ರತ್ನಗಳನ್ನು ಧರಿಸುವುದರಿಂದ ಜೀವನದಲ್ಲಿ ಸುಖ-ಸಮೃದ್ಧಿ ನೆಲೆಸಿರುತ್ತದೆ ಎಂದು ಹೇಳಲಾಗುತ್ತದೆ. ನುರಿತ ಜ್ಯೋತಿಷಿಗಳಿಂದ ಜಾತಕವನ್ನು ಪರಿಶೀಲಿಸಿ ಹೊಂದುವ ರತ್ನವನ್ನು ಧರಿಸುವುದರಿಂದ ಜೀವನದಲ್ಲಿ ಅಭಿವೃದ್ಧಿ ಹೊಂದಬಹುದಾಗಿದೆ. ಅಂಥ ಅದೃಷ್ಟ ರತ್ನಗಳಾದ ಗೋಮೇಧ ಮತ್ತು ಗೋದಂತಿಗಳ ಬಗ್ಗೆ ತಿಳಿಯೋಣ..
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ರಾಶಿಗೆ ಸಂಬಂಧಪಟ್ಟ ರತ್ನಗಳನ್ನು ಧರಿಸುವುದರಿಂದ ಜೀವನದ ಮೇಲೆ ಮತ್ತು ಅದೃಷ್ಟದ ಮೇಲೆ ಉತ್ತಮ ಪರಿಣಾಮಗಳನ್ನು ಬೀರುತ್ತದೆ. ಈ ರತ್ನಗಳನ್ನು ಸೌರಮಂಡಲದಲ್ಲಿರುವ ಗ್ರಹಗಳ ಅಂಶವೆಂದು ಹೇಳಲಾಗುತ್ತದೆ.
ರಾಶಿಗೆ ಅನುಸಾರ ರತ್ನಗಳನ್ನು ಧರಿಸುವುದರಿಂದ ವ್ಯಕ್ತಿಯ ಜೀವನದಲ್ಲಿ ಉನ್ನತಿಯನ್ನು ಕಾಣಬಹುದಾಗಿರುತ್ತದೆ. ಅಷ್ಟೇ ಅಲ್ಲದೆ ಸಂಬಂಧಿಸಿದ ಗ್ರಹಗಳಿಗೆ ಬಲ ಬರುವುದರಿಂದ ಆ ಗ್ರಹಗಳ ಉತ್ತಮ ಪ್ರಭಾವ ವ್ಯಕ್ತಿಯ ಜೀವನದ ಮೇಲಾಗುತ್ತದೆ.ಅಂಥ ರತ್ನಗಳ ಸಾಲಿಗೆ ಸೇರಿರುವ ಎರಡು ಪ್ರಭಾವಶಾಲಿ ರತ್ನಗಳ ಬಗ್ಗೆ ತಿಳಿಯೋಣ..
ಇದನ್ನು ಓದಿ: ಶನಿ ದೋಷದಿಂದ ಮುಕ್ತಿ ಪಡೆಯೋಕೆ ಇಲ್ಲಿದೆ ವಾಸ್ತು ಟಿಪ್ಸ್...!
ಜ್ಯೋತಿಷ್ಯ ಶಾಸ್ತ್ರದಲ್ಲಿ ಗೋಮೇಧ ರತ್ನ ಮತ್ತು ಗೋಧಂತಿ ರತ್ನಕ್ಕೆ ವಿಶೇಷ ಮಹತ್ವವಿದೆ. ಗೋಮೇಧ ಅಥವಾ ಗೋಮೇಧಿಕ ರತ್ನವನ್ನು ಧರಿಸುವುದರಿಂದ ರಾಹುಗ್ರಹದ ಸ್ಥಿತಿ ಬಲವಾಗುತ್ತದೆ. ರಾಹು ದೆಸೆ ಇದ್ದವರು ಅಥವಾ ರಾಹು ಗ್ರಹದ ಕೆಟ್ಟ ಪ್ರಭಾವಗಳಿಗೆ ಒಳಗಾಗುತ್ತಿದ್ದವರು ಗೋಮೇಧ ರತ್ನವನ್ನು ಧರಿಸಬೇಕೆಂದು ಹೇಳಲಾಗುತ್ತದೆ. ಈ ರತ್ನವನ್ನು ಧರಿಸುವ ಮೊದಲು ಜಾತಕದ ಪ್ರಕಾರ ಧರಿಸುವ ವ್ಯಕ್ತಿಗೆ ಹೊಂದಿಕೆ ಆಗುತ್ತದೆ ಅಥವಾ ಇಲ್ಲ ಎಂಬುದನ್ನು ತಿಳಿದುಕೊಳ್ಳಬೇಕು.
