ಆಶ್ಲೇಷಾ, ಮಘಾ, ಪೂರ್ವ ಮತ್ತು ಉತ್ತರ ಫಲ್ಗುಣಿ ನಕ್ಷತ್ರದಲ್ಲಿ ಜನಿಸಿದವರ ಗುಣವಿದು!

By Suvarna NewsFirst Published Sep 13, 2021, 6:40 PM IST
Highlights

ನಕ್ಷತ್ರಗಳ ಆಧಾರದ ಮೇಲೆ ವ್ಯಕ್ತಿಯ ಗುಣ ಸ್ವಭಾವಗಳನ್ನು ತಿಳಿಯಬಹುದಾಗಿದೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಜಾತಕವನ್ನು ಮಾಡುವಾಗ ನಕ್ಷತ್ರವು ಬಹುಮುಖ್ಯ ಪಾತ್ರವನ್ನು ವಹಿಸುತ್ತವೆ. ಹಾಗಾಗಿ ಇಲ್ಲಿ ಕೆಲವು ನಕ್ಷತ್ರಗಳಲ್ಲಿ ಜನಿಸಿದವರ ಗುಣ ಸ್ವಭಾವಗಳ ಬಗ್ಗೆ ತಿಳಿಯೋಣ....
 

ಹಿಂದೂ ಧರ್ಮದಲ್ಲಿ ಜ್ಯೋತಿಷ್ಯಶಾಸ್ತ್ರಕ್ಕೆ ವಿಶೇಷವಾದ ಪ್ರಾಮುಖ್ಯತೆಯನ್ನು ನೀಡಲಾಗುತ್ತದೆ. ವೈದಿಕ ಜ್ಯೋತಿಷ್ಯ ಶಾಸ್ತ್ರದಲ್ಲಿ ಗ್ರಹ, ರಾಶಿ ಮತ್ತು ನಕ್ಷತ್ರಗಳ ಆಧಾರದ ಮೇಲೆ ವ್ಯಕ್ತಿಯ ಭವಿಷ್ಯ ಮತ್ತು ವರ್ತಮಾನದ ವಿಚಾರಗಳನ್ನು ತಿಳಿಯಲಾಗುತ್ತದೆ. ಆಯಾ ನಕ್ಷತ್ರದಲ್ಲಿ ಜನಿಸಿದವರು ನಕ್ಷತ್ರದ ಅಧಿಪತಿ ಗ್ರಹಗಳ ಪ್ರಭಾವಕ್ಕೂ ಒಳಪಟ್ಟಿರುತ್ತಾರೆ. ಇಲ್ಲಿ ನಾವು ಆಶ್ಲೇಷಾ, ಮಘಾ, ಪೂರ್ವ ಫಲ್ಗುಣಿ ಮತ್ತು ಉತ್ತರ ಫಲ್ಗುಣಿ ನಕ್ಷತ್ರದಲ್ಲಿ ಜನಿಸಿದವರ ಗುಣ ಸ್ವಭಾವಗಳ ಬಗ್ಗೆ ತಿಳಿಯೋಣ....

ಆಶ್ಲೇಷಾ ನಕ್ಷತ್ರ
ಇಪ್ಪತ್ತೇಳು ನಕ್ಷತ್ರಗಳಲ್ಲಿ ಆಶ್ಲೇಷಾ ನಕ್ಷತ್ರವು ಒಂಭತ್ತನೆಯದು. ಈ ನಕ್ಷತ್ರದ ಅಧಿಪತಿ ದೇವರು ಬುಧ ಗ್ರಹ. ಆಶ್ಲೇಷಾ ನಕ್ಷತ್ರವನ್ನು ಶಾಸ್ತ್ರಗಳ ಅನುಸಾರ ವಿಷ ನಕ್ಷತ್ರವೆಂದು ಕರೆಯುತ್ತಾರೆ. ಈ ನಕ್ಷತ್ರದಲ್ಲಿ ಜನಿಸಿದವರು ಶರೀರದಲ್ಲಿ ಸ್ವಲ್ಪ ಮಾತ್ರದ ವಿಷವಿರುತ್ತದೆ ಎಂದು ಸಹ ಹೇಳಲಾಗುತ್ತದೆ. ಆಶ್ಲೇಷಾ ನಕ್ಷತ್ರದಲ್ಲಿ ಜನಿಸಿದವರು ಹೆಚ್ಚು ಪ್ರಾಮಾಣಿಕರಾಗಿರುತ್ತಾರೆ. ಲಾಭವಿದೆ ಎಂದರೆ ಮಾತ್ರ ಸ್ನೇಹವನ್ನು ಮಾಡುತ್ತಾರೆ. ಅಥವಾ ಈ ವ್ಯಕ್ತಿಗಳು ಕೆಲಸವಾದ ನಂತರ ಸ್ನೇಹವನ್ನು ನಿಭಾಯಿಸುವುದಿಲ್ಲ. ಇತರರನ್ನು ಬೇಗ ನಂಬುವ ಜಾಯಮಾನ ಇವರದ್ದಲ್ಲ. 

