ಮಂಗಳಮುಖಿಯರನ್ನು ನಮ್ಮ ಸಮಾಜ ದೂರವಿಟ್ಟಿದೆ. ಅವರಿಗೆ ಸೂಕ್ತ ಸೌಲಭ್ಯಗಳು ಸಿಗ್ತಿಲ್ಲ. ಆದ್ರೆ ಹಿಂದೂ ಸಂಸ್ಕೃತಿಯಲ್ಲಿ ಅವರಿಗೆ ವಿಶೇಷ ಮಾನ್ಯತೆ ಇದೆ. ಅವರ ಆಶೀರ್ವಾದ, ಶಾಪ ಎಲ್ಲವನ್ನೂ ಗಂಭೀರವಾಗಿ ಪರಿಗಣಿಸಲಾಗುತ್ತದೆ.
ಮಂಗಳಮುಖಿ, ನಪುಂಸಕರು ಎಂದೆಲ್ಲ ಕರೆಯಿಸಿಕೊಳ್ಳುವ ಟ್ರಾನ್ಸಜೆಂಡರ್ ನಮ್ಮ ಸಮಾಜದ ಪ್ರಮುಖ ಭಾಗ. ಸಾಮಾನ್ಯವಾಗಿ ಮದುವೆ, ಮಕ್ಕಳ ಜನ್ಮದಂತಹ ವಿಶೇಷ ಸಂದರ್ಭಗಳಲ್ಲಿ ಇವರನ್ನು ಮನೆಗೆ ಕರೆದು ಅವರಿಂದ ಆಶೀರ್ವಾದ ಪಡೆದು, ದೇಣಿಗೆ ನೀಡುವ ಸಂಪ್ರದಾಯವಿದೆ. ಇವರಿಗೆ ದೇವರ ವಿಶೇಷ ಆಶೀರ್ವಾದವಿದೆ ಎಂದು ಹೇಳಲಾಗುತ್ತದೆ. ಅವರು ಮನಸ್ಪೂರ್ವಕವಾಗಿ ನಿಮಗೆ ಹರಸಿದ್ರೆ ನಿಮ್ಮೆಲ್ಲ ಬಯಕೆ ಈಡೇರುತ್ತದೆ ಎಂದು ನಂಬಲಾಗಿದೆ. ಇದೇ ಕಾರಣಕ್ಕೆ ಮಂಗಳಮುಖಿಯರನ್ನು ಜನರು ಬರಿಗೈನಲ್ಲಿ ಕಳುಹಿಸುವುದಿಲ್ಲ. ಟ್ರಾನ್ಸ್ಜೆಂಡರ್ ಕೋಪಕ್ಕೆ ಯಾರೂ ಗುರಿ ಆಗ್ಬಾರದು. ಒಂದ್ವೇಳೆ ಅವರ ಕೋಪಕ್ಕೆ ಗುರಿಯಾಗಿ ಅವರು ನಿಮ್ಮನ್ನು ನಿಂದಿಸಿದರೆ ಅದು ತುಂಬಾ ಅಶುಭ. ಅವರಿಂದ ಶಾಪ ಪಡೆದರೆ ಕುಟುಂಬದ ಎಲ್ಲ ಸದಸ್ಯರು ತೊಂದರೆ ಅನುಭವಿಸಬೇಕಾಗುತ್ತದೆ ಎಂಬ ನಂಬಿಕೆ ನಮ್ಮಲ್ಲಿದೆ.