ಗೋದಂತಿ ಅಥವಾ ಚಂದ್ರಮಣಿ ಎಂದು ಕರೆಯುವ ಈ ರತ್ನವನ್ನು ಚಂದ್ರನ ರತ್ನವೆಂದು ಕರೆಯಲಾಗುತ್ತದೆ. ಇದನ್ನು ಧರಿಸುವುದರಿಂದ ಚಂದ್ರದೋಷ ನಿವಾರಣೆಯಾಗುತ್ತದೆ. ಹಾಗಾಗಿ ಈ ಎರಡು ರತ್ನಗಳನ್ನು ಧರಿಸುವುದರಿಂದ ಉಂಟಾಗುವ ಲಾಭಗಳ ಬಗ್ಗೆ ತಿಳಿಯೋಣ...
ಇದನ್ನು ಓದಿ: ಈ ಮೂರು ರಾಶಿ ಹುಡುಗರು ಕೇರಿಂಗ್ –ರೊಮ್ಯಾಂಟಿಕ್!
ಗೋಮೇಧವನ್ನು ಧರಿಸುವುದರಿಂದ ಆಗುವ ಲಾಭಗಳು:
- ನ್ಯಾಯವಾದಿ, ವಕೀಲಿ ವೃತ್ತಿ ಅಥವಾ ರಾಜಕಾರಣದ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದವರಿಗೆ ಗೋಮೇಧ ರತ್ನ ಆಗಿಬರುತ್ತದೆ ಎಂದು ಹೇಳಲಾಗುತ್ತದೆ. ಈ ರತ್ನವನ್ನು ಧರಿಸುವುದರಿಂದ ಈ ಕ್ಷೇತ್ರಗಳಲ್ಲಿ ಇನ್ನೂ ಹೆಚ್ಚಿನ ಮಟ್ಟದಲ್ಲಿ ಯಶಸ್ಸನ್ನು ಗಳಿಸಬಹುದೆಂದು ಹೇಳಲಾಗುತ್ತದೆ.
- ಜಾತಕದ ಕೇಂದ್ರ ಮನೆಗಳಲ್ಲಿ ಅಂದರೆ 1,4,7 ಮತ್ತು 10ನೇ ಮನೆಯಲ್ಲಿ ರಾಹು ಗ್ರಹ ಸ್ಥಿತವಾಗಿದ್ದರೆ ಗೋಮೇಧವನ್ನು ಧರಿಸುವುದರಿಂದ ಉತ್ತಮ ಫಲ ದೊರೆಯುತ್ತದೆ. ರಾಹುವಿನ ಕೆಟ್ಟ ಪ್ರಭಾವಗಳಿದ್ದರೆ ಅದು ತಗ್ಗುತ್ತದೆ.
- ಒಂದೊಮ್ಮೆ ರಾಹು ಗ್ರಹವು ಆರನೇ ಮತ್ತು ಎಂಟನೇ ಮನೆಯಲ್ಲಿ ಅಥವಾ ಲಗ್ನದಲ್ಲಿ ಸ್ಥಿತವಾಗಿದ್ದರೆ ಗೋಮೇಧವನ್ನು ಧಾರಣ ಮಾಡಬೇಕು.
- ಜಾತಕದಲ್ಲಿ ರಾಹುವು ಶುಭಫಲವನ್ನು ನೀಡುವ ಮನೆಯ ಅಧಿಪತಿ ಗ್ರಹವಾಗಿದ್ದು, ಜಾತಕದ ಆರನೇ ಅಥವಾ ಎಂಟನೇ ಮನೆಯಲ್ಲಿ ಸ್ಥಿತನಾಗಿದ್ದರೆ ಅಂಥವರು ಗೋಮೇಧವನ್ನು ಧರಿಸುವುದು ಲಾಭದಾಯಕವೆಂದು ಹೇಳಲಾಗುತ್ತದೆ.