ಆಶ್ಲೇಷಾ ನಕ್ಷತ್ರದಲ್ಲಿ ಜನಿಸಿದ ಕನ್ಯೆಯರು ತಮ್ಮ ಸ್ವಭಾವದಿಂದ ಎಲ್ಲರ ಮನ ಗೆಲ್ಲುತ್ತಾರೆ. ಅಷ್ಟೇ ಅಲ್ಲದೆ ಸಂಸ್ಕಾರವಂತರು ಮತ್ತು ಎಲ್ಲರನ್ನು ಗೌರವಿಸುವವರು ಆಗಿರುತ್ತಾರೆ. ಈ ನಕ್ಷತ್ರದಲ್ಲಿ ಜನಿಸಿದ ಕನ್ಯೆಯರು ಅತ್ಯಂತ ಭಾಗ್ಯಶಾಲಿ ಆಗಿರುತ್ತಾರೆ. ಈ ಕನ್ಯೆಯರು ವಿವಾಹವಾಗಿ ಹೋದ  ಮನೆಯಲ್ಲಿ ಲಕ್ಷ್ಮಿವಾಸ ಮಾಡುತ್ತಾಳೆ ಎಂಬ ನಂಬಿಕೆ ಸಹ ಇದೆ. ಅಷ್ಟೇ ಅಲ್ಲದೆ ಆ ಮನೆಯು ಧನ ಧಾನ್ಯಗಳಿಂದ ಸಮೃದ್ಧವಾಗುತ್ತದೆ.

ಇದನ್ನು ಓದಿ: ಗಣೇಶ ಚತುರ್ಥಿಯ ಸಮಯದಲ್ಲಿ ಈ ಕೆಲಸ ಮಾಡಲೇಬೇಡಿ...!

ಮಘಾ ನಕ್ಷತ್ರ
ನಕ್ಷತ್ರಗಳ ಕೂಟದಲ್ಲಿ ಮಘಾ ನಕ್ಷತ್ರವು ಹತ್ತನೆಯ ನಕ್ಷತ್ರವಾಗಿದೆ. ಈ ನಕ್ಷತ್ರದ ಅಧಿಪತಿ ದೇವರು ಕೇತು ಗ್ರಹವಾಗಿದೆ. ಈ ನಕ್ಷತ್ರವನ್ನು ಗಂಡಮೂಲ ಅಂದರೆ ಗಂಡಾಂತರ ನಕ್ಷತ್ರವೆಂದು ಸಹ ಹೇಳುತ್ತಾರೆ. ಈ ನಕ್ಷತ್ರದವರಿಗೆ ಸೂರ್ಯನ ಪ್ರಭಾವವೂ ಇರುತ್ತದೆ. ಇದರಿಂದಾಗಿಯೇ ಈ ನಕ್ಷತ್ರದಲ್ಲಿ ಜನಿಸಿದವರು ಹೆಚ್ಚು ಪ್ರಭಾವಿಗಳಾಗುತ್ತಾರೆ. ಈ ನಕ್ಷತ್ರದಲ್ಲಿ ಜನಿಸಿದವರು ಹೆಚ್ಚು ಸ್ವಾಭಿಮಾನಿಗಳಾಗಿರುತ್ತಾರೆ. ಕೆಲಸ, ಕಾರ್ಯಗಳಲ್ಲಿ ಹೆಚ್ಚು ಆಸಕ್ತಿಯನ್ನು ಉಳ್ಳವರಾಗಿರುತ್ತಾರೆ ಮತ್ತು ಸಕ್ರಿಯರು ಸಹ ಆಗಿರುತ್ತಾರೆ. ಕೆಲಸವನ್ನು ಆದಷ್ಟು ಬೇಗ ಪೂರೈಸುವ ಗುಣ ಇವರದ್ದಾಗಿರುತ್ತದೆ. ದೇವರ ಮೇಲೆ ಭಕ್ತಿ ಶ್ರದ್ಧೆಗಳು ಈ ನಕ್ಷತ್ರದಲ್ಲಿ ಜನಿಸಿದವರಿಗೆ ಹೆಚ್ಚಾಗಿರುತ್ತದೆ. 

ಇದನ್ನು ಓದಿ: ಮೃಗಶಿರಾ, ಆರ್ದ್ರಾ, ಪುನರ್ವಸು, ಪುಷ್ಯ ನಕ್ಷತ್ರದವರ ಆಸಕ್ತಿ ಗೊತ್ತಾ..?
 


