ಈ ನಾಲ್ಕು ರಾಶಿಯವರ ಫೋನ್‌ನ ಬ್ರೌಸಿಂಗ್ ಹಿಸ್ಟರಿ ನಿಮ್ಗೆ ಆಘಾತ ತರ್ಬೋದು!

By Suvarna News  |  First Published Jul 3, 2022, 11:42 AM IST

ತಮ್ಮ ಕರಾಳ ಮತ್ತು ಗೊಂದಲದ ವೆಬ್ ಬ್ರೌಸಿಂಗ್ ಇತಿಹಾಸದಿಂದ ನಿಮ್ಮನ್ನು ಆಘಾತಗೊಳಿಸಬಹುದಾದ ಕೆಲವು ರಾಶಿಚಕ್ರ ಚಿಹ್ನೆಗಳು ಯಾವುವು ಗೊತ್ತಾ? ಇವರ ಬ್ರೌಸಿಂಗ್ ಹಿಸ್ಟರಿ ಏನೆಲ್ಲ ತೋರ್ಸತ್ತೆ ನೋಡಿದ್ರೆ ಅಚ್ಚರಿಯಾಗ್ಬೋದು..


ಕೆಲವರು ತಮ್ಮ ಆಲೋಚನೆಗಳು ಮತ್ತು ಭಾವನೆಗಳ ಬಗ್ಗೆ ಪಾರದರ್ಶಕವಾಗಿರಬೇಕೆಂದು ಬಯಸುತ್ತಾರೆ. ಅದರ ಹಿಂದೆ ಅವರ ಪ್ರಾಮಾಣಿಕತೆ ಕೆಲಸ ಮಾಡುತ್ತದೆ. ಮತ್ತೆ ಕೆಲವರು ತಮ್ಮ ಭಾವನೆಗಳನ್ನು ಅವೇನೋ ನಿಧಿಯೆಂಬಂತೆ ಮುಚ್ಚಿಟ್ಟು ರಕ್ಷಿಸುತ್ತಾರೆ. ಕೆಲವರು ತಮ್ಮ ದಿನ ನಿತ್ಯದ ಜೀವನದಲ್ಲಿ ತೋರಿಕೆಯ ಮುಗ್ಧ ವ್ಯಕ್ತಿಗಳ ಹಾಗೆ ಕಂಡರೂ ಅವರ ಫೋನ್ ಅಥವಾ ಲ್ಯಾಪ್‌ಟಾಪ್‌ನಲ್ಲಿ ಬ್ರೌಸಿಂಗ್  ಹಿಸ್ಟರಿ ತೆಗೆದು ನೋಡಿದರೆ ಹೇಗೆ ಕರಾಳ ಮುಖವನ್ನು ಹೊಂದಿದ್ದಾರೆಂಬುದು ನಿಮಗೆ ಆಶ್ಚರ್ಯ ತರೋದರಲ್ಲಿ ಆಶ್ಚರ್ಯವಿಲ್ಲ.

ಹೌದು, ಕೆಲವರು ತಮ್ಮ ವ್ಯಕ್ತಿತ್ವ(personality)ದ ಕೆಲವು ಅಂಶಗಳನ್ನು ರಹಸ್ಯವಾಗಿಡಬೇಕು ಎಂದು ಬಯಸುತ್ತಾರೆ. ಆದ್ದರಿಂದ ಅವರು ಅಂತರ್ಜಾಲ(internet)ದಲ್ಲಿ ತಡರಾತ್ರಿಯಲ್ಲಿ ರಹಸ್ಯ ಹುಡುಕಾಟಗಳನ್ನು ನಡೆಸುತ್ತಾರೆ. ಆದರೆ, ಬೆಳಗ್ಗೆಯೆಲ್ಲ ತಾವಲ್ಲವೇ ಅಲ್ಲ ಹಾಗೆ ಬ್ರೌಸ್ ಮಾಡಿದವರು ಎಂಬಂತಿರುತ್ತಾರೆ. ಹೀಗೆ ಡಾರ್ಕ್ ಮತ್ತು ಗೊಂದಲದ ವೆಬ್ ಬ್ರೌಸಿಂಗ್ ಇತಿಹಾಸದಿಂದ ನಿಮ್ಮನ್ನು ಆಘಾತಗೊಳಿಸಬಹುದಾದ ಕೆಲವು ರಾಶಿ ಚಕ್ರ ಚಿಹ್ನೆಗಳು(zodiac signs) ಯಾವುವು ನೋಡಿ..

