16-30 ವಯಸ್ಸಿನೊಳಗೆ 5 ಕೆಲಸಗಳನ್ನು ಮಾಡಿದ್ರೆ ಜೀವನ ಪರ್ಯಂತ ಹಣವೋ ಹಣ!

Published : Aug 21, 2025, 04:48 PM IST
Chanakya Niti

ಸಾರಾಂಶ

Chanakya Niti Guidelines: 16 ರಿಂದ 30 ವರ್ಷದೊಳಗಿನವರು ಜೀವನದಲ್ಲಿ ಯಶಸ್ಸು ಸಾಧಿಸಲು ಆಚಾರ್ಯ ಚಾಣಕ್ಯರು 5 ಮುಖ್ಯ ಸಲಹೆಗಳನ್ನು ನೀಡಿದ್ದಾರೆ. 

Chanakya Niti For Happy Life: ಆಚಾರ್ಯ ಚಾಣಕ್ಯರು ಜೀವನ ಹೇಗೆ ನಡೆಸಬೇಕೆಂದು ತಮ್ಮ ನೀತಿಗಳಲ್ಲಿ ಹೇಳಿದ್ದಾರೆ. ಜೀವನ ಆರಾಮದಾಯಕವಾಗಿರಬೇಕು ಅಂದ್ರೆ ಆರ್ಥಿಕವಾಗಿ ಸದೃಢರಾಗಿರಬೇಕು ಎಂದು ಆಚಾರ್ಯ ಚಾಣಕ್ಯ ಹೇಳುತ್ತಾರೆ. ಒಬ್ಬ ವ್ಯಕ್ತಿ ಶಾಂತಿಯುತ ಜೀವನ ನಡೆಸಲು 16 ರಿಂದ 30 ವಯಸ್ಸಿನೊಳಗೆ ಈ ಕೆಲಸಗಳನ್ನು ಮಾಡಬೇಕು ಎಂದು ಆಚಾರ್ಯ ಚಾಣಕ್ಯರು ಸಲಹೆ ನೀಡುತ್ತಾರೆ. ಒಬ್ಬ ವ್ಯಕ್ತಿ ತನ್ನ 16 ರಿಂದ 30 ವರ್ಷದೊಳಗೆ ತನ್ನನ್ನು ತಾನು ಬಲಪಡಿಸಿಕೊಳ್ಳುವ ಸಮಯ ಆಗಿರುತ್ತದೆ. ಸಾಮಾನ್ಯವಾಗಿ ಈ ಸಮಯದಲ್ಲಿ ಹೆಚ್ಚಿನ ಸಮಸ್ಯೆಗಳಿರಲ್ಲ. ಹಾಗಾಗಿ ಈ ವಯಸ್ಸಿನಲ್ಲಿ ಜೀವನವನ್ನು ಸಂತೋಷವಾಗಿಸಿಕೊಳ್ಳಲು ಪ್ರಮುಖವಾಗಿ 5 ಕೆಲಸಗಳನ್ನು ಮಾಡಬೇಕಾಗುತ್ತದೆ.

16 ರಿಂದ 30 ವಯಸ್ಸಿನ ನಡುವೆ ಮಾಡಬೇಕಾದ ಪ್ರಮುಖ 5 ಕೆಲಸಗಳು

1.ಜ್ಞಾನ ಮತ್ತು ಕೌಶಲ್ಯಗಳಲ್ಲಿ ಹೂಡಿಕೆ

ಆರ್ಥಿಕ ತಜ್ಞ ಚಾಣಕ್ಯ ಅವರ ಪ್ರಕಾರ, 16 ರಿಂದ 30 ವರ್ಷ ವಯಸ್ಸಿನ ಅವಧಿಯಲ್ಲಿ ಕಲಿಯಲು ಹೆಚ್ಚು ಅವಕಾಶಗಳಿರುತ್ತದೆ. ನಿಮ್ಮನ್ನು ನೀವು ಸುಧಾರಿಸಿಕೊಳ್ಳಲು ಸಮಯವಿರುತ್ತದೆ. ವ್ಯವಹಾರಕ್ಕೆ ಸಂಬಂಧಿಸಿದ ಜ್ಞಾನ ಸಂಪಾದನೆ ಮಾಡಿಕೊಂಡರೆ ಕಲಿತುಕೊಳ್ಳುವುದು ಅಗತ್ಯವಾಗಿದೆ. ಇದು ನಿಮ್ಮ ಜೀವನವನ್ನು ಸುಲಭಗೊಳಿಸಲು ಸಾಧ್ಯವಾಗುತ್ತದೆ.

2.ಸಂಪತ್ತು ಮತ್ತು ಆಸ್ತಿ

ಯಾವುದೇ ಪುರುಷ ಅಥವಾ ಮಹಿಳೆ 20ನೇ ವಯಸ್ಸಿನ ನಂತರ ಹಣ ನಿರ್ವಹಣೆ ಹೇಗೆ ಮಾಡಬೇಕು ಅನ್ನೋದನ್ನು ತಿಳಿದುಕೊಂಡಿರಬೇಕು. ಉಳಿತಾಯ, ಹೂಡಿಕೆ ಮತ್ತು ಭವಿಷ್ಯಕ್ಕಾಗಿ ಎಲ್ಲಿ ಮತ್ತು ಹೇಗೆ ಹಣ ಉಳಿಸಬೇಕೆಂದನ್ನು ತಿಳಿದುಕೊಳ್ಳಬೇಕು. ಇದರಿಂದ ಭವಿಷ್ಯದಲ್ಲಿ ಸ್ಥಿರತೆ ಮತ್ತು ಸ್ವಾವಲಂಬನೆ ಉಂಟಾಗುತ್ತದೆ.