ಪೂರ್ವ ಫಲ್ಗುಣಿ  ನಕ್ಷತ್ರ 
ಇಪ್ಪತ್ತೇಳು ನಕ್ಷತ್ರಗಳಲ್ಲಿ ಈ ನಕ್ಷತ್ರವು ಹನ್ನೊಂದನೆಯ ನಕ್ಷತ್ರವಾಗಿದೆ. ಈ ನಕ್ಷತ್ರದ ಅಧಿಪತಿ ದೇವರು ಶುಕ್ರ ಗ್ರಹವಾಗಿದೆ.  ಈ ನಕ್ಷತ್ರದಲ್ಲಿ ಜನಿಸಿದವರಿಗೆ ಸಂಗೀತ ಮತ್ತು ಕಲೆಯಲ್ಲಿ ವಿಶೇಷ ಆಸಕ್ತಿ ಇರುತ್ತದೆ. ಪೂರ್ವ ಫಲ್ಗುಣಿ ನಕ್ಷತ್ರದಲ್ಲಿ ಜನಿಸಿದವರ ಈ ಅಭಿರುಚಿ ಹುಟ್ಟಿನಿಂದಲೇ ಕಾಣ ಸಿಗುತ್ತದೆ. ನೈತಿಕತೆ ಮತ್ತು ಪ್ರಾಮಾಣಿಕತೆಯಿಂದ ಜೀವನವನ್ನು ನಡೆಸುತ್ತಾರೆ. ಈ ವ್ಯಕ್ತಿಗಳು ಶಾಂತಿಪ್ರಿಯರು ಆಗಿರುವ ಕಾರಣ ಕಲಹ- ವಿವಾದಗಳನ್ನು ಇವರು  ಇಷ್ಟಪಡುವುದಿಲ್ಲ. ಅಷ್ಟೇ ಅಲ್ಲದೆ ಇವರು ಧನವಂತರಾಗಿರುತ್ತಾರೆ. ಹಾಗಾಗಿ ಜೀವನದಲ್ಲಿ  ಭೌತಿಕ ಸುಖಗಳ ಕೊರತೆ ಇವರಿಗೆ ಆಗುವುದಿಲ್ಲ. ಸ್ವಲ್ಪ ಮಟ್ಟಿನ  ಅಹಂಕಾರದ ಗುಣ ಇವರಲ್ಲಿರುತ್ತದೆ. 

ಇದನ್ನು ಓದಿ: ಅಶ್ವಿನಿ, ಭರಣಿ, ಕೃತಿಕಾ, ರೋಹಿಣಿ ನಕ್ಷತ್ರದವರು ಹೇಗೆ ಗೊತ್ತಾ..?

ಉತ್ತರ ಫಲ್ಗುಣಿ ನಕ್ಷತ್ರ
ಇಪ್ಪತ್ತೇಳು ನಕ್ಷತ್ರಗಳಲ್ಲಿ ಉತ್ತರ ಫಲ್ಗುಣಿ ನಕ್ಷತ್ರವು ಹನ್ನೆರಡನೆಯ ನಕ್ಷತ್ರವಾಗಿದೆ. ಈ ನಕ್ಷತ್ರದ ಅಧಿಪತಿ ದೇವರು ಸೂರ್ಯ ಗ್ರಹವಾಗಿದೆ. ಈ ವ್ಯಕ್ತಿಗಳು ಪ್ರಾಮಾಣಿಕರು ಮತ್ತು ಬುದ್ಧಿವಂತಿಕೆಯ ಗುಣವನ್ನು ಹೊಂದಿದವರಾಗಿರುತ್ತಾರೆ. ಈ ನಕ್ಷತ್ರದಲ್ಲಿ ಜನಿಸಿದವರು ತಮ್ಮ ಗುರಿಯನ್ನು ಸಾಧಿಸಲು ಸತತವಾಗಿ ಪ್ರಯತ್ನಿಸುತ್ತಾರೆ. ಇವರಿಗೆ ಖಾಸಗಿ ಕ್ಷೇತ್ರದಲ್ಲಿ ಉದ್ಯೋಗ ದೊರಕುವುದು ಕಷ್ಟವಾಗುವ ಕಾರಣ ಸಫಲತೆ ಸಿಗುವುದಿಲ್ಲ, ಹಾಗಾಗಿ ಸರ್ಕಾರಿ ಕೆಲಸವು ಇವರಿಗೆ ಆಗಿ ಬರುತ್ತದೆ. ಈ ವ್ಯಕ್ತಿಗಳು ಯಾವುದೇ ಕೆಲಸವನ್ನು ಪೂರೈಸಲು ಹೆಚ್ಚು ಸಮಯವನ್ನು ತೆಗೆದುಕೊಳ್ಳುತ್ತಾರೆ. ಸಂಬಂಧಗಳನ್ನು ಚೆನ್ನಾಗಿ ನಿಭಾಯಿಸುತ್ತಾರೆ.  

click me!