ಗುರು ಪೂರ್ಣಿಮಾ ಜುಲೈ 2022: ಯಾವಾಗ, ಮಹತ್ವವೇನು? ಆಚರಣೆ ಹೇಗೆ?

By Suvarna NewsFirst Published Jul 3, 2022, 1:31 PM IST
Highlights

ಗುರು ಪೂರ್ಣಿಮೆಯನ್ನು ವ್ಯಾಸರಿಗೆ ಸಮರ್ಪಿಸಲಾಗಿದೆ. ಈ ದಿನ ನಿಮ್ಮ ಬದುಕಿನ ಗುರುಗಳಿಗೆ ಕೃತಜ್ಞತೆ ಸಲ್ಲಿಸುವ ದಿನ. 

ಸಂಸ್ಕೃತದ ಗುರು ಎಂಬ ಪದವು ಗು ಮತ್ತು ರು ಎಂಬ ಅಕ್ಷರಗಳಿಂದ ಬಂದಿದೆ. ಇಲ್ಲಿ ಗು ಎಂದರೆ ಅಜ್ಞಾನ/ಕತ್ತಲೆ ಮತ್ತು ರು ಎಂದರೆ ನಿವಾರಣೆ/ತೆಗೆಯುವಿಕೆ. ಅಜ್ಞಾನ(ignorance)ವನ್ನು ಕಿತ್ತೊಗೆಯುವವನೇ ಗುರು. ಹಿಂದೂ ಧರ್ಮದಲ್ಲಿ ಗುರುವಿಗೆ ದೇವರ ಸ್ಥಾನವನ್ನು ನೀಡಲಾಗಿದೆ. ಪ್ರತಿಯೊಬ್ಬರ ಬದುಕಿನಲ್ಲೂ ಸಾಕಷ್ಟು ಗುರುಗಳಿರುತ್ತಾರೆ. ಕೇವಲ ಅಕ್ಷರ ಕಲಿಸಿದವರಲ್ಲ, ಜೀವನ ಪಾಠ ಹೇಳಿಕೊಡುವ ಅಪ್ಪ, ಅಮ್ಮನಿಂದ ಹಿಡಿದು ಅಪರಿಚಿತರವರೆಗೆ ಏನೊಂದು ಒಳ್ಳೆಯದು ಕಲಿಸಿದವರೆಲ್ಲ ಗುರು(guru)ವೇ. ಇಂಥ ಗುರುಗಳಿಗೆ ಧನ್ಯವಾದ ಹೇಳಲೊಂದು ವಿಶೇಷ ದಿನ ಗುರು ಪೂರ್ಣಿಮೆ(Guru Purnima). ಧಾರ್ಮಿಕ ಗ್ರಂಥಗಳ ಪ್ರಕಾರ, ಈ ದಿನದಂದು ಗುರುವಿನ ಆಶೀರ್ವಾದವನ್ನು ಪಡೆಯುವ ವ್ಯಕ್ತಿಯು ಅವನ ಜೀವನ ಯಶಸ್ವಿಯಾಗುತ್ತಾನೆ. 

ಹೌದು, ಸೆಪ್ಟೆಂಬರ್ ಐದು ಶಿಕ್ಷಕರ ದಿನವಿದೆ. ಆದರೆ, ಅದಕ್ಕಿಂತ ಬಹಳ ಹಿಂದಿನಿಂದಲೂ ಹಿಂದೂ ಕ್ಯಾಲೆಂಡರ್ ಪ್ರಕಾರ ಆಷಾಢ ಹುಣ್ಣಿಮೆಯಂದು ಗುರು ಪೂರ್ಣಿಮೆ ಆಚರಿಸಲಾಗುತ್ತಿದೆ.

Latest Videos

ಗುರು ಪೂರ್ಣಿಮೆಯನ್ನು ಕೃಷ್ಣ ದ್ವೈಪಾಯನ ವ್ಯಾಸ(Vyasa)ರಿಗೆ ಸಮರ್ಪಿಸಲಾಗಿದೆ. ಹಾಗಾಗಿಯೇ ಈ ದಿನವನ್ನು ವ್ಯಾಸ ಪೂರ್ಣಿಮಾ(Vyasa Purnima) ಎಂದೂ ಕರೆಯುತ್ತಾರೆ. ಹಿಂದೂ ನಂಬಿಕೆಯ ಪ್ರಕಾರ, ಭಗವಾನ್ ವಿಷ್ಣುವಿನ ಭಾಗಶಃ ಅವತಾರವಾದ ವ್ಯಾಸರು ವೇದಗಳ ಮಂತ್ರಗಳನ್ನು ನಾಲ್ಕು ವೇದಗಳಾಗಿ, ಹದಿನೆಂಟು ಪುರಾಣಗಳಾಗಿ ವಿಂಗಡಿಸಿದ್ದಾರೆ. ಅವರನ್ನು ಬ್ರಹ್ಮ ಸೂತ್ರಗಳ ಲೇಖಕ ಎಂದು ಪರಿಗಣಿಸಲಾಗುತ್ತದೆ. ಅವರು ಏಳು ಚಿರಂಜೀವಿಗಳಲ್ಲಿ ಒಬ್ಬರು. ಮಹಾಭಾರತದ ಲೇಖಕ ಕೂಡಾ ಹೌದು. ಅವರ ಶಿಷ್ಯರು ಉಪನಿಷತ್ತುಗಳನ್ನು ರಚಿಸಿದರು. ಗುರು ಪೂರ್ಣಿಮೆಯ ದಿನದಂದು ಗುರುಗಳು ಅಥವಾ ಶಿಕ್ಷಕರನ್ನು ಪೂಜಿಸಲಾಗುತ್ತದೆ.

