Astrology And Relationship: ಸಂಗಾತಿ ಜೊತೆ ಸರಸ ಹೆಚ್ಚಲು ಸರಳ ಟಿಪ್ಸ್

By Suvarna News  |  First Published Jan 1, 2022, 12:59 PM IST

ಮೈಮೇಲಿರುವ ನೂರೆಂಟು ಜವಾಬ್ದಾರಿ,ಒತ್ತಡದ ಕೆಲಸ, ನಗು,ಸಂತೋಷವನ್ನು ಮರೆಸಿದೆ. ಸದಾ ಕಾಡುವ ಟೆನ್ಷನ್ ಪ್ರೀತಿ ಮೇಲೆ ಕಪ್ಪು ಛಾಯೆ ಮೂಡಿಸುತ್ತದೆ. ದಾಂಪತ್ಯಕ್ಕೆ ಅಂಟಿರುವ ಕೊಳೆ ತೊಳೆಯಬೇಕೆಂದ್ರೆ ಹೀಗೆ ಮಾಡಿ.


ಮದುವೆ (Marriage), ಪ್ರೀತಿ(Love )ಹಾಗೂ ವಿಶ್ವಾಸದ ಮೇಲೆ ನಿಂತಿರುತ್ತದೆ. ಇದೊಂದು ನಾಜೂಕಿನ ಸಂಬಂಧ. ಒಂದು ಎಳೆ ತಪ್ಪಿ ಹೋದ್ರೂ ದಾಂಪತ್ಯ ಹಳಸುತ್ತದೆ. ಇತ್ತೀಚಿನ ಒತ್ತಡದ ಜೀವನದಲ್ಲಿ ಸಂಬಂಧ ನಿಭಾಯಿಸುವುದು ಸುಲಭವಲ್ಲ. ಕೆಲಸ ಹಾಗೂ ಸಂಬಂಧದ ಮಧ್ಯೆ ಸಂತುಲನ ಕಾಪಾಡಿಕೊಳ್ಳುವುದು ಕಷ್ಟ. ಮನಸ್ಸು ಸಂಬಂಧ ಉಳಿಸಿಕೊಳ್ಳಲು ಬಯಸಿದ್ದರೂ ಪರಿಸ್ಥಿತಿ ದಾಂಪತ್ಯದಲ್ಲಿ ಬಿರುಕು ಮೂಡಿಸುತ್ತದೆ. ಜ್ಯೋತಿಷ್ಯ (Astrology )ಶಾಸ್ತ್ರದಲ್ಲಿ ಮದುವೆ,ದಾಂಪತ್ಯದ ಬಗ್ಗೆ ಸಾಕಷ್ಟು ಸಲಹೆಗಳನ್ನು ನೀಡಲಾಗಿದೆ. ದಂಪತಿ ಮಧ್ಯೆ ಮುನಿಸು,ಕೋಪ,ಭಿನ್ನಾಭಿಪ್ರಾಯ ಹೆಚ್ಚಾದರೆ ಏನು ಮಾಡಬೇಕು ಎಂಬುದನ್ನೂ ಹೇಳಲಾಗಿದೆ. ದಾಂಪತ್ಯ ಉಳಿಯಬೇಕು,ಸಂಬಂಧ ಗಟ್ಟಿಯಾಗಿರಬೇಕೆಂದು ಬಯಸುವ ದಂಪತಿ ಕೆಲ ಸಣ್ಣಪುಟ್ಟ ಉಪಾಯಗಳನ್ನು ಅನುಸರಿಸುವ ಮೂಲಕ ಸಂತೋಷದ ಜೀವನ ನಡೆಸಬಹುದು. 

