Garuda Purana: ಪ್ರತಿ ದಿನ ಈ ಕೆಲಸ ಮಾಡಿದ್ರೆ ಯಶಸ್ಸು ಕಟ್ಟಿಟ್ಟ ಬುತ್ತಿ

By Suvarna NewsFirst Published Sep 6, 2022, 1:18 PM IST
Highlights

ಪ್ರತಿಯೊಬ್ಬ ವ್ಯಕ್ತಿ ಸದಾ ಸುಖ, ಸಂತೋಷವನ್ನು ಬಯಸ್ತಾನೆ. ಇದಕ್ಕೆ ಸಾಕಷ್ಟು ಪರಿಶ್ರಮಪಡ್ತಾನೆ. ಆದ್ರೆ ಗರುಡ ಪುರಾಣದ ಪ್ರಕಾರ, ವ್ಯಕ್ತಿ ದುಃಖದಿಂದ ದೂರವಿರಲು, ಸಂತೋಷದ ಜೀವನ ನಡೆಸಲು ಹೆಚ್ಚು ಕಷ್ಟಪಡ್ಬೇಕಾಗಿಲ್ಲ. 
 

ಗರುಡ ಪುರಾಣದಲ್ಲಿ ವ್ಯಕ್ತಿಯ ಜನ್ಮದಿಂದ ಮೃತ್ಯುವಿನವರೆಗೆ ಅನೇಕ ಸಂಗತಿಗಳನ್ನು ಹೇಳಲಾಗಿದೆ. ಮೃತ್ಯು ನಂತ್ರ ವ್ಯಕ್ತಿ ಏನಾಗ್ತಾನೆ? ಎಲ್ಲಿಗೆ ಹೋಗ್ತಾನೆ ಎಂಬುದನ್ನು ಕೂಡ ಹೇಳಲಾಗಿದೆ. ಗರುಡ ಪುರಾಣದ ಪ್ರಕಾರ, ವ್ಯಕ್ತಿಯ ಜೀವನದ ಸಂತೋಷ ಮತ್ತು ದುಃಖ  ಅವನ ಕೆಲಸವನ್ನು ಅವಲಂಬಿಸಿದೆ. ನಾವು ಮಾಡುವ ಕೆಟ್ಟ ಕೆಲಸಗಳು ನಮ್ಮ ಜೀವನದಲ್ಲಿ ಸಮಸ್ಯೆ ತರುತ್ತವೆ. ಹಾಗೆಯೇ ನಾವು ಮಾಡಿದ ಒಳ್ಳೆ ಕೆಲಸಗಳು ನಮ್ಮ ಜೀವನದಲ್ಲಿ ಉತ್ತಮ ಫಲವನ್ನು ನೀಡುತ್ತವೆ ಎಂದು ಗರುಡ ಪುರಾಣದಲ್ಲಿ ಹೇಳಲಾಗಿದೆ. ಒಳ್ಳೆ ಕೆಲಸ ಮಾಡಲು, ಯಶಸ್ಸು ಸಾಧಿಸಲು ತುಂಬಾ ಕಷ್ಟಪಡಬೇಕಾಗಿಲ್ಲ. ಕೆಲವೊಂದು ಕೆಲಸಗಳನ್ನು ಪ್ರತಿ ದಿನ ಮಾಡ್ತಾ ಬಂದ್ರೆ ಯಶಸ್ಸು ನಿಮ್ಮದಾಗುತ್ತೆ ಎಂದು ಗರುಡ ಪುರಾಣದಲ್ಲಿ ಹೇಳಲಾಗಿದೆ.  ಗರುಡ ಪುರಾಣದ ಪ್ರಕಾರ, ವ್ಯಕ್ತಿ ಪ್ರತಿ ದಿನ ಮಾಡ್ಲೇಬೇಕಾದ ಕೆಲಸಗಳು ಯಾವುವು ಎಂಬುದನ್ನು ನಾವಿಂದು ಹೇಳ್ತೇವೆ.

