ಪಾಕ್‌ ಗಡಿ ಬಳಿ ಇರುವ ಶಾರದಾ ದೇಗುಲ ನಿರ್ಮಾಣ ಪೂರ್ಣ : ಇಂದು ಅಮಿತ್ ಷಾ ಉದ್ಘಾಟನೆ

Published : Mar 22, 2023, 10:29 AM IST
ಪಾಕ್‌ ಗಡಿ ಬಳಿ ಇರುವ ಶಾರದಾ ದೇಗುಲ ನಿರ್ಮಾಣ ಪೂರ್ಣ :  ಇಂದು ಅಮಿತ್ ಷಾ ಉದ್ಘಾಟನೆ

ಸಾರಾಂಶ

ಜಮ್ಮು ಕಾಶ್ಮೀರದ ಕುಪ್ವಾರ ಜಿಲ್ಲೆಯ ತೀತ್ವಾಲ್‌ ಬಳಿ ಗಡಿ ನಿಯಂತ್ರಣಾ ರೇಖೆ ಸಮೀಪ ನೂತನವಾಗಿ ನಿರ್ಮಿಸಲಾಗಿರುವ ಶಾರದಾ ದೇವಿ ಮಂದಿರವನ್ನು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಇಂದು ಉದ್ಘಾಟಿಸಲಿದ್ದಾರೆ.

ಕುಪ್ವಾರ: ಜಮ್ಮು ಕಾಶ್ಮೀರದ ಕುಪ್ವಾರ ಜಿಲ್ಲೆಯ ತೀತ್ವಾಲ್‌ ಬಳಿ ಗಡಿ ನಿಯಂತ್ರಣಾ ರೇಖೆ ಸಮೀಪ ನೂತನವಾಗಿ ನಿರ್ಮಿಸಲಾಗಿರುವ ಶಾರದಾ ದೇವಿ ಮಂದಿರವನ್ನು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಇಂದು ಉದ್ಘಾಟಿಸಲಿದ್ದಾರೆ. ಈ ದೇವಾಲಯದಲ್ಲಿ ಪ್ರತಿಷ್ಠಾಪಿಸಲು ಕರ್ನಾಟಕದ ಶೃಂಗೇರಿಯಿಂದ ಶಾರದಾ ಮೂರ್ತಿಯನ್ನು ಕಳುಹಿಸಲಾಗಿತ್ತು. ಇದು ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿ ಇರುವ ಮೂಲಕ ಮೂಲ ಶಾರದ ಪೀಠಕ್ಕೆ ತೆರಳುವ ಮಾರ್ಗದಲ್ಲಿ ಬರುತ್ತದೆ.

ತುಂಗಾ ತೀರ ನಿವಾಸಿನಿಯಾಗಿರುವ ಶಾರದಾಂಬೆ ಕಾಶ್ಮೀರ ಪುರವಾಸಿನಿಯೂ ಹೌದು. ಒಂದು ಕಾಲದಲ್ಲಿ ಕಾಶ್ಮೀರದಿಂದ ಶೃಂಗೇರಿಗೆ ಬಂದಿದ್ದ ಶಾರದೆ, ಇದೀಗ ಶೃಂಗೇರಿಯಿಂದ ಕಾಶ್ಮೀರಕ್ಕೆ ಪಯಣ ಬೆಳೆಸಿ ಅಲ್ಲಿ ನೆಲೆ ನಿಂತಿದ್ದಾಳೆ. 'ನಮಸ್ತೇ ಶಾರದಾದೇವಿ, ಕಾಶ್ಮೀರ ಪುರವಾಸಿನಿ..' ನಮ್ಮ ಶೃಂಗೇರಿಯಲ್ಲಿ ಶಾರದೆ ನೆಲೆಸಿರುವುದು ಗೊತ್ತೇ ಇದೆ. ಹಾಗಿದ್ದೂ ಈ ಶ್ಲೋಕದಲ್ಲಿ ಶಾರದೆಯನ್ನು ಕಾಶ್ಮೀರ ಪುರವಾಸಿನಿ ಎಂಬುದರ ಹಿಂದೆ ಕಾರಣವಿದ್ದೇ ಇದೆ. ನಮ್ಮ ಶೃಂಗೇರಿಗೂ ಕಾಶ್ಮೀರಕ್ಕೂ 1200 ವರ್ಷಗಳ ನಂಟಿದೆ. 1200 ವರ್ಷಗಳ ಹಿಂದೆ ಕಾಶ್ಮೀರದ ಸರ್ವಜ್ಞ ಪೀಠದಲ್ಲಿ ನಡೆದ ಜ್ಞಾನ ಸಂವಾದದಲ್ಲಿ ವಿದ್ವಾಂಸರನ್ನೆಲ್ಲ ಸೋಲಿಸಿ, ದಕ್ಷಿಣ ಭಾರತದ ಸಂತರಾದ ಶ್ರೀ ಶಂಕರಾಚಾರ್ಯರು ಪೀಠವನ್ನು ಏರಿದ್ದರು. ಬಳಿಕ ಶಾರದಾಂಬೆಯನ್ನು ಕಾಶ್ಮೀರದಿಂದ ಕರ್ನಾಟಕದ ಶೃಂಗೇರಿಗೆ ತಂದು ಪ್ರತಿಷ್ಠಾಪಿಸಿದ್ದರು. ಅಂದಿನಿಂದಲೂ ಶೃಂಗೇರಿ ಜ್ಞಾನದೇವತೆಯ ನೆಲೆವೀಡಾಗಿ ಭಕ್ತರನ್ನು ಸೆಳೆಯುತ್ತಲೇ ಇದೆ. 