Tap to resize

Latest Videos

ಕರ್ಕಾಟಕ ರಾಶಿ(Cancer)
ಕರ್ಕಾಟಕವು ಅಸ್ವಸ್ಥವಾಗಿರುವುದನ್ನು ದ್ವೇಷಿಸುತ್ತದೆ. ಸದಾ ಆರೋಗ್ಯವಾಗಿರಲು ಬಯಸುತ್ತದೆ. ಆದರೆ ಎಲ್ಲಾದರೂ ಯಾವುದೇ ವಿಲಕ್ಷಣ ಕಾಯಿಲೆಯ ಬಗ್ಗೆ ಕೇಳಿದಾಗ ಅದು ತಮಗೇ ಇದೆ ಎಂದುಕೊಳ್ಳುವ ಸ್ವಭಾವ ಇವರದ್ದು. ಯಾವುದೇ ಬಗೆಯ ಮಾನಸಿಕ ಅಸ್ವಸ್ಥತೆ, ಸಣ್ಣಪುಟ್ಟ ದೈಹಿಕ ಕಾಯಿಲೆಗಳನ್ನು ಕೇಳಿದಾಗಲೂ ಅದು ತಮಗಿರಬಹುದೇ ಎಂದು ಅನುಮಾನ ಪಡುತ್ತಾರೆ. ಆದ್ದರಿಂದ, ಅವರು ಆಗಾಗ್ಗೆ ತಾವು ಅನುಭವಿಸುತ್ತಿರುವ ಶಂಕಿತ ರೋಗಲಕ್ಷಣಗಳನ್ನು ಹುಡುಕಲು ಇಂಟರ್ನೆಟ್ ಅನ್ನು ಬಳಸುತ್ತಾರೆ. ಅವರನ್ನು ಹೈಪೋಕಾಂಡ್ರಿಯಾಕ್ಸ್ ಎನ್ನಬಹುದು. ಅವರ ವೆಬ್ ಹುಡುಕಾಟ ಇತಿಹಾಸವು ಆಗಾಗ್ಗೆ ಕಾಯಿಲೆಗಳು ಮತ್ತು ರೋಗಗಳ ಕರಾಳ ಸುರುಳಿಯಾಗಿರುತ್ತದೆ. 

ಶುಕ್ರ ಸಂಕ್ರಮಣ 2022: 10 ದಿನದಲ್ಲಿ ಬದಲಾಗಲಿದೆ ಈ ನಾಲ್ಕು ರಾಶಿಗಳ ಜೀವನ!

ಧನು ರಾಶಿ(Sagittarius)
ಈ ಚಿಹ್ನೆಯು ಅವರ ಆಲೋಚನೆಗಳಿಂದ ಆಳಲ್ಪಡುತ್ತದೆ. ಅವರ ಮನಸ್ಸು ಅವರನ್ನು ಕತ್ತಲೆಯ ಸ್ಥಳಕ್ಕೆ ಕೊಂಡೊಯ್ದಾಗ, ಅವರು ಡಾರ್ಕ್ ವೆಬ್‌ನಲ್ಲಿ ವಿಲಕ್ಷಣವಾದ ವಿಷಯಗಳನ್ನು ಹುಡುಕಲು ಇಂಟರ್ನೆಟ್‌ಗೆ ತಿರುಗುತ್ತಾರೆ. ಮನಸ್ಸಿನ ಚಿತ್ರವಿಚಿತ್ರ ಯೋಚನೆಗಳ ಬಗ್ಗೆಯೆಲ್ಲ ಅಂತರ್ಜಾಲದಲ್ಲಿ ತಡಕಾಡುತ್ತಾರೆ. ಹೆಚ್ಚಿನ ಧನು ರಾಶಿ ವ್ಯಕ್ತಿಗಳು ಸಾಫ್ಟ್‌ವೇರ್ ಮತ್ತು ಕೋಡಿಂಗ್‌ಗೆ ಅಸಾಧಾರಣ ಆಸಕ್ತಿ ಹೊಂದಿದ್ದಾರೆ. ಹೀಗಾಗಿ ಅವರು ಕೆಲವು ಕ್ಷುಲ್ಲಕ ವಿಷಯಗಳು ಮತ್ತು ಕೆಲವು ಗೊಂದಲದ ವಿಷಯಗಳ ಬಗ್ಗೆ ತಮ್ಮ ಕುತೂಹಲವನ್ನು ಪೂರೈಸಲು ಇಂಟರ್ನೆಟ್‌ನ ಸಹಾಯ ಪಡೆಯಬಹುದು. 