ಶನಿ ಸಾಡೇಸಾತಿಯ ದುಷ್ಪರಿಣಾಮ ಕಡಿಮೆ ಮಾಡ್ಬೇಕಂದ್ರೆ ಆಷಾಢದಲ್ಲಿ ಹೀಗ್ಮಾಡಿ..

ಗುರು ಪೂರ್ಣಿಮಾ ತಿಥಿ
ಹಿಂದೂ ತಿಂಗಳ ಆಷಾಢದಲ್ಲಿ ಹುಣ್ಣಿಮೆ (ಪೂರ್ಣಿಮಾ) ಉದಯಿಸುವ ದಿನಾಂಕದಂದು ಗುರು ಪೂರ್ಣಿಮೆಯನ್ನು ಆಚರಿಸಲಾಗುತ್ತದೆ. ಈ ಬಾರಿ ಪೂರ್ಣಿಮಾ ತಿಥಿ ಜುಲೈ 13ರಂದು 4:01ಕ್ಕೆ ಪ್ರಾರಂಭವಾಗುತ್ತದೆ ಮತ್ತು ಜುಲೈ 14ರಂದು 08:29ಕ್ಕೆ ಕೊನೆಗೊಳ್ಳುತ್ತದೆ.

ಹೇಗೆ ಪೂಜಿಸುವುದು?(worshipping method)
ವಿಧಿವಿಧಾನಗಳ ಪ್ರಕಾರ, ಗುರು ಪೂರ್ಣಿಮೆಯಂದು ಶಿಷ್ಯನು ಸ್ನಾನ ಮಾಡಿ, ಶುಭ್ರವಾದ ಬಟ್ಟೆಗಳನ್ನು ಧರಿಸಿ, ಪೂಜೆಯನ್ನು ಮಾಡಿ, ವ್ಯಾಸರಿಗೆ ಪ್ರಾರ್ಥನೆ ಮತ್ತು ಮಾಲೆಗಳನ್ನು ಅರ್ಪಿಸಬೇಕು. ನಂತರ ತಮ್ಮ ಗುರುಗಳನ್ನು ಭೇಟಿ ಮಾಡಿ, ಅವರನ್ನು ಸ್ಥಿರ ಸ್ಥಳದಲ್ಲಿ ಕೂರಿಸಬೇಕು ಮತ್ತು ಅವರಿಗೆ ಹಾರವನ್ನು ಅರ್ಪಿಸಬೇಕು. ಅದರ ನಂತರ, ನಿಮ್ಮ ಗುರುಗಳಿಗೆ ಬಟ್ಟೆ, ಹಣ್ಣುಗಳು, ಹೂವುಗಳು, ಮಾಲೆ ಮತ್ತು ದಕ್ಷಿಣೆಯನ್ನು ಸ್ವಲ್ಪ ಹಣದ ರೂಪದಲ್ಲಿ ಅರ್ಪಿಸಿ ನಂತರ ಅವರ ಆಶೀರ್ವಾದವನ್ನು ಪಡೆಯಬೇಕು. ಈ ದಿನದಂದು ಧಾರ್ಮಿಕ ಮತ್ತು ಆಧ್ಯಾತ್ಮಿಕ ನಾಯಕರನ್ನು ಗೌರವಿಸುವ ವಿಶೇಷ ಕಾರ್ಯಕ್ರಮಗಳನ್ನು ಸಹ ಆಯೋಜಿಸಲಾಗುತ್ತದೆ.

ಈ ನಾಲ್ಕು ರಾಶಿಯವರ ಫೋನ್‌ನ ಬ್ರೌಸಿಂಗ್ ಹಿಸ್ಟರಿ ನಿಮ್ಗೆ ಆಘಾತ ತರ್ಬೋದು!

ಗುರುವಿನ ಶ್ರೇಷ್ಠತೆ ಸಂತ ಕಬೀರರ ಈ ದ್ವಿಪದಿಯಿಂದ ತಿಳಿಯಬಹುದು.

ಗುರು ಗೋಬಿಂದ್ ದೋವೂ ಖಡೇ, ಕಾಕೆ ಲಾಗೂ ಪಾಯ್
ಬಲಿಹಾರಿ ಗುರು ಅಪನೇ, ಗೋವಿಂದ್ ದಿಯೋ ಬತಾಯ್

ಇದರರ್ಥ ಇಂತಿದೆ– ಸಂತ ಕಬೀರನ ಪ್ರಕಾರ ಜೀವನದಲ್ಲಿ ಗುರು ಮತ್ತು ಗೋವಿಂದ (ದೇವರು) ಜೊತೆಯಾಗಿ ನಿಲ್ಲುವಂಥ ಸನ್ನಿವೇಶ ಬಂದರೆ, ಮೊದಲು ಗುರುವಿಗೆ ನಮಸ್ಕರಿಸಲೇಬೇಕು. ಏಕೆಂದರೆ ಗುರುಗಳೇ ನಮಗೆ ಗೋವಿಂದನನ್ನು ಪರಿಚಯಿಸಿದವರು. ಆದ್ದರಿಂದ ಗುರುವಿನ ಸ್ಥಾನ ದೇವರದಕ್ಕಿಂತ ಹೆಚ್ಚಿನದಾಗಿರುತ್ತದೆ. 

ದಿನ ಭವಿಷ್ಯ, ವಾರ ಭವಿಷ್ಯ, ಸಂಖ್ಯಾ ಶಾಸ್ತ್ರ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿ ದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

click me!