ಶ್ರದ್ಧಾಭಕ್ತಿಯಿಂದ ನೆರವೇರಿದ ಶೃಂಗೇರಿ ಶಾರದಾಂಬೆ ರಥೋತ್ಸವ: ಉಭಯ ಜಗದ್ಗುರುಗಳಿಂದ ಪೂಜೆ

ವಿದ್ವಾಂಸರ ತವರು
ಹೌದು, ಶಾರದಾಂಬೆ (Sharadambhe) ಕಾಶ್ಮೀರಿ ಪಂಡಿತರ (Kashmiri Pandits) ಕುಲದೇವತೆ. ಸರಸ್ವತಿಗೆ ಶಾರದೆ ಎಂಬ ಹೆಸರು ಕೊಟ್ಟವರೇ ಅವರು. ಸದ್ಯ ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ತೀತ್ವಾಲ್ ಎಂಬ ಸ್ಥಳದಲ್ಲಿ ತಕ್ಷಿಲಾ ಮತ್ತು ನಳಂದಾ ವಿಶ್ವವಿದ್ಯಾನಿಲಯಗಳಿಗಿಂತ ಮುಂಚೆಯೇ 273 BCಯಲ್ಲಿ ಶಾರದಾ ಪೀಠವಿತ್ತು. ದಾಖಲೆಗಳಲ್ಲಿರುವ ಉಲ್ಲೇಖದಂತೆ ಇದನ್ನು ಕುಶಾನರ ಆಳ್ವಿಕೆಯಲ್ಲಿ (1 ನೇ ಶತಮಾನದ ಆರಂಭದಲ್ಲಿ) ನಿರ್ಮಿಸಲಾಯಿತು. ಅಂದರೆ ಅಶೋಕನ ಆಳ್ವಿಕೆಯಲ್ಲಿ ಕ್ರಿ.ಪೂ. 237 ರಲ್ಲಿ ಸ್ಥಾಪಿಸಲಾಯಿತು. ಇಲ್ಲಿ ವಿದ್ಯಾಧಿದೇವತೆ ಸ್ವತಃ ಇರುವುದು ಸಾಬೀತಾಗುವಂತೆ ಶಾರದಾ ಪೀಠ ವಿಶ್ವವಿದ್ಯಾಲಯ ಖ್ಯಾತಿ ಪಡೆದಿತ್ತು. ಅನೇಕ ವಿದ್ವಾಂಸರ ಹುಟ್ಟಿಗೆ ಕಾರಣವಾಗಿತ್ತು. ಶಾರದಾ ಪೀಠ ದೇವಸ್ಥಾನದ ವಿಶ್ವವಿದ್ಯಾಲಯವು ಪ್ರಾಚೀನ ಭಾರತದಲ್ಲಿ 12 ನೇ ಶತಮಾನದವರೆಗೆ ಆದಿ ಶಂಕರ, ಕಲ್ಹಣ ಮತ್ತು ವಿರೋತ್ಸಾನರಂತಹ ವಿದ್ವಾಂಸರನ್ನು ಹೊಂದಿರುವ ಪ್ರಮುಖ ಕಲಿಕೆಯ ಕೇಂದ್ರಗಳಲ್ಲಿ ಒಂದಾಗಿತ್ತು. ಇಲ್ಲಿ ಬೌದ್ಧ ಧರ್ಮದ ಬೋಧನೆಯೊಂದಿಗೆ, ಇತಿಹಾಸ, ಭೂಗೋಳ, ರಚನಾತ್ಮಕ ವಿಜ್ಞಾನ, ತರ್ಕ ಮತ್ತು ತತ್ತ್ವಶಾಸ್ತ್ರವನ್ನು ಸಹ ಕಲಿಸಲಾಗುತ್ತಿತ್ತು. ಒಂದು ಹಂತದಲ್ಲಿ 5,000 ನಿವಾಸಿ ವಿದ್ವಾಂಸರು ಇದ್ದರು ಮತ್ತು ಇದು ವಿಶ್ವದ ಅತಿದೊಡ್ಡ ಗ್ರಂಥಾಲಯವನ್ನು ಸಹ ಹೊಂದಿತ್ತು.

