Ganesh Chaturthi 2025: ಈ ನಿಯಮ ಪಾಲಿಸಿ ಗಣೇಶ ಚತುರ್ಥಿ ಅಲಂಕಾರ ಮಾಡಿದ್ರೆ ಸಿಗುತ್ತೆ ಗಣಪತಿ ಆಶೀರ್ವಾದ

Published : Aug 22, 2025, 02:43 PM IST
Ganesh Chaturthi 2025

ಸಾರಾಂಶ

Ganesh Chaturthi 2025 : ಪ್ರತಿ ವರ್ಷದಂತೆ ಈ ವರ್ಷವೂ ಗಣೇಶ ಮನೆ ಮನೆಗೆ ಬರಲಿದ್ದಾನೆ. ಅದಕ್ಕೆ ಎಲ್ಲ ಸಿದ್ಧತೆ ನಡೆದಿದೆ. ಗಣೇಶನ ಮೂರ್ತಿ, ಮನೆ ಅಲಂಕಾರಕ್ಕಿಂತ ಮುನ್ನ ವಾಸ್ತು ಶಾಸ್ತ್ರ ಏನು ಹೇಳುತ್ತೆ ತಿಳಿದ್ಕೊಳ್ಳಿ. 

ಗಣೇಶ ಚತುರ್ಥಿ (Ganesha Chaturthi )ಗೆ ತಯಾರಿ ಜೋರಾಗಿ ನಡೆದಿದೆ. ಹಬ್ಬಕ್ಕೆ ಕೆಲವೇ ದಿನ ಬಾಕಿ ಇರೋದ್ರಿಂದ ಮನೆ ಕ್ಲೀನಿಂಗ್, ಅಲಂಕಾರದ ವಸ್ತು ಖರೀದಿ, ಗಣಪತಿ ಮೂರ್ತಿ ಆಯ್ಕೆ ಅಂತ ಜನರು ಬ್ಯುಸಿಯಾಗಿದ್ದಾರೆ. ಮಾರ್ಕೆಟ್ ನಲ್ಲಿ ಬಣ್ಣ ಬಣ್ಣದ ಗಣಪತಿ ಮೂರ್ತಿ, ಗೌರಿ ಮೂರ್ತಿ ರಾರಾಜಿಸ್ತಿದೆ. ಗಣಪತಿ ಅಲಂಕಾರ, ಮಂಟಪಕ್ಕೆ ಅಗತ್ಯವಿರುವ ಹೂ, ಮಾಲೆ, ಲೈಟಿಂಗ್ ಕಣ್ಣು ಕುಕ್ಕುತ್ತಿದೆ. ಭಾದ್ರಪದ ಮಾಸದ ಶುಕ್ಲ ಪಕ್ಷದ ಚತುರ್ಥಿ ದಿನಾಂಕದಂದು ಗಣೇಶನ ಹಬ್ಬ ಅದ್ಧೂರಿಯಾಗಿ ನಡೆಯುತ್ತೆ. ಈ ವಿಶೇಷ ಸಂದರ್ಭದಲ್ಲಿ ಜನರು ತಮ್ಮ ಮನೆಗಳಲ್ಲಿ ಗಣೇಶನ ಮೂರ್ತಿಯನ್ನು ಸ್ಥಾಪಿಸಿ ಪೂಜೆ ಮಾಡ್ತಾರೆ. ಮನೆಗಳನ್ನು ಸುಂದರವಾಗಿ ಅಲಂಕರಿಸ್ತಾರೆ. ನಿಮ್ಮ ಮನಸ್ಸಿಗೆ ಬಂದ ಜಾಗದಲ್ಲಿ ಅಲಂಕಾರ ಮಾಡಿ, ಗಣಪತಿ ಮೂರ್ತಿ ಪ್ರತಿಷ್ಠಾಪನೆ ಮಾಡೋದಲ್ಲ. ವಾಸ್ತು ಶಾಸ್ತ್ರ (Vastu Shastra)ದಲ್ಲಿ ಮನೆಯನ್ನು ಅಲಂಕರಿಸಲು ಮತ್ತು ದೇವರ ಮೂರ್ತಿಯನ್ನು ಸ್ಥಾಪಿಸಲು ಕೆಲವು ನಿಯಮಗಳನ್ನು ಹೇಳಲಾಗಿದೆ. ಇವುಗಳನ್ನು ಪಾಲಿಸಿದ್ರೆ ಗಣಪತಿ ಪೂಜೆಯ ಸಂಪೂರ್ಣ ಫಲ ನಿಮಗೆ ಸಿಗಲಿದೆ.