ಇಬ್ಬರ ಮಧ್ಯೆ ಹೊಂದಾಣಿಕೆ ಬರಬೇಕೆಂದರೆ ಹೀಗೆ ಮಾಡಿ : ಕರ್ಪೂರವನ್ನು ದೇವರ ಪೂಜೆಗೆ ಬಳಸಲಾಗುತ್ತದೆ. ವಾಸ್ತುಶಾಸ್ತ್ರದಲ್ಲೂ ಕರ್ಪೂರಕ್ಕೆ ಮಹತ್ವದ ಸ್ಥಾನವಿದೆ. ಮನೆ ತುಂಬ ಕರ್ಪೂರದ ದೀಪ ಬೆಳಕಿದರೆ ಮನೆಯಲ್ಲಿರುವ ನಕಾರಾತ್ಮಕ ಶಕ್ತಿ ದೂರವಾಗುತ್ತದೆ ಎಂದು ನಂಬಲಾಗಿದೆ. ಹಾಗೆ ಕರ್ಪೂರ ದಂಪತಿ ಮಧ್ಯೆ ಹೊಂದಾಣಿಕೆ ಹೆಚ್ಚಿಸುತ್ತದೆ. ಇದಕ್ಕಾಗಿ ಮೊದಲು 125 ಗ್ರಾಂ ಕರ್ಪೂರವನ್ನು ಮನೆಗೆ ತನ್ನಿ. ಈ ಕರ್ಪೂರವನ್ನು ಮೂರನೇ ಶುಕ್ರವಾರ,ಐದನೇ ಶುಕ್ರವಾರ ಹಾಗೂ ಏಳನೇ ಶುಕ್ರವಾರ ಹರಿಯುತ್ತಿರುವ ನದಿಯಲ್ಲಿ ಹರಿದು ಬಿಡಿ. ಇದಲ್ಲದೆ ಪ್ರತಿ ದಿನ ದಂಪತಿ ಮಲಗುವ ಕೋಣೆಯಲ್ಲಿ ಕರ್ಪೂರವನ್ನು ಹಚ್ಚಿಬೇಕು ಇದು ದಂಪತಿ ಮಧ್ಯೆ ಹೊಂದಾಣಿಕೆ ಹೆಚ್ಚಿಸುತ್ತದೆ.

Tap to resize

Latest Videos

undefined

ಕರ್ಪೂರದ ಜೊತೆ ಜೇನುತುಪ್ಪ ಕೂಡ ಇಬ್ಬರ ಮಧ್ಯೆ ಸಂಬಂಧ ಗಟ್ಟಿಗೊಳಿಸಲು, ಪರಸ್ಪರ ಅರ್ಥ ಮಾಡಿಕೊಳ್ಳಲು ನೆರವಾಗುತ್ತದೆ. ಗಾಜಿನ ಬಾಟಲಿಯಲ್ಲಿ ಜೇನು ತುಪ್ಪವನ್ನು ಹಾಕಿ ಅದನ್ನು ಹಾಸಿಗೆಯ ತಲೆ ಭಾಗದಲ್ಲಿ ಇಟ್ಟು ಮಲಗಬೇಕು. ಹೀಗೆ ಮಾಡುವುದರಿಂದ ಇಬ್ಬರ ನಡುವಿನ ಪರಸ್ಪರ ತಿಳುವಳಿಕೆ ಬಲಗೊಳ್ಳುತ್ತದೆ ಮತ್ತು ನಿಮ್ಮ ಸುತ್ತಲೂ ಸಂತೋಷ ಮನೆ ಮಾಡುತ್ತದೆ.

New Year 2022: ಭಾರತಕ್ಕೆ ಶುಭಕರ ಸಂಯೋಜನೆಯ ವರ್ಷ, ರಾಜ್ಯದಲ್ಲಿ ನಾಯಕತ್ವ ಬದಲಾವಣೆ!

77 ದಿನ ಈ ಉಪಾಯ ಮಾಡಿ ಚಮತ್ಕಾರ ನೋಡಿ : ಶಿವ-ಪಾರ್ವತಿಯರ ಪೂಜೆ,ಆರಾಧನೆಯಿಂದಲೂ ದಾಂಪತ್ಯ ಗಟ್ಟಿಯಾಗುತ್ತದೆ. ಸದಾ ದಂಪತಿ ಮಧ್ಯೆ ಪ್ರೀತಿ,ಸಹಬಾಳ್ವೆ ಇರಬೇಕೆಂದರೆ ಶಿವ-ಪಾರ್ವತಿ ಜಪ ಮಾಡಬೇಕು. ಇದಕ್ಕೆ ಸೋಮವಾರ ಒಳ್ಳೆಯ ದಿನ. ಸೋಮವಾರ ಗೌರಿ-ಶಂಕರ ರುದ್ರಾಕ್ಷಿಯನ್ನು ಕೆಂಪು ದಾರದಲ್ಲಿ ಕಟ್ಟಬೇಕು. ನಂತರ ಒಂದು ಮಾಲೆಯಷ್ಟು ಜಪ ಮಾಡಬೇಕು. ಜಪ ಮಾಡುವಾಗ ಓಂ ನಮಃ ಶಿವಾಯ ಮಂತ್ರವನ್ನು ಜಪಿಸಬೇಕು.ಜಪ ಮುಗಿದ ಮೇಲೆ ರುದ್ರಾಕ್ಷಿಯನ್ನು ಇಬ್ಬರೂ ಧರಿಸಬೇಕು. 