ಜೀವನ (Life) ದಲ್ಲಿ ಸಂತೋಷ, ಮೋಕ್ಷ ಪ್ರಾಪ್ತಿಗೆ ಪ್ರತಿ ದಿನ ಮಾಡಿ ಈ ಕೆಲಸ : 

1. ಕುಲದೇವರನ್ನು ಮರೆಯಬೇಡಿ : ಈಗಿನ ದಿನಮಾನದಲ್ಲಿ ಜನರು ದೇವರ ಪೂಜೆ ಮಾಡುವುದೇ ಕಷ್ಟವಾಗಿದೆ. ಕುಲ, ಗೋತ್ರಗಳಿಗೆ ಈಗ ಹೆಚ್ಚು ಗಮನ ನೀಡಲಾಗುವುದಿಲ್ಲ. ಆದ್ರೆ ಗರುಡ ಪುರಾಣದ (Garuda Purana) ಪ್ರಕಾರ, ಕುಲಕ್ಕೊಂದು ದೇವತೆ ಇರುತ್ತದೆ. ಹಿಂದಿನಿಂದಲೂ ಪೂರ್ವಜರು ಆ ದೇವರನ್ನು ಪೂಜೆ ಮಾಡ್ತಾ ಬಂದಿರುತ್ತಾರೆ. ಆ ದೇವರನ್ನು ಎಂದಿಗೂ ಮರೆಯಬಾರದು. ಪ್ರತಿ ದಿನ ಕುಲದೇವರ ಧ್ಯಾನ (Meditation) ಮಾಡಬೇಕು.  ಪ್ರತಿ ದಿನ ಕುಲದೇವರ ಮೂಲ ಸ್ಥಳಕ್ಕೆ ಹೋಗಿ ಪೂಜೆ ಮಾಡಲು ಸಾಧ್ಯವಿಲ್ಲ. ಹಾಗಾಗಿ ನೀವಿರುವ ಜಾಗದಿಂದಲೇ ಕುಲ ದೇವರ ಪ್ರಾರ್ಥನೆ ಮಾಡಿ. ಆಗಾಗ ಕುಲದೇವರ ದರ್ಶನ ಪಡೆಯಿರಿ. ನಿಮ್ಮ ಈ ಕೆಲಸ, ನಿಮಗೆ ಮಾತ್ರವಲ್ಲ ನಿಮ್ಮ ಮಕ್ಕಳು (Kids), ಮರಿಮಕ್ಕಳ ಯಶಸ್ಸಿಗೂ ಒಳ್ಳೆಯದು. ಕುಲದೇವರು ಪ್ರಸನ್ನನಾಗಿ ಏಳು ತಲೆಮಾರಿನವರು ಸಂತೋಷದಿಂದ ಜೀವನ ನಡೆಸಲು ಸಹಕರಿಸುತ್ತಾನೆಂದು ಗರುಡ ಪುರಾಣದಲ್ಲಿ ಹೇಳಲಾಗಿದೆ.  

2. ಪ್ರತಿ ದಿನ ದೇವರಿಗೆ ನೈವೇದ್ಯ ಮಾಡಿ : ಕೆಲ ಮನೆಗಳಲ್ಲಿ ಈಗ್ಲೂ ದೇವರಿಗೆ ಅನ್ನ ನೈವೇದ್ಯ ಮಾಡುವ ಪದ್ಧತಿಯಿದೆ. ಅನ್ನವನ್ನು ದೇವರಿಗೆ ಅರ್ಪಿಸಿದ ನಂತ್ರ ಅದನ್ನು ಮನೆ ಮಂದಿ ತಿನ್ನುತ್ತಾರೆ. ಯಾರ ಮನೆಯಲ್ಲಿ ದೇವರಿಗೆ ಅನ್ನ ನೈವೇದ್ಯ ನಡೆಯುತ್ತದೆಯೋ ಆ ಮನೆಯಲ್ಲಿ ಅನ್ನಪೂರ್ಣೆ ಮತ್ತು ಲಕ್ಷ್ಮಿ ಕೃಪೆ ಸದಾ ಇರುತ್ತದೆ. ಆ ಮನೆಯಲ್ಲಿ ಎಂದೂ ಹಣ ಮತ್ತು ಆಹಾರ ಧಾನ್ಯಗಳಿಗೆ (Grains) ಕೊರತೆಯಾಗುವುದಿಲ್ಲ ಎಂದು ಗರುಡ ಪುರಾಣದಲ್ಲಿ ಹೇಳಲಾಗಿದೆ. ಇದ್ರ ಜೊತೆಗೆ ಅಡುಗೆ ಮನೆಯಲ್ಲಿ ಯಾವಾಗಲೂ ಶುಚಿತ್ವ ಕಾಯ್ದುಕೊಳ್ಳಬೇಕು. ಪ್ರತಿದಿನ ಸಾತ್ವಿಕ ಆಹಾರವನ್ನು ಸಿದ್ಧಪಡಿಸಬೇಕು. ಅದನ್ನು ಸೇವನೆ ಮಾಡುವ ಮೊದಲು ದೇವರಿಗೆ ಅರ್ಪಣೆ ಮಾಡ್ಬೇಕೆಂದು ಗರುಡ ಪುರಾಣದಲ್ಲಿ ಹೇಳಲಾಗಿದೆ. 

