ಈ ನಾಲ್ಕು ರಾಶಿಯವರು ಬುದ್ಧಿವಂತರು ಜೊತೆಗೆ ಚತುರರು ಆಗಿರುತ್ತಾರಂತೆ...

By Suvarna NewsFirst Published Sep 15, 2021, 6:04 PM IST
Highlights

ಜ್ಯೋತಿಷ್ಯ ಶಾಸ್ತ್ರದಲ್ಲಿ ಹನ್ನೆರಡು ರಾಶಿ ಚಕ್ರಗಳಿವೆ. ಪ್ರತಿ ರಾಶಿ ಅವರದ್ದು ಭಿನ್ನವಾದ ಸ್ವಭಾವ ಗುಣಗಳು ಇರುತ್ತವೆ. ಶಾಸ್ತ್ರದ ಪ್ರಕಾರ ಮಿಥುನ, ಕರ್ಕಾಟಕ, ವೃಶ್ಚಿಕ ಮತ್ತು ಮೀನ ರಾಶಿಯ ವ್ಯಕ್ತಿಗಳು ಅತ್ಯಂತ ಚತುರರಾಗಿರುತ್ತಾರೆ. ಹಾಗಾಗಿ ಈ ರಾಶಿಯವರ ಬಗ್ಗೆ ಇನ್ನಷ್ಟು ತಿಳಿಯೋಣ ...
 

ಜ್ಯೋತಿಷ್ಯ ಶಾಸ್ತ್ರದಲ್ಲಿ ರಾಶಿ, ಗ್ರಹ ಮತ್ತು ನಕ್ಷತ್ರಗಳ ಆಧಾರದ ಮೇಲೆ ವ್ಯಕ್ತಿಯ ಭವಿಷ್ಯದ ಬಗ್ಗೆ ತಿಳಿಯಲಾಗುತ್ತದೆ. ವ್ಯಕ್ತಿಯ ವರ್ತಮಾನ ಭವಿಷ್ಯ, ಅದೃಷ್ಟ ಮತ್ತು ಯೋಗಗಳ ಬಗ್ಗೆ ಜಾತಕವನ್ನು ನೋಡಿ ತಿಳಿಯಬಹುದಾಗಿದೆ. ಗುಣ ಸ್ವಭಾವಗಳು ವ್ಯಕ್ತಿಯ ರಾಶಿ ಮತ್ತು ನಕ್ಷತ್ರಗಳ ಪ್ರಭಾವಕ್ಕೆ ಒಳಪಟ್ಟಿರುತ್ತವೆ. ಪ್ರತಿ ರಾಶಿಗೂ ಒಂದೊಂದು ಗ್ರಹಗಳ ಅಧಿಪತ್ಯವಿರುತ್ತದೆ. ಹಾಗಾಗಿ ರಾಶಿಯ ಗುಣದ ಜೊತೆಗೆ ಗ್ರಹಗಳ ಪ್ರಭಾವವೂ ಇರುತ್ತದೆ.

ರಾಶಿ ಚಕ್ರದಲ್ಲಿರುವ ಹನ್ನೆರಡು ರಾಶಿಗಳಲ್ಲಿ ಒಂದೊಂದು ರಾಶಿಯವರ ಸ್ವಭಾವ ಗುಣಗಳು ಬೇರೆ ಬೇರೆಯಾಗಿರುತ್ತವೆ. ಕೆಲವು ರಾಶಿಯವರು ನೋಡಲು ಸುಂದರವಾಗಿದ್ದರೆ, ಇನ್ನು ಕೆಲವು ರಾಶಿಯವರು ಆಕರ್ಷಕ ವ್ಯಕ್ತಿತ್ವವನ್ನು ಹೊಂದಿರುತ್ತಾರೆ. ಹಾಗೆಯೇ ಕೆಲವು ರಾಶಿಯವರು ಹೆಚ್ಚು ಬುದ್ಧಿವಂತರು ಮತ್ತು ಚತುರರು ಆಗಿರುತ್ತಾರೆಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ರಾಶಿಗಳು ಯಾವುದು? ಮತ್ತು ಆ ವ್ಯಕ್ತಿಗಳ ಗುಣ ಏನು? ಎಂಬುದರ ಬಗ್ಗೆ ತಿಳಿಯೋಣ.... 

ಇದನ್ನು ಓದಿ: ಆಶ್ಲೇಷಾ, ಮಘಾ, ಪೂರ್ವ ಮತ್ತು ಉತ್ತರ ಫಲ್ಗುಣಿ ನಕ್ಷತ್ರದಲ್ಲಿ ಜನಿಸಿದವರ ಗುಣವಿದು!

