾತನಾಡುವವರಲ್ಲ. ಬದಲಿಗೆ ಮನಸ್ಸಿನಲ್ಲಿರುವುದನ್ನು ಮಾತನಾಡಲು ಮುಂದಾಗುತ್ತಾರೆ. ಇವರಿಗೆ ಫಿಲ್ಟರ್‌ನ ಕೊರತೆಯಿದೆ. ಎಂದರೆ ನಿಮ್ಮ ಅಂತರಂಗದ ಭಾವನೆಗಳನ್ನು ಹಂಚಿಕೊಳ್ಳಲು ನಿಮಗೆ ಯಾವುದೇ ಹಿಂಜರಿಕೆಯಿಲ್ಲ, ಮೊದಲ ಹೆಜ್ಜೆಯನ್ನು ಇಡುವ ಸಂದರ್ಭದಲ್ಲಿಯೂ ಡೇಟಿಂಗ್ ಮಾಡುವಲ್ಲಿಯೂ ಸಹ.
ವೃಷಭ (Taurus) ರಾಶಿ
ಇವರು ದೃಢ ಮತ್ತು ನಿಷ್ಠಾವಂತರು. ಇವರು ಯಾರೊಂದಿಗೆ ಇರಬೇಕೆಂದು ಬಯಸುತ್ತಾರೆ ಎಂಬುದರ ಕುರಿತು ಎಂದಿಗೂ ಎರಡು ಮನಸ್ಸಿರುವುದಿಲ್ಲ. ಇವರು ತಮ್ಮ ಸಂಗಾತಿಯನ್ನು ಮುದ್ದಿಸುವುದನ್ನು ಇಷ್ಟಪಡುತ್ತಾರೆ. ಪ್ರೇಮಿಗೆ ತಮ್ಮ ಪೂರ್ತಿ ಸಮಯ ಮತ್ತು ಗಮನವನ್ನು ಒಟ್ಟಿಗೆ ಗುಣಮಟ್ಟದ ಸಮಯಕ್ಕಾಗಿ ನೀಡುವವರು.
ಮಿಥುನ (Gemini) ರಾಶಿ
ರಾಶಿಚಕ್ರದಲ್ಲಿ ಇವರು ತುಂಬ ಸೋಶಿಯಲ್. ಇವರು ಬಯಸಿದುದನ್ನು ಹುಡುಕಲು ಕಷ್ಟವಾಗಬಹುದು. ಆದರೆ ಒಮ್ಮೆ ಅವರು ಮನಸ್ಸು ಮಾಡಿದರೆ ಹಿಂತಿರುಗುವುದಿಲ್ಲ. ನೀವು ಇವರೊಂದಿಗೆ ಡೇಟಿಂಗ್ ಮಾಡುತ್ತಿದ್ದರೆ, ಡ್ಯೂಟಿ ನಡುವೆಯೂ ಸರ್ಪ್ರೈಸ್ ನಿರೀಕ್ಷಿಸಬಹುದು. ಏಕತಾನತೆಯನ್ನು ಇಲ್ಲವಾಗಿಸಲು ದಿನ ರಾತ್ರಿ ಯೋಜನೆಗಳನ್ನು ನಿರೀಕ್ಷಿಸಬಹುದು.
ಕಟಕ (Cancer) ರಾಶಿ
ಆಳವಾದ ಸೂಕ್ಷ್ಮ ಮತ್ತು ಅರ್ಥಗರ್ಭಿತ ಪ್ರೀತಿಯನ್ನು ಕರ್ಕಾಟಕ ರಾಶಿಯವರು ಹಂಚಬಲ್ಲರು. ಆಳವಾದ, ಅರ್ಥಪೂರ್ಣ ಸಂಭಾಷಣೆಗಳೊಂದಿಗೆ ತಮ್ಮ ಸಂಗಾತಿಯನ್ನು ತಿಳಿದುಕೊಳ್ಳುವವರು. ನಿಮ್ಮ ಎಲ್ಲಾ ಬಾಲ್ಯದ ಆಲ್ಬಮ್‌ಗಳನ್ನು ಅಗೆದು ತೆಗೆಯಬಲ್ಲರು. ಇವರೊಂದಿಗೆ ಮೊದಲ ಭೇಟಿ ಇವರ ಪೋಷಕರ ಭೋಜನದೊಂದಿಗೆ ಕೊನೆಗೊಂಡರೆ ಆಶ್ಚರ್ಯಪಡಬೇಡಿ.
