Black Magic: ವಾಮಾಚಾರದ ಪರಿಣಾಮ ತಗ್ಗಿಸಲು ಮನೆಯಲ್ಲೇ ಈ ರಕ್ಷಣಾತ್ಮಕ ಪರಿಹಾರ ಮಾಡಿಕೊಳ್ಳಿ

By Suvarna News  |  First Published Feb 16, 2022, 3:39 PM IST

ಮಾಟ ಮಂತ್ರದ ಕೆಟ್ಟ ಪರಿಣಾಮಗಳಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳಲು ಮನೆಯಲ್ಲಿಯೇ ಮಾಡಿಕೊಳ್ಳಬಹುದಾದ ಸುಲಭ ಪರಿಹಾರಗಳು ಇಲ್ಲಿವೆ. 


ಈಗ ಸ್ಪರ್ಧಾತ್ಮಕ ಯುಗ. ಎಲ್ಲ ರಂಗಗಳಳಲ್ಲಿಯೂ ಸ್ಪರ್ಧೆ ಹೆಚ್ಚಿದೆ. ತಾನು ಗೆಲ್ಲಬೇಕೆಂಬ ಹಾಗೂ ಮತ್ತೊಬ್ಬರು ಸೋಲಬೇಕೆಂಬ ಹಪಹಪಿಯೂ ಹೆಚ್ಚಿದೆ. ಮೋಹ, ದ್ವೇಷ, ದುರಾಸೆ, ಸ್ವಾರ್ಥ, ಸಿಕ್ಕಾಪಟ್ಟೆ ಸ್ಪರ್ಧೆ, ಹೊಟ್ಟೆಕಿಚ್ಚು, ಮದ, ಅಹಂಕಾರ ಎಲ್ಲವೂ ಹೆಚ್ಚಿರುವ ಜಗತ್ತಿನಲ್ಲಿ ಮನುಷ್ಯ ಮಾಟ ಮಂತ್ರ(black magic)ದ ಮೊರೆ ಹೋಗುತ್ತಿರುವುದು ಆಶ್ಚರ್ಯವೇನಲ್ಲ. ಆದರೆ, ಈ ವಾಮಾಚಾರದ ಮೊರೆ ಹೋಗುತ್ತಿರುವವರಿಗೆ ಅದರ ಪರಿಣಾಮಗಳು ಉಲ್ಟಾ ಹೊಡೆಯಬಹುದೆಂಬ ಪರಿವೆ ಇರುವುದಿಲ್ಲ. ಅಲ್ಲದೆ, ಈಗ ಅಲ್ಪ ವಿದ್ಯೆ ಕಲಿತವರು ಕೂಡಾ ತನಗೆ ಗೊತ್ತು ಎಂದು ವಾಮಾಚಾರ ಮಾಡಿ ಎಡವಟ್ಟು ಮಾಡುವುದೇ ಜಾಸ್ತಿ. 

ಯಾವುದೇ ಆಸೆಗಳು ಈಡೇರಬೇಕೆಂದರೆ ನೇರ ಮಾರ್ಗದಲ್ಲೇ ನಡೆಯಬೇಕು. ವಾಮಾಚಾರ ಮಾರ್ಗ ಹಿಡಿದವರು ಅದರ ಪರಿಣಾಮವನ್ನು ಭವಿಷ್ಯದಲ್ಲಿ ಖಂಡಿತಾ ಒಂದಿಲ್ಲೊಂದು ರೀತಿಯಲ್ಲಿ ಎದುರಿಸುತ್ತಾರೆ. ಒಂದು ವೇಳೆ ನಿಮ್ಮ ಮೇಲೆ ಇಲ್ಲವೇ ನಿಮ್ಮ ಮನೆಯ ಮೇಲೆ ವಾಮಾಚಾರವಾಗಿದ್ದರೆ, ಅದರ ಬಗ್ಗೆ ನಿಮಗೆ ಖಚಿತ ಮಾಹಿತಿ ಇದ್ದರೆ ಅದರ ಪರಿಣಾಮಗಳಿಂದ ಮುಕ್ತರಾಗಲು ಮನೆಯಲ್ಲೇ ಏನು ಮಾಡಬಹುದು ಎಂಬ ಬಗ್ಗೆ ಇಲ್ಲಿ ತಿಳಿಸಲಾಗಿದೆ. 

