ಈದ್ಗಾದಲ್ಲಿ ಗಣೇಶೋತ್ಸವ: ಬಿಜೆಪಿಯ ಏಕಪಕ್ಷೀಯ ನಿರ್ಧಾರ- ಶಾಸಕ ಅಬ್ಬಯ್ಯ ಟೀಕೆ

By Kannadaprabha NewsFirst Published Aug 31, 2022, 3:30 AM IST
Highlights

ಇಲ್ಲಿನ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಣೆಗೆ ಕುರಿತಂತೆ ಬಿಜೆಪಿಯೂ ಏಕಪಕ್ಷೀಯ ನಿರ್ಧಾರ ಕೈಗೊಂಡಿದೆ. ಇದು ಬಿಜೆಪಿಯ ಚುನಾವಣಾ ಗಿಮಿಕ್‌ ಆಗಿದೆ ಎಂದು ಶಾಸಕ ಪ್ರಸಾದ ಅಬ್ಬಯ್ಯ ಟೀಕಿಸಿದರು.

ಹುಬ್ಬಳ್ಳಿ (ಆ.31) : ಇಲ್ಲಿನ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಣೆಗೆ ಕುರಿತಂತೆ ಬಿಜೆಪಿಯೂ ಏಕಪಕ್ಷೀಯ ನಿರ್ಧಾರ ಕೈಗೊಂಡಿದೆ. ಇದು ಬಿಜೆಪಿಯ ಚುನಾವಣಾ ಗಿಮಿಕ್‌ ಆಗಿದೆ ಎಂದು ಶಾಸಕ ಪ್ರಸಾದ ಅಬ್ಬಯ್ಯ ಟೀಕಿಸಿದರು. ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ ಮುಖಂಡರ ಸಮ್ಮತಿ ಪಡೆದೇ ಗಣೇಶೋತ್ಸವಕ್ಕೆ ಹಸಿರು ನಿಶಾನೆ ತೋರಿದ್ದಾಗಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದ್ದಾರೆ. ಆದರೆ ಇದು ಸರಿಯಲ್ಲ. ಮಹಾನಗರ ಪಾಲಿಕೆಯ ಸದಸ್ಯರು ಕೇಂದ್ರ ಸಚಿವರಿಗೆ ಸರಿಯಾದ ಮಾಹಿತಿ ನೀಡಿಲ್ಲ ಎಂದರು.

ಪ್ರಚೋದನಕಾರಿ ಪೋಸ್ಟ್ ಹಾಕಿದ್ದೇ ಗಲಭೆಗೆ ಕಾರಣ ಎಂದ ಶಾಸಕ ಪ್ರಸಾದ್ ಅಬ್ಬಯ್ಯ

Latest Videos

ಪಾಲಿಕೆಯಲ್ಲಿ ಈ ವಿಷಯ ಪ್ರಸ್ತಾಪಿಸುವುದಕ್ಕೆ ನಾವು ವಿರೋಧಿಸಿದ್ದೇವು. ಆದರೆ ಪ್ರತಿಭಟನೆ ನಡೆಯುತ್ತಿದೆ. ಹೀಗಾಗಿ ಉತ್ತರಿಸಲೇಬೇಕಾಗುತ್ತದೆ. ಈ ಕಾರಣಕ್ಕಾಗಿ ಸದನ ಸಮಿತಿ ರಚಿಸುತ್ತೇವೆ. ಸದನ ಸಮಿತಿಯ ನಿರ್ಧಾರವೇ ಅಂತಿಮವಾಗುವುದಿಲ್ಲ ಎಂದು ಹೇಳಿದ್ದರು. ಆದರೆ ನಮ್ಮೊಂದಿಗೆ ಚರ್ಚೆ ನಡೆಸದೇ ಸದನ ಸಮಿತಿಯ ತೀರ್ಮಾನವನ್ನೇ ಅಂತಿಮ ಮಾಡಿ ಗಣೇಶನ ಪ್ರತಿಷ್ಠಾಪನೆಗೆ ನಿರ್ಧಾರ ಕೈಗೊಳ್ಳಲಾಗಿದೆ ಎಂದರು.

ಈದ್ಗಾ ಮೈದಾನದಲ್ಲಿ ಗಣೇಶನ ಪ್ರತಿಷ್ಠಾಪನೆ ಮಾಡುವ ಹಠ ಏಕೆ ಎಂದು ಪ್ರಶ್ನಿಸಿದ ಅವರು, ಇದು ಮತ್ತೊಂದು ಕೋಮಿನವರ ಭಾವನೆಗಳಿಗೆ ಧಕ್ಕೆಯುಂಟಾಗುತ್ತದೆ. ಮೊದಲೇ ಈ ಹಿಂದೆ ಇದೇ ಮೈದಾನದ ವಿಷಯವಾಗಿ ಗಲಾಟೆಯಾದಾಗ ಇಲ್ಲಿನ ಬಿಜಿನೆಸ್‌ ಬೇರೆ ಜಿಲ್ಲೆಗಳಿಗೆ ಸ್ಥಳಾಂತರವಾಗಿದ್ದುಂಟು. ಆದಕಾರಣ ಈಗ ಗಣೇಶೋತ್ಸವವನ್ನು ಈದ್ಗಾ ಮೈದಾನದಲ್ಲಿ ಆಚರಿಸುವ ಅಗತ್ಯವಿರಲಿಲ್ಲ ಎಂದು ನುಡಿದರು.

ಮಂತ್ರಿಗಿರಿಗಾಗಿ ಇನ್ನೊಂದು ಪ್ರತಿಭಟನೆ

ಇದೇ ವೇಳೆ ಪಕ್ಷದ ಮುಖಂಡ ಅನಿಲಕುಮಾರ ಪಾಟೀಲ ಮಾತನಾಡಿ, ನಾವು ಸದನ ಸಮಿತಿಗೆ ವಿರೋಧಿಸಿದ್ದೆವು. ಪಾಲಿಕೆಯ ಸಾಮಾನ್ಯಸಭೆಯಲ್ಲಿ ಚರ್ಚೆಯಾಗಿದ್ದೇ ಒಂದು ಆದರೆ ಠರಾವು ಪಾಸು ಮಾಡಿದ್ದೇ ಮತ್ತೊಂದು. ಬಿಜೆಪಿ ಬೇಕಂತಲೇ ಈ ರೀತಿ ಮಾಡಿದೆ. ಮತ್ತೊಬ್ಬರ ಭಾವನೆಗಳಿಗೆ ಧಕ್ಕೆಯುಂಟು ಮಾಡುವ ಉದ್ದೇಶದಿಂದ ಈ ರೀತಿ ಮಾಡಲಾಗುತ್ತಿದೆ. ಇದಕ್ಕೆ ಖಂಡನೆ ಎಂದರು. ಸುದ್ದಿಗೋಷ್ಠಿಯಲ್ಲಿ ವಿಧಾನಪರಿಷತ್‌ ಮಾಜಿ ಸದಸ್ಯ ವೀರಣ್ಣ ಮತ್ತಿಗಟ್ಟಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸದಾನಂದ ಡಂಗನವರ, ಮಹಾನಗರ ಜಿಲ್ಲಾಧ್ಯಕ್ಷ ಅಲ್ತಾಫ್‌ ಹಳ್ಳೂರ, ಪ್ರಕಾಶ ಕ್ಯಾರಕಟ್ಟಿ, ಪಿ.ಎಚ್‌. ನೀರಲಕೇರಿ ಸೇರಿದಂತೆ ಮತ್ತಿತರರು ಇದ್ದರು.

click me!