- ವ್ಯಕ್ತಿಯ ಜಾತಕದಲ್ಲಿ ರಾಹು ಗ್ರಹವು ತನ್ನ ನೀಚ ರಾಶಿ ಅಂದರೆ ಧನು ರಾಶಿಯಲ್ಲಿ ಸ್ಥಿತವಾಗಿದ್ದರೆ ಅಂಥ ಸಂದರ್ಭದಲ್ಲಿ ಗೋಮೇಧವನ್ನು ಧಾರಣೆ ಮಾಡುವುದು ಉತ್ತಮ. ಅಷ್ಟೇ ಅಲ್ಲದೆ ಲಾಭಕಾರಿ ಸಹ ಆಗುತ್ತದೆ ಎಂದು ಹೇಳಲಾಗುತ್ತದೆ.
- ಜಾತಕದಲ್ಲಿ ಶುಕ್ರ ಮತ್ತು ಬುಧ ಗ್ರಹದ ಜೊತೆಗೆ ರಾಹು ಗ್ರಹದ ಯುತಿ (ಒಂದೇ ಮನೆಯಲ್ಲಿ ಈ ಗ್ರಹಗಳು ನೆಲೆಸುವುದು) ಯಾಗುವ ಸಂದರ್ಭದಲ್ಲಿ ಗೋಮೇಧವನ್ನು ಧಾರಣೆ ಮಾಡುವುದು ಉತ್ತಮವೆಂದು ಹೇಳಲಾಗುತ್ತದೆ.
ಇದನ್ನು ಓದಿ: ಮಾಂಗಲ್ಯಧಾರಣೆ ಮಹತ್ವ, ಪ್ರಯೋಜನಗಳು!
ಗೋದಂತಿ ಅಥವಾ ಚಂದ್ರಮಣಿ ಧಾರಣೆಯ ಪ್ರಯೋಜನಗಳು
- ಗೋದಂತಿಯನ್ನು ಚಂದ್ರನ ರತ್ನವೆಂದು ಕರೆಯಲಾಗುತ್ತದೆ. ಈ ಗ್ರಹದ ರಾಶಿ ಕರ್ಕಾಟಕ ರಾಶಿಯಾಗಿದೆ. ಗೋದಂತಿ ರತ್ನವನ್ನು ಚಂದ್ರಕಾಂತ ಮಣಿ ಎಂದು ಸಹ ಕರೆಯಲಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಗೋದಂತಿ ರತ್ನವನ್ನು ಧರಿಸುವುದರಿಂದ ಚಂದ್ರ ಗ್ರಹದಿಂದ ಉಂಟಾಗುವ ದುಷ್ಪರಿಣಾಮಗಳು ನಿವಾರಣೆಯಾಗುತ್ತವೆ.
- ಚಂದ್ರನ ರತ್ನವಾಗಿರುವ ಕಾರಣ ಇದನ್ನು ಧರಿಸುವುದರಿಂದ ಮನಸ್ಥಿತಿ ಶಾಂತವಾಗುತ್ತದೆ. ಅಷ್ಟೇ ಅಲ್ಲದೆ ಒತ್ತಡ ಮತ್ತು ನಕಾರಾತ್ಮಕ ಭಾವನೆಗಳು ಕಡಿಮೆಯಾಗುತ್ತವೆ. ಸಕಾರಾತ್ಮಕ ಚಿಂತನೆ ಹೆಚ್ಚುತ್ತದೆ.
- ಗೋದಂತಿಯನ್ನು ಧರಿಸುವುದರಿಂದ ಹೊಸ ಅವಕಾಶಗಳು ಬರುವುದಲ್ಲದೆ, ಉದ್ಯೋಗ ಮತ್ತು ವ್ಯಾಪಾರ ಕ್ಷೇತ್ರದಲ್ಲಿ ಉನ್ನತಿಯನ್ನು ಕಾಣಬಹುದಾಗಿದೆ.
- ಗೋದಂತಿಯನ್ನು ಧಾರಣೆ ಮಾಡುವುದರಿಂದ ವ್ಯಕ್ತಿಗೆ ಅದೃಷ್ಟ ಒಲಿಯುತ್ತದೆ.