ಇನ್ಮುಂದೆ ಯಂತ್ರದಲ್ಲಿ ತಯಾರಾಗಲಿವೆ ತಿರುಪತಿ ಲಡ್ಡು: 50 ಕೋಟಿ ರೂ. ವೆಚ್ಚದ ಯಂತ್ರ ನೀಡಲು ರಿಲಯನ್ಸ್‌ ಸಜ್ಜು

By Kannadaprabha News  |  First Published Feb 5, 2023, 8:04 AM IST

ಇನ್ನು ಮುಂದೆ ಯಂತ್ರದಲ್ಲಿ ತಿರುಪತಿ ಲಡ್ಡು ತಯಾರಾಗುತ್ತಿದೆ. 50 ಕೋಟಿ ರೂ. ವೆಚ್ಚದಲ್ಲಿ ಯಂತ್ರ ನೀಡಲು ರಿಲಯನ್ಸ್‌ ಸಜ್ಜಾಗಿದ್ದು, ದಿನಕ್ಕೆ 6 ಲಕ್ಷ ಲಡ್ಡು ತಯಾರಿಸುವ ಸಾಮರ್ಥ್ಯವಿರುವ ಮಶಿನ್‌ ಅನ್ನು ನೀಡಲಾಗುತ್ತದೆ ಎಂದು ತಿಳಿದುಬಂದಿದೆ. 


ತಿರುಪತಿ: ವಿಶ್ವದ ಅತ್ಯಂತ ಶ್ರೀಮಂತ ಹಿಂದೂ ದೇವಾಲಯದ ಟ್ರಸ್ಟ್ ಬೋರ್ಡ್ ತಿರುಮಲ ತಿರುಪತಿ ದೇವಸ್ಥಾನ (ಟಿಟಿಡಿ) ಡಿಸೆಂಬರ್ ಅಂತ್ಯದ ವೇಳೆಗೆ ತಿರುಮಲ ದೇವಸ್ಥಾನದಲ್ಲಿ ಭಕ್ತರಿಗೆ ವಿತರಿಸುವ ಲಡ್ಡು ಪ್ರಸಾದವನ್ನು ಸಂಪೂರ್ಣವಾಗಿ ಸ್ವಯಂಚಾಲಿತಗೊಳಿಸುವ ಮಹತ್ವಾಕಾಂಕ್ಷೆಯ ಯೋಜನೆಯನ್ನು ಪ್ರಾರಂಭಿಸಿದೆ. ಪ್ರಸಿದ್ಧ ತಿರುಪತಿ ವೆಂಕಟೇಶ್ವರ ದೇವಸ್ಥಾನದಲ್ಲಿ ಭಕ್ತರಿಗೆ ನೀಡಲಾಗುವ ಲಡ್ಡು ಪ್ರಸಾದ ತಯಾರಿಕೆಗೆ ಸಂಪೂರ್ಣ ಸ್ವಯಂ ಚಾಲಿತ ಯಂತ್ರವನ್ನು ಬಳಸುವ ಯೋಜನೆ ರೂಪಿಸಲಾಗಿದೆ. ದಿನಕ್ಕೆ 6 ಲಕ್ಷ ಲಡ್ಡು ತಯಾರಿಸಬಲ್ಲ 50 ಕೋಟಿ ರೂ. ವೆಚ್ಚದ ಯಂತ್ರವನ್ನು ರಿಲಯನ್ಸ್‌ ಕಂಪನಿಯು ದೇಗುಲಕ್ಕೆ ನೀಡಲಿದೆ.