3.ಸ್ನೇಹಿತರು ಮತ್ತು ಸಲಹೆಗಾರರು

ಜೀವನದಲ್ಲಿ ಯಶಸ್ಸು ಸಾಧಿಸಿರುವ ಸಾಧಕರು ತಮ್ಮ ಸುತ್ತಲೂ ಒಳ್ಳೆಯ ಸ್ನೇಹಿತರು ಮತ್ತು ಸಲಹೆಗಾರರನ್ನು ಹೊಂದಿರುತ್ತಾರೆ. ಉತ್ತಮ ಮಾರ್ಗದರ್ಶನ ನೀಡುವ ವ್ಯಕ್ತಿಗಳ ಸ್ನೇಹ ನಿಮ್ಮದಾಗಿರಬೇಕು ಎಂದು ಆಚಾರ್ಯ ಚಾಣಕ್ಯರು ಹೇಳುತ್ತಾರೆ. 16 ರಿಂದ 30ನೇ ವಯಸ್ಸಿನಲ್ಲಿ ನಿಮಗೆ ಇಂತಹ ಸ್ನೇಹಿತರನ್ನು ಆಯ್ಕೆ ಮಾಡಿಕೊಳ್ಳುವ ಸದಾವಕಾಶ ನಿಮಗೆ ಸಿಗುತ್ತದೆ.

ಇದನ್ನೂ ಓದಿ: ಅಣಕಿಸೋದು, ಅಳಿಸೋದು, ಬೇರೆಯರನ್ನು ಬೇಜಾರ್ ಮಾಡುವ ರಾಶಿಗಳು; ಮನಸ್ಸು ನೋಯಿಸೋವರೆಗೂ ಬಿಡಲ್ಲ

4.ದೈಹಿಕ ಮತ್ತು ಮಾನಸಿಕ ಆರೋಗ್ಯ

16 ರಿಂದ 30 ನಡುವಿನ ಅವಧಿ ಯೌವ್ವನದಿಂದ ಕೂಡಿರುತ್ತದೆ. ಯೌವನದಲ್ಲಿ ದೇಹ ಬಲಿಷ್ಠವಾಗಿರುವಂತೆ ನೋಡಿಕೊಳ್ಳಬೇಕು. ಇದಕ್ಕಾಗಿ ನಿಯಮಿತ ವ್ಯಾಯಾಮ, ಸಮತೋಲಿತ ಆಹಾರ ಮತ್ತು ಮಾನಸಿಕ ಶಿಸ್ತು ನಿಮ್ಮ ಜೀವನದುದ್ದಕ್ಕೂ ನಿಮಗೆ ಶಕ್ತಿ ಮತ್ತು ಸಂತೋಷವನ್ನು ನೀಡುತ್ತದೆ. ಈ ಸಮಯದಲ್ಲಿ ಅನಾರೋಗ್ಯಕ್ಕೆ ತುತ್ತಾದ್ರೆ ಈ ರೋಗಗಳು ನಿಮ್ಮನ್ನು ಜೀವನ ಪರ್ಯಂತ ಬಾಧಿಸುತ್ತವೆ.

5.ಸಾಮಾಜಿಕ ಮತ್ತು ನೈತಿಕ ಕೆಲಸ

ಚಾಣಕ್ಯ ಅವರ ಪ್ರಕಾರ, ಧರ್ಮ ಮತ್ತು ಸಮಾಜ ಸೇವೆ ಜೀವನವನ್ನು ಅರ್ಥಪೂರ್ಣಗೊಳಿಸುತ್ತದೆ. ಸಣ್ಣ ಸಣ್ಣ ಉದಾತ್ತ ಕಾರ್ಯಗಳು ಮತ್ತು ಇತರರಿಗೆ ಸಹಾಯ ಮಾಡುವುದರಿಂದ ಜೀವನದಲ್ಲಿ ತೃಪ್ತಿ ಮತ್ತು ಗೌರವ ಬರುತ್ತದೆ.

ಇದನ್ನೂ ಓದಿ: ರಹಸ್ಯ ಹೇಳಬೇಡಿ ಈ 5 ರಾಶಿಯವರಿಗೆ! ಇವರ ಬಾಯಲ್ಲಿ ಮಾತೇ ನಿಲ್ಲಲ್ಲ! ಇವರದ್ದು ಬಾಯಿ ಬೊಂಬಾಯಿ!

PREV
Read more Articles on
click me!

Recommended Stories

ಈ 3 ರಾಶಿಯ ಪುರುಷರಿಗೆ ಶ್ರೀಮಂತ ಹೆಣ್ಮಕ್ಕಳನ್ನು ಮದುವೆಯಾಗುವ ಅದೃಷ್ಟ ಇದೆ
ವೃಶ್ಚಿಕ ರಾಶಿಯಲ್ಲಿ ಲಕ್ಷ್ಮಿ ಯೋಗ ಆರಂಭ, ಅದೃಷ್ಟ ಈ 6 ರಾಶಿಗೆ