Food remedies: ಜಾತಕದ ದುರ್ಬಲ ಗ್ರಹಕ್ಕೆ ಬಲ ತುಂಬಲು ಈ ಆಹಾರ ಸೇವಿಸಿ

By Suvarna News  |  First Published Mar 22, 2022, 10:56 AM IST

ಜಾತಕದಲ್ಲಿ ಕೆಲ ಗ್ರಹಗಳು ದುರ್ಬಲವಾಗಿದ್ದಾಗ ಆಹಾರದಿಂದಲೂ ಅವಕ್ಕೆ ಬಲ ತುಂಬಲು ಸಾಧ್ಯವಿದೆ ಎಂಬ ವಿಷಯ ನಿಮಗೆ ಗೊತ್ತೇ? 


ಕೆಲ ಆಹಾರ(food)ಗಳನ್ನು ಸೇವಿಸುವುದರಿಂದ ದುರ್ಬಲ ಗ್ರಹಗಳಿಗೆ ಬಲ ತುಂಬುವ ಜೊತೆಗೆ ಗ್ರಹಗಳ ಕೆಟ್ಟ ಪರಿಣಾಮಗಳನ್ನು ಕೂಡಾ ಕಡಿಮೆ ಮಾಡಬಹುದಾಗಿದೆ ಎಂಬ ವಿಚಾರ ಬಹುತೇಕರಿಗೆ ತಿಳಿದಿಲ್ಲ. ಹೌದು, ಆಹಾರದಿಂದಲೇ ಜಾತಕದ ದುರ್ಬಲ ಗ್ರಹವೂ ಸಕಾರಾತ್ಮಕ ಪರಿಣಾಮ(positive results) ನೀಡಲು ಸಾಧ್ಯವಿದೆ. 

ಈ ಕೆಳಗೆ ಪಟ್ಟಿ ಮಾಡಿರುವ ಆಹಾರಗಳನ್ನು ನಿಮ್ಮ ಡಯಟ್‌ನಲ್ಲಿ ಸೇರಿಸುವುದರಿಂದ ಎಲ್ಲ ಗ್ರಹಗಳ ಅನುಗ್ರಹ ಪಡೆಯಲು ಸಾಧ್ಯವಿದೆ. 

Tap to resize

Latest Videos

ಸೂರ್ಯ(Sun)
ಸೂರ್ಯನು ಯಶಸ್ಸು, ಆತ್ಮವಿಶ್ವಾಸ(confidence), ಗೌರವ, ಆರೋಗ್ಯ ತಂದುಕೊಡುವ ಗ್ರಹವಾಗಿದ್ದಾನೆ. ಸೂರ್ಯನನ್ನು ಜಾತಕದಲ್ಲಿ ಬಲಪಡಿಸಲು ನಿಮ್ಮ ಆಹಾರದಲ್ಲಿ ಬೆಲ್ಲ, ಮಾವಿನ ಹಣ್ಣು ಹಾಗೂ ಗೋಧಿಯನ್ನು ಸೇರಿಸಿ. ಭಾನುವಾರದ ದಿನ ಈ ಆಹಾರ ಪದಾರ್ಥಗಳನ್ನು ದಾನ ಮಾಡುವುದು ಕೂಡಾ ಶ್ರೇಷ್ಠವಾಗಿದೆ. 

ಚಂದ್ರ(Moon)
ಚಂದ್ರನು ಮಾನಸಿಕ ಸ್ಥಿತಿಗತಿಯ ಕಾರಕನಾಗಿದ್ದಾನೆ. ಚಂದ್ರನ ಉತ್ತಮ ಪರಿಣಾಮಗಳನ್ನು ಪಡೆಯಲು ಕಬ್ಬು, ಸಕ್ಕರೆ, ಹಾಲು(Milk) ಮತ್ತು ಹಾಲಿನಿಂದ ಮಾಡಿದ ಸಿಹಿತಿನಿಸುಗಳು, ಐಸ್ ಕ್ರೀಮ್ ಇತ್ಯಾದಿ ತಿಂಡಿಗಳನ್ನು ಸೇವಿಸಿ. 

ವಾರದ ಯಾವ ದಿನ ಯಾವ ಕೆಲಸ ಮಾಡಲೇಬಾರದು ತಿಳ್ಕೊಂಡಿದೀರಾ?

ಗುರು(Jupiter)
ಜ್ಯೋತಿಷ್ಯದಲ್ಲಿ ಗುರುವನ್ನು ಅತ್ಯಂತ ಮಂಗಳಕರ ಗ್ರಹವೆಂದು ಪರಿಗಣಿಸಲಾಗಿದೆ. ಈ ಗ್ರಹವು ಬಲವಾಗಿದ್ದರೆ, ವ್ಯಕ್ತಿಯು ಜೀವನದ ಎಲ್ಲ ವಿಷಯಗಳಲ್ಲೂ ಅದೃಷ್ಟವಂತನಾಗಿರಲು ಸಾಧ್ಯವಿದೆ. ಗುರುವಿಗೆ ಬಲ ನೀಡಿ, ನಿಮ್ಮ ವಿಷಯದಲ್ಲಿ ಆತನ ಕೃಪೆ ಪಡೆಯಲು ಬೇಳೆ, ಹಿಟ್ಟು, ಜೋಳ, ಬಾಳೆಹಣ್ಣು(banana), ಅರಿಶಿನ, ಕಲ್ಲುಪ್ಪು, ಹಳದಿ ಕಾಳುಗಳು ಮತ್ತು ಹಣ್ಣುಗಳನ್ನು ಸೇವಿಸಿ.