ವೃಶ್ಚಿಕ ರಾಶಿ(Scorpio)
ವೃಶ್ಚಿಕ ರಾಶಿಯವರು ತುಂಬಾ ಚೆನ್ನಾಗಿ ಮಾತನಾಡುತ್ತಾರೆ ಮತ್ತು ಸಂಭಾವಿತ ವ್ಯಕ್ತಿಯಂತೆ ತೋರುತ್ತಾರೆ. ಆದರೆ, ಆಳದಲ್ಲಿ, ಅವರು ಅಸುರಕ್ಷಿತ ವ್ಯಕ್ತಿಗಳಾಗಿದ್ದು, ಅವರು ತಿಳಿದಿರುವ ಪ್ರತಿಯೊಬ್ಬರ ಬಗ್ಗೆ ಯಾವಾಗಲೂ ಅನುಮಾನಿಸುತ್ತಾರೆ. ನೀವು ಅವರ ವೆಬ್ ಹುಡುಕಾಟದ ಇತಿಹಾಸವನ್ನು ಪರೀಕ್ಷಿಸಿದರೆ, ಅವರು ಸಹೋದ್ಯೋಗಿಯ ಮೇಲೆ ಕೊಳಕು ಅಗೆಯಲು ಪ್ರಯತ್ನಿಸುತ್ತಿರುವುದನ್ನು ನೀವು ಬಹುಶಃ ಕಾಣಬಹುದು. ಅಲ್ಲದೆ, ಸಂಭಾವ್ಯ ಪ್ರೀತಿಯ ಹೊಂದಾಣಿಕೆಯ ಬಗ್ಗೆ ಪರೀಕ್ಷಿಸುತ್ತಾರೆ. ತಮ್ಮ ಮಾಜಿ ಪ್ರೇಮಿಯ ಪ್ರತಿ ನಡೆಯನ್ನು ಸ್ಟ್ಯಾಕ್ ಮಾಡುತ್ತಾರೆ.  ಅವರಲ್ಲಿ ಸ್ಟಾಕರ್ ಅಂಶವು ನಿಜವಾಗಿಯೂ ತುಂಬಾ ಹೆಚ್ಚಾಗಿರುತ್ತದೆ ಎಂಬುದನ್ನು ಬ್ರೌಸಿಂಗ್ ಹಿಸ್ಟರಿ ಸಾಬೀತುಪಡಿಸುತ್ತದೆ.

ಹಸ್ತ ರೇಖೆಯಿಂದ ತಿಳಿಯಿರಿ ವಿದೇಶ ಪ್ರಯಾಣ ಯೋಗ..

ಮೇಷ ರಾಶಿ(Aries)
ಮೇಷ ರಾಶಿಯ ವಿಷಯಕ್ಕೆ ಬಂದಾಗ, ಈ ಬೆಂಕಿಯ ಚಿಹ್ನೆಯ ಬಾಹ್ಯ ಗ್ರಹಿಕೆಯು ಅವರು ಒಳಗಿರುವ ಭಾವನೆಗೆ ಹೊಂದಿಕೆಯಾಗುವುದಿಲ್ಲ. ಸಂಶಯಾಸ್ಪದ ಆಲೋಚನೆಗಳಿಂದ ಹಿಡಿದು ನೀಚ ಪ್ರವೃತ್ತಿಗಳವರೆಗೆ, ಅವರು ತಮ್ಮ ವೆಬ್ ಹುಡುಕಾಟ ಇತಿಹಾಸದೊಂದಿಗೆ ನಿಮ್ಮನ್ನು ಆಶ್ಚರ್ಯಗೊಳಿಸಬಹುದು. ಇದು ರಹಸ್ಯವಾದ ಮಾಂತ್ರಿಕತೆಯಾಗಿರಬಹುದು ಅಥವಾ ತಮ್ಮ ರಹಸ್ಯ ಲೈಂಗಿಕ ಬಯಕೆಗಳಿರಬಹುದು.. ಎಲ್ಲವನ್ನೂ ಅವರ ವೆಬ್ ಬ್ರೌಸಿಂಗ್ ಹಿಸ್ಟರಿ ಬಿಚ್ಚಿಡುತ್ತದೆ. 
 

click me!