Latest Videos

Makar Sankranti : ಸ್ನಾನ- ದಾನದ ದಿನವಾದ ಮಕರ ಸಂಕ್ರಾಂತಿಯಂದು ಅಪ್ಪಿತಪ್ಪಿಯೂ ಈ ಕೆಲಸ ಮಾಡ್ಬೇಡಿ

By Suvarna NewsFirst Published Jan 14, 2022, 3:49 PM IST
Highlights

ಮಕರ ಸಂಕ್ರಾಂತಿಯ ದಿನದಂದು ಕೆಲವು ಕಾರ್ಯಗಳಿಗೆ ವಿಶೇಷ ಮಹತ್ವವಿದೆ. ಇದರಲ್ಲಿ ದಾನ ಮತ್ತು ಪೂಜೆ ಸೇರಿದೆ. ನಂಬಿಕೆಯ ಪ್ರಕಾರ, ಈ ದಿನ ದಾನ ಮಾಡಿದ್ರೆ ಶುಭಫಲ ಪ್ರಾಪ್ತಿಯಾಗುತ್ತದೆ. ಆದರೆ ಮಕರ ಸಂಕ್ರಾಂತಿಯ ದಿನವೂ ಮಾಡಬಾರದಂತಹ ಕೆಲವು ಕೆಲಸಗಳಿವೆ.
 

ಸಂಕ್ರಾಂತಿ (Sankranti) ಬಂದಿದೆ. ಮನೆ-ಮನಗಳಿಗೆ ಸಂತೋಷ (Happiness )ತಂದಿದೆ. ಸುಗ್ಗಿ ಹಬ್ಬ (Festival)ದ ಆಚರಣೆಗೆ ಜನರು ಸಿದ್ಧರಾಗಿದ್ದಾರೆ. ಎಳ್ಳು-ಬೆಲ್ಲ ಹಂಚಿ, ಹೊಸ ಬಟ್ಟೆ ಧರಿಸಿ ಹಬ್ಬ ಆಚರಿಸಲು ಸಕಲ ಸಿದ್ಧತೆ ನಡೆಯುತ್ತಿದೆ. ಮಾರುಕಟ್ಟೆಯಲ್ಲಿ ಕಬ್ಬು,ಮಾವಿನ ಎಲೆಗಳು ಸೇರಿದಂತೆ ಹಣ್ಣು (Fruit),ಹೂ(Flower)ಗಳು ಎಲ್ಲರನ್ನು ಸೆಳೆಯುತ್ತಿವೆ. ಸೂರ್ಯ ಧನು ರಾಶಿಯಿಂದ ಮಕರ ರಾಶಿಗೆ ಪ್ರವೇಶ ಮಾಡ್ತಿದ್ದಂತೆ ಮಕರ ಸಂಕ್ರಾಂತಿ ಆಚರಣೆ ಮಾಡಲಾಗುತ್ತದೆ. ದೇಶದ ಬೇರೆ ಬೇರೆ ಪ್ರದೇಶಗಳಲ್ಲಿ ಅವರದೇ ರೀತಿಯಲ್ಲಿ ಹಬ್ಬ ಆಚರಣೆ ನಡೆಯುತ್ತದೆ. ಈ ಬಾರಿ ಜನವರಿ 14 ಮತ್ತು 15 ಎರಡು ದಿನ ಸಂಕ್ರಾಂತಿ ಬಂದಿದೆ. ಮಕರ ಸಂಕ್ರಾಂತಿಯ ದಿನದಂದು ಸ್ನಾನ, ದಾನ, ಎಳ್ಳು-ಬೆಲ್ಲದ ಸೇವನೆ, ಖಿಚಡಿ ಸೇರಿದಂತೆ ಸಿಹಿ ಸೇವನೆ ಮಾಡಿ,ಹಬ್ಬ ಆಚರಣೆ ಮಾಡಲಾಗುತ್ತದೆ. ಈ ದಿನ ಗಂಗೆಯಲ್ಲಿ ಸ್ನಾನ ಮಾಡಿ ಸೂರ್ಯನನ್ನು ಪೂಜಿಸಿದ ನಂತರ ಬೆಲ್ಲ, ಅಕ್ಕಿ ಮತ್ತು ಎಳ್ಳನ್ನು ದಾನ ಮಾಡುವುದು ಉತ್ತಮವೆಂದು ಪರಿಗಣಿಸಲಾಗಿದೆ. ಮಕರ ಸಂಕ್ರಾಂತಿಗೆ ಮೊದಲೇ ಹೇಳಿದಂತೆ ವಿಶೇಷ ಮಹತ್ವವಿದೆ. ಹಾಗಾಗಿ ಈ ದಿನ ಕೆಲ ಕೆಲಸಗಳನ್ನು ಅಪ್ಪಿತಪ್ಪಿಯೂ ಮಾಡಬಾರದು. 