ಮುಖ್ಯ ದ್ವಾರದ ಅಲಂಕಾರ : ಗಣೇಶ ಚತುರ್ಥಿಯಂದು ಮುಖ್ಯ ದ್ವಾರವನ್ನು ಅಲಂಕರಿಸಲು ನಾವು ಬಯಸ್ತೇವೆ. ಮನೆಯ ಮುಖ್ಯದ್ವಾರದ ಮೇಲೆ ಸ್ವಸ್ತಿಕ ಚಿಹ್ನೆಯನ್ನು ಬಿಡಿಸಿ. ಅಲ್ಲದೆ ಮಾವಿನ ಎಲೆಗಳ ತೋರಣವನ್ನು ಹಾಕಿ. ಮುಖ್ಯ ದ್ವಾರದ ಮುಂದೆ ಸುಂದರ ರಂಗೋಲಿಯನ್ನು ಹಾಕಿ. ಇದು ಬಹಳ ಶುಭ. ಸಕಾರಾತ್ಮಕ ಶಕ್ತಿ, ಲಕ್ಷ್ಮಿ ಪ್ರವೇಶ ಮಾಡುವುದು ಮನೆಯ ಮುಖ್ಯ ದ್ವಾರದಿಂದ. ನೀವು ಮನೆಯ ಮುಖ್ಯದ್ವಾರವನ್ನು ಅಲಂಕಾರ ಮಾಡಿದ್ರೆ ಅದೃಷ್ಟ ಸಿಗುತ್ತೆ, ಜೀವನದಲ್ಲಿ ಸದಾ ಸಂತೋಷ ನೆಲೆಸಿರುತ್ತೆ ಅಂತ ನಂಬಲಾಗಿದೆ. ಚೆಂಡು ಹೂವಿನಿಂದ ನೀವು ಮುಖ್ಯ ದ್ವಾರವನ್ನು ಅಲಂಕರಿಸಬಹುದು.

ಗಣೇಶ ಮೂರ್ತಿ ಸ್ಥಾಪಿಸುವ ಸ್ಥಳ : ನೀವು ಗಣೇಶ ಮೂರ್ತಿಯನ್ನು ನೆಲದ ಮೇಲೆ ಇಡಬೇಡಿ. ಮರದಿಂದ ಮಾಡಿದ ಆಸನದ ಮೇಲೆ ಗಣೇಶ ಮೂರ್ತಿಯನ್ನು ಸ್ಥಾಪಿಸಿ. ಉತ್ತರ ಅಥವಾ ಈಶಾನ್ಯ ದಿಕ್ಕಿನಲ್ಲಿ ನೀವು ಸ್ಥಾಪನೆ ಮಾಡ್ಬೇಕು. ಮಣೆಯ ಮೇಲೆ ಹಳದಿ ಅಥವಾ ಕೆಂಪು ಬಟ್ಟೆಯನ್ನು ಹಾಕಿ. ಮಣೆಯ ಹಿಂದೆ ಬಾಳೆ ಎಲೆ, ಹೂ, ತೋರಣಗಳಿಂದ ಅಲಂಕಾರ ಮಾಡಿ. ಗಣಪತಿ ಹಿಂಭಾಗ ನಿಮಗೆ ಕಾಣಬಾರದು. ಗಣಪತಿ ಮಂಟಪ ವಾಸ್ತು ಪ್ರಕಾರ ಅಲಂಕಾರಗೊಂಡಿದ್ದರೆ ಮನೆಯಲ್ಲಿ ಶಾಂತಿ, ನೆಮ್ಮದಿ ನೆಲೆಸುತ್ತದೆ.