ಇದಲ್ಲದೆ ದೇವರ ಮನೆಯಲ್ಲಿ ಪಾದರಸದ ಶಿವಲಿಂಗವನ್ನು ಸ್ಥಾಪನೆ ಮಾಡಬೇಕು. ಪ್ರತಿದಿನ ಬೆಳಿಗ್ಗೆ ಕಪ್ಪು ಎಳ್ಳು ಮತ್ತು ದೇಸಿ ತುಪ್ಪದೊಂದಿಗೆ ಅಭಿಷೇಕ ಮಾಡಬೇಕು. ಪೂಜೆ ಮಾಡುವಾಗ ಪತಿ ಓಂ ನಮಃ ಶಿವಾಯ ಮಂತ್ರವನ್ನು ಜಪಿಸಬೇಕಾಗುತ್ತದೆ. ಪತ್ನಿಯಾದವಳು ಕೇವಲ ನಮಃ ಶಿವಾಯ ಮಂತ್ರವನ್ನು ಹೇಳಬೇಕು. ಇಬ್ಬರು ಸುಮಾರು 15 ನಿಮಿಷಗಳ ಕಾಲ ಪ್ರತಿ ನಿತ್ಯ ಜಪ ಮಾಡಬೇಕು. ಹೀಗೆ 77 ದಿನಗಳ ಕಾಲ ಈ ಪೂಜೆ ಮಾಡಿದಲ್ಲಿ ದಾಂಪತ್ಯ ಬಿರುಕು ಕಡಿಮೆಯಾಗಿ,ನೆಮ್ಮದಿ ನೆಲೆಸುತ್ತದೆ.

Career Prediction 2022: ಹೊಸ ವರ್ಷದಲ್ಲಿ ಯಾವ ರಾಶಿಗೆ ಉದ್ಯೋಗದಲ್ಲಿ ಏಳ್ಗೆ?

ಹೀಗೆ ಮಾಡಿದ್ರೆ ಕಾಡಲ್ಲ ದಾಂಪತ್ಯದಲ್ಲಿ ಯಾವುದೇ ಕೊರತೆ : ಹಿಂದೂ ಧರ್ಮದಲ್ಲಿ ಬಾಳೆ ಗಿಡಕ್ಕೆ ಮಹತ್ವದ ಸ್ಥಾನವಿದೆ. ಅದನ್ನು ಪೂಜೆ ಮಾಡಲಾಗುತ್ತದೆ. ದಾಂಪತ್ಯ ಜೀವನದಲ್ಲಿ ಯಾವುದೇ ಕೊರತೆಯಾಗಬಾರದು ಎನ್ನುವವರು ಬಾಳೆ ಗಿಡವನ್ನು ಪೂಜಿಸಬೇಕಾಗುತ್ತೆ. ಗುರುವಾರ ಬಾಳೆ ಗಿಡದ ಕೆಳಗೆ ಎಳ್ಳಿನ ಎಣ್ಣೆ ದೀಪವನ್ನು ಹಚ್ಚಬೇಕು. ಇದಲ್ಲದೆ ಶುಕ್ಲ ಪಕ್ಷದ ಗುರುವಾರ ಕಂಚಿನ ಪಾತ್ರೆಯಲ್ಲಿ ಎಣ್ಣೆಯನ್ನು ಹಾಕಿ,ಪತಿ ಪತ್ನಿ ಇಬ್ಬರು ಎಣ್ಣೆಯಲ್ಲಿ ಕಾಣುವ ಪ್ರತಿಬಿಂಬ ನೋಡಿ ಅದನ್ನು ದೇವಸ್ಥಾನಕ್ಕೆ ದಾನ ನೀಡಬೇಕು.     

click me!