Sneezing : ಮಾತ್ರೆ ಸೇವಿಸುವ ವೇಳೆ ಬರುವ ಸೀನು ನೀಡುತ್ತೆ ಈ ಸಂಕೇತ

By Suvarna NewsFirst Published Jan 14, 2022, 4:07 PM IST
Highlights

ವೈದ್ಯಕೀಯ ವಿಜ್ಞಾನದ ಪ್ರಕಾರ, ಸೀನುವುದು ಮಾನವನ ಸಾಮಾನ್ಯ ಪ್ರಕ್ರಿಯೆ. ಸೀನುವುದು ಆರೋಗ್ಯಕ್ಕೆ ಬಹಳ ಮುಖ್ಯ. ಸೀನುವಿಕೆಯು ದೇಹದಿಂದ ಹಾನಿಕಾರಕ ಸೂಕ್ಷ್ಮಜೀವಿಗಳನ್ನು ಬಿಡುಗಡೆ ಮಾಡಲು ನೆರವಾಗುತ್ತದೆ. ಆದ್ರೆ ಶಕುನ ಶಾಸ್ತ್ರದಲ್ಲಿ ಬೇರೆ ಬೇರೆ ಸಂದರ್ಭದಲ್ಲಿ ಬರುವ ಸೀನಿಗೆ ಬೇರೆ ಬೇರೆ ಅರ್ಥವಿದೆ.

ಶೀತ(Cold)ವಾದಾಗ ಸೀನು (Sneeze )ಬರುತ್ತದೆ. ಕೆಲವೊಮ್ಮೆ ನೆಗಡಿ ಅಥವಾ ಯಾವುದೇ ಕಾರಣವಿಲ್ಲದೆ ಸೀನು ಬರುತ್ತಿರುತ್ತದೆ. ಶುಭ (Good )ಕಾರ್ಯಕ್ಕೆ ಹೊರಟಿರುವಾಗಲೇ ಸೀನಿರುತ್ತೇವೆ. ಅಪಶಕುನವಾಯಿತು ಎಂದು ಸ್ವಲ್ಪ ಹೊತ್ತು ಕುಳಿತುಕೊಂಡು ಹೋಗುತ್ತೇವೆ. ಈ ಶಕುನ ಮತ್ತು ಅಪಶಕುನಗಳನ್ನು ಅನೇಕರು ನಂಬುತ್ತಾರೆ. ಶುಭ ಕೆಲಸದ ಸಂದರ್ಭದಲ್ಲಿ ಸೀನು ಬಂದರೂ ಅದನ್ನು ಅಪಶಕುನ (Inauspicious) ಎನ್ನುತ್ತೇವೆ. ಎಲ್ಲ ಸಮಯದಲ್ಲೂ ಸೀನು ಅಪಶಕುನವಾಗಿರುವುದಿಲ್ಲ ಎಂಬುದು ನಿಮಗೆ ಗೊತ್ತಾ? ಕೆಲವು ಬಾರಿ ಸೀನು ಶುಭ ಸಂಕೇತವನ್ನು ನೀಡುತ್ತದೆ. ಇಂದು ಸೀನಿನ ಶುಭ ಹಾಗೂ ಅಶುಭ ಸಂಕೇತದ ಬಗ್ಗೆ ಹೇಳುತ್ತೇವೆ.

ಅಶುಭ ಸಂಕೇತ ನೀಡುವ ಸೀನು : ಯಾವ ಯಾವ ಸಂದರ್ಭದಲ್ಲಿ ಸೀನು ಬಂದ್ರೆ ಅದು ಅಪಶಕುನ ಎಂಬುದನ್ನು ಇಲ್ಲಿ ಹೇಳ್ತೆವೆ.