ಶೃಂಗೇರಿಯಿಂದ ತವರಿಗೆ ತೆರಳುತ್ತಿರುವ 'ಕಾಶ್ಮೀರ ಪುರವಾಸಿನಿ'; ಶಾರದಾಂಬೆಯ ಮಿಶನ್ ಕಾಶ್ಮೀರ್ ಕತೆ

ವಿಶ್ವವಿದ್ಯಾನಿಲಯವು ಯಾವಾಗಲೂ ಜನಪ್ರಿಯವಾಗಿದ್ದರೂ, ಮಹಾರಾಜ ಪ್ರತಾಪ್ ಸಿಂಗ್ (Pratap singh) ಮತ್ತು ರಣಬೀರ್ ಸಿಂಗ್ ಆಳ್ವಿಕೆಯಲ್ಲಿ ದೇವಾಲಯಕ್ಕೆ ವಾರ್ಷಿಕ ತೀರ್ಥಯಾತ್ರೆಯು ಪ್ರವರ್ಧಮಾನಕ್ಕೆ ಬಂದಿತು. ಶಾರದ ಲಿಪಿಯ ಅಭಿವೃದ್ಧಿ ಮತ್ತು ಜನಪ್ರಿಯತೆಗೆ ಇದು ಕಾರಣವಾಗಿದೆ. ಅನೇಕ ಪ್ರಮುಖ ಸಂಸ್ಕೃತ ಹಸ್ತಪ್ರತಿಗಳನ್ನು ಇಲ್ಲಿ ಬರೆಯಲಾಗಿದೆ ಮತ್ತು ಇದು ಸಂಸ್ಕೃತ ಶಿಕ್ಷಣತಜ್ಞರಿಗೆ ಮಹತ್ವದ ಸ್ಥಳವಾಗಿದೆ. ಈ ಪ್ರಾಚೀನ ಕಲಿಕಾ ಕೇಂದ್ರವು ಈಗ ಪಾಕ್ ಆಕ್ರಮಿತ ಕಾಶ್ಮೀರದ ವ್ಯಾಪ್ತಿಗೆ ಒಳಪಟ್ಟಿದೆ. 
 

PREV
Read more Articles on
click me!

Recommended Stories

Baba Vanga Prediction 2026: ಯಂತ್ರಗಳು ಮನುಷ್ಯರನ್ನು ತಿನ್ನುತ್ತವೆ! ಬಾಬಾ ವಂಗಾ ಭಯಂಕರ ಭವಿಷ್ಯವಾಣಿ!
ವೃಶ್ಚಿಕ ರಾಶಿಯಲ್ಲಿ ಡಬಲ್ ರಾಜಯೋಗ, ಈ 3 ರಾಶಿಗೆ ಅದೃಷ್ಟ ಚಿನ್ನದಂತೆ, ಫುಲ್‌ ಜಾಕ್‌ಪಾಟ್‌