ಟ್ರಾನ್ಸ್ಜೆಂಡರ್ (Transgender) ಈ ಸಮುದಾಯದ ಜನರಿಗೆ ವಿಶೇಷ ಪ್ರಾಮುಖ್ಯತೆ ಸಿಕ್ಕಿದ್ದು ಹೇಗೆ? : ಟ್ರಾನ್ಜೆಂಡರ್ ಸಮುದಾಯಕ್ಕೆ ಶ್ರೀರಾಮ (Rama) ನ ಆಶೀರ್ವಾದವಿದೆ. ಶ್ರೀರಾಮ 14 ವರ್ಷಗಳ ವನವಾಸಕ್ಕೆಂದು ಅಯೋಧ್ಯೆಯನ್ನು ಬಿಟ್ಟಾಗ ಪ್ರಜೆಗಳು ಹಾಗೂ ಮಂಗಳಮುಖಿಯರು ರಾಮನ ಹಿಂದೆ ಹೊರಟಿದ್ದರು. ಆದ್ರೆ ರಾಮ ಅವರ ಮನವೊಲಿಸಿ ವನವಾಸಕ್ಕೆ ಹೋಗಿದ್ದ. ರಾಮ ಹೋದ್ಮೇಲೆ ಮಹಿಳೆಯರು, ಪುರುಷರು ಮತ್ತು ಮಕ್ಕಳೆಲ್ಲ ತಮ್ಮ ಮನೆಗೆ ಮರಳಿದ್ದರು. ಆದ್ರೆ ರಾಮ 14 ವರ್ಷಗಳ ವನವಾಸ ಮುಗಿಸಿ ಬರುವವರೆಗೂ ಮಂಗಳಮುಖಿಯರು ಅಲ್ಲೇ ಇದ್ದರಂತೆ. ಅವರ ಭಕ್ತಿಗೆ ಮೆಚ್ಚಿದ ಶ್ರೀರಾಮ, ಟ್ರಾನ್ಸ್ಜೆಂಡರ್ ಸಮುದಾಯಕ್ಕೆ ಆಶೀರ್ವಾದ ಮಾಡಿದ್ದ. ಮಂಗಳಮುಖಿಯರು ನೀಡಿದ ಆಶೀರ್ವಾದ ಫಲ ನೀಡಲಿ ಎಂದು ಹರಸಿದ್ದ. ಅಲ್ಲಿಂದ ಮಂಗಳಮುಖಿಯರಿಗೆ ವಿಶೇಷ ಮಹತ್ವ ಸಿಕ್ಕಿದೆ. ಮಂಗಳಮುಖಿಯರ ಆಶೀರ್ವಾದ ಪಡೆಯಲು ಜನರು ಬಯಸ್ತಾರೆ.
ಈ ಕೆಟ್ಟ ಗುಣಗಳಿದ್ದರ ಮನುಷ್ಯನ ಆಯಸ್ಸೇ ಕಡಿಮೆಯಾಗುತ್ತೆ ಅನ್ನುತ್ತೆ ವಿಧುರ ನೀತಿ
ಮಂಗಳಮುಖಿಯರು ನಿಮಗೆ ಆಶೀರ್ವಾದ ನೀಡಿದ್ರೆ ನಿಮ್ಮೆಲ್ಲ ಕೆಟ್ಟ ಸಮಯ ಕಳೆದು ಒಳ್ಳೆಯ ದಿನಗಳು ಬರುತ್ತವೆ. ಅವರು ತಮ್ಮ ಪರ್ಸ್ (Purs )ನಲ್ಲಿರುವ ಹಣವನ್ನು ತೆಗೆದು ನಿಮಗೆ ನೀಡಿದ್ರೆ ಇದು ಮಂಗಳಕರ. ಅದನ್ನು ನೀವು ಸದಾ ನಿಮ್ಮ ಬಳಿ ಇಟ್ಟುಕೊಂಡ್ರೆ ಆರ್ಥಿಕ ವೃದ್ಧಿಯಾಗುತ್ತದೆ.
ಟ್ರಾನ್ಸ್ಜೆಂಡರ್ ಕೋಪಕ್ಕೆ ಗುರಿ ಆಗ್ಬೇಡಿ : ಟ್ರಾನ್ಸ್ಜೆಂಡರ್ ಮೆಚ್ಚಿಸಲು ಸಾಧ್ಯವಾಗದಿದ್ದರೆ ಚಿಂತೆಯಿಲ್ಲ, ಯಾವುದೇ ಕಾರಣಕ್ಕೂ ಅವರನ್ನು ಕೋಪಗೊಳಿಸಬೇಡಿ. ಶಾಸ್ತ್ರಗಳ ಪ್ರಕಾರ ಟ್ರಾನ್ಸ್ಜೆಂಡರ್ ನಿಮಗೆ ಶಾಪವಿತ್ತರೆ ಅದು ಈಡೇರುತ್ತದೆ. ನೀವು ಕಷ್ಟಗಳಲ್ಲಿ ಕೈತೊಳೆಯಬೇಕಾಗುತ್ತದೆ. ಅಲ್ಲದೆ ನೀವು ನಪುಂಸಕರನ್ನು ನೋಡಿ ನಿಂದಿಸಿದ್ರೆ, ಗೇಲಿ ಮಾಡಿದರೆ ಮುಂದಿನ ಜನ್ಮದಲ್ಲಿ ನೀವು ಮಂಗಳಮುಖಿಯಾಗಿ ಜನಿಸಬೇಕಾಗುತ್ತದೆ.
