ಸೌಹಾರ್ದತೆ ಹೋಳಿ ಆಚರಣೆಗೆ ಸಾಕ್ಷಿ ಆಯ್ತು ಹುಬ್ಬಳ್ಳಿ. ಮುಗಿಲು ಮುಟ್ಟಿದ ಸಂಭ್ರಮಾಚರಣೆ. ಡಿ.ಜೆ, ರೇನ್ ಡ್ಯಾನ್ಸ್ ಮಧ್ಯೆ ಭರ್ಜರಿ ಅಪ್ಪು ನಮನ.
ವರದಿ :- ಗುರುರಾಜ ಹೂಗಾರ, ಏಷ್ಯಾನೆಟ್ ಸುವರ್ಣನ್ಯೂಸ್, ಹುಬ್ಬಳ್ಳಿ
ಎಲ್ಲೆಡೆಯೂ ಬಣ್ಣ ಬಣ್ಣದ ಚಿತ್ತಾರ. ಮುಗಿಲು ಮುಟ್ಟಿದ ಹರ್ಷೋದ್ಗಾರ, ಬಣ್ಣ ಎರಚುತ್ತಿರುವ ಪುಟ್ಟ ಪುಟ್ಟ ಕೈಗಳು. ಹುಚ್ಚೆದ್ದು ಕುಣಿಯುತ್ತಿರುವ ಪಡ್ಡೆಗಳು. ಕಿಲ್ಲರ್ ಕೊರೊನಾ ಕಾರಣಕ್ಕೆ ಎರಡು ವರ್ಷದಿಂದ ಬಣ್ಣದೋಕುಳಿಗೆ ಕೊಂಚ ಮಂಕು ಕವಿದಿತ್ತು. ಆದ್ರೆ ಈ ಬಾರಿ ಬಣ್ಣದ ಹಬ್ಬಕ್ಕೆ ಕೊರೋನಾ ಕರಿನೆರಳು ದೂರ ಸರಿದಿದ್ದು, ಎಲ್ಲೆಡೆಯೂ ಹರ್ಷದ ಹೊನಲು ಚಿಗುರೊಡೆದಿದೆ. ಯುವಕರ-ಯುವತಿಯರು, ಮಕ್ಕಳ ಖುಷಿಗಂತೂ ಪಾರವೆ ಇರಲಿಲ್ಲ. ಹಿರಿ-ಕಿರಿಯರೆಂಬ ಭೇದ ಭಾವ ಮರೆತು ಬಣ್ಣದಲ್ಲಿ ಮಿಂದೆದ್ದು ಸಂಭ್ರಮಿಸಿದ್ರು. ಇಂಥದೊಂದು ಅದ್ಭುತ ಕ್ಷಣಕ್ಕೆ ಸಾಕ್ಷಿಯಾಗಿದ್ದು ಹುಬ್ಬಳ್ಳಿ.
ಹೌದು, ಹುಬ್ಬಳ್ಳಿಯಲ್ಲಿ ಇಂದು ಹೋಳಿ ಹಬ್ಬ ಜೋರು. ಇದಕ್ಕೆ ಇತಿಹಾಸವೇ ಇದೆ.
ಹೀಗೆ ಹಿರಿಯರು ಕಿರಿಯರು ಎನ್ನದೇ ಪರಸ್ಪರ ಬಣ್ಣ ಹಚ್ಚುತ್ತಿರುವ ಜನರು, ಜಾತಿ, ಮತ ಬೇಧವನ್ನು ಬದಿಗಿಟ್ಟು ಆಚರಣೆಯಲ್ಲಿ ನಿರತರಾದ ಸಹೃದಯಿ ಸ್ನೇಹಿತರು. ಇದೆಲ್ಲದಕ್ಕೂ ಕಾರಣವಾಗಿದ್ದು, ಹುಬ್ಬಳ್ಳಿಯ ಕಮರಿಪೇಟೆ. ಹೌದು.. ಹುಬ್ಬಳ್ಳಿಯ ಕಮರಿಪೇಟೆಯ ಹೋಳಿ ಆಚರಣೆ ಅಂದರೆ ಅದಕ್ಕೆ ತನ್ನದೆ ಆದ ಇತಿಹಾಸವಿದೆ. ಹೋಳಿ ಹಬ್ಬದ ವೇಳೆ ಪ್ರತಿಷ್ಠಾಪನೆಗೊಳ್ಳುವ ಕಾಮಣ್ಣನ ದರ್ಶನಕ್ಕೆ ನಾಡಿನ ವಿವಿಧ ಮೂಲೆಗಳಿಂದ ಭಕ್ತರು ಬರುತ್ತಾರೆ. ಹರಕೆ ಹೊತ್ತು, ಇಷ್ಟಾರ್ಥ ಸಿದ್ಧಿಗೆ ಇಲ್ಲಿನ ಕಾಮಣ್ಣನ ಪೂಜಿಸ್ತಾರೆ.