ಅಲಂಕಾರಕ್ಕೆ ಈ ಬಣ್ಣ ಸೂಕ್ತ : ಗಣಪತಿ ಅಲಂಕಾರಕ್ಕೆ ನೀವು ಬಳಸುವ ಬಣ್ಣ ಕೂಡ ಮುಖ್ಯವಾಗುತ್ತದೆ. ಮನೆಯಲ್ಲಿ ಸಕಾರಾತ್ಮಕ ವಾತಾವರಣ ನೆಲೆಸಿರಬೇಕು ಎಂದಾದ್ರೆ ಹಳದಿ, ಕೆಂಪು, ಹಸಿರು ಮುಂತಾದ ಶುಭ, ಶಾಂತ ಮತ್ತು ತಿಳಿ ಬಣ್ಣಗಳನ್ನು ಬಳಸಿ. ಕಪ್ಪು ಮತ್ತು ಕಡು ನೀಲಿ ಮುಂತಾದ ಗಾಢ ಬಣ್ಣಗಳನ್ನು ಬಳಸಬೇಡಿ. ಈ ಬಣ್ಣಗಳು ಶುಭ ಕಾರ್ಯಗಳಿಗೆ ಒಳ್ಳೆಯದಲ್ಲ.

ಗಣೇಶ ಮೂರ್ತಿಯ ಬಣ್ಣ ಹೇಗಿರಬೇಕು? : ಮಾರುಕಟ್ಟೆಯಲ್ಲಿ ಈಗ ಬಣ್ಣವಿಲ್ಲದ ಪರಿಸರ ಸ್ನೇಹಿ ಗಣಪನಿಗೆ ಹೆಚ್ಚು ಆದ್ಯತೆ ನೀಡಲಾಗ್ತಿದೆ. ನೀವು ಬಣ್ಣದ ಮೂರ್ತಿ ಖರೀದಿ ಮಾಡುವುದಾದ್ರೆ ಬಿಳಿ ಅಥವಾ ಸಿಂಧೂರ ಬಣ್ಣದ ಮೂರ್ತಿಯನ್ನು ಖರೀದಿಸಿ. ವಾಸ್ತ ಶಾಸ್ತ್ರದ ಪ್ರಕಾರ ಇದು ಅತ್ಯುತ್ತಮವೆಂದು ಪರಿಗಣಿಸಲಾಗುತ್ತದೆ. ಅಲ್ಲದೆ ಗಣೇಶನ ಮೂರ್ತಿ ಖರೀದಿ ವೇಳೆ ಸೊಂಡಿಲಿನ ಬಗ್ಗೆ ಗಮನ ಹರಿಸಿ. ಸೊಂಡಿಲು ಎಡಕ್ಕೆ ಬಾಗಿರಬೇಕು. ಎಡಮುರಿ ಗಣಪನ ಪೂಜೆಯನ್ನು ಮನೆಯಲ್ಲಿ ಮಾಡಿದ್ರೆ ನಿಮ್ಮ ಜೀವನದಲ್ಲಿ ಬಂದ ಎಲ್ಲ ಸಮಸ್ಯೆಗೆ ಪರಿಹಾರ ಸಿಗುತ್ತದೆ.

PREV
Read more Articles on
click me!

Recommended Stories

ಈ 3 ರಾಶಿಯ ಪುರುಷರಿಗೆ ಶ್ರೀಮಂತ ಹೆಣ್ಮಕ್ಕಳನ್ನು ಮದುವೆಯಾಗುವ ಅದೃಷ್ಟ ಇದೆ
ವೃಶ್ಚಿಕ ರಾಶಿಯಲ್ಲಿ ಲಕ್ಷ್ಮಿ ಯೋಗ ಆರಂಭ, ಅದೃಷ್ಟ ಈ 6 ರಾಶಿಗೆ