ಇದೊಂದು ಅಭ್ಯಾಸವಿದ್ರೆ ಸಾಕು, ಗಂಡಸರ ಜೇಬು ಖಾಲಿ ಆಗೋದು ಗ್ಯಾರಂಟಿ!
ಮಂಗಳಮುಖಿಯರಿಂದ ಆಶೀರ್ವಾದ ಯಾವಾಗ ಪಡೆಯಬೇಕು? : ಮಂಗಳಮುಖಿಯರಿಂದ ಆಶೀರ್ವಾದಪಡೆಯಲು ಒಂದು ವಿಶೇಷ ದಿನವಿದೆ. ಅವರು ಬುಧಗ್ರಹವನ್ನು ಶಾಂತಗೊಳಿಸುವ ಕೆಲಸ ಮಾಡ್ತಾರೆ. ಹಾಗಾಗಿ ನೀವು ಬುಧವಾರ, ಮಂಗಳಮುಖಿಯರ ಆಶೀರ್ವಾದ ಪಡೆಯಬೇಕು. ನಿಮಗರಿವಿಲ್ಲದೆ ಬುಧವಾರ ಅವರ ಆಶೀರ್ವಾದ ಸಿಕ್ಕರೆ ನಿಮ್ಮ ಭಾಗ್ಯದ ಬಾಗಿಲು ತೆರೆಯಲಿದೆ ಎಂದರ್ಥ. ನೀವು ಮಂಗಳಮುಖಿಯರಿಗೆ ಬುಧವಾರ ದಾನ ಮಾಡಿದ್ರೆ, ಬುಧ ಗ್ರಹ ಪ್ರಸನ್ನಗೊಳ್ಳುತ್ತದೆ. ದೋಷ ಪರಿಹಾರವಾಗುತ್ತದೆ.
ಇಷ್ಟೇ ಅಲ್ಲ ನೀವು ಬುಧವಾರ ಮಂಗಳಮುಖಿಯಿಂದ ಒಂದು ರೂಪಾಯಿ ನಾಣ್ಯವನ್ನು ಪಡೆದರೆ ಅದು ಶುಭ ಸಂಕೇತವಾಗಿದೆ. ನೀವು ಶ್ರೀಮಂತರಾಗಲಿದ್ದೀರಿ ಎಂಬುದನ್ನು ಇದು ಸೂಚಿಸುತ್ತದೆ. ಆದ್ರೆ ಮಂಗಳಮುಖಿಯರು ಒಂದು ರೂಪಾಯಿ ನಾಣ್ಯವನ್ನು ಬಹುಬೇಗ ನೀಡುವುದಿಲ್ಲ ಎಂಬುದು ನೆನಪಿರಲಿ.
ಮಂಗಳಮುಖಿಯರಿಗೆ ಇದನ್ನು ದಾನ ನೀಡಿ : ಮಂಗಳಮುಖಿಯರಿಗೆ ನೀವು ಪ್ಲಾಸ್ಟಿಕ್ ವಸ್ತು, ಹಳೆ ಬಟ್ಟೆ, ಎಣ್ಣೆ, ಪೊರಕೆಯನ್ನು ದಾನವಾಗಿ ನೀಡಬೇಡಿ. ಅದರ ಬದಲು ಏಕದಳ ಧಾನ್ಯ, ಹೊಸ ಬಟ್ಟೆ, ಹಣವನ್ನು ದಾನ ಮಾಡಬೇಕು.