1. ಅಡುಗೆ ಮನೆ : ಅಡುಗೆ ಮನೆಯಲ್ಲಿ ಅಡುಗೆ ಮಾಡುವಾಗ ಮಹಿಳೆಗೆ ಸೀನು ಬಂದ್ರೆ ಮನೆಯ ಸದಸ್ಯರಿಗೆ ಅನಾರೋಗ್ಯ ಕಾಡುತ್ತದೆ ಎಂಬ ಸೂಚನೆಯಾಗಿದೆ. 
2. ಮನೆಯಿಂದ ಹೊರಡುವ ವೇಳೆ : ಮನೆಯಿಂದ ಹೊರ ಬೀಳುವ ವೇಳೆ ಮನೆಯಲ್ಲಿರುವ ಸದಸ್ಯರು ಅಥವಾ ನಿಮಗೆ ಒಂಟಿ ಸೀನು ಬಂದರೆ ಪ್ರಯಾಣ ಬೆಳೆಸಬೇಡಿ. ಸ್ವಲ್ಪ ಹೊತ್ತು ಕುಳಿತು ನಂತರ ಹೊರಡಿ. ಮನೆಯಿಂದ ಹೊರಡುವ ವೇಳೆ ಸೀನು ಬಂದ್ರೆ ಅಸಫಲತೆ ಪ್ರಾಪ್ತವಾಗುತ್ತದೆ ಎಂಬ ಸೂಚನೆಯಾಗಿದೆ. ಬಲ ಬದಿಯಿಂದ ಬಂದರೆ ಆರ್ಥಿಕ ನಷ್ಟವಾಗುತ್ತದೆ ಎಂದರ್ಥ.
3. ಪೂಜೆ ಸಂದರ್ಭದಲ್ಲಿ : ವಿಶೇಷ ಪೂಜೆ,ಯಜ್ಞ,ಅನುಷ್ಠಾನದ ಸಂದರ್ಭದಲ್ಲಿ ಸೀನು ಬಂದರೂ ಅದನ್ನು ಅಶುಭವೆಂದು ಪರಿಗಣಿಸಲಾಗುತ್ತದೆ.ಇದಲ್ಲದೆ ಉತ್ತರ ದಿಕ್ಕಿನಿಂದ ವ್ಯಕ್ತಿ ಸೀನಿದ್ರೆ ಅದನ್ನೂ ಅಮಂಗಳವೆನ್ನಲಾಗುತ್ತದೆ.
4. ಭೋಜನದ ವೇಳೆ : ಊಟ ಮಾಡುವಾಗ ಸೀನು ಬಂದರೂ ಅದು ಒಳ್ಳೆಯದಲ್ಲ. 
5. ನಾಯಿಯ ಸೀನು : ಮನುಷ್ಯರು ಮಾತ್ರವಲ್ಲ ನಾಯಿ ಸೀನು ಕೂಡ ಅಶುಭ. ದಾರಿಯಲ್ಲಿ ಅಥವಾ ಮನೆಯ ಹೊರಗೆ ನಾಯಿ ಒಂದು ಸೀನು ಸೀನಿದರೆ ಅನಾಹುತದ ಸಂಕೇತವಾಗಿದೆ. ನಾಯಿ ಒಂದಕ್ಕಿಂತ ಹೆಚ್ಚು ಬಾರಿ ಸೀನಿದರೆ ಅನಾಹುತ ತಪ್ಪುವ ಸಾಧ್ಯತೆಯಿದೆ.   
6. ಹೊಸ ಮನೆ ಪ್ರವೇಶ : ಶಕುನ ಶಾಸ್ತ್ರದ ಪ್ರಕಾರ,ಹೊಸ ಮನೆ ಪ್ರವೇಶ ಮಾಡುವ ವೇಳೆ ಒಂಟಿ ಸೀನು ಬಂದರೆ ಅಥವಾ ಬೇರೆಯವರು ಸೀನಿದ ಶಬ್ಧ ಕೇಳಿಸಿದ್ರೆ ಮನೆಗೆ ಪ್ರವೇಶ ಮಾಡದಿರುವುದು ಒಳ್ಳೆಯದು.

Burning Of Milk : ಬುಧವಾರದಂದು ಅಪ್ಪಿತಪ್ಪಿಯೂ ಹಾಲು ತಳ ಹೊತ್ತಿಸ್ಬೇಡಿ‍!

7. ಅತಿಥಿಗಳು ಮನೆಗೆ ಬಂದಾಗ : ಮನೆಗೆ ಅತಿಥಿಗಳು ಬಂದಿದ್ದು,ಅವರು ಮನೆಯಿಂದ ಹೊರಡುವ ವೇಳೆ ಸೀನು ಬಂದರೆ ಅದು ಶುಭವಲ್ಲ. 
ಸೀನುವುದು ಅಶುಭ ಸಂಕೇತ ಮಾತ್ರ ನೀಡುವುದಿಲ್ಲ. ಕೆಲವು ಬಾರಿ ಸೀನು ಶುಭ ಸೂಚಕವಾಗಿರುತ್ತದೆ.

Sankranti Horoscope: ಸೂರ್ಯನ ಚಲನೆ ನಿಮ್ಮ ರಾಶಿಗೆ ಯಾವ ಫಲ ನೀಡಲಿದೆ ನೋಡಿ..

ಶುಭ ಸೂಚಕ ಸೀನು : 

1. ಪ್ರಯಾಣ : ಶುಭ ಕೆಲಸಕ್ಕೆ ಮನೆಯಿಂದ ಹೊರ ಬೀಳುವ ವೇಳೆ ಒಂದಕ್ಕಿಂತ ಹೆಚ್ಚು ಸೀನು ಬಂದ್ರೆ ಇದನ್ನು ಶುಭವೆಂದು ಪರಿಗಣಿಸಲಾಗಿದೆ. ನೀವು ಹೋಗ್ತಿರುವ ಕೆಲಸ ಸರಾಗವಾಗಿ ನೆರವೇರಲಿದೆ ಎಂಬ ಸೂಚನೆಯಾಗಿದೆ. ಇದಲ್ಲದೆ ದಕ್ಷಿಣ ಹಾಗೂ ಪಶ್ಚಿಮ ದಿಕ್ಕಿನಿಂದ ಸೀನಿದ ಶಬ್ಧ ಕೇಳಿದ್ರೂ ಪ್ರಯಾಣ ಸುಖಕರವಾಗಿರಲಿದೆ.
2. ಸ್ಮಶಾನ : ಸ್ಮಶಾನದಲ್ಲಿ ಅಥವಾ ಅಪಘಾತ ನಡೆದ ಸ್ಥಳದಲ್ಲಿ ಸೀನು ಬಂದ್ರೆ ಅದನ್ನು ಶುಭ ಎನ್ನಲಾಗುತ್ತದೆ. 
3. ಔಷಧಿ ಸೇವನೆ ವೇಳೆ : ಮಾತ್ರೆ ಅಥವಾ ಔಷಧಿ ಸೇವನೆ ವೇಳೆ ಸೀನು ಬಂದಲ್ಲಿ ಅಥವಾ ಸೀನಿದ ತಕ್ಷಣ ಮಾತ್ರೆ ಕೆಳಗೆ ಬಿದ್ದಲ್ಲಿ ಇದು ಮಂಗಳಕರ. ರೋಗಿ ಶೀಘ್ರದಲ್ಲಿಯೇ ಗುಣಮುಖನಾಗಲಿದ್ದಾನೆ ಎಂಬ ಸೂಚನೆಯಾಗಿದೆ.

click me!