ದಾವಣಗೆರೆಯ ರಸ್ತೆಗಳಲ್ಲಿ ಧಾಂ ಧೂಂ ಧೂಳೆಬ್ಬಿಸಿದ ಹೋಳಿ ಸಂಭ್ರಮ

By Suvarna NewsFirst Published Mar 8, 2023, 4:33 PM IST
Highlights

ಹೋಳಿ ಅಂದ್ರೆ ದಾವಣಗೆರೆಯಲ್ಲಿ ಅದೆಂಥಾ ಸಂಭ್ರಮ! ಹೋಳಿ ದಿನ ರಾಂ ಅಂಡ್ ಸರ್ಕಲ್ ಹೋಗಿ ಹೆಜ್ಜೆ ಹಾಕಲಿಲ್ಲ ಅಂದ್ರೆ ಹೋಳಿ ಮುಗಿಯೋದಿಲ್ಲ. 

ವರದಿ: ವರದರಾಜ್, ದಾವಣಗೆರೆ

ಬಣ್ಣದಲ್ಲಿ ಮಿಂದೆದ್ದ ಯುವಸಮೂಹ, ಡಿಜೆ ಸದ್ದಿಗೆ ಸಖತ್ ಸ್ಟೆಪ್ ಹಾಕಿದ ಯುವತಿಯರು. ಚಿಣ್ಣರ ಕಿರುಚಾಟದ ಸಂಭ್ರಮ ಇದೆಲ್ಲಾ ದಾವಣಗೆರೆಯ ರಾಮ್ ಅಂಡ್ ಕೋ ಸರ್ಕಲ್ ನಲ್ಲಿ ಕಂಡು ಬಂದ ದೃಶ್ಯ. ಹೋಳಿ ಹಬ್ಬದ ಹಿನ್ನೆಲೆಯಲ್ಲಿ ದಾವಣಗೆರೆ ನಗರಾದ್ಯಂತ ಯುವಕರು ಬಣ್ಣ ಹಚ್ಚಿಕೊಂಡು ಸಂಭ್ರಮಿಸುತ್ತಿದ್ದಾರೆ.
ವಿವಿಧ ಬಡಾವಣೆಗಳಲ್ಲಿ ಮಕ್ಕಳು, ಹಿರಿಯರೆನ್ನದೆ ಎಲ್ಲರೂ ಹಬ್ಬದ ಸಡಗರದಲ್ಲಿ ಪಾಲ್ಗೊಂಡಿದ್ದಾರೆ. ಕುಟುಂಬದವರು, ಸ್ನೇಹಿತರು ಬಣ್ಣ ಹಚ್ಚಿಕೊಂಡು ಖುಷಿ ಪಡುತ್ತಿದ್ದಾರೆ.
ಪ್ರತಿಬಾರಿಯಂತೆ ರಾಮ್ ಅಂಡ್ ಕೋ ವೃತ್ತ ಸೇರಿದಂತೆ ಹಲವೆಡೆ ವಿವಿಧ ಸಮಿತಿ ವತಿಯಿಂದ ಹೋಳಿ ಹಬ್ಬ ಆಚರಣೆ ಮಾಡಲಾಗುತ್ತಿದೆ. ಬಣ್ಣ ಹಚ್ಚಿಕೊಂಡು, ತಮಟೆ ಮತ್ತು ಹಾಡಿಗೆ ಯುವ ಸಮೂಹ ಸಖತ್ ಡಾನ್ಸ್ ಮಾಡುತ್ತಿದ್ದಾರೆ. ಪ್ರತಿ ವರ್ಷದಂತೆ ವಿವಿಧ ಬಡಾವಣೆಗಳಲ್ಲಿ ಮಕ್ಕಳು, ಮಹಿಳೆಯರು, ಯುವಕರು ಹಬ್ಬದ ಆಚರಣೆ ಮಾಡುತ್ತಿದ್ದಾರೆ.
ಬಣ್ಣದ ಓಕುಳಿಯಲ್ಲಿ ಮಿಂದಿದ್ದ ಯುವಕರು ದಾವಣಗೆರೆ ನಗರದ ವಿವಿಧೆಡೆ ಬೈಕ್ ರೈಡ್ ಮಾಡಿ ಸುತ್ತಾಡಿ ಸಂಭ್ರಮಿಸಿದ್ದಾರೆ. ಹೋಳಿ ಹಬ್ಬದ ಹಿನ್ನೆಲೆ ನಗರದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. 