ಸಿಂಹ (Leo) ರಾಶಿ
ಸ್ವಾಭಾವಿಕವಾಗಿ ಹುಟ್ಟಿನಿಂದಲೇ ನಾಯಕರಿವರು. ಭವ್ಯತೆ ಇವರ ಸ್ವಭಾವ ಸಹಜ ಗುಣ. ಇವರು ಪ್ರೀತಿಯಲ್ಲಿದ್ದಾಗ ಅದನ್ನು ಜಗತ್ತಿಗೆ ತೋರಿಸಲು ಇಷ್ಟಪಡುತ್ತಾರೆ. ಉಡುಗೊರೆಗಳನ್ನು ನೀಡಲು ಮತ್ತು ಸ್ವೀಕರಿಸಲು ಇಷ್ಟಪಡುತ್ತಾರೆ. ಆದ್ದರಿಂದ ಇವರ ಮೇಲೆ ಒಲವು ತೋರಲು ಮತ್ತು ಅವರಿಗೆ ಸೇವೆಯ ಅವಕಾಶವನ್ನು ನೀಡಲು ಹಿಂಜರಿಯದಿರಿ.
ಕನ್ಯಾ (virgo) ರಾಶಿ
ವಿವರಗಳಿಗಾಗಿ ದೃಷ್ಟಿ ಹೊಂದಿರುವ ಸಹಜ ಪರಿಪೂರ್ಣತಾವಾದಿಗಳು. ನೀವು ಏನು ಮಾಡುತ್ತೀರಿ ಮತ್ತು ಇಷ್ಟಪಡದಿರುವುದು ಸೇರಿದಂತೆ ಕನ್ಯಾರಾಶಿಯ ಗಮನವನ್ನು ಬಿಟ್ಟುಬಿಡುವ ಯಾವುದೂ ಇಲ್ಲ. ನಿಮ್ಮ ಅತ್ಯಂತ ಕಿರು ಸೇವೆಗಳನ್ನೂ ಮಾಡುವುದು ಇವರ ಆದ್ಯತೆಯ ಪ್ರೀತಿಯ ಭಾಷೆಯಾಗಿದೆ.
ತುಲಾ(Libra) ರಾಶಿ
ನೀವು ಇವರ ಜೊತೆ ಡೇಟಿಂಗ್ ಮಾಡುತ್ತಿದ್ದರೆ, ಶಾಂತ ಪ್ರೀತಿಯನ್ನು ನಿರೀಕ್ಷಿಸಿ. ದಯೆ, ಶಾಂತ ಮತ್ತು ಸಮತೋಲಿತ ಗುಣವಿರುತ್ತದೆ. ಇವರು ಬದ್ಧರಾಗಿದ್ದರೆ ತಮ್ಮ ಸಂಪೂರ್ಣ ಸಾಮರ್ಥ್ಯವನ್ನು ತಲುಪುತ್ತಾರೆ. ಆದ್ದರಿಂದ ನಿಮ್ಮ ಡೇಟಿಂಗ್ ರಾತ್ರಿಯಂದು ಕ್ಯಾಂಡಲ್-ಲೈಟ್ ಡಿನ್ನರ್‌ನೊಂದಿಗೆ ನಿಮ್ಮನ್ನು ಅಚ್ಚರಿಗೊಳಿಸಲು ಅವರು ಹೊರಟಿರುವುದನ್ನು ಕಂಡರೆ ಆಶ್ಚರ್ಯಪಡಬೇಡಿ.
ವೃಶ್ಚಿಕ (Scorpio) ರಾಶಿ
ಇವರು ಪ್ರೀತಿಯಲ್ಲಿ ಬಿದ್ದಾಗ ಅದರ ಜ್ವಾಲೆಯು ಪ್ರಕಾಶಮಾನವಾಗಿ ಉರಿಯುತ್ತದೆ. ಆದರೆ ಇವರು ತಮ್ಮ ಭಾವನೆಗಳನ್ನು ಮೌಖಿಕವಾಗಿ ಹೇಳುವಲ್ಲಿ ಉತ್ತಮರೇನಲ್ಲ. ಆದ್ದರಿಂದ ಅವರು ದೈಹಿಕ ಅನ್ಯೋನ್ಯತೆ ಮತ್ತು ಇತರ ಸಂಗತಿಗಳ ಮೂಲಕ ತಮ್ಮ ಪ್ರೀತಿಯನ್ನು ಪ್ರದರ್ಶಿಸಲು ಇತರ ಮಾರ್ಗಗಳನ್ನು ಅವಲಂಬಿಸಬಹುದು.
ಯಾರು ಹೆಚ್ಚು ಮಹತ್ವಾಕಾಂಕ್ಷಿಗಳು? ನಿಮ್ಮ ಜನ್ಮರಾಶಿ ಪ್ರಕಾರ ಚೆಕ್ ಮಾಡಿ!
ಧನು (Sagittarius) ರಾಶಿ
ಮುಕ್ತ ಮನೋಭಾವದ ಧನು ರಾಶಿಯನ್ನು ಗುರುತಿಸುವುದು ಕಷ್ಟ. ಆದರೆ ಒಮ್ಮೆ ನೀವು ಅವರೊಂದಿಗೆ ಇದ್ದರೆ, ಪ್ರತಿದಿನವೂ ಒಂದು ಸಾಹಸ ಎಂದು ನೀವು ಕಂಡುಕೊಳ್ಳುತ್ತೀರಿ. ಸ್ವಾಭಾವಿಕತೆಯು ಅವರ ಪ್ರೀತಿಯ ಭಾಷೆಯಾಗಿರುತ್ತದೆ. ಇವರು ತಮ್ಮ ಭಾವನೆಗಳನ್ನು ಹಂಚಿಕೊಳ್ಳುವಲ್ಲಿ ಉತ್ತಮವಾಗಿಲ್ಲದಿದ್ದರೂ, ಅವರ ಪ್ರೀತಿಯನ್ನು ತೋರಿಸುವುದನ್ನು ನೀವು ಕಾಣಬಹುದು.