  • ಪ್ರತಿ ರಾತ್ರಿ ಯಾವುದೋ ಭಯದ ಕಾರಣಕ್ಕೆ ಅಥವಾ ನೆರಳಿನ ಪರಿಣಾಮದಿಂದಾಗಿ ನಿದ್ದೆ(sleep) ಮಾಡಲು ಸಾಧ್ಯವಾಗುತ್ತಿಲ್ಲವಾದರೆ- ಚಾರ್ಜ್ ಆಗಿರುವ ಮಹಾಕಾಳಿ ಯಂತ್ರವನ್ನು ತಂದು ನಿಮ್ಮ ದಿಂಬಿನ ಅಡಿಗೆ ಇಟ್ಟುಕೊಳ್ಳಿ. ಇದು ನಿಮ್ಮನ್ನು ನಕಾರಾತ್ಮಕತೆ(negativity)ಗಳಿಂದ ರಕ್ಷಿಸುತ್ತದೆ. 

    Magha Purnima Vrat 2022: ಮಾಘ ಪೌರ್ಣಮಿಯ ಈ ದಿನ ನೀವೇನು ಮಾಡಬೇಕು?
     
  • ನಿಮ್ಮ ಹಾಸಿಗೆಯ ಸುತ್ತ ಹಸಿ ಉಪ್ಪನ್ನು ಹಾಕುವುದರಿಂದ ಕೂಡಾ ಕೆಟ್ಟ ಶಕ್ತಿಗಳು(bad energies) ರಾತ್ರಿ ಹೊತ್ತಿನಲ್ಲಿ ನಿಮ್ಮನ್ನು ಕಾಡಲು ಸಾಧ್ಯವಾಗುವುದಿಲ್ಲ. 
  • ಯಾವುದೋ ಸಮಯದಲ್ಲಿ ಕೆಲ ನಕಾರಾತ್ಮಕ ಶಕ್ತಿಗಳು ನಿಮ್ಮನ್ನು ವಿಚಲಿತಗೊಳಿಸುತ್ತಿವೆ ಎನಿಸಿದರೆ, ಆಂಜನೇಯ(hanumanji) ದೇವಾಲಯದಿಂದ ತಂದ ಕುಂಕುಮ ಪ್ರಸಾದವನ್ನು ಪ್ರತಿ ದಿನ ತಿಲಕವಾಗಿ ಹಣೆಯಲ್ಲಿ ಇಟ್ಟುಕೊಳ್ಳಿ. ಇದಕ್ಕಿರುವ ಶಕ್ತಿ ಅಪರಿಮಿತ. 
  • ಯಾವುದೋ ಒಂದು ದಿನ ವಾಮಾಚಾರದ ಪರಿಣಾಮಗಳು ನಿಮ್ಮ ಮೇಲೆ ಆಗುತ್ತಿವೆ ಎನಿಸಿದರೆ ಅಥವಾ ದೃಷ್ಟಿಯಾಗಿದೆ, ಕೆಟ್ಟ ಕಣ್ಣು(evil eye) ಬಿದ್ದಿದೆ ಎನಿಸಿದರೆ ಅದೇ ದಿನ ಸಂಜೆ ಹೀಗೆ ಮಾಡಿ- ಒಂದು ಲಿಂಬೆಹಣ್ಣ(lemon)ನ್ನು ತೆಗೆದುಕೊಂಡು 21 ಬಾರಿ ತಲೆಯಿಂದ ಕಾಲಿನವರೆಗೆ ಸುತ್ತುಬರಿಸಿ. ನಂತರ ಅದನ್ನು ನಾಲ್ಕು ಭಾಗಗಳಾಗಿಸಿ ದೂರ ಎಸೆಯಿರಿ. 
  • ನಿಮ್ಮ ಇಡೀ ಕುಟುಂಬಕ್ಕೆ ವಾಮಾಚಾರ ಮಾಡಿಸಲಾಗಿದ್ದರೆ, ಗಂಗಾ ಜಲ ಹಾಗೂ ಗೋಮೂತ್ರವನ್ನು ಪ್ರತಿದಿನ ಅಮಾವಾಸ್ಯೆಯಿಂದ ಹುಣ್ಣಿಮೆಯವರೆಗೂ ಮನೆಯಲ್ಲಿ ಎಲ್ಲೆಡೆ, ಎಲ್ಲರ ಮೇಲೆ ಚಿಮುಕಿಸಿ. ಜೊತೆಗೆ, ಮನೆಯಲ್ಲಿ ಲೋಭಾನದ ಹೊಗೆ ಹಾಕಿ. 
  • ಮನೆಯಲ್ಲಿ ಯಾರಾದರೂ ತಮ್ಮ ಕೆಲಸ, ಮನೆ, ಅಂಗಡಿಯ ಕೆಲಸದಿಂದ ಸಂಪೂರ್ಣ ಕಳಚಿಕೊಂಡಂತೆ ಇದ್ದಕ್ಕಿದ್ದಂತೆ ವರ್ತಿಸಲಾರಂಭಿಸಿದರೆ, ಈ ಎಲ್ಲ ಸ್ಥಳದ ಸುತ್ತ ಯಾವುದೇ ಅನುಮಾನಾಸ್ಪದ ವಸ್ತು ಸಿಗುವುದೇ ಹುಡುಕಿ. ಸಿಕ್ಕರೆ ಅದನ್ನು ಸಂಪೂರ್ಣವಾಗಿ ಸುಟ್ಟು, ಸ್ವಲ್ಪ ಗಂಗಾ ಜಲ ಪ್ರೋಕ್ಷಣೆ ಮಾಡಿ ಧೂಪ ಹಚ್ಚಿ. ಇದರಿಂದ ವಾಮಾಚಾರದ ಪರಿಣಾಮ ಸಂಪೂರ್ಣ ನಾಶವಾಗುತ್ತದೆ. 