3. ಅನ್ನದಾನ ಮಹಾದಾನ : ಹಿಂದೂ ಧರ್ಮದಲ್ಲಿ ದಾನಕ್ಕೆ  ಪ್ರಾಮುಖ್ಯತೆ ನೀಡಲಾಗಿದೆ. ಗರುಡ ಪುರಾಣದ ಪ್ರಕಾರ, ಹಸಿದ ಮತ್ತು ನಿರ್ಗತಿಕರಿಗೆ ಆಹಾರ (Food) ನೀಡುವುದರಿಂದ ವ್ಯಕ್ತಿಗೆ ಪುಣ್ಯ ಪ್ರಾಪ್ತಿಯಾಗುತ್ತದೆ. ಪ್ರತಿಯೊಬ್ಬ ವ್ಯಕ್ತಿಯು ತನ್ನ ಆದಾಯದ ಸ್ವಲ್ಪ ಭಾಗವನ್ನು ತನ್ನ ಸಾಮರ್ಥ್ಯಕ್ಕೆ ಅನುಗುಣವಾಗಿ ದಾನಕ್ಕೆ ನೀಡಬೇಕು.  

ನೀವು ಈ ರಾಶಿಗೆ ಸೇರಿದವರಾದ್ರೆ ಅಪ್ಪಿತಪ್ಪಿಯೂ BLACK THREAD ಕಟ್ಕೋಬೇಡಿ!

4. ಧರ್ಮಗ್ರಂಥ ಪಠಣೆ : ಧರ್ಮಗ್ರಂಥವನ್ನು (Religious Book) ಪಠಣೆ ಮಾಡುವುದ್ರಿಂದ ಜ್ಞಾನ ಲಭಿಸುತ್ತದೆ. ಪ್ರತಿಯೊಬ್ಬ ಮನುಷ್ಯನು ಗ್ರಂಥದಲ್ಲಿ ಅಡಗಿರುವ ಜ್ಞಾನವನ್ನು ಸಂಪಾದಿಸಬೇಕು. ಅದನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಗರುಡ ಪುರಾಣದಲ್ಲಿ ಹೇಳಲಾಗಿದೆ. ಧರ್ಮದ ಶಿಕ್ಷಣವು ಜೀವನದಲ್ಲಿ ಬಿಕ್ಕಟ್ಟನ್ನು ಎದುರಿಸಲು ನೆರವಾಗುತ್ತದೆ.  

ನಾಮಕರಣದಲ್ಲಿ ಈ ತಪ್ಪು ಮಾಡಿದ್ರೆ ಮಗುವಿನ ಭವಿಷ್ಯವೇ ಹಾಳಾಗುತ್ತೆ !

5. ಶಾಂತ ಸ್ವಭಾವ (Peace) : ಧ್ಯಾನ, ಮಂತ್ರ ಪಠಣೆಯಿಂದ ಮನಸ್ಸಿಗೆ ಶಾಂತಿ ಸಿಗುತ್ತದೆ. ಪ್ರತಿ ದಿನ ಇವುಗಳನ್ನು ಮಾಡಿದ್ರೆ ಮನಸ್ಸು ಗೊಂದಲಗಳಿಂದ ದೂರವಿರುತ್ತದೆ. ಜೀವನದ ಕಠಿಣ ಸಮಯದಲ್ಲೂ ಒಳ್ಳೆಯ ನಿರ್ಧಾರ ತೆಗೆದುಕೊಳ್ಳಲು ಇದು ನೆರವಾಗುತ್ತದೆ.  

 


 

click me!