ಮಕರ (Sagittarius) ರಾಶಿ
ಜವಾಬ್ದಾರಿಯುತವಾಗಿರುವವರು. ಇವರು ಇತರರನ್ನು ಸುಲಭವಾಗಿ ಒಳಗೆ ಬಿಡುವುದಿಲ್ಲ. ನಿಮ್ಮನ್ನೇ ಮಾತನಾಡಲು ಬಿಡುತ್ತಾರೆ. ಖಾಲಿ ಸನ್ನೆಗಳು ಮತ್ತು ಹೊಗಳಿಕೆ ಮಾತುಗಳು ಇವರಿಗೆ ಹೆಚ್ಚು ಅರ್ಥ ಮಾಡಿಸುವುದಿಲ್ಲ. ಬದಲಾಗಿ, ನೀವೇ ಅವರೊಡನೆ ಮನಬಿಚ್ಚಿ ನಿಮ್ಮಿಚ್ಚೆಯನ್ನು ಹೇಳಿಕೊಳ್ಳಬೇಕಾದೀತು..
ಕುಂಭ (Aquarius) ರಾಶಿ
ಯಾವುದೇ ಕಾರಣವಿಲ್ಲದ ಇವರ ಬಂಡಾಯ ಸ್ವಭಾವವು ಇವರನ್ನು ಊಹಿಸಲು ಕಷ್ಟಕರವಾಗಿಸುತ್ತದೆ. ತೀವ್ರವಾದ ಸ್ವಾತಂತ್ರ್ಯ ಹೊಂದಿದ್ದರೂ ಸಂಬಂಧದಲ್ಲಿ ಸಿಕ್ಕಿಬೀಳುವ ಬಗ್ಗೆ ಎಚ್ಚರದಿಂದಿರುತ್ತಾರೆ. ನೀವು ಅವರಿಗೆ ಸಾಕಷ್ಟು ಸಮಯ ಮತ್ತು ಅವಕಾಶ ನೀಡಿದರೆ ಇವರು ಪ್ರತಿದಿನ ನಿಮ್ಮ ಕಡೆಗೆ ಸಣ್ಣ ಹೆಜ್ಜೆಗಳನ್ನು ಇಡುವುದನ್ನು ಕಾಣಬಹುದು. ಸ್ವಲ್ಪ ಕಾಲದ ನಂತರ ಇವರು ನಿಮ್ಮ ಪ್ರತಿಯೊಂದು ಅಗತ್ಯವನ್ನು ನೀವು ಮೌಖಿಕವಾಗಿ ಹೇಳದೆಯೇ ನೋಡಿಕೊಳ್ಳುತ್ತಾರೆ.
ಮೀನ (Pisces) ರಾಶಿ
ಇವರು ಹತಾಶ ರೊಮ್ಯಾಂಟಿಕ್‌ಗಳು. ಸಂಬಂಧದಲ್ಲಿ ಇತರರನ್ನು ಎತ್ತರದಲ್ಲಿ ಇರಿಸಿಕೊಳ್ಳಲು ಒಲವು ತೋರುವುದು ಸ್ವಲ್ಪ ಆಶ್ಚರ್ಯಕರ. ಅಂದರೆ ಅವರು ಬಹುಶಃ ಹಿಂದೆ ಒಮ್ಮೆ ಹೃದಯ ಮುರಿದುಕೊಂಡಿರಬಹುದು. ಪ್ರೀತಿ ವ್ಯಕ್ತಪಡಿಸಲು ನಾಚುತ್ತಾರೆ. ಸಾಮಾಜಿಕ ಮಾಧ್ಯಮದಲ್ಲಿ ಪ್ರೀತಿಯ ಹೊಳಪಿನ ಪ್ರದರ್ಶನಗಳನ್ನು ಸ್ವೀಕರಿಸುವುದಿಲ್ಲ. ಬದಲಾಗಿ ಅವರ ಪ್ರೀತಿಯು ನಿಧಾನವಾಗಿ, ಸ್ಥಿರವಾಗಿ ಮತ್ತು ಪ್ರಕಾಶಮಾನವಾಗಿ ಉರಿಯುತ್ತದೆ.
ನೀವು ಜನಿಸಿದ ರಾಶಿಚಕ್ರಕ್ಕೂ ದೇಹದ ಏಳು ಚಕ್ರಗಳಿಗೂ ಅವಿನಾಭಾವ ಸಂಬಂಧ!