ಜ್ಯೋತಿಷ್ಯಶಾಸ್ತ್ರದಲ್ಲಿ ಕೆಲವು ರಾಶಿಯವರು ಅತ್ಯಂತ ಚತುರರಾಗಿರುತ್ತಾರೆ. ಅಷ್ಟೇ  ಬುದ್ಧಿವಂತರು ಸಹ ಆಗಿರುತ್ತಾರೆ. ಹಾಗಾಗಿ ಅವರನ್ನು ಸೋಲಿಸುವುದು ಕಷ್ಟವೆಂದು ಹೇಳಲಾಗಿದೆ. ಅಂತಹ ರಾಶಿಗಳಲ್ಲಿ ಮಿಥುನ, ಕರ್ಕಾಟಕ, ವೃಶ್ಚಿಕ ಮತ್ತು ಮೀನ ರಾಶಿಯು ಸೇರಿದೆ. ಈ ರಾಶಿಯ ವ್ಯಕ್ತಿಗಳ ಗುಣ ಸ್ವಭಾವಗಳು ಹೀಗಿರುತ್ತವೆ.

ಮಿಥುನ ರಾಶಿ
ಈ ರಾಶಿಯ ವ್ಯಕ್ತಿಗಳು ತಮ್ಮ ಜವಾಬ್ದಾರಿಯನ್ನು ಅರಿತಿರುತ್ತಾರೆ ಎಂದು ಹೇಳಲಾಗುತ್ತದೆ. ಮಿಥುನ ರಾಶಿಯ ವ್ಯಕ್ತಿಗಳು ತಮ್ಮ ಮನಸ್ಸಿನಲ್ಲಿರುವ ವಿಷಯಗಳನ್ನು ಯಾರೊಂದಿಗೂ ಹಂಚಿಕೊಳ್ಳುವುದಿಲ್ಲ. ಅವರು ಯಾವ ಸಂದರ್ಭದಲ್ಲಿ ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ. ಯಾವ ರೀತಿ ಕಾರ್ಯ ನಿರ್ವಹಿಸುತ್ತಾರೆ ಎಂಬುದು ಯಾರಿಗೂ ತಿಳಿಯುವುದಿಲ್ಲ. ಹಾಗಾಗಿ ಈ ರಾಶಿಯ ವ್ಯಕ್ತಿಗಳಿಗೆ ಎಲ್ಲ ಕ್ಷೇತ್ರಗಳಲ್ಲೂ ಯಶಸ್ಸು ಸಿಗುತ್ತದೆ. ಕಾಲಿಟ್ಟ ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವುದು ಇವರ ಅಭ್ಯಾಸವಾಗಿರುತ್ತದೆ. ಹಾಗಾಗಿ ಸೋಲನ್ನು ಅರಗಿಸಿಕೊಳ್ಳುವುದು ಇವರಿಗೆ ಕಷ್ಟಸಾಧ್ಯವಾಗುತ್ತದೆ.

ಇದನ್ನು ಓದಿ: ಮೃಗಶಿರಾ, ಆರ್ದ್ರಾ, ಪುನರ್ವಸು, ಪುಷ್ಯ ನಕ್ಷತ್ರದವರ ಆಸಕ್ತಿ ಗೊತ್ತಾ..?

ಕರ್ಕಾಟಕ ರಾಶಿ
ರಾಶಿಚಕ್ರದಲ್ಲಿರುವ ಹನ್ನೆರಡು ರಾಶಿಗಳಲ್ಲಿ ಒಂದಾದ ಕರ್ಕಾಟಕ ರಾಶಿಯ ವ್ಯಕ್ತಿಗಳು ಉತ್ತಮ ತಿಳಿವಳಿಕೆಯನ್ನು ಹೊಂದಿರುತ್ತಾರೆ. ಅಷ್ಟೆ ಅಲ್ಲದೆ ಇವರಿಗೆ ಜವಾಬ್ದಾರಿಯ ಅರಿವಿನ ಜೊತೆಗೆ  ಅರ್ಥೈಸಿಕೊಳ್ಳುವ ಗುಣವನ್ನು ಹೊಂದಿರುತ್ತಾರೆ. ಕರ್ಕಾಟಕ ರಾಶಿಯವರದ್ದು ಸೂಕ್ಷ್ಮ ಸ್ವಭಾವ ಅಷ್ಟೇ ಅಲ್ಲದೆ ಭಾವನಾ ಜೀವಿಗಳು ಸಹ ಇವರಾಗಿರುತ್ತಾರೆ. ಇತರರಿಗೆ ಹೋಲಿಸಿದಲ್ಲಿ ಈ ರಾಶಿಯವರು ವಿಷಯಗಳನ್ನು ನಿರ್ಧರಿಸುವ ರೀತಿ ಮತ್ತು ಕೆಲಸ ಮಾಡುವ ಪರಿ ವಿಭಿನ್ನವಾಗಿರುತ್ತದೆ.  ಈ ವ್ಯಕ್ತಿಗಳನ್ನು ಸೋಲಿಸುವುದು ಸಹ ಕಷ್ಟದ ಕೆಲಸವಾಗಿರುತ್ತದೆ. ಕರ್ಕಾಟಕ ರಾಶಿಯವರು ತಮ್ಮದೇ ರೀತಿಯಲ್ಲಿ ಎಲ್ಲ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುತ್ತಾರೆ.
 



