ಇಂದು ಮಧ್ಯಾಹ್ನ 12 ಗಂಟೆ ಸುಮಾರಿಗೆ ಹಾಸನಾಂಬೆ ದೇಗುಲದ ಗರ್ಭಗುಡಿ ಬಂದ್ ಆಗಲಿದೆ. ಶಾಸ್ತ್ರೋಕ್ತವಾಗಿ ಗರ್ಭಗುಡಿಯ ಬಾಗಿಲು ಮುಚ್ಚಲಿರುವ ಪುರೋಹಿತರು
ಹಾಸನ(ಅ.27): ಹಾಸನಾಂಬೆ ಹಾಗೂ ಸಿದ್ದೇಶ್ವರ ಜಾತ್ರಾ ಮಹೋತ್ಸವ ಹಿನ್ನೆಲೆಯಲ್ಲಿ ದೇವಾಲಯದ ಆವರಣದಲ್ಲಿ ಕೆಂಡೋತ್ಸವ ನಡೆದಿದೆ. ಕೆಂಡೋತ್ಸವದಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು. ಸಿದ್ದೇಶ್ವರ ಸ್ವಾಮಿ ಉತ್ಸವ ನಡೆಸಿದ ಬಳಿಕ ಕೆಂಡೋತ್ಸವ ನಡೆದಿದೆ.
ಇಂದು(ಗುರುವಾರ) ಮಧ್ಯಾಹ್ನ 12 ಗಂಟೆ ಸುಮಾರಿಗೆ ಹಾಸನಾಂಬೆ ದೇಗುಲದ ಗರ್ಭಗುಡಿ ಬಂದ್ ಆಗಲಿದೆ. ಪುರೋಹಿತರು ಶಾಸ್ತ್ರೋಕ್ತವಾಗಿ ಗರ್ಭಗುಡಿಯ ಬಾಗಿಲು ಮುಚ್ಚಲಿದ್ದಾರೆ.
undefined
ಹಾಸನಾಂಬೆಯಲ್ಲಿ ಭೀಕರ ಭವಿಷ್ಯ ನುಡಿದ ಬ್ರಹ್ಮಾಂಡ ಗುರೂಜಿ
ಜಿಲ್ಲಾ ಉಸ್ತುವಾರಿ ಸಚಿವ ಗೋಪಾಲಯ್ಯ, ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿ ಸೇರಿದಂತೆ ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ಸಮ್ಮುಖದಲ್ಲಿ ಗರ್ಭಗುಡಿ ಬಾಗಿಲು ಕ್ಲೋಸ್ ಆಗಲಿದೆ. ಹೀಗಾಗಿ ಇಂದು 11 ಗಂಟೆಯವರೆಗೂ ಹಾಸನಾಂಬೆಗೆ ನೈವೇದ್ಯ ನಡೆಯಲಿದೆ. 11 ಗಂಟೆ ನಂತರ ಗರ್ಭಗುಡಿ ಕ್ಲೋಸ್ ಮಾಡೋದಕ್ಕೆ ವಿಧಿವಿಧಾನ ಆರಂಭವಾಗಲಿದೆ. ಮತ್ತೆ ಮುಂದಿನ ವರ್ಷ ಹಾಸನಾಂಬೆಯ ದರ್ಶನ ಸಿಗಲಿದೆ.