ಲಡ್ಡು (Laddu) ತಯಾರಿಕೆ ಪ್ರಕ್ರಿಯೆಯನ್ನು ಸ್ವಯಂಚಾಲಿತಗೊಳಿಸಲು (Automate) ಸುಮಾರು 50 ಕೋಟಿ ರೂಪಾಯಿಗಳಿಗೆ ಜರ್ಮನಿ (Germany), ಆಸ್ಟ್ರೇಲಿಯಾ (Australia) ಮತ್ತು ಸ್ವಿಟ್ಜರ್ಲೆಂಡ್‌ನಿಂದ (Switzerland) ಟಿಟಿಡಿ (TTD) ಅತ್ಯಾಧುನಿಕ ಯಂತ್ರೋಪಕರಣಗಳನ್ನು ಆಮದು ಮಾಡಿಕೊಳ್ಳಲಿದೆ. ಈ ಅತ್ಯಾಧುನಿಕ ಯಂತ್ರೋಪಕರಣಗಳನ್ನು ಟಿಟಿಡಿ ವಿದೇಶದಿಂದ ಆಮದು ಮಾಡಿಕೊಳ್ಳಲಿದ್ದು, ರಿಲಯನ್ಸ್‌ ಇಂಡಸ್ಟ್ರೀಸ್‌ ಈ ಯಂತ್ರೋಪಕರಣಗಳನ್ನು ನೀಡಲು ಸಿದ್ಧವಿದೆ ಎಂದು ಟಿಟಿಡಿ ಕಾರ‍್ಯನಿರ್ವಾಹಕ ಅಧಿಕಾರಿ ಎ.ವಿ. ಧರ್ಮಾರೆಡ್ಡಿ ಹೇಳಿದ್ದಾರೆ. ಕೊನೆಯಲ್ಲಿ ಕೈಯಿಂದ ಲಡ್ಡುಗಳಿಗೆ ಅಂಡಾಕಾರದ ಆಕಾರ ನೀಡಬೇಕಾಗುವುದನ್ನು ಬಿಟ್ಟರೆ ಸಂಪೂರ್ಣ ತಯಾರಿಕೆ ಸ್ವಯಂಚಾಲಿತ ಯಂತ್ರದಲ್ಲೇ ಆಗುತ್ತದೆ’ ಎಂದು ಅವರು ತಿಳಿಸಿದ್ದಾರೆ.

Tap to resize

Latest Videos

ಇದನ್ನು ಓದಿ: ತಿರುಪತಿ ದೇಗುಲದ ಮೇಲೆ ಡ್ರೋನ್‌ ವಿಡಿಯೋ: ಡ್ರೋನ್‌ ಬಿಟ್ಟವರ ಮೇಲೆ ಕ್ರಿಮಿನಲ್‌ ಕೇಸ್‌..!

ಪ್ರಸ್ತುತ ದೊಡ್ಡ ಡೊಡ್ಡ ಪಾತ್ರೆಗಳನ್ನು ಬಳಸುವ ಮೂಲಕ ಹಲವು ದಶಕಗಳಿಂದ ಲಡ್ಡುಗಳನ್ನು ಕೈಯ್ಯಾರೆ ತಯಾರಿಸಲಾಗುತ್ತದೆ. ನೂತನ ಯಂತ್ರವು ದಿನಕ್ಕೆ 6 ಲಕ್ಷ ಲಡ್ಡು ತಯಾರಿಸಬಲ್ಲ ಸಾಮರ್ಥ್ಯ ಹೊಂದಿದ್ದು, ಇದು ಪ್ರಸ್ತುತ ದಿನಕ್ಕೆ ತಯರಾಗುವ ಲಡ್ಡುಗಳ ಸಂಖ್ಯೆಗಿಂತ ಭಾರಿ ಪ್ರಮಾಣದಲ್ಲಿ ಅಧಿಕವಾಗಿರಲಿದೆ. ಯಂತ್ರ ಬಳಕೆಯಿಂದ ಉತ್ತಮ ಗಾತ್ರ ಮತ್ತು ಗುಣಮಟ್ಟದ ಆರೋಗ್ಯಕರವಾದ ಲಡ್ಡುಗಳನ್ನು ತಯಾರಿಸಬಹುದು. ಶುಚಿತ್ವ ಕಾಪಾಡಲೂ ಸಾಧ್ಯವಾಗುತ್ತದೆ ಎಂದರು.