    Full Moon Day: ಹುಣ್ಣಿಮೆಯ ದಿನ ಈ ಕೆಲಸಗಳನ್ನು ತಪ್ಪಿಯೂ ಮಾಡ್ಬೇಡಿ!
     
  • ನಿಮ್ಮ ಮೇಲೆ ವಾಮಾಚಾರದ ಪರಿಣಾಮ ಸತತವಾಗಿ ಆಗುತ್ತಿದ್ದು, ಅದರಿಂದ ಹೊರ ಬರಲು ಪೂಜೆ ಮಾಡಿಸುವಷ್ಟು ಅಥವಾ ಕವಚ ಯಂತ್ರ ಕೊಂಡುಕೊಳ್ಳುವಷ್ಟು ಹಣವಿಲ್ಲದೇ ಹೋದರೆ ನಿಮ್ಮ ಉದ್ದದಷ್ಟೇ ಉದ್ದದ ಕೆಂಪು ಹಾಗೂ ಹಳದಿ ಬಣ್ಣದ ದಾರ ಕತ್ತರಿಸಿ, ಅಧನ್ನು ನಾಲ್ಕು ಸುತ್ತು ಮಡಚಿ, ಮಹಾಕಾಳಿ ಮಂತ್ರ ಅಥವಾ ದುರ್ಗಾ ಮಂತ್ರ ಹೇಳುತ್ತಾ 7 ಗಂಟುಗಳನ್ನು ಹಾಕಬೇಕು. ಬಳಿಕ ರಕ್ಷಣೆಗಾಗಿ ಮಹಾಕಾಳಿಯಲ್ಲಿ ಬೇಡಿಕೊಂಡು ಕೈಗೆ ಕಟ್ಟಿಕೊಳ್ಳಿ. ಇದು ನಿಮ್ಮನ್ನು ಕಾಪಾಡುತ್ತದೆ. 

Latest Videos

click me!