ರಾಹು ಮತ್ತು ಕೇತು(Rahu ketu)
ರಾಹು ಮತ್ತು ಕೇತು ಪಾಪಿ ಗ್ರಹಗಳು. ಅವುಗಳು ಬಲವಾಗಿದ್ದರೆ ಹೆಚ್ಚು ತೊಂದರೆ ಉಂಟು ಮಾಡುತ್ತವೆ. ಅವುಗಳ ಋಣಾತ್ಮಕ ಪರಿಣಾಮಗಳನ್ನು ತಪ್ಪಿಸಲು ನಿಮ್ಮ ಆಹಾರದಲ್ಲಿ ಉದ್ದಿನಬೇಳೆ, ಎಳ್ಳು ಮತ್ತು ಸಾಸಿವೆಗಳನ್ನು ಹೆಚ್ಚಾಗಿ ಸೇರಿಸಿ ಸೇವಿಸಿ. 

ಬುಧ(mercury)
ಬುಧ ಗ್ರಹವು ಒಬ್ಬರ ಬುದ್ಧಿಶಕ್ತಿ, ವ್ಯಾಪಾರ ಮತ್ತು ಆರ್ಥಿಕ ಸ್ಥಿತಿ(economic status)ಯ ಮೇಲೆ ಪ್ರಭಾವ ಬೀರುತ್ತದೆ. ಇದು ನಿಮಗೆ ಪ್ರತಿಕೂಲ ಫಲಿತಾಂಶಗಳನ್ನು ನೀಡುತ್ತಿದ್ದರೆ, ತಕ್ಷಣದ ಪ್ರಯೋಜನಗಳಿಗಾಗಿ ಅವರೆಕಾಳು, ಬಾರ್ಲಿ(barley), ಹಸಿರು ಬೇಳೆಕಾಳುಗಳು, ಹೆಸರು ಕಾಳು ಮತ್ತು ಹಸಿರು ತರಕಾರಿಗಳ(green vegetables)ನ್ನು ತಿನ್ನಿರಿ.

ಶುಕ್ರ(Venus)
ಶುಕ್ರವು ಭೌತಿಕ ಸಂತೋಷ, ಸೌಂದರ್ಯ(beauty), ಐಶ್ವರ್ಯ ಮತ್ತು ಸಂತೋಷದ ದಾಂಪತ್ಯದ ಕಾರಕ ಗ್ರಹವಾಗಿದೆ. ಭೌತಿಕ ಸಂತೋಷಗಳನ್ನು ಅನುಭವಿಸಲು ಶುಕ್ರ ಕೃಪೆ ಬೇಕು. ತ್ರಿಫಲ, ಸೊಪ್ಪಿನ ಸಕ್ಕರೆ, ಸಕ್ಕರೆ ಮಿಠಾಯಿ, ಮೂಲಂಗಿ, ಬಿಳಿ ಬೇಳೆ ತಿನ್ನುವುದರಿಂದ ಶುಕ್ರದ ಶುಭ ಫಲ ಸಿಗುತ್ತದೆ. 

ಈ ವಸ್ತುಗಳು ಮನೆಯಲ್ಲಿದ್ದರೆ ವಿನಾಶ ಖಂಡಿತಾ! ಕೂಡಲೇ ಹೊರ ಹಾಕಿ..

ಶನಿ ಗ್ರಹ(SAturn)
ಶನಿ ಗ್ರಹವು ಪ್ರತಿಕೂಲವಾಗಿದ್ದರೆ, ಅದು ದೇಹ, ಮನಸ್ಸು ಮತ್ತು ಆರ್ಥಿಕ ಪರಿಸ್ಥಿತಿಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಉತ್ತಮ ಜೀವನಕ್ಕೆ ಶನಿಯ ಕೃಪೆ ಬೇಕೇ ಬೇಕು. ಇದಕ್ಕೆ ಎಳ್ಳು, ಉದ್ದಿನಬೇಳೆ, ಕರಿಮೆಣಸು, ಕಡಲೆ ಎಣ್ಣೆ, ಉಪ್ಪಿನಕಾಯಿ(pickle), ಲವಂಗ, ದಾಲ್ಚಿನಿ ಎಲೆ, ಕಪ್ಪು ಉಪ್ಪು ಸೇವನೆ ಅತ್ಯಗತ್ಯ.

ಮಂಗಳ(Mars)
ಮಂಗಳನ ಅಶುಭವು ವೈವಾಹಿಕ ಜೀವನ, ಭೂಮಿ ಮತ್ತು ಆಸ್ತಿಯಲ್ಲಿ ಸಮಸ್ಯೆಗಳನ್ನು ತರುತ್ತದೆ. ಅದನ್ನು ಬಲಪಡಿಸಲು ಬೆಲ್ಲ, ಉದ್ದಿನಬೇಳೆ, ದಾಳಿಂಬೆ, ಬಾರ್ಲಿ ಮತ್ತು ಜೇನುತುಪ್ಪ(honey)ವನ್ನು ಸೇವಿಸಿ. ಮಂಗಳವಾರದ ದಿನ ಈ ವಸ್ತುಗಳನ್ನು ದಾನ ಮಾಡುವುದು ಕೂಡಾ ಉತ್ತಮ ಫಲ ನೀಡುತ್ತದೆ. 

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳ ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

click me!