Latest Videos

Tuesday Tips: ಬ್ರಹ್ಮಚಾರಿ ಆಂಜನೇಯನ ಪೂಜೆ ಮಾಡುವಾಗ ಮಹಿಳೆಯರು ಈ 4 ವಿಷಯ ನೆನಪಿಟ್ಕೊಳ್ಬೇಕು!

ಬಗೆಬಗೆಯ ಬಣ್ಣಗಳು..
ಹೋಳಿ ಎಂದರೆ ಬಣ್ಣಗಳ ಹಬ್ಬ. ಈ ಹಬ್ಬವನ್ನು ಬಣ್ಣ ಬಣ್ಣದ ಪುಡಿಗಳು ಮತ್ತು ನೀರಿನಿಂದ ತಯಾರಿಸಿ ಎರಚುತ್ತಿದ್ದ ದೃಶ್ಯ ಎಲ್ಲೆಡೆ ಕಂಡು ಬಂದಿತು. ಯುವತಿಯರು ಹಾಡುತ್ತಾ, ನೃತ್ಯಗಳೊಂದಿಗೆ ಹಬ್ಬದ ಸಡಗರದಲ್ಲಿದ್ದರು. ಹೋಳಿಯಲ್ಲಿ ವಿವಿಧ ರೀತಿಯ ಬಣ್ಣಗಳನ್ನು ಬಳಸಲಾಗಿತ್ತು. ಒಣ ಬಣ್ಣಗಳನ್ನು ಪುಡಿ ರೂಪದಲ್ಲಿ ಪರಸ್ಪರ ಹಚ್ಚಿ ಸಂಭ್ರಮಿಸಿದರು. ಕೆಲವರಂತೂ ವಿಶೇಷವಾಗಿ ತರಕಾರಿ ಹಾಗೂ ಹಣ್ಣಿನಿಂದ ಪೇಸ್ಟ್ ತಯಾರಿಸಿ ಹರ್ಬಲ್ ಹೋಳಿ ಆಚರಿಸಿದ್ದು ಕಂಡುಬಂದಿತು. 

Brave Girls: ಈ 3 ರಾಶಿಯ ಹೆಣ್ಮಕ್ಕಳು ಸಾಕ್ಷಾತ್ ಧೈರ್ಯವಾನ್ ಲಕ್ಷ್ಮೀದೇವಿಯರೇ!

ಡಿಜೆ ಸದ್ದಿಗೆ ಸಖತ್ ಸ್ಟೆಪ್..
ನಗರದ ರಾಮ್ ಅಂಡ್ ಕೋ ವೃತ್ತದಲ್ಲಿ ಮಹಿಳೆಯರು, ಮಕ್ಕಳು ಹಾಗೂ ಯುವಸಮೂಹ ಬಣ್ಣದ ಲೋಕದಲ್ಲಿ ಮುಳುಗಿದ್ದಾರೆ. ಡಿಜೆಯ ಭರ್ಜರಿ ಸದ್ದಿಗೆ ಮನಬಂದಂತೆ ಸ್ಟೆಪ್ ಹಾಕಿ ಕುಣಿದಿದ್ದು ಕಂಡು ಬಂದಿತ್ತು. ಪ್ರತಿ ಹಾಡಿಗೂ ಕೇಕೆ ಹಾಕುತ್ತಾ ಬಣ್ಣ ಎರಚುತ್ತಾ ಡ್ಯಾನ್ಸ್ ಮಾಡಿದ ಯುವಕರು ನೆತ್ತಿ ಮೇಲೆ ಮೊಟ್ಟೆ ಕುಕ್ಕಿ ಸಂಭ್ರಮಿಸಿದರು. ಯುವತಿಯರು ತಂಡ ಕಟ್ಟಿಕೊಂಡು ಡ್ಯಾನ್ಸ್ ಮಾಡುತ್ತಿದ್ದ ದೃಶ್ಯ ಕಂಡುಬಂದಿತು. ಒಟ್ಟಾರೆ ದಾವಣಗೆರೆಯ ಪ್ರಮುಖ ವೃತ್ತವಾದ ರಾಮ್ ಅಂಡ್ ಕೋ ಸರ್ಕಲ್ ಜನಜಂಗುಳಿಯಿಂದ ತುಂಬಿ ಹೋಗಿತ್ತು.

click me!