ಮಸೀದಿಗೆ ಭೇಟಿ ನೀಡಿ ಭಾತೃತ್ವದ ಮೆರೆದ ಗವಿ ಸಿದ್ದೇಶ್ವರ ಸ್ವಾಮೀಜಿ
ಅಷ್ಟೇ ಅಲ್ಲ, ಕಾನೂನು ಸುವ್ಯವಸ್ಥೆ ದೃಷ್ಟಿಯಿಂದಲೂ ಹುಬ್ಬಳ್ಳಿಯ ಹೋಳಿ ಅತ್ಯಂತ ಸೂಕ್ಷ್ಮ ಪ್ರದೇಶ. ಇದೇ ಕಾರಣಕ್ಕೆ ಹುಬ್ಬಳ್ಳಿಯ ರಂಗ ಪಂಚಮಿ ಆಚರಣೆ ವೇಳೆ ಬರೋಬ್ಬರಿ ಎರಡು ಸಾವಿರ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿರುತ್ತೆ. ಮುಸ್ಲಿಂ ಜನವಸತಿಯ ಪ್ರದೇಶದಿಂದಲೇ ಕಾಮಣ್ಣನ ಮೆರವಣಿಗೆ ಹಾದು ಹೋಗುವುದ್ರಿಂದ ಬಿಗಿ ಭದ್ರತೆ ಕೈಗೊಳ್ಳಲಾಗುತ್ತೆ.
ಅಪ್ಪುಗೆ ವಿಶೇಷ ಗೌರವ ಸಲ್ಲಿಸಿದ ಹುಬ್ಬಳ್ಳಿ ಜನ
ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ನಿಧನರಾಗಿ ಸುಮಾರು ದಿನಗಳೇ ಕಳೆದರೂ ಹುಬ್ಬಳ್ಳಿಯ ಜನರಲ್ಲಿ ಮಾತ್ರ ಅಭಿಮಾನ ಕಿಂಚಿತ್ತೂ ಮರೆಯಾಗಿಲ್ಲ. ರಂಗಪಂಚಮಿ ಆಚರಣೆಯಲ್ಲಿಯೂ ಕೂಡ ಪುನೀತ್ ರಾಜ್‍ಕುಮಾರ್ ನೆನೆದು ಅಭಿಮಾನಿಗಳು ವಿಶೇಷವಾಗಿ ಗೌರವ ಸಮರ್ಪಣೆ ಮಾಡಿದರು.
crystalಗಳಿಂದ ಮನೆಗೆ ತನ್ನಿ ನವಚೈತನ್ಯ, ಹೊಸ ಕಳೆ
ಹೌದು... ಗೊಂಬೆ ಹೇಳುತೈತೆ.... ಮತ್ತೆ ಹೇಳುತೈತೆ ನೀನೇ ರಾಜಕುಮಾರ ಹಾಡಿಗೆ ಅಪ್ಪು ಭಾವಚಿತ್ರ ಹಿಡಿದುಕೊಂಡು ಡ್ಯಾನ್ಸ್ ಮಾಡುವ ಮೂಲಕ ರಂಗ ಪಂಚಮಿಯನ್ನ ವಿನೂತನವಾಗಿ ಆಚರಣೆ ಮಾಡಿದ್ದಾರೆ. ಹುಬ್ಬಳ್ಳಿಯ ವಿದ್ಯಾನಗರದಲ್ಲಿ ಮಹಿಳೆಯರು, ಮಕ್ಕಳು, ಯುವಕ, ಯುವತಿಯರು ಪುನೀತ್ ರಾಜ್‍ಕುಮಾರ್ ಅವರ ಹಾಡಿಗೆ ಸಖತ್ ಸ್ಟೆಪ್ ಹಾಕುವ ಮೂಲಕ ಅಪ್ಪು ಮೇಲಿನ ಅಭಿಮಾನವನ್ನು ಎತ್ತಿ ತೋರಿಸಿದರು.
ಭಾನುವಾರವಷ್ಟೇ ಹುಬ್ಬಳ್ಳಿಯಲ್ಲಿ ಜಗ್ಗಲಗಿ ಹೋಳಿ ಭರ್ಜರಿ ವಿಜೃಂಭಣೆಯಿಂದ ನಡೆದಿತ್ತು. ರಾಜ್ಯದ ವಿವಿಧ ಭಾಗಗಳಿಂದ ಬಂದಿದ್ದ ಕೋಲಾಟ ತಂಡಗಳು, ಡೋಲು, ಹಲಗಿ ವಾದ್ಯಗಳು, ವೇಷಧಾರಿಗಳು ಹಬ್ಬಕ್ಕೆ ಮೆರುಗು ತಂದಿದ್ದರು.
ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳ ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.