ಸ್ನಾನ ಮಾಡದೆ ಆಹಾರ ಸೇವಿಸಬೇಡಿ : ಬೆಳಿಗ್ಗೆ ಮುಖ ತೊಳೆಯದೆ ಟೀ,ಕಾಫಿ ಸೇವನೆ ಮಾಡುವವರಿದ್ದಾರೆ. ಯಾವುದೇ ಹಬ್ಬವಾದ್ರೂ ಅವರು ತಮ್ಮ ಟೀ ಬಿಡುವುದಿಲ್ಲ. ಆದ್ರೆ ಮಕರ ಸಂಕ್ರಾಂತಿಯ ದಿನ ಬೆಳಿಗ್ಗೆ ಸೂರ್ಯೋದಯಕ್ಕಿಂತ ಮೊದಲು ಎದ್ದು ಸ್ನಾನ ಮಾಡಬೇಕು. ನಂತರ ದಾನ, ಪೂಜೆ ಮಾಡಬೇಕು. ಅದರ ನಂತರವೇ ಆಹಾರವನ್ನು ಸೇವನೆ ಮಾಡಬೇಕು. ಸಂಕ್ರಾಂತಿಯ ದಿನ ಸ್ನಾನ, ದಾನ ಮಾಡದೆ ಊಟ ಮಾಡುವವನಿಗೆ ಶುಭ ಫಲ ಸಿಗುವುದಿಲ್ಲವೆಂದು ನಂಬಲಾಗಿದೆ.

ಅಪಶಬ್ಧ ಬಳಕೆ : ಮಕರ ಸಂಕ್ರಾಂತಿಯ ದಿನದಂದು ನಿಮ್ಮ ಮಾತಿನಲ್ಲಿ ಸಂಯಮ ಇರಲಿ. ಯಾರನ್ನೂ ನಿಂದಿಸಬೇಡಿ. ಎಲ್ಲರನ್ನೂ ಸೌಜನ್ಯದಿಂದ ನಡೆಸಿಕೊಳ್ಳಿ. ಸಂಕ್ರಾಂತಿಯ ದಿನದಂದು ಹಿರಿಯರ ಪಾದ ಮುಟ್ಟಿ ಆಶೀರ್ವಾದ ಪಡೆಯಿರಿ. ಯಾರಾದರೂ ತಪ್ಪಾಗಿ ಮಾತನಾಡಿದರೆ ನಿಮ್ಮ ಕೋಪವನ್ನು ಹತೋಟಿಯಲ್ಲಿಟ್ಟುಕೊಳ್ಳಿ.

ಇದನ್ನೂ ಓದಿ: Makar Sankranti 2022: ಸೂರ್ಯನ ಚಲನೆಯಿಂದ ಈ ರಾಶಿಗಳು ಸಂಕಷ್ಟಕ್ಕೀಡಾಗಲಿವೆ..

ತಾಮಸಿಕ ಆಹಾರ ಸೇವನೆ : ಮಕರ ಸಂಕ್ರಾಂತಿ  ಧಾರ್ಮಿಕವಾಗಿ ಬಹಳ ಮುಖ್ಯವಾದ ಮತ್ತು ಪವಿತ್ರವಾದ ಹಬ್ಬವಾಗಿದೆ. ಇಂತಹ ಸಂದರ್ಭದಲ್ಲಿ ಸಾತ್ವಿಕ ಆಹಾರವನ್ನೇ ಸೇವಿಸಬೇಕು. ಅಂದರೆ ಈರುಳ್ಳಿ ಬೆಳ್ಳುಳ್ಳಿ, ಮಾಂಸಾಹಾರದಂತಹ ತಾಮಸಿಕ ಆಹಾರದಿಂದ ದೂರವಿರಬೇಕು. ಸಂಕ್ರಾಂತಿಯ ದಿನ ತಯಾರಿಸುವ ಖಿಚಡಿಗೆ ಬೆಳ್ಳುಳ್ಳಿ ಮತ್ತು ಈರುಳ್ಳಿ ಹಾಕಬಾರದು.