ವೃಶ್ಚಿಕ ರಾಶಿ
ಈ ರಾಶಿಯವರು ಹೆಚ್ಚು ಚತುರರಾಗಿರುತ್ತಾರೆ. ವಿಷಯಗಳನ್ನು ಅರ್ಥೈಸಿಕೊಳ್ಳುವ ಗುಣವು ಇವರಲ್ಲಿ ಹೆಚ್ಚಾಗಿರುತ್ತದೆ. ವೃಶ್ಚಿಕ ರಾಶಿಯವರು ತಮಗೆ ಸಂಬಂಧಿಸಿದ ವಿಷಯಗಳನ್ನು ಇತರರೊಂದಿಗೆ ಹಂಚಿಕೊಳ್ಳಲು ಇಷ್ಟಪಡುವುದಿಲ್ಲ. ಹೆಚ್ಚಿನ ಬುದ್ಧಿವಂತರು ಇವರೇ ಆಗಿರುತ್ತಾರೆ. ಹಾಗಾಗಿ ವಿಷಯಗಳನ್ನು ಅವಧಿಗಿಂತ ಮುಂಚೆಯೇ ಊಹಿಸಿ ಬಿಡುತ್ತಾರೆ. ಹಾಗಾಗಿ ಎಲ್ಲ ಕ್ಷೇತ್ರಗಳಲ್ಲಿ ಇವರಿಗೆ ಗೆಲುವು ದೊರೆಯುತ್ತದೆ. ಕಾರ್ಯ ಕ್ಷೇತ್ರಗಳಲ್ಲಿ ಇವರು ಉತ್ತಮ ಹೆಸರನ್ನು ಗಳಿಸುತ್ತಾರೆ. ಹಾಗಾಗಿ ಇವರನ್ನು ಸೋಲಿಸುವುದು ಕಷ್ಟಕರವಾಗಿರುತ್ತದೆ. 

ಇದನ್ನು ಓದಿ: ಅಶ್ವಿನಿ, ಭರಣಿ, ಕೃತಿಕಾ, ರೋಹಿಣಿ ನಕ್ಷತ್ರದವರು ಹೇಗೆ ಗೊತ್ತಾ..?

ಮೀನ ರಾಶಿ
ಮೀನ ರಾಶಿಯ ವ್ಯಕ್ತಿಗಳು ಅತ್ಯಂತ ಬುದ್ಧಿವಂತರಾಗಿರುತ್ತಾರೆ. ಮೋಸ ಚಾಲಾಕಿತನ ಇವರಿಗೆ ಸ್ವಲ್ಪವೂ ಹಿಡಿಸುವುದಿಲ್ಲ. ಈ ರಾಶಿಯವರಿಗೆ ಮುಂದಿನ ದಿನಗಳಲ್ಲಿ ಎದುರಾಗುವ ಸಮಸ್ಯೆಗಳ ಕಲ್ಪನೆ ಇರುತ್ತದೆ.   ಗೆಲುವು ಸಾಧಿಸಲು ಈ ರಾಶಿಯ ವ್ಯಕ್ತಿಗಳು ಸತತ ಪ್ರಯತ್ನ ಮಾಡುತ್ತಾರೆ. ಹಾಗಾಗಿ ಅವರನ್ನು ಸೋಲಿಸುವುದು ಕಷ್ಟವಾಗುತ್ತದೆ. ಮೀನ ರಾಶಿಯ ವ್ಯಕ್ತಿಗಳು ಕಾಲಿಟ್ಟ ಕ್ಷೇತ್ರದಲ್ಲಿ ತಮ್ಮ ವಿಶಿಷ್ಟವಾದ  ಗುರುತನ್ನು ಮೂಡಿಸುತ್ತಾರೆ.

click me!