ಹಂಪಿ ರಥಬೀದಿಯಲ್ಲಿ ಹೋಳಿಸಂಭ್ರಮ ಪರಸ್ಪರ ಬಣ್ಣ ಎರಚಿ ಸಂಭ್ರಮ

By Kannadaprabha News  |  First Published Mar 9, 2023, 1:00 AM IST

ಪರಸ್ಪರ ಬಣ್ಣ ಹಚ್ಚಿ, ಓಕುಳಿಯಾಟದಲ್ಲಿ ಮಿಂದೆದ್ದರು. ಬಗೆ ಬಗೆಯ ಬಣ್ಣದಲ್ಲಿ ಮಿಂದೆದ್ದ ಪ್ರವಾಸಿಗರು, ಸ್ಥಳೀಯರೊಡಗೂಡಿ ಹೋಳಿಹಬ್ಬ ರಂಗೇರಿಸಿದರು. ಅಲ್ಲದೇ ತಮಟೆ, ಡೊಳ್ಳಿನ ನಾದಕ್ಕೆ ಹೆಜ್ಜೆ ಹಾಕಿದರು.


ಹೊಸಪೇಟೆ(ಮಾ.09): ವಿಶ್ವ ವಿಖ್ಯಾತ ಹಂಪಿಯಲ್ಲಿ ಬುಧವಾರ ದೇಶ- ವಿದೇಶಿ ಪ್ರವಾಸಿಗರು ಹೋಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು. ವಿರೂಪಾಕ್ಷೇಶ್ವರ ದೇವಾಲಯದ ರಥಬೀದಿಯಲ್ಲಿ ಪರಸ್ಪರ ಬಣ್ಣ ಎರಚಿ ಇಡೀ ವಿಶ್ವಕ್ಕೆ ಸಹೋದರತ್ವದ ಸಂದೇಶ ಸಾರಿದರು.

ರಥಬೀದಿಯಲ್ಲಿ ಮಂಗಳವಾರ ತಡರಾತ್ರಿ ಕಾಮದಹನ ಮಾಡಲಾಯಿತು. ಬಳಿಕ ಮಾರನೇ ದಿನ ಬುಧವಾರ ಬೆಳಗ್ಗೆ ರಥಬೀದಿಯಲ್ಲಿ ಜಮಾಯಿಸಿ ರಂಗಿನಾಟದಲ್ಲಿ ತೊಡಗಿಸಿಕೊಂಡರು. ಪರಸ್ಪರ ಬಣ್ಣ ಹಚ್ಚಿ, ಓಕುಳಿಯಾಟದಲ್ಲಿ ಮಿಂದೆದ್ದರು. ಬಗೆ ಬಗೆಯ ಬಣ್ಣದಲ್ಲಿ ಮಿಂದೆದ್ದ ಪ್ರವಾಸಿಗರು, ಸ್ಥಳೀಯರೊಡಗೂಡಿ ಹೋಳಿಹಬ್ಬ ರಂಗೇರಿಸಿದರು. ಅಲ್ಲದೇ ತಮಟೆ, ಡೊಳ್ಳಿನ ನಾದಕ್ಕೆ ಹೆಜ್ಜೆ ಹಾಕಿದರು.

Tap to resize

Latest Videos

undefined

ಬೇರೆ ಬೇರೆ ರಾಜ್ಯಗಳಲ್ಲದೇ ಇಂಗ್ಲೆಂಡ್‌, ಜರ್ಮನಿ, ಇಟಲಿ, ಅಮೆರಿಕ, ಇಸ್ರೇಲ್‌, ರಷ್ಯಾ, ಜಪಾನ್‌, ಸ್ವೀಜರ್‌ಲ್ಯಾಂಡ್‌, ಕೆನಡಾ, ನ್ಯೂಜಿಲ್ಯಾಂಡ್‌ ಸೇರಿದಂತೆ ವಿವಿಧ ದೇಶಗಳಿಂದ ಆಗಮಿಸಿದ್ದ ವಿದೇಶಿ ಪ್ರವಾಸಿಗರು ಹಂಪಿಯ ರಥಬೀದಿಯಲ್ಲಿ ಹೋಳಿಹಬ್ಬದ ರಂಗಿನಾಟದಲ್ಲಿ ಭಾಗಿಯಾದರು.

ಈ ಪ್ರಾಣಿಗಳಿಗೆ ಹಸಿರು ತರಕಾರಿ ತಿನ್ನಿಸಿದ್ರೆ ಅದೃಷ್ಟ ನಿಮ್ಮದಾಗುತ್ತೆ!

ಬಳಿಕ ತುಂಗಭದ್ರಾ ನದಿಗೆ ತೆರಳಿ ಸ್ನಾನ ಮಾಡಿದರು. ಹಂಪಿ ಪೊಲೀಸರು, ಪ್ರವಾಸಿ ಮಿತ್ರರು ಮತ್ತು ಸೆಕ್ಯುರಿ ಗಾರ್ಡ್‌ಗಳು ನದಿ ತೀರ ಮತ್ತು ರಥಬೀದಿಯಲ್ಲಿ ಬಂದೋಬಸ್‌್ತ ಕೈಗೊಂಡಿದ್ದರು.

ಹಂಪಿಯಲ್ಲಿ ಹೋಳಿಹಬ್ಬ ಆಚರಣೆ ಸಂಭ್ರಮದಿಂದ ನಡೆದಿದೆ. ಇಂಥ ಸಂಭ್ರಮದಲ್ಲಿ ಭಾಗಿಯಾಗಿರುವುದು ಖುಷಿ ತಂದಿದೆ. ಪರಸ್ಪರ ಬಣ್ಣ ಎರಚಿ, ಸಮಾನತೆ ಸಾರುವುದರ ಜತೆಗೆ ಸಹೋದರತ್ವ ಮತ್ತು ಶಾಂತಿ ಸಂದೇಶ ಸಾರುವ ಬಣ್ಣದಾಟದಲ್ಲಿ ಭಾಗಿಯಾಗಿರುವುದು ಹೆಮ್ಮೆ ತಂದಿದೆ ಅಂತ ಇಂಗ್ಲೆಂಡ್‌ ಪ್ರವಾಸಿಗರು ಶರೋನ್‌, ಟೋನಿ ತಿಳಿಸಿದ್ದಾರೆ. 

click me!