ನಶೆ ಪದಾರ್ಥ ಸೇವನೆ ಮಾಡಬೇಡಿ : ಮಕರ ಸಂಕ್ರಾಂತಿಯಂದು ಮದ್ಯಪಾನ ಮಾಡಬೇಡಿ. ಧೂಮಪಾನ ಹಾಗೂ ಗುಟ್ಕಾ ಸೇವನೆಯಿಂದಲೂ ದೂರವಿರಬೇಕು.

ಮನೆಗೆ ಬಂದವರನ್ನು ಬರಿಗೈನಲ್ಲಿ ಕಳುಹಿಸಬೇಡಿ : ಮಕರ ಸಂಕ್ರಾಂತಿಯ ದಿನದಂದು ದಾನಕ್ಕೆ ಹೆಚ್ಚಿನ ಮಹತ್ವವಿದೆ. ವಿಶೇಷವಾಗಿ ಎಳ್ಳು-ಬೆಲ್ಲ, ಖಿಚಡಿ ದಾನ ಮಾಡಬೇಕು. ಮನೆ ಮುಂದೆ ಭಿಕ್ಷುಕ ಬಂದರೆ, ಅಪ್ಪಿತಪ್ಪಿಯೂ ಬರಿಗೈಯಲ್ಲಿ ಹಿಂತಿರುಗಿಸಬೇಡಿ. ಹೀಗೆ ಮಾಡುವುದರಿಂದ ಆರ್ಥಿಕ ನಷ್ಟ ಎದುರಿಸಬೇಕಾಗುತ್ತದೆ. ನಿಮ್ಮ ಜಾತಕದ ಪ್ರಕಾರ ದಾನ ಮಾಡಿ. ಈ ಕಾರಣದಿಂದಾಗಿ ಗ್ರಹಗಳು ಶುಭ ಫಲಿತಾಂಶಗಳನ್ನು ನೀಡಲು ಪ್ರಾರಂಭಿಸುತ್ತವೆ. ಕಪ್ಪು ಎಳ್ಳು ಮತ್ತು ಬೆಲ್ಲವನ್ನು ದಾನ ಮಾಡುವುದರಿಂದ ಶನಿ ದೇವ ಮತ್ತು ಸೂರ್ಯ ದೇವರ ಆಶೀರ್ವಾದ ಸಿಗುತ್ತದೆ.

ಇದನ್ನೂ ಓದಿ: Donate And Get: ಸಂಕ್ರಾಂತಿ ದಿನ ಇವನ್ನು ದಾನ ಮಾಡಿದ್ರೆ ವರ್ಷವಿಡೀ ದುಡ್ಡಿಗೆ ಎಂದೂ ಬರವಿರೋಲ್ಲ!

ಮರ-ಗಿಡದ ನಾಶ : ಮಕರ ಸಂಕ್ರಾಂತಿಯು ಪ್ರಕೃತಿಯೊಂದಿಗೆ ಆಚರಿಸುವ ಹಬ್ಬವಾಗಿದೆ. ಹಾಗಾಗಿ ಈ ಶುಭ ದಿನ ಮರ-ಗಿಡಗಳನ್ನು ಕಡಿದು,ಪ್ರಕೃತಿಗೆ ನೋವುಂಟು ಮಾಡಬೇಡಿ.

ಸಂಜೆ ಈ ಕೆಲಸ ಬೇಡ : ನೀವು ಸೂರ್ಯ ದೇವರ ಅನುಗ್ರಹವನ್ನು ಪಡೆಯಲು ಬಯಸಿದರೆ, ಸಂಜೆ ಆಹಾರವನ್ನು ಸೇವಿಸಬೇಡಿ. ಸೂರ್ಯೋದಯ ಮತ್ತು ಸೂರ್ಯಾಸ್ತದ ಸಮಯದಲ್ಲಿ ಪೂಜೆಯನ್ನು ಅವಶ್ಯಕವಾಗಿ ಮಾಡಿ.  

click me!