‘’ಹೊಸ ಯಂತ್ರಗಳೊಂದಿಗೆ ಲಡ್ಡು ಉತ್ಪಾದನೆಯು ದಿನಕ್ಕೆ 6 ಲಕ್ಷಕ್ಕೆ ಹೆಚ್ಚಾಗುತ್ತದೆ, ಈ ಮೂಲಕ ಪ್ರಸ್ತುತ ಸಾಮರ್ಥ್ಯವನ್ನು ದ್ವಿಗುಣಗೊಳಿಸುತ್ತದೆ. ಇಡೀ ಪ್ರಕ್ರಿಯೆಯು ಹೆಚ್ಚು ಆರೋಗ್ಯಕರ ಮತ್ತು ರುಚಿಯಾದ ತಿರುಪತಿ ಲಡ್ಡು ಪ್ರಸಾದಗಳ ಉತ್ಪಾದನೆಗೆ ಕಾರಣವಾಗುತ್ತದೆ. ಇದು ಪ್ರಮಾಣ ಮತ್ತು ಗುಣಮಟ್ಟವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ’’ ಎಂದು ಧರ್ಮ ರೆಡ್ಡಿ ಹೇಳಿದರು. ಕಳೆದ ಹಲವು ದಶಕಗಳಿಂದ ಪ್ರಸಾದವನ್ನು ಕೈಯಾರೆ ಉತ್ಪಾದಿಸಲಾಗುತ್ತಿದ್ದು, ಹೊಸ ಯಂತ್ರಗಳು ಪ್ರಮಾಣ ಮತ್ತು ಗುಣಮಟ್ಟ ಎರಡನ್ನೂ ಹೆಚ್ಚಿಸಲು ಸಹಾಯ ಮಾಡುತ್ತದೆ ಎಂದೂ ಅವರು ಹೇಳಿದರು.

ಇದನ್ನೂ ಓದಿ: ತಿರುಪತಿ ತಿಮ್ಮಪ್ಪ ವಿಶೇಷ ದರ್ಶನಕ್ಕೆ ಆನ್‌ಲೈನ್ ಟಿಕೆಟ್ಸ್ ಬಿಡುಗಡೆ, ಬುಕಿಂಗ್ ಓಪನ್

ಪ್ರಸಾದ ಮಾರಾಟದ ಮೂಲಕ 2022-2023ರ ಆರ್ಥಿಕ ವರ್ಷದಲ್ಲಿ 365 ಕೋಟಿ ರೂ. ಆದಾಯವನ್ನು ಗಳಿಸಬಹುದು ಎಂದು ಟಿಟಿಡಿ ಅಂದಾಜಿಸಿದೆ. ಇದೇ ವೇಳೆ ಹುಂಡಿಗೆ ಜನವರಿಯಲ್ಲಿ 123 ಕೋಟಿ ರೂ. ಹರಿದುಬಂದಿದ್ದು, 21 ಲಕ್ಷ ಭಕ್ತರು ದೇಗುಲಕ್ಕೆ ಭೇಟಿ ನೀಡಿದ್ದರು ಹಾಗೂ 8 ಲಕ್ಷ ಭಕ್ತರು ಕೇಶಮುಂಡನ ಮಾಡಿಸಿಕೊಂಡರು ಎಂದು ಟಿಟಿಡಿ ಪ್ರಕಟಣೆ ತಿಳಿಸಿದೆ.

ಈ ಹಣಕಾಸು ವರ್ಷದಲ್ಲಿ 1,000 ಕೋಟಿ ರೂ.ಗಳಷ್ಟು ಹುಂಡಿ ಸಂಗ್ರಹವನ್ನು ಟ್ರಸ್ಟ್ ನಿರೀಕ್ಷಿಸಿತ್ತು, ಆದರೆ ಕೋವಿಡ್ -19 ಸಾಂಕ್ರಾಮಿಕ ರೋಗವು ಅಂತ್ಯಗೊಂಡ ನಂತರ ಭಕ್ತರ ನೂಕುನುಗ್ಗಲು ಮರುಕಳಿಸಿದ್ದರಿಂದ ಸುಮಾರು 1,500 ಕೋಟಿ ರೂಪಾಯಿಗಳನ್ನು ಗಳಿಸಲು ಸಜ್ಜಾಗಿದೆ. ಇದು 1933 ರಲ್ಲಿ ಟ್ರಸ್ಟ್‌ನ ಪ್ರಾರಂಭದ ನಂತರ ಪಡೆದ ಅತ್ಯಧಿಕ ಹುಂಡಿ ಆದಾಯವಾಗಿದೆ. ಇನ್ನು, ಟಿಟಿಡಿಯು ಸ್ಥಿರ ಠೇವಣಿಗಳ ಮೇಲಿನ ಬಡ್ಡಿಯಿಂದಲೇ 668 ಕೋಟಿ ರೂಪಾಯಿಗಳನ್ನು ಗಳಿಸಲು ಸಿದ್ಧವಾಗಿದೆ.

ಇದನ್ನೂ ಓದಿ: Tirupati ಲಡ್ಡುಗಳ ತೂಕ ಇಳಿಸಿಲ್ಲ: ಟಿಟಿಡಿ ಸ್ಪಷ್ಟನೆ

click me!